ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿ

|
Google Oneindia Kannada News

ಆಕ್ಲೆಂಡ್, ಜೂ. 09: ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತೆ ಉತ್ತಮ ಸ್ಥಾನ ಗಳಿಸಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ನ ದಿ ಗ್ಲೋಬಲ್ ಲಿವೇಬಿಲಿಟಿ ಇಂಡೆಕ್ಸ್ 2021 ರ ಪ್ರಕಾರ, ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಹತ್ತು ಹೆಚ್ಚು ವಾಸಯೋಗ್ಯ ನಗರದ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ನ್ಯೂಜಿಲೆಂಡ್‌ನ ಆಕ್ಲೆಂಡ್ ಪಡೆದಿದೆ.

ಇನ್ನು ಆಸ್ಟ್ರೇಲಿಯಾ ಮತ್ತೆ ಉತ್ತಮ ಸ್ಥಾನ ಗಳಿಸಿದ್ದರೂ ಮೆಲ್ಬೋರ್ನ್ ಮತ್ತು ಸಿಡ್ನಿಯ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ರಾಜಧಾನಿಗಳು ಈ ಶ್ರೇಯಾಂಕ ಪಟ್ಟಿಯಲ್ಲಿ ತೀರಾ ಕುಸಿತವನ್ನು ಕಂಡಿದೆ. ಆಕ್ಲೆಂಡ್ ನಂತರದ ಸ್ಥಾನದಲ್ಲಿ ಜಪಾನ್‌ನ ಒಸಾಕಾ, ಆಸ್ಟ್ರೇಲಿಯಾದ ಅಡಿಲೇಡ್ ಮತ್ತು ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್ ಇವೆ. ಆಸ್ಟ್ರೇಲಿಯಾದ ನಾಲ್ಕು ನಗರಗಳು ಅಗ್ರ 10 ರಲ್ಲಿವೆ.

ಕಾಂಗರೂ ನಾಡಲ್ಲಿ ಇಲಿಗಳ ಅಬ್ಬರ..! ಭಾರತದ ಬಳಿ ವಿಷಕ್ಕಾಗಿ ಆಸ್ಟ್ರೇಲಿಯಾ ಬೇಡಿಕೆ..!ಕಾಂಗರೂ ನಾಡಲ್ಲಿ ಇಲಿಗಳ ಅಬ್ಬರ..! ಭಾರತದ ಬಳಿ ವಿಷಕ್ಕಾಗಿ ಆಸ್ಟ್ರೇಲಿಯಾ ಬೇಡಿಕೆ..!

ಮಾರ್ಚ್ 2021 ರ ಸಮೀಕ್ಷೆಯ ಮೊದಲ ಹತ್ತು ನಗರಗಳಲ್ಲಿ ಆರು ನ್ಯೂಜಿಲೆಂಡ್ ಅಥವಾ ಆಸ್ಟ್ರೇಲಿಯಾದ ನಗರಗಳಾಗಿವೆ. ಈ ನಗರಗಳಲ್ಲಿ ನಿವಾಸಿಗಳು ಸಾಮಾನ್ಯ ಜೀವನವನ್ನು ನಡೆಸಲು ಉತ್ತಮ ಅವಕಾಶವಿದೆ ಎಂದು ಸಮೀಕ್ಷೆ ತಿಳಿಸಿದೆ. ಮೆಲ್ಬೋರ್ನ್ ನಗರವು ಏಳು ವರ್ಷಗಳಿಂದ ಈ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನವನ್ನು ಪಡೆಯುತ್ತಿದೆ. 2019 ರಲ್ಲಿ ಸಂಗ್ರಹಿಸಲಾದ ಸಮೀಕ್ಷೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು.

