• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸರ್ಕಾರ್ 2 : ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರು

|

ನವದೆಹಲಿ, ಮೇ 30: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ, ಹೊಸ ಸರ್ಕಾರ ಸ್ಥಾಪಿಸಿದ್ದಾರೆ

ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ 7 ಗಂಟೆ ನಂತರ ನಡೆದ ಸಮಾರಂಭದಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರು 2ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಬಾರಿ 8 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಈ ಶುಭ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಮೋದಿ ಸಂಪುಟ 2.0 LIVE : ಪ್ರಧಾನಿಯಾಗಿ ಮೋದಿ ಪ್ರಮಾಣ ಸ್ವೀಕಾರ

ಸಂಜೆ 4.30 ವೇಳೆಗೆ ಕಲ್ಯಾಣ್ ಮಾರ್ಗ್ ನಲ್ಲಿರುವ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸೇರಲಿರುವ ನೂತನ ಸಂಸದರ ಜೊತೆ ಸಭೆ ನಡೆಸಿದ್ದರು.

ಮೋದಿ ಸರ್ಕಾರ್ 2: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರು.

25 ಕ್ಯಾಬಿನೆಟ್, 9 ಮಂದಿ ರಾಜ್ಯ ಸಚಿವ(ಸ್ವತಂತ್ರ ಖಾತೆ), 24 ರಾಜ್ಯ ಸಚಿವರು

* ಕರ್ನಾಟಕದ ಇಬ್ಬರಿಗೆ ಕ್ಯಾಬಿನೆಟ್ ದರ್ಜೆ, ಒಬ್ಬರಿಗೆ ರಾಜ್ಯ ಖಾತೆ

1. ನರೇಂದ್ರ ಮೋದಿ

2. ರಾಜನಾಥ್ ಸಿಂಗ್

3. ಅಮಿತ್ ಶಾ

4. ನಿತಿನ್ ಗಡ್ಕರಿ

5. ಡಿವಿ ಸದಾನಂದ ಗೌಡ (ಕರ್ನಾಟಕದ ಸಂಸದ)

6. ನಿರ್ಮಲಾ ಸೀತಾರಾಮನ್ (ರಾಜ್ಯಸಭಾ ಸದಸ್ಯೆ, ಕರ್ನಾಟಕ)

7. ರಾಮ್ ವಿಲಾಸ್ ಪಾಸ್ವಾನ್ (ಎಲ್ ಜೆಪಿ)

8. ನರೇಂದ್ರ ಸಿಂಗ್ ತೊಮಾರ್

9. ರವಿಶಂಕರ್ ಪ್ರಸಾದ್

10. ಹರ್ ಸಿಮ್ರತ್ ಕೌರ್ ಬಾದಲ್ (ಶಿರೋಮಣಿ ಅಕಾಲಿ ದಳ)

11. ತಾವರ್ ಚಂದ್ ಗೆಹ್ಲೋಟ್

12. ಎಸ್ ಜೈಶಂಕರ್

13. ರಮೇಶ್ ಪೊಕ್ರಿಯಾಲ್ ನಿಶಾಂತ್ (ಉತ್ತರಾಖಂಡ ಮಾಜಿ ಸಿಎಂ)

14. ಅರ್ಜುನ್ ಮುಂಡಾ

15. ಸ್ಮೃತಿ ಇರಾನಿ

16. ಡಾ. ಹರ್ಷ್ ವರ್ಧನ್

17. ಪ್ರಕಾಶ್ ಜಾವಡೇಕರ್

18. ಪಿಯೂಷ್ ಗೋಯೆಲ್

19. ಧರ್ಮೇಂದ್ರ ಪ್ರಧಾನ್

20. ಮುಖ್ತಾರ್ ಅಬ್ಬಾಸ್ ನಖ್ವಿ

21. ಪ್ರಲ್ಹಾದ ಜೋಶಿ(ಕರ್ನಾಟಕದ ಸಂಸದ)

22. ಡಾ. ಮಹೇಂದ್ರನಾಥ್ ಪಾಂಡೆ

23. ಅರವಿಂದ್ ಗಣಪತ್ ಸಾವಂತ್ (ಶಿವಸೇನಾ)

24. ಗಿರಿರಾಜ್ ಸಿಂಗ್

25. ಗಜೇಂದ್ರ ಸಿಂಗ್ ಶೇಖಾವತ್

26. ಸಂತೋಷ್ ಕುಮಾರ್ ಗಂಗ್ವಾರ್(ರಾಜ್ಯ ಸಚಿವ, ಸ್ವತಂತ್ರ ಖಾತೆ)

27. ಇಂದ್ರಜಿತ್ ಸಿಂಗ್

28. ಶ್ರೀಪಾದ್ ಯಶೋದ್ ನಾಯ್ಕ್

29. ಜಿತೇಂದ್ರಸಿಂಗ್

30. ಕಿರಣ್ ರಿಜಿಜು

31. ಪ್ರಹ್ಲಾದ್ ಸಿಂಗ್ ಪಟೇಲ್

32. ರಾಜ್ ಕುಮಾರ್ ಸಿಂಗ್.

