ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ 61ರಷ್ಟು ಭಾರತೀಯರಿಗೆ ಕೊರೊನಾ ಲಸಿಕೆ ಬಗ್ಗೆಯೇ ಸಂದೇಹ!: ಸಮೀಕ್ಷೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ಹೆಚ್ಚಿನ ಚರ್ಚೆಗಳು ಈಗ ಕೊರೊನಾ ವೈರಸ್ ಲಸಿಕೆಯ ಸುತ್ತಲೂ ನಡೆಯುತ್ತಿದೆ. ಚುನಾವಣೆಯ ಪ್ರಚಾರದಲ್ಲಿಯೂ ಕೋವಿಡ್ ಲಸಿಕೆಗೆ ಆದ್ಯತೆ ಸಿಗುತ್ತಿದೆ. ಲಸಿಕೆ ಬಂದು ಈ ಸಂಕಷ್ಟ ದೂರವಾಗಲಿದೆ ಎಂದು ಅನೇಕರು ಕಾದಿದ್ದಾರೆ. ಅತ್ತ ಔಷಧ ಕಂಪೆನಿಗಳು ಮತ್ತು ವಿಜ್ಞಾನಿಗಳು ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವಲ್ಲಿ ನಿರಂತರ ಪ್ರಯತ್ನ ನಡೆಸಿದ್ದಾರೆ.

ಹಾಗೆಂದು, ಒಂದು ವೇಳೆ ಲಸಿಕೆ ಸಿದ್ಧವಾಗಿ ಮಾರುಕಟ್ಟೆಗೆ ಬಂದರೆ ಜನರು ಹಿಂದೆ ಮುಂದೆ ಆಲೋಚಿಸದೆ ಲಸಿಕೆ ಪಡೆದುಕೊಳ್ಳಲು ಧಾವಿಸುತ್ತಾರೆಯೇ? ಖಂಡಿತಾ ಇಲ್ಲ ಎನ್ನುತ್ತದೆ ಸಮೀಕ್ಷೆಯೊಂದು. ಕೊರೊನಾ ವೈರಸ್ ಲಸಿಕೆ ಎಲ್ಲ ಹಂತದ ಪ್ರಯೋಗಗಳನ್ನು ಪೂರೈಸಿ ಪರಿಣಾಮಕಾರಿ ಎಂಬ ಮುದ್ರೆ ಪಡೆದು ಬಿಡುಗಡೆಯಾದ ಬಳಿಕವೂ ಜನರು ಲಸಿಕೆ ಪಡೆಯಲು ಆತುರ ತೋರಿಸುವುದಿಲ್ಲ. ಬದಲಾಗಿ ಕಾದು ನೋಡಲು ಬಯಸುತ್ತಾರೆ. ಏಕೆಂದರೆ ಶೇ 61ರಷ್ಟು ಮಂದಿ ತಾವು ಕೋವಿಡ್ ಲಸಿಕೆಯ ಬಗ್ಗೆ ಸಂದೇಹಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ನಮ್ಮ ರಾಜ್ಯದಲ್ಲೂ ಉಚಿತ ಕೊರೋನಾ ವ್ಯಾಕ್ಸಿನ್ ಕೊಡ್ತೀವಿ: ಶ್ರೀರಾಮುಲುನಮ್ಮ ರಾಜ್ಯದಲ್ಲೂ ಉಚಿತ ಕೊರೋನಾ ವ್ಯಾಕ್ಸಿನ್ ಕೊಡ್ತೀವಿ: ಶ್ರೀರಾಮುಲು

ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ ಲಸಿಕೆಯ ಬಗ್ಗೆ ಹೆಚ್ಚಿನವರು ಅನುಮಾನ ವ್ಯಕ್ತಪಡಿಸಿದ್ದಾರೆ. 'ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ಲಭ್ಯವಾದರೆ ನೀವು ಕೂಡಲೇ ಲಸಿಕೆ ಪಡೆದುಕೊಂಡು, ಕೊರೊನಾ ವೈರಸ್ ಬರುವ ಮುಂಚಿನ ಜೀವನಶೈಲಿಗೆ ಮರಳಲು ಬಯಸುತ್ತೀರಾ?' ಎಂಬ ಪ್ರಶ್ನೆಯನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು. ಮುಂದೆ ಓದಿ.

ಲಸಿಕೆ ಬಗ್ಗೆ ಅನುಮಾನ

ಲಸಿಕೆ ಬಗ್ಗೆ ಅನುಮಾನ

ಒಟ್ಟು 8,312 ಮಂದಿಗೆ ಸಮೀಕ್ಷೆಯ ಸಲುವಾಗಿ ಈ ಪ್ರಶ್ನೆಯನ್ನು ಕೇಳಲಾಗಿತ್ತು. ಅವರಲ್ಲಿ ಶೇ 61ರಷ್ಟು ಮಂದಿ ತಾವು ಕೋವಿಡ್ ಲಸಿಕೆಯ ಬಗ್ಗೆ ಸಂದೇಹಗಳನ್ನು ಹೊಂದಿದ್ದು, 2021ರಲ್ಲಿ ಲಸಿಕೆ ಲಭ್ಯವಾದರೂ ಅದನ್ನು ಪಡೆದುಕೊಳ್ಳಲು ಆತುರ ತೋರಿಸುವುದಿಲ್ಲ ಎಂದಿದ್ದಾರೆ.

