ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ಶೇ 37ರಷ್ಟು ಸೀಟುಗಳನ್ನು ಬಾಚಿಕೊಂಡ ಬಿಜೆಪಿ

|
Google Oneindia Kannada News

ನವದೆಹಲಿ, ಮೇ 24: ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಭಾವಿಸಲಾಗಿತ್ತು. ತ್ರಿವಳಿ ತಲಾಖ್ ನಿಷೇಧ ಮಸೂದೆ, ಗೋರಕ್ಷಕರಿಂದ ಹಲ್ಲೆ ಮುಂತಾದ ಪ್ರಕರಣಗಳು ಬಿಜೆಪಿ ವಿರುದ್ಧ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿತ್ತು.

ಆದರೆ, ತಳಮಟ್ಟದಲ್ಲಿ ನಡೆದ ಕೋಮುಗಳ ನಡುವಿನ ಧ್ರುವೀಕರಣ ಮತ್ತು ಪ್ರತಿ ಧ್ರುವೀಕರಣ ಬಿಜೆಪಿಗೆ ಸಾಕಷ್ಟು ಲಾಭ ತಂದುಕೊಟ್ಟಿದೆ. ದೇಶದೆಲ್ಲೆಡೆ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಲೋಕಸಭೆ ಕ್ಷೇತ್ರಗಳ ಪೈಕಿ ಮೂರನೇ ಒಂದರಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ.

ದಲಿತ-ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆದಲಿತ-ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ

ಬಿಜೆಪಿ ಗಳಿಸಿರುವ ಸೀಟುಗಳ ಶೇಕಡಾವಾರು ಪ್ರಮಾಣದಲ್ಲಿ, 2011ರ ಜನಗಣತಿ ಪ್ರಕಾರ ಶೇ 25ಕ್ಕೂ ಅಧಿಕ ಮುಸ್ಲಿಮರು ಇರುವ 65 ಕ್ಷೇತ್ರಗಳಲ್ಲಿ ಬಿಜೆಪಿ ಶೇ 36.9ರಷ್ಟು ಮತಗಳನ್ನು ಪಡೆದುಕೊಂಡಿದೆ ಎಂದು 'ದಿ ಪ್ರಿಂಟ್' ವಿಶ್ಲೇಷಣೆ ಮಾಡಿದೆ.

ತೆಲಂಗಾಣ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಉತ್ತರಾಖಂಡ, ಮಣಿಪುರ, ಕೇರಳ, ಜಮ್ಮು ಮತ್ತು ಕಾಶ್ಮೀರ ಹಾಗೂ ಮಹಾರಾಷ್ಟ್ರ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು (ದೆಹಲಿ ಮತ್ತು ಲಕ್ಷದ್ವೀಪ) - ಹೀಗೆ 13 ರಾಜ್ಯಗಳಲ್ಲಿನ 65 ಲೋಕಸಭಾ ಕ್ಷೇತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 65 ಸೀಟುಗಳಲ್ಲಿ ಬಿಜೆಪಿಯೊಂದೇ 24 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಅದರ ಮಿತ್ರ ಪಕ್ಷ ಜೆಡಿಯು, ಬಿಹಾರದಲ್ಲಿ ಎರಡು ಮತ್ತು ಶಿವಸೇನಾ ಮಹಾರಾಷ್ಟ್ರದಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದಿದೆ.

ಉಳಿದ ಸೀಟುಗಳು ವಿರೋಧಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್, ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ, ಬಹುಜ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ನ್ಯಾಷನಲ್ ಕಾಂಗ್ರೆಸ್ ಪಾರ್ಟಿ, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಾಲಾಗಿವೆ. ಮುಸ್ಲಿಮರು ಹೆಚ್ಚಿರುವ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಒಂಬತ್ತು ಸೀಟುಗಳನ್ನು ಪಡೆದುಕೊಂಡಿದೆ. ಇವುಗಳಲ್ಲಿ ಹೆಚ್ಚಿನವು ಕೇರಳದಲ್ಲಿ ದೊರಕಿದೆ.

ಮೋದಿ ಮತ್ತೆ ಗೆದ್ದರೆ ಹಳ್ಳಿ ತೊರೆಯಲು ಮುಸ್ಲಿಮರ ನಿರ್ಧಾರಮೋದಿ ಮತ್ತೆ ಗೆದ್ದರೆ ಹಳ್ಳಿ ತೊರೆಯಲು ಮುಸ್ಲಿಮರ ನಿರ್ಧಾರ

ಬಿಜೆಪಿ ತನ್ನ ಮೂಲ ಮತಗಳನ್ನು ಸೆಳೆಯಲು ಹಿಂದೂ ಮತಗಳ ಧ್ರುವೀಕರಣ ನಡೆಸಿದ್ದು ಹೇಗೆ ಫಲಪ್ರದವಾಗಿದೆ ಎಂಬುದನ್ನುಇದು ತೋರಿಸುತ್ತದೆ. ಹಿಂದುತ್ವದ ತಳಹದಿಯಲ್ಲಿ 1990ರಿಂದ ಬಿಜೆಪಿ ತನ್ನ ರಾಜಕಾರಣವನ್ನು ತ್ವರಿತಗತಿಯಲ್ಲಿ ಬೆಳೆಸಿತು. ಈ ಚುನಾವಣೆಯಲ್ಲಿಯೂ ಅದೇ ಮಾದರಿಯ ಹಿಂದುತ್ವ ರಾಜಕಾರಣವನ್ನೇ ಮುಂದುವರಿಸಿತು.

