• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?

|
   ಬಿಜೆಪಿ 'ಸಂಕಲ್ಪ್ ಪತ್ರ' ರಿಲೀಸ್ | ಅಭಿವೃದ್ಧಿಯೇ ಮೂಲ ಮಂತ್ರ

   ನವದೆಹಲಿ, ಏಪ್ರಿಲ್ 08: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 'ಸಂಕಲ್ಪ ಪತ್ರ' ಎಂಬ ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದೆ.

   ಲೋಕಸಭೆ ಚುನಾವಣೆ 2019 : ದೇಶದ ಪ್ರಮುಖ ಕ್ಷೇತ್ರಗಳು

   ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ಗಣ್ಯರು ಪ್ರಣಾಳಿಕೆ ಬಿಡುಗಡೆಯ ವೇಳೆ ಉಪಸ್ಥಿತರಿದ್ದರು.

   ಕಾಂಗ್ರೆಸ್ ಪ್ರಣಾಳಿಕೆ : ಯಾರಿಗೆ ಮೊದಲ ಆದ್ಯತೆ?ಕಾಂಗ್ರೆಸ್ ಪ್ರಣಾಳಿಕೆ : ಯಾರಿಗೆ ಮೊದಲ ಆದ್ಯತೆ?

   ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಮತದಾರನಿಗೆ ಭರಪೂರ ಭರವಸೆಯನ್ನೇನೂ ನೀಡಿಲ್ಲ. ಆದರೆ ರಾಷ್ಟ್ರದ ಭದ್ರತೆಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದೆ.

   Lok Sabha Elections 2019: BJP manifesto launch Live updates

   ಕಾಂಗ್ರೆಸ್ ಪಕ್ಷವು ಏಪ್ರಿಲ್ 2 ರಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಕಡುಬಡವರಿಗೆ ತಿಂಗಳು 6000 ರೂ.ಗಳನ್ನು ನೀಡುವ ಮೂಲಕ ಬಡತನ ನಿರ್ಮೂಲನೆ ಮಾಡುವ 'ನ್ಯಾಯ್' ಯೋಜನೆಯನ್ನು ತಾನು ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಅದು ಹೇಳಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಯಾವ ಯೋಜನೆಯನ್ನೂ ಘೋಷಿಸಿಲ್ಲ.

   ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!

