ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯೋವೃದ್ಧರು ಆಹಾರ ಸೇವಿಸುವ ಮುನ್ನ ಯೋಚಿಸಿ!

|
Google Oneindia Kannada News

ವಯಸ್ಸಾದವರು ಆಹಾರವನ್ನು ಸೇವಿಸುವಾಗ ಬಾಯಿ ರುಚಿಗೆ ಆದ್ಯತೆ ನೀಡದೆ ಆರೋಗ್ಯದ ದೃಷ್ಠಿಯಿಂದ ದೇಹಕ್ಕೆ ಹೊಂದುವಂತಹ ಆಹಾರವನ್ನು ಸೇವಿಸುವುದು ಅತಿ ಮುಖ್ಯವಾಗಿದೆ. ನಾವೆಲ್ಲರೂ ಆರೋಗ್ಯವಂತರಾಗಿರಬೇಕೆಂದು ಬಯಸುತ್ತೇವೆ. ಹೀಗಿರುವಾಗ ವಯಸ್ಸಿಗೆ ತಕ್ಕಂತೆ ಆಹಾರ ಕ್ರಮಗಳಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳದಿದ್ದರೆ ಆರೋಗ್ಯದ ಸಮಸ್ಯೆಗಳು ತಪ್ಪಿದಲ್ಲ.

ಕೆಲವೊಂದು ತಿನಿಸು ನಮಗೆ ಇಷ್ಟವಾದರೂ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೇವಲ ಬಾಯಿ ಚಪಲಕ್ಕೆ ಸಿಕ್ಕಿದನೆಲ್ಲ ತಿಂದು ಆರೋಗ್ಯದ ಸಮಸ್ಯೆಯನ್ನು ಎಳೆದುಕೊಳ್ಳುವುದಕ್ಕಿಂತ ನಮ್ಮ ದೇಹಕ್ಕೆ ಸರಿ ಹೊಂದುವ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದಾಗಿದೆ.

ಕಾರವಾರದ ಹೋಟೆಲ್ ಗಳ ಮೇಲೆ‌ ದಾಳಿ; ಆಹಾರ ತಯಾರಿಕೆಗೆ ಬಳಸುತ್ತಿದ್ದ ರಸಾಯನಿಕ ಪದಾರ್ಥ ವಶಕ್ಕೆಕಾರವಾರದ ಹೋಟೆಲ್ ಗಳ ಮೇಲೆ‌ ದಾಳಿ; ಆಹಾರ ತಯಾರಿಕೆಗೆ ಬಳಸುತ್ತಿದ್ದ ರಸಾಯನಿಕ ಪದಾರ್ಥ ವಶಕ್ಕೆ

ಈಗೀಗ ನಾವು ತಿನ್ನುವ ಆಹಾರಗಳು ನಾಲಿಗೆ ಚಪ್ಪರಿಸಿ ತಿನ್ನುವಂತಹ ರುಚಿಯನ್ನು ಹೊಂದಿರುತ್ತವೆಯಾದರೂ ಅವು ಆರೋಗ್ಯಕ್ಕೆ ಹೊಂದುವುದಿಲ್ಲ. ಹೀಗಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ವಯಸ್ಸಾದವರಂತು ತಮ್ಮ ವಯಸ್ಸಿಗೆ ತಕ್ಕಂತೆ ಜೀರ್ಣ ಶಕ್ತಿಯಿರುವಂತಹ ಆಹಾರವನ್ನು ಸೇವಿಸುವುದು ಒಳಿತು.

 ಬಜೆಟ್ 2021: ಆಹಾರ ಪದಾರ್ಥಗಳ ವಿತರಣೆ ಮೇಲಿನ GST ಇಳಿಕೆಯ ಬೇಡಿಕೆ ಬಜೆಟ್ 2021: ಆಹಾರ ಪದಾರ್ಥಗಳ ವಿತರಣೆ ಮೇಲಿನ GST ಇಳಿಕೆಯ ಬೇಡಿಕೆ

ಕಾರಣ ವಯಸ್ಸಾದಂತೆಲ್ಲ ಹಸಿವು ಮತ್ತು ಜೀರ್ಣಶಕ್ತಿ ಕಡಿಮೆಯಾಗುವುದರಿಂದ ಪ್ರೊಟೀನ್, ಕೊಬ್ಬು, ಖನಿಜಾಂಶ ಹಾಗೂ ಜೀವಸತ್ವಗಳುಳ್ಳ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಈ ಆಹಾರದ ಪ್ರಮಾಣವು ದಿನಕ್ಕೆ 300 ರಿಂದ 330 ಗ್ರಾಂ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ವಯಸ್ಸಾದವರು ತಮ್ಮ ಜೀವಿತದ ಕೊನೆಯ ಕಾಲವನ್ನು ಆರೋಗ್ಯವಾಗಿ ಕಳೆಯಬೇಕಾದರೆ ನಿತ್ಯದ ಆಹಾರ ಕ್ರಮದಲ್ಲಿ ಏನೇನು ಅಳವಡಿಸಿಕೊಳ್ಳಬೇಕು ಮತ್ತು ಎಂತಹ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡುತ್ತಾರೆ.

 ಕೇಂದ್ರ ಸಚಿವರ ಊಟದ ಆಹ್ವಾನ ತಿರಸ್ಕರಿಸದ ರೈತ ಮುಖಂಡರು: ನೀವು ನಿಮ್ಮ ಆಹಾರ ಸೇವಿಸಿ, ನಾವು ನಮ್ಮ ಆಹಾರ ತಿನ್ನುತ್ತೇವೆ! ಕೇಂದ್ರ ಸಚಿವರ ಊಟದ ಆಹ್ವಾನ ತಿರಸ್ಕರಿಸದ ರೈತ ಮುಖಂಡರು: ನೀವು ನಿಮ್ಮ ಆಹಾರ ಸೇವಿಸಿ, ನಾವು ನಮ್ಮ ಆಹಾರ ತಿನ್ನುತ್ತೇವೆ!

ಆಹಾರ ಪದಾರ್ಥಗಳ ಸೇವನೆ

ಆಹಾರ ಪದಾರ್ಥಗಳ ಸೇವನೆ

ಅದರಂತೆ ನಡೆದುಕೊಂಡದ್ದೇ ಆದರೆ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುವುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ದಿನಕ್ಕೆ ಮೂರು ಬಾರಿ ಊಟ ಮಾಡುತ್ತೇವೆ. ಆದರೆ ವಯಸ್ಸಾದವರು ಕಡಿಮೆ ಪ್ರಮಾಣದಲ್ಲಿ ಹಲವು ಬಾರಿ ಊಟ ಮಾಡುವುದು ಒಳ್ಳೆಯದು. ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳ ಮೊದಲಾದ ಧಾನ್ಯಗಳ ಬಳಕೆ ಒಳ್ಳೆಯದು. ನಿತ್ಯ ಉಪಯೋಗಿಸುವ ಆಹಾರದಲ್ಲಿ ಪ್ರೊಟೀನ್ ಯುಕ್ತ ಬೇಳೆಕಾಳುಗಳು ಇರುವಂತೆ ನೋಡಿಕೊಳ್ಳಬೇಕು. ಇವುಗಳನ್ನು ಕನಿಷ್ಟ 60 ಗ್ರಾಂನಷ್ಟಾದರೂ ಸೇವಿಸಬೇಕು. ಇದರೊಂದಿಗೆ ದಿನಕ್ಕೆ ಕನಿಷ್ಟ 2 ರಿಂದ 3 ಲೋಟದಷ್ಟು ