ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ರಾಷ್ಟ್ರಪತಿಗಳ ಪಟ್ಟಿ:ಡಾ. ರಾಜೇಂದ್ರ ಪ್ರಸಾದ್ -ದ್ರೌಪದಿ ಮುರ್ಮು

|
Google Oneindia Kannada News

ಅಂದಿನಿಂದ ಇಂದಿನ ತನಕ ಭಾರತದ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಮೂಲಕವೇ ನಡೆದಿದೆ. ಡಾ. ರಾಜೇಂದ್ರ ಪ್ರಸಾದ್ ಅವರು ಕೂಡಾ ಚುನಾವಣೆ ಎದುರಿಸಿ 507,400 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದರು. ನೀಲಂ ಸಂಜೀವ್ ರೆಡ್ಡಿ ಅವರು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಭಾರತದ 15ನೇ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಇಂದು ಆಯ್ಕೆಯಾಗಿದ್ದಾರೆ. ಇಲ್ಲಿ ತನಕ ಆಯ್ಕೆಯಾಗಿರುವ ರಾಷ್ಟ್ರಪತಿಗಳ ಪಟ್ಟಿ ಇಲ್ಲಿದೆ...

2012ರಲ್ಲಿ ಪ್ರಣಬ್ ಮುಖರ್ಜಿ ಶೇಕಡಾ 69 ಮತಗಳನ್ನು ಪಡೆದಿದ್ದರು.ಕೋವಿಂದ್ ಅವರು ಶೇ 65 ರಷ್ಟು ಮತಗಳನ್ನು ಪಡೆದಿದ್ದರು. ಜುಲೈ 17ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು ಶೇ.99 ರಷ್ಟು ಮತದಾನವಾಗಿದ್ದು, ಇದು ಇದುವರೆಗಿನ ಗರಿಷ್ಠ ಮತದಾನವೆನ್ನಿಸಿತ್ತು.

ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿ

ಮೀರಾ ಕುಮಾರ್ ಅವರನ್ನು ಸೋಲಿಸಿದ ರಾಮನಾಥ್ ಕೋವಿಂದ್ ಅವರು ಜುಲೈ 25, 2017ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕೋವಿಂದ್ ಅವರ ಅಧಿಕಾರ ಅವಧಿ ಜುಲೈ 24, 2022ರಂದು ಮುಕ್ತಾಯವಾಗಲಿದೆ. ಕೋವಿಂದ್ ಅವರಿಗೆ 7,02,044 ಎಲೆಕ್ಟ್ರೋಲ್ ಮತಗಳು ಹಾಗೂ ಮೀರಾ ಕುಮಾರ್ ಅವರಿಗೆ 3,67,314 ಮತಗಳು ಬಂದಿತ್ತು.

ದ್ರೌಪದಿ ಮುರ್ಮು ಆಯ್ಕೆ: 2022ರಲ್ಲಿ ಎನ್ಡಿಎ ಅಭ್ಯರ್ಥಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ಸ್ಪರ್ಧಿಸಿದ್ದರು. ಯುಪಿಎ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಕಣದಲ್ಲಿದ್ದರು. ಮೊದಲ ಹಂತದ ಫಲಿತಾಂಶ ಹೊರ ಬಂದಾಗ ಮುರ್ಮು ಅವರು 3,78,000 ಮೌಲ್ಯದೊಂದಿಗೆ 540 ಮತಗಳನ್ನು ಗಳಿಸಿದ್ದರು. ಕಣದಲ್ಲಿದ್ದ ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ 1,45,600 ಮೌಲ್ಯದೊಂದಿಗೆ 208 ಮತಗಳನ್ನು ಗಳಿಸಿದ್ದರು. ಇಲ್ಲಿ ಒಟ್ಟು 15 ಮತಗಳು ಅಸಿಂಧುವಾಗಿವೆ.

