ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇರೆ ದೇಶಗಳಲ್ಲಿ ಅಧಿಕಾರ ಹಿಡಿದಿರುವ ಭಾರತೀಯ ಸಮುದಾಯದವರು

|
Google Oneindia Kannada News

ಭಾರತೀಯ ಸಮುದಾಯದವರು ಯಾವ ದೇಶಕ್ಕೆ ಹೋದರೂ ಅಲ್ಲಿನ ವ್ಯವಸ್ಥೆಗೆ ಹೊಂದಿಕೊಂಡು ಅಲ್ಲಿನ ಜನರೊಂದಿಗೆ ಬೆರೆತು ಹೋಗುತ್ತಾರೆ. ಭಾರತೀಯರಿಂದ ತೊಂದರೆ ಅನುಭವಿಸಿರುವ ದೇಶ ನಮ್ಮ ಕಣ್ಣಿಗಂತೂ ಬಿದ್ದಿಲ್ಲ. ಅಷ್ಟರಮಟ್ಟಿಗೆ ಭಾರತೀಯರು ಹೊಂದಾಣಿಕೆ ಮನೋಭಾವದವರು.

ಭಾರತೀಯ ಸಮುದಾಯದವರದ್ದು ಕೇವಲ ಹೊಂದಾಣಿಕೆ ಮಾತ್ರವಲ್ಲ, ತಾವು ನೆಲಸಿದ ದೇಶಗಳಲ್ಲಿ ಅಲ್ಲಿನ ವ್ಯವಸ್ಥೆಯೊಂದಿಗೆ ಬೆರೆತು ಉನ್ನತ ಸ್ಥಾನಮಾನ ಅಲಂಕರಿಸಿದ ಉದಾಹರಣೆ ಬಹಳ ಉಂಟು. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಲವು ದೇಶಗಳಲ್ಲಿ ಭಾರತೀಯರು ಉನ್ನತ ಸ್ಥಾನದಲ್ಲಿದ್ದಾರೆ.

ಅಂಬಾನಿ ವರ್ಸಸ್ ಅದಾನಿ; ಏನಾಗುತ್ತಿದೆ ಇಬ್ಬರ ಮಧ್ಯೆ?ಅಂಬಾನಿ ವರ್ಸಸ್ ಅದಾನಿ; ಏನಾಗುತ್ತಿದೆ ಇಬ್ಬರ ಮಧ್ಯೆ?

ಈಗ ಬ್ರಿಟನ್ ದೇಶದಲ್ಲಿ ಪ್ರಧಾನಿ ಸ್ಥಾನಕ್ಕೆ ನಡೆಯುತ್ತಿರುವ ರೇಸ್‌ನಲ್ಲಿ ಭಾರತೀಯ ಮೂಲಕ ರಿಷಿ ಸುನಕ್ ಅವರಿದ್ದಾರೆ. ಇವರು ಗೆಲ್ಲುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆಯಾದರೂ ಈ ಹಂತದವರೆಗೂ ಅವರು ಬೆಳೆದು ಬಂದಿರುವುದು ಭಾರತೀಯರ ಶಕ್ತಿಯ ದ್ಯೋತಕವಾಗಿದೆ. ರಿಷಿ ಸುನಕ್ ಬಹಳ ಬೇಗ ರಾಜಕೀಯವಾಗಿ ಬೆಳೆದವರು. ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದರು. ಅದೇನೂ ಕಡಿಮೆ ಸಾಧನೆಯಲ್ಲ.

ರಿಷಿ ಸುನಕ್‌ಗೆ ಪ್ರಧಾನಿ ಪಟ್ಟ ಸಿಗದೇ ಹೋಗಬಹುದು. ಅದರೆ, ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಸಮುದಾಯದವರು ಆ ಹಂತಕ್ಕೆ ಹೋದ ಉದಾಹರಣೆಗಳು ಬೆರಳೆಣಿಕೆಗೆ ಕಷ್ಟವಾಗಬಹುದು. ಈಗ ಐದು ದೇಶಗಳಲ್ಲಿ ಭಾರತೀಯ ಮೂಲದವರೇ ಅಧಿಕಾರ ಸ್ಥಾನದಲ್ಲಿದ್ದಾರೆ. ಇಲ್ಲಿ ಅಧಿಕಾರ ಸ್ಥಾನ ಎಂದರೆ ಪ್ರಧಾನಿ, ಉಪಪ್ರಧಾನಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವೆಂದು ಪರಿಗಣಿಸಬಹುದು.

