ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ನ್ಯೂಸ್ ಸಮೀಕ್ಷೆ: ಯಾವ ಪಕ್ಷಕ್ಕೂ ಬಹುಮತವಿಲ್ಲ?

|
Google Oneindia Kannada News

ನವದೆಹಲಿ, ಮೇ 19: ಲೋಕಸಭೆ ಚುನಾವಣೆ 2019ರ ಫಲಿತಾಂಶ ಏನಾಗಬಹುದು? ಈಗ ಎಲ್ಲ ಏಳು ಹಂತಗಳ ಚುನಾವಣೆ ಪೂರ್ಣಗೊಂಡಿದೆ.ನಿಖರ ಉತ್ತರ ದೊರಕುವುದಕ್ಕೆ ಮೇ 23 ಅಥವಾ 24ರವರೆಗೆ ಕಾಯಬೇಕು. ಆದರೆ, ಮತದಾನ ಆರಂಭಕ್ಕೂ ಮುನ್ನವೇ ವಿವಿಧ ರೀತಿಯ ಲೆಕ್ಕಾಚಾರಗಳು ಆರಂಭವಾಗಿರುತ್ತವೆ. ವಿವಿಧ ಸುದ್ದಿವಾಹಿನಿಗಳು ಕೆಲವು ಸಂಸ್ಥೆಗಳ ಜತೆಗೂಡಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿವೆ.

ಫಲಿತಾಂಶ ಬರಲು ಇನ್ನೂ ನಾಲ್ಕು ದಿನ ಬಾಕಿ ಇದೆ. ಅದಕ್ಕೂ ಮುನ್ನ ತಮ್ಮ ರಾಜ್ಯದಲ್ಲಿ ಯಾವ ಯಾವ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಬಹುದು, ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂಬ ಕುತೂಹಲ ತೀವ್ರವಾಗಿದೆ. ಒಟ್ಟು 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಕುತೂಹಲ ತಣಿಸುವ ನಿಟ್ಟಿನಲ್ಲಿ ಸುದ್ದಿವಾಹಿನಿಗಳ ಸಮೀಕ್ಷೆ ಪಾತ್ರ ನಿರ್ವಹಿಸುತ್ತವೆ. ಒಂದೊಂದು ವಾಹಿನಿ-ಸಂಸ್ಥೆಗಳ ಸಮೀಕ್ಷೆ ಒಂದೊಂದು ಫಲಿತಾಂಶದ ಅಂದಾಜನ್ನು ನೀಡಿದರೂ, ಅವುಗಳಲ್ಲಿ ಕೆಲವು ಸಮೀಕ್ಷೆಗಳು ಮಾತ್ರ ಅಂತಿಮ ಫಲಿತಾಂಶಕ್ಕೆ ಸಮೀಪವಾದ ಸಮೀಕ್ಷೆ ಲೆಕ್ಕಾಚಾರ ನೀಡುತ್ತವೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯಾವ ಪಕ್ಷಗಳು ಎಷ್ಟು ಸೀಟುಗಳನ್ನು ಗೆಲ್ಲಬಹುದು ಎಂಬ 'ಎಬಿಪಿ ನ್ಯೂಸ್' ಸುದ್ದಿವಾಹಿನಿ ನಡೆಸಿದ ಸಮೀಕ್ಷೆಯ ಫಲಿತಾಂಶ ಇಲ್ಲಿದೆ.

ಪೋಲ್‌ಸ್ಟಾರ್ ಸಮೀಕ್ಷೆ: ಮೋದಿಯೇ ಮತ್ತೆ ಪ್ರಧಾನಿ ಪೋಲ್‌ಸ್ಟಾರ್ ಸಮೀಕ್ಷೆ: ಮೋದಿಯೇ ಮತ್ತೆ ಪ್ರಧಾನಿ

ಎಬಿಪಿ ಸಮೀಕ್ಷೆಯ ಪ್ರಕಾರ ಕೇಂದ್ರದಲ್ಲಿ ಯಾವ ಪಕ್ಷವೂ ನಿಚ್ಚಳ ಬಹುಮತ ಪಡೆದುಕೊಳ್ಳುವುದಿಲ್ಲ. ಬಿಜೆಪಿ 217 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎನ್‌ಡಿಎ ಮೈತ್ರಿಕೂಟ ಒಟ್ಟು 267 ಸೀಟುಗಳಲ್ಲಿ ಗೆದ್ದರೆ, ಕಾಂಗ್ರೆಸ್ ಮೈತ್ರಿಕೂಟ 127 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಇತರರು 148 ಸೀಟುಗಳಲ್ಲಿ ಜಯಗಳಿಸಲಿದ್ದಾರೆ.