List of Presidents of Republic of India From Dr Rajendra Prasad to Draupadi Murmu

ದ್ರೌಪದಿ ಮುರ್ಮು ಅವರು 5,77,777 ಮೌಲ್ಯದ 2161 ಮತಗಳನ್ನು ಪಡೆದರು. ಯಶವಂತ್ ಸಿನ್ಹಾ 2,61,062 ಮೌಲ್ಯದ 1058 ಮತಗಳನ್ನು ಪಡೆದರು ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ತಿಳಿಸಿದ್ದಾರೆ. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಮುಂದಿನ ರಾಷ್ಟ್ರಪತಿಯಾಗಿ ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮತ ಮೌಲ್ಯ: ಭಾರತದ ಮೊದಲ ಪ್ರಜೆಯನ್ನು ದೇಶದಲ್ಲಿನ ಅಷ್ಟೂ ಶಾಸಕರು ಮತ್ತು ಸಂಸದರು ಆಯ್ಕೆ ಮಾಡುತ್ತಾರೆ. ಪ್ರಸ್ತುತ ದೇಶದಲ್ಲಿ 776 ಸಂಸದರು ಮತ್ತು 4120 ಮಂದಿ ಶಾಸಕರು ಇದ್ದಾರೆ. ರಾಷ್ಟ್ರಪತಿ ಆಯ್ಕೆಗಾಗಿ ಈ ಜನಪ್ರತಿನಿಧಿಗಳಿಗೆ ನಿರ್ದಿಷ್ಟ ಮತ ಮೌಲ್ಯವನ್ನು ನಿಗದಿಪಡಿಲಾಗುತ್ತದೆ. ಎಲ್ಲ ಸಂಸದರ ಒಟ್ಟು ಮತ ಮೌಲ್ಯ 5,49,474. ಹಾಗೆಯೇ, 4120 ಶಾಸಕರ ಒಟ್ಟು ಮತ ಮೌಲ್ಯ 5,49,474. ಇದರ ಸಂಗ್ರಹಿತ ಮೊತ್ತ 10,98, 903. ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸಕರಿಲ್ಲದ ಕಾರಣ ಸಂಸದರ ಮತ ಮೌಲ್ಯ ಕುಸಿಯಲಿದೆ.

Oneindia Explainer: ಹೊಸ ರಾಷ್ಟ್ರಪತಿ ಆಯ್ಕೆ ಹೇಗೆ? ಏನಿದು electoral-college?Oneindia Explainer: ಹೊಸ ರಾಷ್ಟ್ರಪತಿ ಆಯ್ಕೆ ಹೇಗೆ? ಏನಿದು electoral-college?

ಮೊದಲ ಎರಡು ಚುನಾವಣೆಗಳಲ್ಲಿ ಡಾ ರಾಜೇಂದ್ರ ಪ್ರಸಾದ್ ಸತತ ಗೆಲುವು ಸಾಧಿಸಿದ್ದರು. ಇಲ್ಲಿ ತನಕ 14 ಪ್ರಥಮ ಪ್ರಜೆಗಳನ್ನು ಭಾರತ ತಂಡಿದೆ. 2022 ರಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯು16ನೇ ರಾಷ್ಟ್ರಪತಿಗಳನ್ನು ಆಯ್ಕೆ ಮಾಡಲಿದೆ. ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಾಗಿ ಕ್ರಮವಾಗಿ 1952, 1957, 1962, 1967, 1969, 1974, 1977, 1982, 1987, 1992, 1997, 2002, 2007, 2012 ರಲ್ಲಿ ನಡೆದಿವೆ.

List of Presidents of Republic of India From Dr Rajendra Prasad to Draupadi Murmu

ಯಾರು ಹೆಚ್ಚು ಮತಗಳನ್ನು ಗಳಿಸುತ್ತಾರೋ ಅಥವಾ ಎಲ್ಲ ಸಂಸದರು, ಶಾಸಕರು ರಾಷ್ಟ್ರಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಬಯಸಿದರೆ ಆಗ ಈ ಮತ ಮೌಲ್ಯ ಗೌಣವಾಗಿ ರಾಷ್ಟ್ರಪತಿ ಸ್ಥಾನದ ಮೌಲ್ಯ ಅಗಣಿವಾಗುತ್ತದೆ. ಭಾರತದ ರಾಷ್ಟ್ರಪತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ...

