ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಆಸ್ತಿ ವಿವರ

|
Google Oneindia Kannada News

Recommended Video

Lok Sabha Elections 2019 : ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯನ್ನ ಈ ವ್ಯಕ್ತಿ ಗೆಲ್ಲಿಸುತ್ತಾರಾ?

ಬೆಂಗಳೂರು, ಮಾರ್ಚ್ 27: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಅವರು ಮಂಗಳವಾರದಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ವಿವರ ಅಫಿಡವಿಟ್ ನಲ್ಲಿರುವ ಮುಖ್ಯಾಂಶಗಳು ಇಲ್ಲಿವೆ

ತಾನು ಯಾವುದೇ ಚಿನ್ನಾಭರಣ ಹೊಂದಿಲ್ಲ ಎಂದು ತಿಳಿಸಿರುವ ಅವರು, ಯಾವುದೇ ಬ್ಯಾಂಕ್‍, ಸಂಸ್ಥೆಗಳಲ್ಲಿ ಸಾಲ ಕೂಡ ಮಾಡಿಲ್ಲ ಎಂದು ಅಫಿಡವಿಟ್ ನಲ್ಲಿ ಹೇಳಿದ್ದಾರೆ.

ವ್ಯಕ್ತಿ ಚಿತ್ರ: ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯವ್ಯಕ್ತಿ ಚಿತ್ರ: ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ ಬಳಿ‌ ಇರುವ ಒಟ್ಟು ಚರಾಸ್ತಿ‌ ಮೌಲ್ಯ 13.46 ಲಕ್ಷ ರೂ. ಮೊತ್ತದ್ದು. ಯಾವುದೇ ಬಗೆಯ ಸ್ಥಿರಾಸ್ತಿ ಹೊಂದಿರದ ತೇಜಸ್ವಿ ಸೂರ್ಯ, 5.12 ಲಕ್ಷ ರೂ ವಾರ್ಷಿಕ ಆದಾಯ ತೋರಿಸಿದ್ದಾರೆ. ತೇಜಸ್ವಿ ಸೂರ್ಯ ಕೈಯಲ್ಲಿರುವ ಹಣ 72 ಸಾವಿರ ರೂ. ಆಗಿದ್ದರೆ, ವಿವಿಧ ಬ್ಯಾಂಕ್​ಗಳಲ್ಲಿ ಠೇವಣಿ, ವಿಮೆ, ಉಳಿತಾಯ ಹೂಡಿಕೆ ಹಣ 13.46 ಲಕ್ಷ ರೂ. ಇದೆ.

ತೇಜಸ್ವಿ ಸೂರ್ಯ ಸ್ವವಿವರ

ತೇಜಸ್ವಿ ಸೂರ್ಯ ಸ್ವವಿವರ

* ಎಲ್ಎ ಸೂರ್ಯನಾರಾಯಣ ಅವರ ಪುತ್ರ
* ವಯಸ್ಸು 28
* ಬೆಂಗಳೂರಿನ ಗಿರಿನಗರ 1ನೇ ಹಂತದ ನಿವಾಸಿ
* ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
* ಟ್ವಿಟ್ಟರ್, ಫೇಸ್ ಬುಕ್ ಖಾತೆ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ಖಾತೆ ಹೊಂದಿಲ್ಲ.

ಐಟಿರಿಟರ್ನ್ಸ್ ಸಲ್ಲಿಸಿದ್ದಾರೆ

ಐಟಿರಿಟರ್ನ್ಸ್ ಸಲ್ಲಿಸಿದ್ದಾರೆ

* ಮಾರ್ಚ್ 31ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ 5,13,220 ರು ಆದಾಯ ತೋರಿಸಿ 2017-18ರ ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆ.
* ಇವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲ.
* ಯಾವುದೇ ಕೃಷಿ ಭೂಮಿ ಹೊಂದಿಲ್ಲ. ಯಾವುದೆ ವಾಣಿಜ್ಯ ನಿವೇಶನ, ಕಟ್ಟಡವನ್ನು ಖರೀದಿಸಿಲ್ಲ.
* ಬ್ಯಾಂಕ್, ಆರ್ಥಿಕ ಸಂಸ್ಥೆಗಳಿಂದ ಯಾವುದೇ ಸಾಲ ಪಡೆದಿಲ್ಲ.

ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?

ಚರಾಸ್ಥಿ ವಿವರ

ಚರಾಸ್ಥಿ ವಿವರ

* ನಗದು : 72,000 ರು
* ಗಿರಿನಗರದ ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಕ್ರಮವಾಗಿ 1,88,510.56 ರು, 9,482 ರು, 5,23,738.02 ರು ಹೊಂದಿದ್ದಾರೆ.
* ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಲ್ಲಿ ಎಫ್ ಡಿ : 71,637 ರು
* ಕೆನರಾ ಬ್ಯಾಂಕಿನ ನಿಶ್ಚಿತ ಠೇವಣಿ (ಎಫ್ ಡಿ) : 82,725 ರು
* ಷೇರು, ಬಾಂಡ್, ಮ್ಯೂಚುವಲ್ ಫಂಡ್ಸ್ ಹೊಂದಿರುವ ಬಗ್ಗೆ ಹೊಂದಿಲ್ಲ
* ಐಸಿಐಸಿಐ ಪ್ರೂಡೆನ್ಶಿಯಲ್ : 2,42,500ರು
* ಕೋಟಕ್ ಲೈಫ್ ವಿಮೆ : 28,000 ರು
* ಓರಿಯೆಂಟಲ್ ವಿಮೆ : 2,00,000
ಒಟ್ಟಾರೆ: 13,46,592.58 ರುಗಳು

OMG! ಟಿಕೆಟ್ ಸಿಕ್ಕಿದ್ದಕ್ಕೆ ತೇಜಸ್ವಿ ಸೂರ್ಯ ಭಾವುಕ ಟ್ವೀಟ್OMG! ಟಿಕೆಟ್ ಸಿಕ್ಕಿದ್ದಕ್ಕೆ ತೇಜಸ್ವಿ ಸೂರ್ಯ ಭಾವುಕ ಟ್ವೀಟ್

ವೃತ್ತಿಯಿಂದ ವಕೀಲ

ವೃತ್ತಿಯಿಂದ ವಕೀಲ

* ವೃತ್ತಿಯಿಂದ ವಕೀಲನಾಗಿದ್ದು, ವೃತ್ತಿಯಿಂದ ಬರುವ ಆದಾಯ, ಬ್ಯಾಂಕಿನ ಬಡ್ಡಿದರವೇ ಆದಾಯದ ಮೂಲವಾಗಿದೆ.
* 2006ರಲ್ಲಿ ಕುಮಾರನ್ಸ್ ಚಿಲ್ಡ್ರನ್ಸ್ ಹೋಂನಿಂದ ಎಸ್ಎಸ್ಎಲ್ ಸಿ
* 2008ರಲ್ಲಿ ನ್ಯಾಷನಲ್ ಕಾಲೇಜಿನಿಂದ ಪಿಯುಸಿ
* 2013ರಲ್ಲಿ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನಿಂದ ಬಿಎ, ಎಲ್ಎಲ್ ಬಿ
* ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಜಯನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಯ್ಕೆಯ ಒಳಸುಳಿಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಯ್ಕೆಯ ಒಳಸುಳಿ

English summary
Lok Sabha Elections 2019: Bangalore South BJP Candidate Tejasvi Surya Assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X