   ಪ್ರಣಾಳಿಕೆ ಬಿಡುಗಡೆಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

   Newest First Oldest First
   1:09 PM, 8 Apr
   ಸಂಕಲ್ಪ ಪತ್ರ ಸಿದ್ಧಪಡಿಸಿದ ಎಲ್ಲರಿಗೂ ಧನ್ಯವಾಗಳು- ನರೇಂದ್ರ ಮೋದಿ, ಪ್ರಧಾನಿ
   1:05 PM, 8 Apr
   ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ- ನರೇಂದ್ರ ಮೋದಿ, ಪ್ರಧಾನಿ
   1:04 PM, 8 Apr
   ಈ ಸಂಕಲ್ಪ ಪತ್ರ ಈ ರಾಷ್ಟ್ರದ ಭದ್ರತೆಯ ಪತ್ರ, ನಮ್ಮ ಶಾಸನ ಪತ್ರ ಮತ್ತು ಈ ರಾಷ್ಟ್ರದ ಸಮೃದ್ಧಿಯ ಪತ್ರ: ನರೇಂದ್ರ ಮೋದಿ, ಪ್ರಧಾನಿ
   12:59 PM, 8 Apr
   ಸ್ವಚ್ಛ ಬಾರತದ ಸಫಲತೆಗೆ ಕಾರಣರಾದ ದೇಶದ ಮಾಧ್ಯಮಕ್ಕೆ ಮತ್ತು ಯುವ ಜನಾಂಗಕ್ಕೆ ನನ್ನ ಧನ್ಯವಾದಗಳು- ನರೇಂದ್ರ ಮೋದಿ
   12:52 PM, 8 Apr
   "ನಾವು ಮುಂದಿನ ಐದು ವರ್ಷಕ್ಕಾಗಿ 75 ಸಂಕಲ್ಪಗಳನ್ನು ಮಾಡಿಕೊಂಡಿದ್ದೇವೆ. ಒಂದು ವ್ರತ, ಒಂದೇ ಗುರಿ('one mission, one direction)" ಎಂಬ ಧ್ಯೇಯ ವಾಕ್ಯದೊಂದಿಗೆ ನಾವು ಕೆಲಸ ಮಾಡುತ್ತೇವೆ- ನರೇಂದ್ರ ಮೋದಿ, ಪ್ರಧಾನಿ
   12:49 PM, 8 Apr
   ಐಒಸಿ(ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಾರ್ಪೋರೇಶನ್) ಸಭೆಯಲ್ಲಿ ಪಾಕಿಸ್ತಾನ ಹಾಜರಾಗದೆ ಇದ್ದಿದ್ದೇ ಮೋದಿ ಸರ್ಕಾರದ ರಾಜತಾಂತ್ರಕ ಗೆಲುವಿಗೆ ಸಾಕ್ಷಿ- ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ, ಪ್ರಣಾಳಿಕೆ ಸಮಿತಿ ಸದಸ್ಯೆ.
   12:46 PM, 8 Apr
   ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರದಲ್ಲಿ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ
   12:40 PM, 8 Apr
   ಈ ಪ್ರಣಾಳಿಕೆಯನ್ನು 'ತುಕ್ಡೆ ತುಕ್ಡೆ' ಮನಸ್ಥಿತಿಯಿಂದ ಸಿದ್ಧಪಡಿಸಿಲ್ಲ. ಪ್ರಬುದ್ಧ ಆಲೋಚನೆಯಿಂದ ಸಿದ್ಧಪಡಿಸಿದ್ದೇವೆ- ಅರುಣ್ ಜೇಟ್ಲಿ
   12:32 PM, 8 Apr
   ಈ ಪ್ರಣಾಳಿಕೆಯನ್ನು ಅತ್ಯಂತ ಬಲವಾದ ರಾಷ್ಟ್ರೀಯತಾವಾದದ ದೃಷ್ಟಿಯಿಂದ ಸಿದ್ಧಪಡಿಸಿದ್ದೇವೆ. ವಾಸ್ತವ ಸನ್ನಿವೇಶವನ್ನು ಅರಿತು, ಅದಕ್ಕೆ ತಕ್ಕಂತೆ ರೂಪಿಸಿದ್ದೇವೆ- ಅರುಣ್ ಜೇಟ್ಲಿ, ವಿತ್ತ ಸಚಿವ, ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ
   12:23 PM, 8 Apr
   ಬಿಜೆಪಿ ಪ್ರಣಾಳಿಕೆಯಲ್ಲಿ ಈ ಬಾರಿಯೂ ರಾಮಮಂದಿರ ರಾರಾಜಿಸುತ್ತಿದ್ದು, ಅದರೊಂದಿಗೆ ಶಬರಿಮಲೆ, ಜಾಗತಿಕವಾಗಿ ಯೋಗದ ಪ್ರಚಾರ, ಶಬರಿಮಲೆ ಅಭಿವೃದ್ಧಿಯನ್ನು ಬಿಜೆಪಿ ತನ್ನ ಪ್ರಣಾಳಿಕೆಯನ್ನಿ ಸೇರಿಸಿಕೊಂಡಿದೆ.
   12:17 PM, 8 Apr
   "ನಾವು ಸಮಾಜದ ತಳಮಟ್ಟವನ್ನೂ ತಲುಪಿದ್ದೇವೆ. 4000 ಮನ್ ಕಿ ಬಾತ್ ಕಾರ್ಯಕ್ರಮ, 300 ರಥಯಾತ್ರೆ, 110 ಸಂವಾದಗಳನ್ನು ನಡೆಸಿ ಜನರನ್ನು ತಲುಪುವ ಕೆಲಸ ಮಾಡಿದ್ದೇವೆ"- ರಾಜನಾಥ್ ಸಿಂಗ್
   12:09 PM, 8 Apr
   ಇಂದಿನ 'ಸಂಕಲ್ಪ ಪತ್ರ'ದಲ್ಲಿ ದೇಶದ ಅಭಿವೃದ್ಧಿಯ ಉದ್ದೇಶವಿದೆ, ಬಡವರ ಶ್ರೇಯೋದ್ಧಾರದ ಕನಸಿದೆ- ರಾಜನಾಥ್ ಸಿಂಗ್
   12:08 PM, 8 Apr
   ಭಯೋತ್ಪಾದನೆಯ ಬಗ್ಗೆ ನಾವು ಶೂನ್ಯ ಸಹನೆಯನ್ನು(zero tolerance) ಹೊಂದಿದ್ದೇವೆ ಎಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ದೃಢ ಹೆಜ್ಜೆ ಇಡುತ್ತಿದ್ದೇವೆ- ರಾಜನಾಥ್ ಸಿಂಗ್
   12:05 PM, 8 Apr
   ಬಿಜೆಪಿಯ ಸಂಕಲ್ಪ ಪತ್ರ ಒಟ್ಟು 48 ಪುಟಗಳನ್ನು ಹೊಂದಿದೆ.
   12:03 PM, 8 Apr
   ಯುಪಿಎ ಸರ್ಕಾರದ ಅವಧಿಯಲ್ಲಿ ಬಿದ್ದು ಹೋಗಿದ್ದ ಆರ್ಥಿಕತೆಯನ್ನು ಈಗ ಹಳಿಗೆ ತರುತ್ತಿದ್ದೇವೆ- ರಾಜನಾಥ್ ಸಿಂಗ್, ಗೃಹಸಚಿವ, ಪ್ರಣಾಳಿಕೆ ಸಮಿತಿ ಅಧ್ಯಕ್ಷ
   12:02 PM, 8 Apr
