ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ 2019: ಬೆಂಗಳೂರು ಗ್ರಾಮಾಂತರ ಕ್ಷೇತ್ರ ಪರಿಚಯ

|
Google Oneindia Kannada News

Recommended Video

Lok Sabha Election 2019 : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಎಚ್ ಡಿ ದೇವೇಗೌಡ, ತೇಜಸ್ವಿನಿ ರಮೆಶ್, ಸಿಪಿ ಯೋಗೇಶ್ವರ, ಡಿಕೆ ಸುರೇಶ್ ರಂಥ ಘಟನಾಘಟಿ ರಾಜಕಾರಣಿಗಳು ಸ್ಪರ್ಧಿಸಿದಂಥ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರ. ಈ ಹಿಂದಿನ ಕನಕಪುರ ಕ್ಷೇತ್ರ ಇಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿ ಬದಲಾಗಿದೆ.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ನಿರ್ಮಾಣವಾಯಿತು. ಕನಕಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಸಾತನೂರು, ಉತ್ತರಹಳ್ಳಿ ಕ್ಷೇತ್ರಗಳು ರದ್ದಾಗಿ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಕ್ಷೇತ್ರಗಳು ರಚನೆಯಾದವು.

ರಮಣೀಯ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಯಾರ ತೆಕ್ಕೆಗೆ? ರಮಣೀಯ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಯಾರ ತೆಕ್ಕೆಗೆ?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್, ತುಮಕೂರು ಜಿಲ್ಲೆಯ ಕುಣಿಗಲ್, ರಾಮನಗರ ಜಿಲ್ಲೆಯ ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಕ್ಷೇತ್ರಗಳು ಸೇರಿವೆ.

Lok Sabha Election 2019 : Bangalore Rural LS Constituency profile

ಕುಣಿಗಲ್, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ,ರಾಮನಗರ, ಕನಕಪುರ, ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಪೈಕಿ ಕುಣಿಗಲ್, ರಾಜರಾಜೇಶ್ವರಿ ನಗರ,ಆನೇಕಲ್, ಕನಕಪುರ ಗಳಲ್ಲಿ ಕಾಂಗ್ರೆಸ್, ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ, ಮಾಗಡಿ, ರಾಮನಗರ, ಚೆನ್ನಪಟ್ಟಣದಲ್ಲಿ ಜೆಡಿಎಸ್ ವಶದಲ್ಲಿದೆ.

ಲೋಕಸಭೆ ಚುನಾವಣೆ 2019 : ಬಳ್ಳಾರಿ ಕ್ಷೇತ್ರ ಪರಿಚಯ ಲೋಕಸಭೆ ಚುನಾವಣೆ 2019 : ಬಳ್ಳಾರಿ ಕ್ಷೇತ್ರ ಪರಿಚಯ

ಕ್ಷೇತ್ರದ ಇತಿಹಾಸ:
ಮೈಸೂರು ರಾಜ್ಯದಲ್ಲಿದ್ದಾಗ ಕಾಂಗ್ರೆಸ್ಸಿನ ಎಂವಿ ರಾಜಶೇಖರನ್ ಅವರು 1967ರಲ್ಲಿ ಗೆಲುವು ಸಾಧಿಸಿ, ಕ್ಷೇತ್ರದ ಮೊದಲ ಸಂಸದರೆನಿಸಿದರು. ಕರ್ನಾಟಕ ರಾಜ್ಯ ಉದಯವಾದ ಬಳಿಕ ಕಾಂಗ್ರೆಸ್ಸಿನ ಎಂವಿ ಚಂದ್ರಶೇಖರಮೂರ್ತಿ ಅವರು 1977ರಲ್ಲಿ ಜಯ ದಾಖಲಿಸಿದರು. ಎಂ ಶ್ರೀನಿವಾಸ್ ಅವರು ಇಲ್ಲಿ ತನಕ ಇಲ್ಲಿ ಜಯ ದಾಖಲಿಸಿರುವ ಏಕೈಕ ಬಿಜೆಪಿ ಸಂಸದ. ಎಚ್ ಡಿ ದೇವೇಗೌಡ, ತೇಜಸ್ವಿನಿ ಅವರು ಕೂಡಾ ಒಮ್ಮೆ ಈ ಕ್ಷೇತ್ರದಿಂದ ಜಯ ದಾಖಲಿಸಿದ್ದಾರೆ.

Lok Sabha Election 2019 : Bangalore Rural LS Constituency profile

ಕಳೆದ ಜನ ಗಣತಿಯಂತೆ ಕ್ಷೇತ್ರದಲ್ಲಿ ಒಟ್ಟು 27,56,259 ಮಂದಿ ಇದ್ದು, ಶೇ 48.56ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದರೆ, ಶೇ 51.44ರಷ್ಟು ಮಂದಿ ನಗರವಾಸಿಗಳಾಗಿದ್ದಾರೆ. ಶೇ 15.96ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 2.15ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ.

ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ, ಉಳಿದಂತೆ ಲಿಂಗಾಯತ, ಕುರುಬ, ಅಲ್ಪ ಸಂಖ್ಯಾತ, ಬೆಸ್ತ, ತಿಗಳ ಮುಂತಾದ ಮತಗಳು ಎಣಿಕೆಗೆ ಬರಲಿವೆ.

