ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಂತ ಒಣ ಹವೆಯುಳ್ಳ ರಾಜಕೀಯ ಬಿರುಸಿನ ಕ್ಷೇತ್ರ ಅನಂತಪುರ

|
Google Oneindia Kannada News

ಆಂಧ್ರಪ್ರದೇಶದ ರಾಯಲ ಸೀಮೆಯ ಅನಂತಪುರ ಅತ್ಯಂತ ಒಣ ಹವೆಯುಳ್ಳ ಪ್ರದೇಶವಾಗಿದೆ. ಇಲ್ಲಿ ವರ್ಷಕ್ಕೆ ಕೇವಲ 22 ಇಂಚು ಮಳೆ ಬೀಳುತ್ತದೆ. ವಿಜಯನಗರ ಆರಸರ ಕಾಲದಲ್ಲಿ ದಿವಾನರಾಗಿದ್ದ ಚಿಕ್ಕಪ್ಪ ಒಡೆಯರ್ ಅವರು ತಮ್ಮ ಪತ್ನಿ ಹೆಸರಿನಲ್ಲಿ ನಿರ್ಮಿಸಿದ ಪಟ್ಟಣವೇ ಅನಂತಪುರ. ಮೊದಲಿಗೆ ಮರಾಠರ ವಶದಲ್ಲಿದ್ದ ಈ ಪ್ರದೇಶವನ್ನು ನಂತರ ಹೈದರಾಲಿ ಆನಂತರ ಟಿಪ್ಪು ಸುಲ್ತಾನರು ಆಳ್ವಿಕೆಯಲ್ಲಿತ್ತು. ನಂತರ ನಿಜಾಮಾರ ಪಾಲಾಗಿ, ಬ್ರಿಟಿಷರ ವಶವಾಯಿತು.

ರಾಯಲಸೀಮೆಯ ಹೆಬ್ಬಾಗಿಲು ಕಡಪ ಲೋಕಸಭಾ ಕ್ಷೇತ್ರದ ಪರಿಚಯ ರಾಯಲಸೀಮೆಯ ಹೆಬ್ಬಾಗಿಲು ಕಡಪ ಲೋಕಸಭಾ ಕ್ಷೇತ್ರದ ಪರಿಚಯ

ಅನೇಕ ಹಿಂದೂ ಪವಿತ್ರ ಕ್ಷೇತ್ರಗಳನ್ನು ಅನಂತಪುರ ಜಿಲ್ಲೆ ಹೊಂದಿದೆ. ಲಕ್ಷ್ಮಿನರಸಿಂಹ ದೇಗುಲವಿರುವ ಕದಿರಿ, ಅತಿದೊಡ್ಡ ಏಕಶಿಲಾ ನಂದಿ ವಿಗ್ರಹ ಇರುವ ಲೇಪಾಕ್ಷಿ, ತಾಡಪತ್ರಿ, ಪುಟ್ಟಪರ್ತಿ, ಪೆನುಕೊಂಡ, ಉರವಕೊಂಡ, ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾದ ಧರ್ಮಾವರಮ್ ಎಲ್ಲವೂ ಈ ಕ್ಷೇತ್ರದಲ್ಲಿದೆ.

Lok Sabha Elections 2019 : Anantapur LS Constituency

2011ರ ಜನಗಣತಿಯಂತೆ ಇಲ್ಲಿನ ಜನ ಸಂಖ್ಯೆ 40, 83,315. ಈ ಪೈಕಿ ಶೇ 71.93ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದರೆ, ಶೇ 28.07ರಷ್ಟು ಮಂದಿ ನಗರವಾಸಿಗಳಾಗಿದ್ದಾರೆ. ಶೇ 63.57ರಷ್ಟು ಸಾಕ್ಷರತೆ ಹೊಂದಿದ್ದು, ತೆಲುಗು, ಉರ್ದು, ಕನ್ನಡ, ಇಂಗ್ಲೀಷ್ ಪ್ರಮುಖ ಭಾಷೆಯಾಗಿದೆ.

ಅನಂತಪುರ ಲೋಕಸಭಾ ಕ್ಷೇತ್ರದಲ್ಲಿ 15,36, 912 ಮತದಾರರಿದ್ದು, 7,75,509 ಪುರುಷರು ಹಾಗೂ 7,61,403 ಮಹಿಳೆಯರಿದ್ದಾರೆ.

ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ

ರಾಯದುರ್ಗ, ಉರವಕೊಂಡ, ಗುಂತಕಲ್, ತಡ್ಪತ್ರಿ, ಸಿಂಗನಮಲಾ, ಅನಂತಪುರ ನಗರ, ಕಲ್ಯಾಣದುರ್ಗ ವಿಧಾನ ಸಭಾ ಕ್ಷೇತ್ರಗಳನ್ನು ಅನಂತಪುರ ಲೋಕಸಭಾ ಕ್ಷೇತ್ರವು ಹೊಂದಿದೆ.

Lok Sabha Elections 2019 : Anantapur LS Constituency

ರಾಜಕೀಯವಾಗಿ, ಅನಂತಪುರ ಸುದೀರ್ಘ ಇತಿಹಾಸ ಹೊಂದಿದೆ. ಅನಂತಪುರ ಹಾಗೂ ಹಿಂದುಪುರಂ. ನಟ, ರಾಜಕಾರಣಿ ಎನ್.ಟಿ.ರಾಮರಾವ್ ಅವರು ಹಿಂದೂಪುರದ ವಿಧಾನಸಭಾ ಕ್ಷೇತ್ರದಿಂದ ಗೆದ್ದು ರಾಜ್ಯದ ಮುಖ್ಯಮಂತ್ರಿಯಾದರು.. ನಂತರ ಅವರ ಪುತ್ರ ನಂದಮುರಿ ಹರಿ ಕೃಷ್ಣ ಅವರು ಹಿಂದೂಪುರದಿಂದ ಗೆದ್ದು, ಕಾರ್ಮಿಕ ಸಚಿವರಾದರು. ನಂದಮುರಿ ಬಾಲಕೃಷ್ಣ ಅವರು 2014ರಲ್ಲಿ ಶಾಸಕರಾದರು. ಇದೇ ಕ್ಷೇತ್ರದ ನೀಲಂ ಸಂಜೀವಿ ರೆಡ್ಡಿ ಅವರು ರಾಷ್ಟ್ರಪತಿ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಮೈಕ್ರೋಸಾಫ್ಟ್ ಸಿಇಒ ಸತ್ಯಾನಾಡೆಲ್ಲ, ಸತ್ಯ ಸಾಯಿ ಬಾಬಾ, ಸಿನಿಮಾ ನಿರ್ದೇಶಕ ಕದಿರಿ ವೆಂಕಟರೆಡ್ಡಿ, ನಾಟಕಕಾರ ಬಳ್ಳಾರಿ ರಾಘವ ಈ ಪ್ರದೇಶದ ಜನಪ್ರಿಯ ವ್ಯಕ್ತಿಗಳಾಗಿದ್ದಾರೆ.

ಅನಂತಪುರದಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯದ್ದೇ ಪ್ರಾಬಲ್ಯ. 1952ರಿಂದ ಇಲ್ಲಿ ಟಿಡಿಪಿ 12 ಬಾರಿ ಗೆಲುವು ಸಾಧಿಸಿದೆ. 74 ವರ್ಷ ವಯಸ್ಸಿನ ಜೆ.ಸಿ ದಿವಾಕರ್ ರೆಡ್ಡಿ ಅವರು ಹಾಲಿ ಸಂಸದರು.

ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ

1952ರಲ್ಲಿ ಪೈಡಿ ಲಕ್ಷ್ಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿಗೆ ಈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1957ರಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಟಿ ನಾಗಿ ರೆಡ್ಡಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದರು.

Lok Sabha Elections 2019 : Anantapur LS Constituency

1957ರಿಂದ ಇಲ್ಲಿನ ತನಕದ ಸ್ಟ್ರೈಕ್ ರೇಟ್ ನೋಡಿದರೆ, ಕಾಂಗ್ರೆಸ್ 10 ಬಾರಿ ಜಯ ದಾಖಲಿಸಿ, ಶೇ 75ರಷ್ಟು ಗೆಲುವಿನ ಫಲಿತಾಂಶ ನೀಡಿದೆ. ಟಿಡಿಪಿ 3 ಬಾರಿ ಗೆಲುವು ಸಾಧಿಸಿ ಶೇ 25ರಷ್ಟು ಗೆಲುವಿನ ಫಲಿತಾಂಶ ಹೊಂದಿದೆ.

ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ

2014ರಲ್ಲಿ ಟಿಡಿಪಿಯ ಜೆ.ಸಿ ದಿವಾಕರ್ ರೆಡ್ಡಿ ಅವರು ವೈಎಸ್ಸಾರ್ ಕಾಂಗ್ರೆಸ್ ನ ಅನಂತ ವೆಂಕಟರಾಮಿರೆಡ್ಡಿ ಅವರನ್ನು ಸೋಲಿಸಿದರು. ದಿವಾಕರ್ ರೆಡ್ಡಿ ಅವರು 6,06,509ಮತಗಳನ್ನು ಗಳಿಸಿದರೆ, ವೆಂಕಟರಾಮಿರೆಡ್ಡಿ ಅವರು 5,45,240 ಮತಗಳನ್ನು ಗಳಿಸಿ ಸೋಲು ಕಂಡಿದ್ದರು. ಒಟ್ಟು 12,05,054 ಮತಗಳ ಪೈಕಿ 6,12,890 ಪುರುಷರು ಮತಗಳು ಹಾಗೂ 5,92,164 ಮಹಿಳಾ ಮತಗಳು ದಾಖಲಾಗಿತ್ತು.

Lok Sabha Elections 2019 : Anantapur LS Constituency

74 ವರ್ಷ ವಯಸ್ಸಿನ ದಿವಾಕರ್ ರೆಡ್ಡಿ ಅವರು ಸಂಸತ್ತಿನಲ್ಲಿ ಶೇ 76ರಷ್ಟು ಹಾಜರಾತಿ ಹೊಂದಿದ್ದು, 4 ಚರ್ಚೆಗಳಲ್ಲಿ ಭಾಗವಹಿಸಿದ್ದು, 316 ಪ್ರಶ್ನೆಗಳನ್ನು ಕೇಳಿದ್ದಾರೆ.

ಮಾವೋವಾದಿಗಳ ಅಸ್ತಿತ್ವವನ್ನು ಹೊಂದಿರುವ ಈ ಕ್ಷೇತ್ರವು ಹಲವು ದ್ವೇಷ ರಾಜಕೀಯ ಹೋರಾಟಗಳನ್ನು ಕಂಡಿದೆ. ಆರ್ಥಿಕವಾಗಿ ಹಿಂದುಳಿದ ಕ್ಷೇತ್ರವಾಗಿ ಉಳಿದು ಬಿಟ್ಟಿದೆ. ಆಂಧ್ರಪ್ರದೇಶದ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಅನಂತಪುರ ಇದ್ದೇ ಇರುತ್ತದೆ. ನೀರನ ಕೊರತೆಯ ನಡುವೆ ಭತ್ತ, ನೆಲಗಡಲೆ, ರಾಗಿ, ಜೋಳ, ಧಾನ್ಯಗಳನ್ನು ಹೆಚ್ಚಾಗಿ ಈ ಭಾಗದಲ್ಲಿ ಬೆಳೆಯಲಾಗುತ್ತದೆ. ವಿದ್ಯುತ್, ಉತ್ಪಾದನಾ, ನಿರ್ಮಾಣ ಕೈಗಾರಿಕೆಗಳನ್ನು ಇಲ್ಲಿ ಕಾಣಬಹುದು. ಬೆಂಗಳೂರು ಹಾಗೂ ಚೆನೈ ನಡುವೆ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ.

2019ರಲ್ಲಿ ತೆಲುಗು ದೇಶಂ ಪಾರ್ಟಿ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲ ಸಿಗುವ ನಿರೀಕ್ಷೆಯಿದೆ. ಈ ಮೂಲಕ ಇಲ್ಲಿ ಗೆಲುವು ಸಾಧಿಸಲು ಕಾಯುತ್ತಿರುವ ವೈಎಸ್ಸಾರ್ ಪಕ್ಷಕ್ಕೆ ಆಘಾತ ನೀಡಲು ಸಿದ್ಧತೆ ನಡೆದಿದೆ.

English summary
Lok Sabha Elections 2019 : Anantapur Lok Sabha constituency profile is here. J.C Diwakar Reddy is the present MP of the constituency representing Telugu Desham Party. This Constituency a strong hold of TDP consists of 7 Legislative Assembly segments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X