33. ಹರ್ ದೀಪ್ ಸಿಂಗ್ ಪುರಿ.

34. ಮನ್ಸುಖ್ ಲಾಲ್ ಮಾಂಡವಿಯಾ

35. ಫಗ್ಗನ್ ಸಿಂಗ್ ಕುಲಸ್ಥೆ

36. ಅಶ್ವಿನ್ ಕುಮಾರ್ ಚೌಬೆ

37. ಅರ್ಜುನ್ ರಾಮ್ ಮೇಘವಾಲ್

38. ಜನರಲ್(ನಿವೃತ್ತ) ವಿ.ಕೆ ಸಿಂಗ್

39. ಕೃಷ್ಣಪಾಲ್ ಗುರ್ಜರ್

40. ರಾವ್ ಸಾಹೇಬ್ ದಾದಾರಾವ್

41. ಗಂಗಾಪುರಂ ಕಿಶನ್ ರೆಡ್ಡಿ

42. ಪುರುಷೋತ್ತಮ್ ರುಪಾಲ

43. ರಾಮದಾಸ್ ಅಠಾವುಳೆ

44. ಸಾಧ್ವಿ ನಿರಂಜನ ಜ್ಯೋತಿ

45. ಬಾಬುಲ್ ಸುಪ್ರಿಯೊ

46. ಡಾ. ಸಂಜೀವ್ ಕುಮಾರ್ ಬಾಲಿಯಾನ್

47. ಧೋತ್ರೆ ಸಂಜಯ್ ರಾಮರಾವ್.

48. ಅನುರಾಗ್ ಸಿಂಗ್ ಠಾಕೂರ್

49. ಸುರೇಶ್ ಅಂಗಡಿ (ಕರ್ನಾಟಕ ಸಂಸದ)

50. ನಿತ್ಯಾನಂದ್ ರಾಯ್

51. ರತನ್ ಲಾಲ್ ಕಟಾರಿಯಾ

52. ವಿ ಮುರಳೀಧರನ್

53. ರೇಣುಕಾ ಸಿಂಗ್ ಸರುತಾ

54. ಸೋಮ್ ಪ್ರಕಾಶ್

55. ರಾಮೇಶ್ವರ್ ತೇಲಿ

56. ಪ್ರತಾಪ್ ಚಂದ್ರ ಸಾರಂಗಿ

57. ಕೈಲಾಶ್ ಚೌಧರಿ

58. ದೇವಶ್ರೀ ಚೌಧರಿ

***

ಅನುಪ್ರಿಯಾ ಪಟೇಲ್, ಓ ರವೀಂದ್ರನ್, ಸುಬ್ರತಾ ಪಾಠಕ್ ಅವರ ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. 'ನವ ಭಾರತ' ನಿರ್ಮಾಣಕ್ಕೆ ಸಿದ್ಧವಾಗಿರುವ ಮೋದಿ ಅವರು ತಮ್ಮ ಹೊಸ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಸುಳಿವು ನೀಡಿದ್ದರು.

ಜೊತೆಗೆ ನಿತೀಶ್ ಕುಮಾರ್ ಅವರ ಜೆಡಿಯು, ತಮಿಳುನಾಡಿನ ಎಐಎಡಿಎಂಕೆ ಸದಸ್ಯರಿಗೆ ಸಚಿವ ಸ್ಥಾನ ಮೀಸಲಾಗಿರುತ್ತದೆ. ಪಶ್ಚಿಮ ಬಂಗಾಳದಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ಹಾಗೂ 2021ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬೆಂಗಾಲದ ಸಂಸದರಿಗೂ ಮಣೆ ಹಾಕುವ ಸಾಧ್ಯತೆಯಿತ್ತು. ಆದರೆ, ಜೆಡಿಯು ಸದ್ಯಕ್ಕೆ ಸಂಪುಟ ಸೇರುತ್ತಿಲ್ಲ, ಎಐಎಡಿಎಂಕೆ ಏಕೈಕ ಸಂಸದನಿಗೂ ಸ್ಥಾನ ಸಿಕ್ಕಿಲ್ಲ.

English summary
Prime Minister Narendra Modi took oath today(May 30) along with Amit Shah, Nitin Gadkari, DV Sadananda Gowda and others at the Rashtrapati Bhavan, an event which witnessed by 8,000 persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X