ಅಮೆರಿಕ, ಪೋರ್ಚುಗಲ್, ಗಯಾನ, ಮಾರಿಷಸ್ ಮತ್ತು ಸುರಿನಾಮ್ ದೇಶಗಳಲ್ಲಿ ಭಾರತೀಯ ಸಮುದಾಯದವರು ಅತ್ಯುನ್ನತ ಸ್ತರದಲ್ಲಿ ಅಧಿಕಾರ ಹೊಂದಿದ್ದಾರೆ. ಜಗತ್ತಿನ 15 ದೇಶಗಳಲ್ಲಿ ಭಾರತೀಯರು ಬಹಳ ಪ್ರಭಾವಿ ಸ್ಥಾನದಲ್ಲಿದ್ದಾರೆ.

ಪೋರ್ಚುಗಲ್ ಪ್ರಧಾನಿ

ಪೋರ್ಚುಗಲ್ ಪ್ರಧಾನಿ

ಅರಬ್ಬರು, ಬ್ರಿಟಿಷರು, ಫ್ರೆಂಚರಂತೆ ಭಾರತವನ್ನು ಆಕ್ರಮಿಸಿದ ವಿದೇಶಿಗರಲ್ಲಿ ಪೋರ್ಚುಗೀಸರೂ ಇದ್ದಾರೆ. ಇದೀಗ ಭಾರತೀಯ ಮೂಲದ ಆಂಟೋನಿಯೋ ಕೋಸ್ಟಾ ಅವರು ಪೋರ್ಚುಗಲ್ ದೇಶದ ಪ್ರಧಾನಿ ಸ್ಥಾನದಲ್ಲಿದ್ದಾರೆ.

ಆಂಟೋನಿಯೋ ಕೋಸ್ಟಾ ಅವರದ್ದು ಭಾರತ ಮೂಲ. ಇವರ ತಂದೆ ಓರ್ಲಾಂಡೋ ಡಾ ಕೋಸ್ಟಾ ಗೋವಾ ಮೂಲದವರು. ಆಂಟೋನಿಯೋ ಕೋಸ್ಟಾ ಭಾರತದಲ್ಲಿ ಹುಟ್ಟದೇ ಹೋದರೂ ತಮ್ಮ ಮೂಲದ ಬಗ್ಗೆ ಅಭಿಮಾನವನ್ನಂತೂ ಹೊಂದಿದ್ದಾರೆ. ಭಾರತೀಯ ಪೌರತ್ವವನ್ನು (ಓಸಿಐ ಕಾರ್ಡ್) ಹೊಂದಿದ್ದಾರೆ ಎಂದರೆ ಅಚ್ಚರಿ ಎನಿಸಬಹುದು. ಗೋವಾದಲ್ಲಿ ಆಂಟೋನಿಯೋ ಕೋಸ್ಟಾ ಅವರನ್ನು ಬಾಬುಶ್ ಎಂದು ಅಭಿಮಾನದಿಂದ ಕರೆಯುವುದುಂಟು. 2017ರಲ್ಲಿ ಇವರಿಗೆ ಭಾರತದ ರಾಷ್ಟ್ರಪತಿಗಳಿಂದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗಯಾನ ಅಧ್ಯಕ್ಷರು

ಗಯಾನ ಅಧ್ಯಕ್ಷರು

ಕೆರಿಬಿಯನ್ ರಾಷ್ಟ್ರಗಳ ಪೈಕಿ ಒಂದಾಗಿರುವ ಗಯಾನದ ಅಧ್ಯಕ್ಷರು ಭಾರತೀಯ ಮೂಲದ ಮೊಹಮ್ಮದ್ ಇರ್ಫಾನ್ ಅಲಿ. ಇವರ ಪೂರ್ವಜರು ಭಾರತ ಮೂಲದವರು. ಇರ್ಫಾನ್ ಅಲಿ ಗಯಾನದ ಅಧ್ಯಕ್ಷರಾದ ಮೊದಲು ಮುಸ್ಲಿಮ್ ವ್ಯಕ್ತಿಯೂ ಹೌದು.

ಕೆರಿಬಿಯನ್ ರಾಷ್ಟ್ರಗಳಲ್ಲಿ ಭಾರತೀಯ ಸಮುದಾಯದವರು ಬಹಳ ಮಂದಿ ಇದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ನೆನಪಿಸಿಕೊಂಡು ನೋಡಿ. ಶಿವನರೈನ್ ಚಂದ್ರಪಾಲ್, ಹೋಲಿ ಕಾಳಿಚರಣ್, ಸುನೀನ್ ನರೈನ್ ಇತ್ಯಾದಿ ಅನೇಕ ಭಾರತೀಯ ಹೆಸರುಗಳು ದುತ್ತನೇ ಪ್ರತ್ಯಕ್ಷವಾಗುತ್ತವೆ.