ಕರ್ನಾಟಕಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ

ಕರ್ನಾಟಕಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ

ಎಬಿಪಿ ನ್ಯೂಸ್ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಕಳೆದುಕೊಳ್ಳಲಿದೆ. 28 ಕ್ಷೇತ್ರಗಳ ಪೈಕಿ ಉಳಿದ 13 ಸ್ಥಾನಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ದೊರಕಲಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದಿತ್ತು. ಈ ಬಾರಿ ಅದು 15 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದವು. ಈ ಬಾರಿ ಮೈತ್ರಿಕೂಟದ ಫಲವಾಗಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎರಡು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿವೆ. ಅದರಲ್ಲಿ ಜೆಡಿಎಸ್ ಮೂರು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.

ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ಸುಮಲತಾಗೆ ಜಯದ ಸಾಧ್ಯತೆ 50-50 ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ಸುಮಲತಾಗೆ ಜಯದ ಸಾಧ್ಯತೆ 50-50

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ

ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಅಪ್ನಾ ದಳ್ 73 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದವು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಲಿದೆ. ಎಬಿಪಿ ಸಮೀಕ್ಷೆಯ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ 80 ಸೀಟುಗಳ ಪೈಕಿ ಕೇವಲ 22ರಲ್ಲಿ ಗೆಲ್ಲಲಿದೆ. ಅಂದರೆ 51 ಕ್ಷೇತ್ರಗಳನ್ನು ಅದು ಕಳೆದುಕೊಳ್ಳಲಿದೆ. ಸಮಾಜವಾದಿ ಪಕ್ಷ-ಬಹುಜನ ಸಮಾಜ ಪಕ್ಷ ಮತ್ತು ಆರ್‌ಎಲ್‌ಡಿಯ ಮೈತ್ರಿಕೂಟ 56 ಸೀಟುಗಳಲ್ಲಿ ಜಯಗಳಿಸಲಿವೆ. ಇನ್ನು ಕಾಂಗ್ರೆಸ್ ಎರಡು ಕ್ಷೇತ್ರದಲ್ಲಿ ಗೆಲ್ಲಲಿದೆ.

ABP News- CSDS exit poll : ಗಾದಿ ಹಾದಿಯಲ್ಲಿ ಎನ್ ಡಿಎಗೆ ಕೊರತೆ? ABP News- CSDS exit poll : ಗಾದಿ ಹಾದಿಯಲ್ಲಿ ಎನ್ ಡಿಎಗೆ ಕೊರತೆ?

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಸುಧಾರಣೆ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಸುಧಾರಣೆ

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟವು 48 ಸೀಟುಗಳಲ್ಲಿ 34ರಲ್ಲಿ ಗೆಲುವು ಕಾಣಲಿದೆ. ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವು ಉಳಿದ 14 ಸೀಟುಗಳನ್ನು ಗೆಲ್ಲಲಿವೆ. 2014ರ ಚುನಾವಣೆಯಲ್ಲಿ ಬಿಜೆಪಿ 23 ಸೀಟುಗಳಲ್ಲಿ ಗೆದ್ದಿದ್ದರೆ, ಶಿವಸೇನಾ 18ರಲ್ಲಿ ಗೆದ್ದಿತ್ತು. ಕಾಂಗ್ರೆಸ್ ಮತ್ತು ಎನ್‌ಸಿಪಿ ಕ್ರಮವಾಗಿ 2 ಮತ್ತು 4 ಸೀಟುಗಳನ್ನು ಗೆದ್ದಿದ್ದವು. ಸಮೀಕ್ಷೆ ಪ್ರಕಾರ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಗಣನೀಯ ಸಾಧನೆ ಮಾಡಲಿವೆ. ಮೈತ್ರಿ ಮಾಡಿಕೊಂಡಿದ್ದರೂ ಶಿವಸೇನಾ-ಬಿಜೆಪಿ ಹಿನ್ನಡೆ ಅನುಭವಿಸಲಿವೆ.