ಅಧಿಕಾರ ಸಂಖ್ಯೆ ಹೆಸರು (ಜನನ-ಮರಣ ವರ್ಷ)
ಅಧಿಕಾರ ಅವಧಿ
15 ದ್ರೌಪದಿ ಮುರ್ಮು (ಜನನ-1958) ಜುಲೈ 25, 2022-
14 ರಾಮನಾಥ್ ಕೋವಿಂದ್ (ಜನನ-1945) ಜುಲೈ 25, 2017- ಜುಲೈ 24, 2022
13 ಪ್ರಣಬ್ ಮುಖರ್ಜಿ (1935-2020) ಜುಲೈ 25,2012 ರಿಂದ ಜುಲೈ 25, 2017
12 ಪ್ರತಿಭಾ ಪಾಟೀಲ್ (ಜನನ- 1934) ಜುಲೈ 25. 2007 ರಿಂದ ಜುಲೈ 24, 2012
11 ಎಪಿಜೆ ಅಬ್ದುಲ್ ಕಲಾಂ (1931-2015) ಜುಲೈ 25, 2002 ರಿಂದ ಜುಲೈ 25, 2007
10 ಡಾ. ಕೆ ಆರ್ ನಾರಾಯಣನ್ (1920-2005) ಜುಲೈ 25, 1997 ರಿಂದ ಜುಲೈ 25, 2002
9 ಡಾ. ಶಂಕರ ದಯಾಳ ಶರ್ಮ (1918-1999) ಜುಲೈ 25, 1992 ರಿಂದ ಜುಲೈ 25, 1997
8 ರಾಮಸ್ವಾಮಿ ವೆಂಕಟರಾಮನ್ (1910-2009) ಜುಲೈ 25, 1987 ರಿಂದ ಜುಲೈ 25, 1992
7 ಗ್ಯಾನಿ ಜೈಲ್ ಸಿಂಗ್ (1916-1994) ಜುಲೈ 25,1982 ರಿಂದ ಜುಲೈ 25, 1987
6 ನೀಲಂ ಸಂಜೀವ ರೆಡ್ಡಿ (1913-1996) ಜುಲೈ 25, 1977 ರಿಂದ ಜುಲೈ 25,1982
ಹಂಗಾಮಿ ಬಿ ಡಿ ಜತ್ತಿ ಫೆಬ್ರವರಿ 11, 1977 ರಿಂದ ಜುಲೈ 25, 1977
5 ಫಕ್ರುದ್ದೀನ್ ಅಲಿ ಅಹ್ಮದ್ (1905-1977) ಆಗಸ್ಟ್ 24, 1974 ರಿಂದ ಫೆಬ್ರವರಿ 11, 1977
4 ವರಾಹಗಿರಿ ವೆಂಕಟ ಗಿರಿ ಆಗಸ್ಟ್ 24, 1969 ರಿಂದ ಆಗಸ್ಟ್ 24, 1974
ಹಂಗಾಮಿ ಮಹಮ್ಮದ್ ಹಿದಾಯತುಲ್ಲಾ ಜುಲೈ 20, 1969 ರಿಂದ ಆಗಸ್ಟ್ 24, 1969
ಹಂಗಾಮಿ ವರಾಹಗಿರಿ ವೆಂಕಟ ಗಿರಿ (1894-1980) ಮೇ 3, 1969 ರಿಂದ ಜುಲೈ 20, 1969
3 ಡಾ. ಜಾಕಿರ್ ಹುಸೇನ್ (1897-1969) ಮೇ 13, 1967 ರಿಂದ ಮೇ 3, 1969
2 ಡಾ. ಸರ್ವಪಲ್ಲಿ ರಾಧಾಕೃಷ್ಣನ್ (1888-1975) ಮೇ 13, 1962 ರಿಂದ ಮೇ 13, 1967
1 ಡಾ. ರಾಜೇಂದ್ರ ಪ್ರಸಾದ್ (1884-1963) ಜನವರಿ 26, 1950 ರಿಂದ ಮೇ 13, 1962

(ಒನ್ಇಂಡಿಯಾ ಸುದ್ದಿ)

English summary
List of Presidents of Republic of India: Dr Rajendra Prasad was the only president to serve for two terms. The terms of Varahagiri Venkata Giri, Muhammad Hidayatullah, and Basappa Danappa Jatti, who have functioned as acting presidents, are therefore not numbered. Draupadi Murmu is 15th President elected on July 21, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X