ಮಾರಿಷಸ್ ಮುಖ್ಯಸ್ಥರು

ಮಾರಿಷಸ್ ಮುಖ್ಯಸ್ಥರು

ಮಾರಿಷಸ್ ದೇಶದಲ್ಲೂ ಭಾರತೀಯ ಸಮುದಾಯದವರು ಬಹಳ ಮಂದಿ ಇದ್ದಾರೆ. ಸದ್ಯ ಈಗ ಅಲ್ಲಿನ ಅಧ್ಯಕ್ಷ ಮತ್ತು ಪ್ರಧಾನಿ ಇಬ್ಬರೂ ಕೂಡ ಭಾರತೀಯ ಮೂಲದವರೇ ಎಂಬುದು ವಿಶೇಷ. ಪ್ರವೀಣ್ ಜಗನಾಥ್ ಪ್ರಧಾನಿಯಾಗಿದ್ಧಾರೆ. ಪೃಥ್ವಿರಾಜ್ ಸಿಂಗ್ ರೂಪನ್ ಅಧ್ಯಕ್ಷರಾಗಿದ್ದಾರೆ. ಈ ಹಿಂದೆಯೂ ಮಾರಿಷಸ್‌ನಲ್ಲಿ ಭಾರತೀಯ ಮೂಲದವರು ಉನ್ನತ ಸ್ಥಾನಕ್ಕೇರಿದ್ದುಂಟು. ಪ್ರವೀಣ್ ಮತ್ತು ಪೃಥ್ವಿರಾಜ್ ಸೇರಿದಂತೆ ಮಾರಿಷಸ್‌ನಲ್ಲಿ ಪ್ರಧಾನಿ ಮತ್ತು ಅಧ್ಯಕ್ಷ ಪದವಿಯನ್ನು ಭಾರತೀಯ ಮೂಲದ ೯ ಮಂದಿ ಅಲಂಕರಿಸಿದ್ದಾರೆ ಎಂದರೆ ಅಚ್ಚರಿ ಎನಿಸಬಹುದು.

ಸುರಿನಾಮ್ ಅಧ್ಯಕ್ಷರು

ಸುರಿನಾಮ್ ಅಧ್ಯಕ್ಷರು

ಈ ಪುಟ್ಟ ದೇಶದ ಅಧ್ಯಕ್ಷರು ಚಾನ್ ಸಂತೋಖಿ, ಅಕಾ ಚಂದ್ರಿಕಾಪ್ರಸಾದ್ ಸಂತೋಖಿ. ಇವರ ಕುಟುಂಬದ ಮೂಲ ಭಾರತ. ಸುರಿನಾಮ್ ಎಂಬುದು ದಕ್ಷಿಣ ಅಮೆರಿಕ ಖಂಡದ ಒಂದು ದೇಶ. ಕೆರಿಬಿಯನ್ ದ್ವೀಪಗಳಿಗೆ ಸಮೀಪ ಇರುವುದರಿಂದ ಭಾರತೀಯ ಮೂಲದವರು ಹೆಚ್ಚು ನೆಲಸಿದ್ದಾರೆ. ಬ್ರಿಟಿಷರಿಂದ ಕೂಲಿ ಕಾರ್ಮಿಕರಾಗಿ, ಗುಲಾಮರಾಗಿ ಕರೆದೊಯ್ಯಲ್ಪಟ್ಟವರು ಅವರು. ಈ ಪುಟ್ಟ ದೇಶದಲ್ಲಿ ಭಾರತೀಯ ಮೂಲದ ಐವರು ಮಂದಿ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ.

ಅಮೆರಿಕ ಉಪಾಧ್ಯಕ್ಷೆ

ಅಮೆರಿಕ ಉಪಾಧ್ಯಕ್ಷೆ

ಕಮಲಾ ಹ್ಯಾರಿಸ್ ಹೆಸರು ಪರಿಚಿತ ಇರಬಹುದು. ಇವರು ಅಮೆರಿಕದ ಉಪಾಧ್ಯಕ್ಷೆ. ಅಮೆರಿಕ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿದ್ದವರು. ಇವರ ತಾಯಿ ಚೆನ್ನೈನವರು.