ಹಿಂದೂಗಳ ಮತ ಗಟ್ಟಿ

ಹಿಂದೂಗಳ ಮತ ಗಟ್ಟಿ

ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡುವುದು, 'ಅಲಿ ವರ್ಸಸ್ ಬಜರಂಗಬಲಿ' ಹೋರಾಟ ಎಂದು ಬಿಂಬಿಸಿದ್ದು ಮುಂತಾದ ಧ್ರುವೀಕರಣದ ಪ್ರಯತ್ನಗಳನ್ನು ಬಿಜೆಪಿ ನಡೆಸಿತು. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಇರುವ ಕ್ಷೇತ್ರಗಳಲ್ಲಿ ಹಿಂದೂ ಮತಗಳು ಬಿಜೆಪಿಗೇ ಬೀಳುವಂತೆ ಕೆಲಸ ಮಾಡಲಾಗಿತ್ತು.

ಲೋಕಸಭೆ ಚುನಾವಣೆ ಫಲಿತಾಂಶ 2019: ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಲೋಕಸಭೆ ಚುನಾವಣೆ ಫಲಿತಾಂಶ 2019: ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಮುಸ್ಲಿಮರ ಮತಗಳಷ್ಟೇ ಮುಖ್ಯವಾಗಿದ್ದವು

ಮುಸ್ಲಿಮರ ಮತಗಳಷ್ಟೇ ಮುಖ್ಯವಾಗಿದ್ದವು

ಎದುರಾಳಿ ಪಕ್ಷಗಳ ತಂತ್ರವು ಅಲ್ಪಮಟ್ಟಿಗೆ ಪ್ರತಿ ಧ್ರುವೀಕರಣದ್ದಾಗಿತ್ತು. ಅವರು ಮುಸ್ಲಿಂ ಮತಗಳನ್ನು ಸುಲಭವಾಗಿ ಪಡೆಯುವುದರ ಮೂಲಕ ಬಿಜೆಪಿಯನ್ನು ಹಿಂದಿಕ್ಕಬಹುದು ಎಂದು ಭಾವಿಸಿದ್ದರು. ಆದರೆ, ವಿರೋಧಪಕ್ಷಗಳೇ ಚೂರು ಚೂರಾಗಿದ್ದರಿಂದ ಅವರ ಮತಗಳು ಹಂಚಿ ಹೋದವು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಬ್ಬರ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಬ್ಬರ

ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಮತಗಳು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಹಂಚಿಹೋದವು. ಇದರ ಲಾಭ ಬಿಜೆಪಿಗೆ ದೊರಕಿತು. 10-12ರವರೆಗೂ ಬಿಜೆಪಿ ಸೀಟುಗಳನ್ನು ಗೆಲ್ಲಬಹುದು ಎಂದು ಭಾವಿಸಲಾಗಿತ್ತು. ಆದರೆ, ಮತಗಳ ವಿಭಜನೆಯಿಂದಾಗಿ ಬಿಜೆಪಿ 18 ಸೀಟುಗಳನ್ನು ಇಲ್ಲಿ ಪಡೆದುಕೊಂಡಿತು. ಮಿಗಿಲಾಗಿ ಶೇ 40ರಷ್ಟು ಮತಗಳನ್ನು ಅದು ಪಡೆದುಕೊಂಡಿರುವುದು ಗಮನಾರ್ಹ.

ಮತ ಹಂಚಿಕೆ ಲಾಭ ಬಿಜೆಪಿಗೆ

ಮತ ಹಂಚಿಕೆ ಲಾಭ ಬಿಜೆಪಿಗೆ

ಉತ್ತರ ಪ್ರದೇಶದಲ್ಲಿ ಕೂಡ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಮುಸ್ಲಿಂ ಮತಗಳನ್ನು ಹಂಚಿಕೊಂಡವು. ಅಸ್ಸಾಂನ ಕರೀಂಗಂಜ್‌ನಲ್ಲಿಯೂ ಇದೇ ಪರಿಸ್ಥಿತಿ. ಇಲ್ಲಿ ಕಾಂಗ್ರೆಸ್ ಮತ್ತು ಎಐಯುಡಿಎಫ್ ಮುಸ್ಲಿಮರ ಮತಗಳನ್ನು ಹಂಚಿಕೊಂಡರೆ ಅದರ ಲಾಭ ಬಿಜೆಪಿಗೆ ದೊರಕಿತು.

English summary
Lok Sabha Election Results: BJP has won 37 per cent of the seats in Muslim dominated places across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X