ಬಿಜೆಪಿ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಕಣ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಕಣ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

ಒಟ್ಟು 21,90,397 ಮತದಾರರಿದ್ದು, ಈ ಪೈಕಿ 11,35,845 ಪುರುಷ ಮತದಾರರು, 10,54,552 ಮಹಿಳಾ ಮತದಾರರಿದ್ದಾರೆ.

Lok Sabha Election 2019 : Bangalore Rural LS Constituency profile

2009ರಿಂದ ಇಲ್ಲಿ ತನಕ ಕಾಂಗ್ರೆಸ್ ಒಮ್ಮೆ ಹಾಗೂ ಜೆಡಿಎಸ್ ಒಮ್ಮೆ ಗೆಲುವು ಸಾಧಿಸಿ ತಲಾ ಶೇ 50ರಷ್ಟು ಗೆಲುವಿನ ಸರಾಸರಿ ಹೊಂದಿವೆ.

ಧಾರವಾಡ ಲೋಕಸಭಾ ಕ್ಷೇತ್ರದ ಪರಿಚಯ ಧಾರವಾಡ ಲೋಕಸಭಾ ಕ್ಷೇತ್ರದ ಪರಿಚಯ

ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (51) ಅವರು ಸಂಸತ್ತಿನಲ್ಲಿ ಶೇ 86ರಷ್ಟು ಹಾಜರಾತಿ ಹೊಂದಿದ್ದು, 607ಪ್ರಶ್ನೆಗಳನ್ನು ಎತ್ತಿದ್ದಾರೆ, 88 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.

Lok Sabha Election 2019 : Bangalore Rural LS Constituency profile

2014ರಲ್ಲಿ ಶೇ 66ರಷ್ಟು ಮತದಾನವಾಗಿತ್ತು. 14,55,244 ಮತಗಳ ಪೈಕಿ 7,58,619 ಪುರುಷರು ಹಾಗೂ 6,96,625 ಮಹಿಳೆಯರ ಮತಗಳು ದಾಖಲಾಗಿತ್ತು. ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ (6,52,723 ಮತಗಳು ) ಅವರು ಬಿಜೆಪಿಯ ಮುನಿರಾಜು ಗೌಡ (4,21,243 ಮತಗಳು) ಅವರನ್ನು ಸೋಲಿಸಿದ್ದರು.

ಕ್ಷೇತ್ರದ ಸಮಸ್ಯೆ:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವುದು ಅನುಕೂಲವೂ ಹೌದು, ಸಮಸ್ಯೆಯೂ ಹೌದು. ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಭಾಗಗಳಲ್ಲಿ, ತುಮಕೂರು ಜಿಲ್ಲೆಯ ಕುಣಿಗಲ್, ರಾಮನಗರ ಜಿಲ್ಲೆಯ ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಕ್ಷೇತ್ರಗಳು ಸೇರಿವೆ.

ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ, ಆನೇಕಲ್, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್, ಮಿಕ್ಕ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ. ಹಾಲಿ ಸಂಸದರು ರಾಮನಗರ ಜಿಲ್ಲೆಗಷ್ಟೇ ಸೀಮಿತವಾಗಿದ್ದಾರೆ ಎಂಬ ಅಪವಾದವಿದೆ. ರಾಮನಗರ ಜಿಲ್ಲೆಯಲ್ಲಿನ ಕಲ್ಲು, ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿದೆ. ಕ್ಷೇತ್ರದಲ್ಲಿ ನಗರ ಪ್ರದೇಶ ಅಧಿಕವಾಗಿದ್ದರೂ ಐತಿಹಾಸಿಕ, ಪ್ರವಾಸಿ ತಾಣಗಳನ್ನು ಹೊಂದಿದೆ.

ಹತ್ತು ಹಲವು ಸಾರಿಗೆ ಸಂಪರ್ಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಬ್ಬು, ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆ ಒದಗಿಸುವಲ್ಲಿ ಸಂಸದರ ಪಾತ್ರ ಇನ್ನಷ್ಟು ಚುರುಕಾಗಬೇಕಿದೆ. ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್, ಎಗ್ಗಿಲ್ಲದೆ ವಿಸ್ತರಣೆಗೊಳ್ಳುತ್ತಿರುವ ಅಪಾರ್ಟ್ಮೆಂಟ್ ಗಳು, ಕೆರೆಗಳು ವಸತಿ ಸಮುಚ್ಚಯಗಳಾಗಿ ಬದಲಾಗುತ್ತಿರುವುದು ದುರಂತವಾಗಿದೆ. ಈ ಪೈಕಿ ಕುಣಿಗಲ್, ರಾಜರಾಜೇಶ್ವರಿ ನಗರ,ಆನೇಕಲ್, ಕನಕಪುರ ಗಳಲ್ಲಿ ಕಾಂಗ್ರೆಸ್, ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ, ಮಾಗಡಿ, ರಾಮನಗರ, ಚೆನ್ನಪಟ್ಟಣದಲ್ಲಿ ಜೆಡಿಎಸ್ ವಶದಲ್ಲಿದೆ.

English summary
Lok Sabha Election 2019 : Bangalore Rural Constituency constituency was created in 2008 following the delimitation of parliamentary constituencies. It comprises eight assembly segments of which seven are derived from the former Kanakapura Lok Sabha constituency (abolished in 2008).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X