   ಪ್ರಣಾಳಿಕೆ ಬಿಡುಗಡೆ ಸಭೆಯಲ್ಲಿ ಗೃಹಸಚಿವ ಮತ್ತು ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜನಾಥ್ ಸಿಂಗ್ ಮಾತು.
   11:59 AM, 8 Apr
   'ಸಂಕಲ್ಪ ಪತ್ರ' ಹೆಸರಿನಲ್ಲಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ
   11:56 AM, 8 Apr
   ಭಾರತ ಜಗತ್ತಿನ ಟಾಪ್ 5 ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರು ಪಡೆಯಲಿದೆ- ಅಮಿತ್ ಶಾ
   11:54 AM, 8 Apr
   ಪಾರದರ್ಶಕ ಆಡಳಿತಕ್ಕೆ ನಮ್ಮ ಸರ್ಕಾರವೇ ಉದಾಹರಣೆ- ಅಮಿತ್ ಶಾ
   11:49 AM, 8 Apr
   ದೇಶದ ಆರ್ಥಿಕತೆ ಎಷ್ಟೆಲ್ಲ ಅಭಿವೃದ್ಧಿಯಾಗಿದೆ ಎಂದರೆ, ಇಂದು ಭಾರತದತ್ತ ವಿಶ್ವವೇ ತಿರುಗಿ ನೋಡುತ್ತಿದೆ.
   11:48 AM, 8 Apr
   ಸ್ವಚ್ಛತೆ, ಶೌಚಾಲಯ ನಿರ್ಮಾಣ, ಬಡತನ ನಿರ್ಮೂಲನೆ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಈ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ- ಅಮಿತ್ ಶಾ
   11:46 AM, 8 Apr
   ದೇಶದಲ್ಲಿ ಮೂವತ್ತು ವರ್ಷಗಳ ನಂತರ ಪಕ್ಷವೊಂದು ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದು ದಾಖಲೆ ಬರೆದಿದೆ-ಅಮಿತ್ ಶಾ
   11:43 AM, 8 Apr
   ಭಾರತದ ಅಭಿವೃದ್ಧಿಗಾಗಿ ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಸಾಧನೆಗಳನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕು- ಅಮಿತ್ ಶಾ, ಬಿಜೆಪ ಅಧ್ಯಕ್ಷ
   11:42 AM, 8 Apr
   ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತು
   11:37 AM, 8 Apr
   ಪ್ರಣಾಳಿಕೆ ಬಿಡುಗಡೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗೃಹಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ಬಿಜೆಪಿ ಆಧ್ಯಕ್ಷ ಅಮಿತ್ ಶಾ ಮುಂತಾದವರು ಭಾಗಿಯಾಗಿದ್ದಾರೆ.
   11:36 AM, 8 Apr
   ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತೂ ಪ್ರಣಾಳಿಕೆಯಲ್ಲಿ ಪ್ರಸ್ತಾಪವಿರುವ ಸಾಧ್ಯತೆ
   11:29 AM, 8 Apr
   ಬಿಜೆಪಿ ಪ್ರಣಾಳಿಕೆ ಬಿಡುಗಡೆಗೂ ಮುನ್ನವೇ ಇದನ್ನು 'ಜುಮ್ಲಾ' ಎಂದು ಕರೆದಿರುವ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ #BJPJumlaManifesto ಹ್ಯಾಶ್ ಟ್ಯಾಗ್ ಟರ್ಎಂಡಿಂಗ್ ಆಗುವಂತೆ ನೋಡಿಕೊಂಡಿದೆ.
   11:26 AM, 8 Apr
   ಪ್ರಣಾಳಿಕೆ ಬಿಡುಗಡೆಗಾಗಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ. ಮೋದಿ ಅವರನ್ನು ಸ್ವಾಗತಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ
   11:24 AM, 8 Apr
   "ಫಿರ್ ಏಕ್ ಬಾರ್ ಮೋದಿ ಸರ್ಕಾರ್" (ಮತ್ತೊಮ್ಮೆ ಮೋದಿ ಸರ್ಕಾರ) ಎಂಬ ಘೋಷಣೆಯೊಂದಿಗೆ ಬಿಜೆಪಿ ತನ್ನ ಪ್ರಚಾರ ಆರಂಭಿಸಿದ್ದು, ಪ್ರಣಾಳಿಕೆಗೆ "ಕಾಮ್ ಕರ್ನೆ ವಾಲಿ ಸರ್ಕಾರ್"(ಕೆಲಸ ಮಾಡುವ ಸರ್ಕಾರ) ಎಂಮಬ ಘೋಷ ವಾಕ್ಯವನ್ನು ನೀಡಿದೆ.
   11:20 AM, 8 Apr
   ನಿರುದ್ಯೋಗ ನಿರ್ಮೂಲನೆ, ಮಹಿಳಾ ಸಬಲೀಕರಣ, ರೈತರ ಉದ್ಧಾರ ಇವೇ ಕಾಂಗ್ರೆಸ್ ಪ್ರಣಾಳಿಕೆಯ ಮೂಲ ಉದ್ದೇಶವಾಗಿತ್ತು.
   READ MORE

   English summary
   BJP releases its election manifesto on Monday in BJP HQ in Delhi.National security, Development Empowring poor is the prime agenda of BJP according to its manifesto. PM Narendra Modi, Amit Saha, rajnath Singh, Arun Jaitley and others are presented in the event.Here are LIVE updates in Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X