ಕೊರೊನಾ ಸೋಂಕಿನಿಂದಾಗಿ ಶ್ರೇಯಾಂಕದಲ್ಲಿ ಕುಸಿತ ಕಂಡ ನಗರಗಳು

ಕೊರೊನಾ ಸೋಂಕಿನಿಂದಾಗಿ ಶ್ರೇಯಾಂಕದಲ್ಲಿ ಕುಸಿತ ಕಂಡ ನಗರಗಳು

ಕಳೆದ ವರ್ಷದಿಂದ ಕೊರೊನಾ ಸೋಂಕಿನ ಬಿಕ್ಕಟ್ಟಿಗೆ ಒಳಗಾಗಿ ಈಗ ಕೊರೊನಾ ವಿರುದ್ದದ ಹೋರಾಟದಲ್ಲಿ ಸಫಲವಾಗಿರುವ ಅಡಿಲೇಡ್ ಮೂರನೇ ಮತ್ತು ಪರ್ತ್ ಆರನೇ ಸ್ಥಾನಕ್ಕೆ ಕುಸಿದಿದೆ. ಮೆಲ್ಬೋರ್ನ್ ನಗರವು 2019 ರಲ್ಲಿ ಸಂಗ್ರಹಿಸಲಾದ ಸಮೀಕ್ಷೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು ಈ ವರ್ಷ 9 ನೇ ಸ್ಥಾನಕ್ಕೆ ಕುಸಿದಿದೆ. ಮೆಲ್ಬೋರ್ನ್ ನಗರದಲ್ಲಿ ಮೂಲಸೌಕರ್ಯ ಮತ್ತು ಶಿಕ್ಷಣ ಶೇ. 100 ರಷ್ಟು ಸೂಚ್ಯಂಕವನ್ನು ಹೊಂದಿದ್ದರೂ ಆರೋಗ್ಯ ರಕ್ಷಣೆ ಶೇ. 83.3, ಸಂಸ್ಕೃತಿ ಮತ್ತು ಪರಿಸರ ಶೇ.88.2 ಶ್ರೇಯಾಂಕ ಕುಸಿದಿದೆ. ಇನ್ನು ಸಿಡ್ನಿಯು ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದು ಈಗ 11 ನೇ ಸ್ಥಾನಕ್ಕೆ ಇಳಿದಿದೆ. 2019 ರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆಸ್ಟ್ರಿಯನ್ ರಾಜಧಾನಿ ವಿಯೆನ್ನಾ ಎರಡನೇ ಅಲೆಯ ಕಾರಣದಿಂದಾಗಿ ಈಗ ಅಗ್ರ 10 ರಿಂದ ಹೊರಬಂದಿದ್ದು 12 ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ''ಯುರೋಪಿಯನ್ ಮತ್ತು ಕೆನಡಾದ ನಗರಗಳ ಶ್ರೇಯಾಂಕದಲ್ಲಿ ಕುಸಿತ ಕಂಡಿರುವುದು ಆರೋಗ್ಯ ಸಂಪನ್ಮೂಲಗಳ ಮೇಲಿನ ಒತ್ತಡಕ್ಕೆ ಕಾರಣವಾಗಿದೆ'' ಎಂದು ಸೂಚ್ಯಂಕ ತಿಳಿಸಿದೆ.

ವಿಶ್ವದ ಅತ್ಯಂತ ವಾಸಯೋಗ್ಯ ಹತ್ತು ನಗರಗಳು

ವಿಶ್ವದ ಅತ್ಯಂತ ವಾಸಯೋಗ್ಯ ಹತ್ತು ನಗರಗಳು

1. ಆಕ್ಲೆಂಡ್, ನ್ಯೂಜಿಲೆಂಡ್
2. ಒಸಾಕಾ, ಜಪಾನ್
3. ಅಡಿಲೇಡ್, ಆಸ್ಟ್ರೇಲಿಯಾ
4. ವೆಲ್ಲಿಂಗ್ಟನ್, ನ್ಯೂಜಿಲೆಂಡ್
5. ಟೋಕಿಯೊ, ಜಪಾನ್
6. ಪರ್ತ್, ಆಸ್ಟ್ರೇಲಿಯಾ
7. ಜುರಿಚ್, ಸ್ವಿಟ್ಜರ್ಲೆಂಡ್
8. ಜಿನೀವಾ, ಸ್ವಿಟ್ಜರ್ಲೆಂಡ್
9. ಮೆಲ್ಬರ್ನ್, ಆಸ್ಟ್ರೇಲಿಯಾ
10. ಬ್ರಿಸ್ಬೇನ್, ಆಸ್ಟ್ರೇಲಿಯಾ

ಎರಡೇ ನಿಮಿಷ ಮೊದಲು ಕಚೇರಿಯಿಂದ ತೆರಳಿದರೂ ವೇತನ ಕಡಿತ: ಜಪಾನ್ ಸರ್ಕಾರ ಆದೇಶಎರಡೇ ನಿಮಿಷ ಮೊದಲು ಕಚೇರಿಯಿಂದ ತೆರಳಿದರೂ ವೇತನ ಕಡಿತ: ಜಪಾನ್ ಸರ್ಕಾರ ಆದೇಶ