ಹಳೆಯ ಜೀವನ ಶೈಲಿ

ಹಳೆಯ ಜೀವನ ಶೈಲಿ

ಶೇ 12 ರಷ್ಟು ಮಂದಿ ಮಾತ್ರವೇ ಲಸಿಕೆ ಸಿಕ್ಕಕೂಡಲೇ ಅದನ್ನು ತೆಗೆದುಕೊಂಡು ಹಳೆಯ ಜೀವನಶೈಲಿಗೆ ಮರಳಲು ಬಯಸಿರುವುದಾಗಿ ತಿಳಿಸಿದ್ದಾರೆ. ಶೇ 25ರಷ್ಟು ಮಂದಿ ಲಸಿಕೆ ಪಡೆದುಕೊಳ್ಳಲು ಸಿದ್ಧರಿದ್ದಾರೆ. ಆದರೆ ಆ ಕೂಡಲೇ ಹಳೆಯ ಜೀವನ ಶೈಲಿಗೆ ವಾಪಸಾಗಲು ಅವರು ಬಯಸುತ್ತಿಲ್ಲ.

ಕೋವಿಡ್ ಭೀತಿಯ ನಡುವೆ ಫ್ಲೂ ಲಸಿಕೆ ಪಡೆದುಕೊಳ್ಳಲು ಜನರ ದೌಡುಕೋವಿಡ್ ಭೀತಿಯ ನಡುವೆ ಫ್ಲೂ ಲಸಿಕೆ ಪಡೆದುಕೊಳ್ಳಲು ಜನರ ದೌಡು

Recommended Video

Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada
ಮಾನಸಿಕ ಸ್ಥಿತಿ ಹೇಗಿತ್ತು?

ಮಾನಸಿಕ ಸ್ಥಿತಿ ಹೇಗಿತ್ತು?

ಕೊರೊನಾ ವೈರಸ್ ಸೋಂಕು ಪಿಡುಗಿನ ಎಂಟು ತಿಂಗಳ ಅವಧಿಯಲ್ಲಿ ನಿಮ್ಮ ಮಾನಸಿಕ ಸ್ಥಿತಿ ಹೇಗಿತ್ತು ಎಂಬುದನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ 8,590 ಮಂದಿಯಲ್ಲಿ ಶೇ 33ರಷ್ಟು ಜನರು ಗಾಬರಿ ಅಥವಾ ಚಿಂತೆಗೆ ಒಳಗಾಗಿದ್ದಾಗಿ ತಿಳಿಸಿದ್ದರೆ, ಶೇ 19ರಷ್ಟು ಮಂದಿ ಶಾಂತ ಮತ್ತು ಸಂತೋಷದಿಂದ ಇದ್ದಿದ್ದಾಗಿ ತಿಳಿಸಿದ್ದಾರೆ. ಶೇ 13ರಷ್ಟು ಜನರು ಖಿನ್ನತೆಗೆ ಒಳಗಾಗಿದ್ದರೆ, ಶೇ 5ರಷ್ಟು ಮಂದಿ ಉತ್ಸಾಹಿಗಳಾಗಿದ್ದೆವೆಂದು ಹೇಳಿದ್ದಾರೆ. ಶೇ 20ರಷ್ಟು ಮಂದಿ ಕೊರೊನಾಗೆ ಧನ್ಯತೆ ಅರ್ಪಿಸುವಷ್ಟು ಖುಷಿಯಾಗಿದ್ದಾಗಿ ತಿಳಿಸಿದ್ದಾರೆ.

ಎಷ್ಟು ದಿನ ಆರಾಮಾಗಿ ಇರಬಹುದು?

ಎಷ್ಟು ದಿನ ಆರಾಮಾಗಿ ಇರಬಹುದು?

ನಿರ್ಬಂಧಗಳೊಂದಿಗೆ ಬದುಕುವ ಈಗಿನ ಸನ್ನಿವೇಶದಲ್ಲಿಯೂ ಎಷ್ಟು ದಿನ ಆರಾಮಾಗಿ ಇರಬಹುದು ಎಂದೆನಿಸಿದೆ? ಎಂಬ ಪ್ರಶ್ನೆಗೆ 8,496 ಮಂದಿ ಉತ್ತರಿಸಿದ್ದಾರೆ. ಶೇ 38ರಷ್ಟು ಮಂದಿ ಎಷ್ಟು ದಿನವಾದರೂ ಈ ಕೋವಿಡ್ 19ರ ಸ್ಥಿತಿಯಲ್ಲಿ ಬದುಕಲು ಸಿದ್ಧರಾಗಿದ್ದಾರೆ. ಶೇ 23ರಷ್ಟು ಮಂದಿ ಈಗಾಗಲೇ ಹೈರಾಣಾಗಿರುವುದಾಗಿ ತಿಳಿಸಿದ್ದಾರೆ. ಶೇ 14 ಮಂದಿ ಡಿಸೆಂಬರ್ ಅಂತ್ಯದವರೆಗೂ, ಶೇ 6ರಷ್ಟು ಮಂದಿ ಮಾರ್ಚ್ 31ರವರೆಗೂ ಕಾದು ನೋಡಲು ನಿರ್ಧರಿಸಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಅನುಮತಿಗೆ ಶಿಫಾರಸುಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಅನುಮತಿಗೆ ಶಿಫಾರಸು

English summary
LocalCircles Survey: 61% respondents said they will prefer to wait even if Covid vaccine is available in early 2021 as they are skeptical about taking it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X