ಎಕ್ಸಿಟ್ ಪೋಲ್ : ದೆಹಲಿ, ಹರ್ಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ಎಕ್ಸಿಟ್ ಪೋಲ್ : ದೆಹಲಿ, ಹರ್ಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್

ಛತ್ತೀಸಗಡ, ಉತ್ತರಾಖಂಡ, ಮಧ್ಯಪ್ರದೇಶ

ಛತ್ತೀಸಗಡ, ಉತ್ತರಾಖಂಡ, ಮಧ್ಯಪ್ರದೇಶ

ಛತ್ತೀಸಗಡದ ಎಲ್ಲ 11 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅದು ಆರು ಕ್ಷೇತ್ರಗಳಲ್ಲಿ ಗೆಲ್ಲಲಿದ್ದರೆ, ಕಾಂಗ್ರೆಸ್ ಉಳಿದ ಐದು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಉತ್ತರಾಖಂಡದ ಐದು ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಅವುಗಳಲ್ಲಿ ನಾಲ್ಕನ್ನು ಉಳಿಸಿಕೊಳ್ಳಲಿದೆ. ಇನ್ನೊಂದು ಕ್ಷೇತ್ರವನ್ನು ಕಾಂಗ್ರೆಸ್ ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರೂ ಕಾಂಗ್ರೆಸ್ ಅದರ ಬಲವನ್ನು ಪುನರಾವರ್ತಿಸುವಲ್ಲಿ ವಿಫಲವಾಗಲಿದೆ. 29 ಸೀಟುಗಳ ಪೈಕಿ 24 ಸೀಟುಗಳು ಬಿಜೆಪಿಗೆ ಒಲಿಯಲಿವೆ. ಉಳಿದ ಐದು ಸೀಟುಗಳು ಮಾತ್ರ ಕಾಂಗ್ರೆಸ್‌ಗೆ ಸಿಗಲಿದೆ.

ಸಿ-ವೋಟರ್ ಸಮೀಕ್ಷೆ: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಸಿ-ವೋಟರ್ ಸಮೀಕ್ಷೆ: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಕೇರಳದಲ್ಲಿ ಅರಳಲಿದೆ ಮೊದಲ ಕಮಲ

ಕೇರಳದಲ್ಲಿ ಅರಳಲಿದೆ ಮೊದಲ ಕಮಲ

ಕೇರಳದ 18 ಸೀಟುಗಳಲ್ಲಿ ಕಾಂಗ್ರೆಸ್ 15ರಲ್ಲಿ ಗೆಲುವು ಸಾಧಿಸಲಿದೆ. ಕಮ್ಯುನಿಸ್ಟರ ನಾಡಿನಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲಿದೆ. ಇತರೆ ಪಕ್ಷಗಳು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ. ಬಿಹಾರದಲ್ಲಿ ಬಿಜೆಪಿ 34, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ದೆಹಲಿಯಲ್ಲಿ ಬಿಜೆಪಿ ಏಳರಲ್ಲಿ ಐದು ಸ್ಥಾನ ಗೆದ್ದರೆ, ಕಾಂಗ್ರೆಸ್ ಮತ್ತು ಆಡಳಿತಾರೂಢ ಎಎಪಿ ತಲಾ ಒಂದು ಕ್ಷೇತ್ರಗಳಲ್ಲಿ ಗೆಲ್ಲಲಿವೆ. ಒಡಿಶಾದಲ್ಲಿ ಬಿಜೆಪಿ 9 ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಉಳಿದ 12 ಸ್ಥಾನಗಳಲ್ಲಿ ಗೆಲ್ಲಲಿದೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು-ಎಲ್‌ಜೆಪಿ 34 ಸೀಟುಗಳನ್ನು ಗೆದ್ದರೆ, ಕಾಂಗ್ರೆಸ್-ಆರ್‌ಜೆಡಿ ಆರು ಸೀಟುಗಳನ್ನಷ್ಟೇ ಗೆಲ್ಲಲಿವೆ.

ಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ದಕ್ಷಿಣ ಭಾರತದಲ್ಲಿ ಯಾರು? ಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ದಕ್ಷಿಣ ಭಾರತದಲ್ಲಿ ಯಾರು?

English summary
Lok Sabha Elections 2019: ABP News -CVoter Exit poll rersults 2019 Live in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X