ಏಷ್ಯಾದ ಹೆಚ್ಚು ವಾಸಯೋಗ್ಯ ಹತ್ತು ನಗರಗಳು

ಏಷ್ಯಾದ ಹೆಚ್ಚು ವಾಸಯೋಗ್ಯ ಹತ್ತು ನಗರಗಳು

1. ಆಕ್ಲೆಂಡ್, ನ್ಯೂಜಿಲೆಂಡ್ (ಜಾಗತಿಕ ಶ್ರೇಣಿ 1)
2. ಒಸಾಕಾ, ಜಪಾನ್ (ಜಾಗತಿಕ ಶ್ರೇಣಿ 2)
3. ಅಡಿಲೇಡ್, ಆಸ್ಟ್ರೇಲಿಯಾ (ಜಾಗತಿಕ ಶ್ರೇಣಿ 3)
4. ವೆಲ್ಲಿಂಗ್ಟನ್, ನ್ಯೂಜಿಲೆಂಡ್ (ಜಾಗತಿಕ ಶ್ರೇಣಿ 4)
5. ಟೋಕಿಯೊ, ಜಪಾನ್ (ಜಾಗತಿಕ ಶ್ರೇಣಿ 5)
6. ಪರ್ತ್, ಆಸ್ಟ್ರೇಲಿಯಾ (ಜಾಗತಿಕ ಶ್ರೇಣಿ 6)
7. ಮೆಲ್ಬರ್ನ್, ಆಸ್ಟ್ರೇಲಿಯಾ (ಜಾಗತಿಕ ಶ್ರೇಣಿ 8)
8. ಬ್ರಿಸ್ಬೇನ್, ಆಸ್ಟ್ರೇಲಿಯಾ (ಜಾಗತಿಕ ಶ್ರೇಣಿ 10)
9. ಸಿಡ್ನಿ, ಆಸ್ಟ್ರೇಲಿಯಾ (ಜಾಗತಿಕ ಶ್ರೇಣಿ 11)
10. ತೈಪೆ, ತೈವಾನ್ (ಜಾಗತಿಕ ಶ್ರೇಣಿ 33)

ವಾಷಿಂಗ್ಟನ್‌ನಲ್ಲಿ ಕೋವಿಡ್‌ ಲಸಿಕೆ ಪಡೆದ ವಯಸ್ಕರಿಗೆ ಉಚಿತ ಗಾಂಜಾ!ವಾಷಿಂಗ್ಟನ್‌ನಲ್ಲಿ ಕೋವಿಡ್‌ ಲಸಿಕೆ ಪಡೆದ ವಯಸ್ಕರಿಗೆ ಉಚಿತ ಗಾಂಜಾ!

ವಿಶ್ವದ ಅತಿ ಕಡಿಮೆ ವಾಸಯೋಗ್ಯ ಹತ್ತು ನಗರಗಳು ಯಾವುದು?

ವಿಶ್ವದ ಅತಿ ಕಡಿಮೆ ವಾಸಯೋಗ್ಯ ಹತ್ತು ನಗರಗಳು ಯಾವುದು?

1. ಕ್ಯಾರಕಾಸ್, ವೆನೆಜುವೆಲಾ
2. ಡೌಲಾ, ಕ್ಯಾಮರೂನ್
3. ಹರಾರೆ, ಜಿಂಬಾಬ್ವೆ
4. ಕರಾಚಿ, ಪಾಕಿಸ್ತಾನ
5. ಟ್ರಿಪೊಲಿ, ಲಿಬಿಯಾ
6. ಅಲ್ಜಿಯರ್ಸ್, ಅಲ್ಜೀರಿಯಾ
7. ಢಾಕಾ, ಬಾಂಗ್ಲಾದೇಶ
8. ಪೋರ್ಟ್ ಮೊರೆಸ್ಬಿ, ಪಿಎನ್‌ಜಿ
9. ಲಾಗೊಸ್, ನೈಜೀರಿಯಾ
10. ಡಮಾಸ್ಕಸ್, ಸಿರಿಯಾ

(ಒನ್‌ಇಂಡಿಯಾ ಸುದ್ದಿ)

English summary
The top 10 most livable cities in the world, and their scores according to The Global Liveability Index 2021. Here is the list take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X