ಅಮೆರಿಕದಲ್ಲಿ ಭಾರತೀಯ ಸಮುದಾಯದವರ ಸಾಧನೆ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ. ಅಲ್ಲಿನ ತಂತ್ರಜ್ಞಾನ ಸಂಸ್ಥೆಗಳಲ್ಲಿ ಭಾರತೀಯರೇ ಮುಂಚೂಣಿಯಲ್ಲಿರುವುದು. ನಾಸಾದ ಪ್ರಮುಖ ವಿಜ್ಞಾನಿಗಳಲ್ಲಿ ಭಾರತೀಯರಿದ್ಧಾರೆ. ಸರಕಾರದ ಪ್ರಮುಖ ಸಚಿವ ಸ್ಥಾನಗಳೂ ಭಾರತೀಯರಿಗೆ ಸಿಕ್ಕಿವೆ. ಅಮೆರಿಕದ ಬೆಳವಣಿಗೆಯಲ್ಲಿ ಭಾರತೀಯ ಕೊಡುಗೆಯೂ ಬಹಳಷ್ಟಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅಡ್ಡಿ ಇಲ್ಲ. ಅಲ್ಲಿನ ಕೆಲ ರಾಜ್ಯಗಳಿಗೆ ಭಾರತೀಯ ಮೂಲದವರು ಗವರ್ನರ್ ಇತ್ಯಾದಿ ಪ್ರಮುಖ ಸ್ಥಾನಗಳನ್ನು ಪಡೆದಿದ್ದುಂಟು.

ಬ್ರಿಟನ್ ದೇಶದಲ್ಲೂ ಭಾರತೀಯರು ರಾಜ್ಯಗಳ ಗವರ್ನರ್ ಸ್ಥಾನದ ಹಂತಕ್ಕೂ ಏರಿದ್ದಾರೆ. ರಿಷಿ ಸುನಕ್ ಹಣಕಾಸು ಸಚಿವರಾಗಿ ಪ್ರಧಾನಿ ಪಟ್ಟದ ಸಮೀಪಕ್ಕೂ ಹೋಗಿದ್ದಾರೆ. ಎರಡು ಶತಮಾನ ಭಾರತವನ್ನಾಳಿದ ಬ್ರಿಟನ್ ನಾಡಿಗೆ ಭಾರತೀಯನೊಬ್ಬ ದೊರೆಯಾಗುವ ಕಾಲ ದೂರ ಇಲ್ಲ ಎನಿಸಬಹುದು.

Recommended Video

ಏಳು ಕೋಟಿ ಕನ್ನಡಿಗನ ಗಾಡಿಗೆ ಕನ್ನಡಿಗರೆಲ್ಲರೂ ಫಿದಾ | OneIndia Kannada
15 ದೇಶಗಳಲ್ಲಿ ಭಾರತೀಯರ ಅಧಿಕಾರ

15 ದೇಶಗಳಲ್ಲಿ ಭಾರತೀಯರ ಅಧಿಕಾರ

ಭಾರತೀಯ ಸಮುದಾಯದವರು ವಿಶ್ವದ ಅನೇಕ ದೇಶಗಳಿಗೆ ವಲಸೆ ಹೋಗಿ ನೆಲೆ ಕಂಡುಕೊಂಡಿದ್ದಾರೆ. ಅದರಲ್ಲಿ 20ಕ್ಕೂ ಹೆಚ್ಚು ದೇಶಗಳಲ್ಲಿ ಇವರ ಉಪಸ್ಥಿತಿ ಗಮನಾರ್ಹವೆನಿಸಿದೆ. ಅಮೆರಿಕ, ಬ್ರಿಟನ್ ಅಲ್ಲದೇ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷ್ಯಾ, ಸಿಂಗಾಪುರ, ಸೌತ್ ಆಫ್ರಿಕಾದಲ್ಲಿ ಭಾರತೀಯರು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಹಾಗೆಯೇ, ಟ್ರಿನಿಡಾಡ್, ಐರ್ಲೆಂಡ್ ದೇಶಗಳಲ್ಲೂ ಉನ್ನತ ಸ್ಥಾನಕ್ಕೇರಿದ್ದಾರೆ.

ಒಂದು ಅಂಕಿ ಅಂಶದ ಪ್ರಕಾರ ಒಟ್ಟು 15 ದೇಶಗಳಲ್ಲಿ ಭಾರತೀಯ ಸಮುದಾಯದವರು ಮುಖ್ಯಸ್ಥ ಅಥವಾ ಉಪಮುಖ್ಯಸ್ಥ ಅಥವಾ ಸಚಿವ ಪದವಿ ಪಡೆದಿದ್ದಾರೆ. ಈ ೧೫ ದೇಶಗಳಲ್ಲಿ ಭಾರತ ಮೂಲದ 200ಕ್ಕೂ ಹೆಚ್ಚು ಮಂದಿ ಉನ್ನತ ಪದವಿ ಪ್ರಾಪ್ತ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
People of Indian origin or Indian diaspora have strong existence in many countries. Over 200 people are in Key political power positions in 15 countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X