ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಹಂತದಲ್ಲಿ 427 ಶ್ರೀಮಂತ ಅಭ್ಯರ್ಥಿಗಳು, ವಸಂತ್ ನಂ.1

|
Google Oneindia Kannada News

ನವದೆಹಲಿ, ಏಪ್ರಿಲ್ 17: ಲೋಕಸಭೆ ಚುನಾವಣೆಯ ಎರಡನೇ ಹಂತದ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದೆ. ಗುರುವಾರ(ಏಪ್ರಿಲ್ 18) ಬೆಳಗ್ಗೆ 12 ರಾಜ್ಯಗಳ 95 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಣದಲ್ಲಿ ಒಟ್ಟು 1644 ಅಭ್ಯರ್ಥಿಗಳಿದ್ದು, ಈ ಪೈಕಿ ಶೇ 27ರಷ್ಟು ಅಥವಾ 427 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. 1 ಕೋಟಿ ರುಗೂ ಅಧಿಕ ಅಸ್ತಿ ಹೊಂದಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ? ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಸಂತ್‌ಕುಮಾರ್‌ 417 ಕೊಟಿ ರು. ಆಸ್ತಿ ಹೊಂದಿದ್ದು, ಎರಡನೇ ಹಂತದಲ್ಲಿ ಅತ್ಯಂತ ಶ್ರಿಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ. ಒಟ್ಟಾರೆ, ಎಲ್ಲಾ ಅಭ್ಯರ್ಥಿಗಳ ಸರಾಸರಿ 3.9 ಕೋಟಿ ರು ನಷ್ಟಿದೆ.

Lok Sabha elections 2019: 427 crorepati candidates in the second phase

ಶೇ 11ರಷ್ಟು ಮಂದಿ ಶೇ 5 ಕೋಟಿ ರು ಗೂ ಅಧಿಕ ಆಸ್ತಿ ಘೋಷಿಸಿದ್ದರೆ, ಶೇ 41ರಷ್ಟು ಮಂದಿ 10 ಲಕ್ಷ ರುಗೂ ಕಡಿಮೆ ಮೊತ್ತ ಘೋಷಿಸಿದ್ದಾರೆ. 209 ರಾಷ್ಟ್ರೀಯ ಪಕ್ಷ, 107 ಪ್ರಾದೇಶಿಕ ಪಕ್ಷದವರು ಹಾಗೂ 386 ನೋಂದಾಯಿತ ಪಕ್ಷ ಹಾಗೂ 888 ಪಕ್ಷೇತರರ ಅಭ್ಯರ್ಥಿಗಳ ಅಂಕಿ ಅಂಶ ಪರಿಶೀಲಿಸಲಾಗಿದೆ.

ಪ್ರಮುಖ ಪಕ್ಷಗಳ ಪೈಕಿ53ರಲ್ಲಿ 46(87%) ಕಾಂಗ್ರೆಸ್ಸ್, 51ರಲ್ಲಿ 45 (88%) ಬಿಜೆಪಿ, 24ರಲ್ಲಿ 23(96%) ಡಿಎಂಕೆ , ಎಐಎಡಿಎಂಕೆಯ ಎಲ್ಲಾ 22 ಅಭ್ಯರ್ಥಿಗಳು ಹಾಗೂ ಬಿಎಸ್ ಪಿಯ 80 ಅಭ್ಯರ್ಥಿಗಳು 1 ಕೋಟಿ ರು ಗೂ ಅಧಿಕ ಆಸ್ತಿ ಹೊಂದಿದ್ದಾರೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಬಿಹಾರದ ಪುರ್ನಿಯಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಉದಯ್‌ ಸಿಂಗ್‌ 341 ಕೊಟಿ ರು. ಆಸ್ತಿ ಹೊಂದಿದ್ದು, 2ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ 338 ಕೋಟಿ ರು. ಆಸ್ತಿ ಹೊಂದಿದ್ದು, 3ನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಹಿಂದುಸ್ತಾನ ಜನತಾ ಪಕ್ಷದಿಂದ ಸ್ಪರ್ಧಿಸಿರುವ ಶ್ರೀವೆಂಕಟೇಶ್ವರ ಮಹಾಸ್ವಾಮಿಜಿ ಕೇವಲ 9 ರು. ಆಸ್ತಿಯೊಂದಿಗೆ ಅತಿ ಬಡವ ಅಭ್ಯರ್ಥಿಯಾಗಿದ್ದಾರೆ. 16 ಅಭ್ಯರ್ಥಿಗಳು ತಾವು ಯಾವುದೇ ಆಸ್ತಿ ಹೊಂದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ

ಕರ್ನಾಟಕದ ಹಾಸನದ ಬಿಜೆಪಿ ಅಭ್ಯರ್ಥಿ ಎ.ಮಂಜು ತಮಗೆ ವಾರ್ಷಿಕ 12 ಕೋಟಿ ರು. ಆದಾಯ ಇರುವುದಾಗಿ ಘೋಷಿಸಿಕೊಂಡಿರುವುದು ವಿಶೇಷ.

English summary
In the second phase of the 2019 Lok Sabha elections, 27% or 427 candidates are crorepatis with assets worth Rs 1 crore and above. 11% of the candidates have declared assets above Rs.5 crore while 41% have declared assets below Rs 10 lakh, according to an analysis by Association for Democratic Reforms (ADR). The average asset per candidate contesting in the Lok Sabha Phase II election is Rs. 3.9 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X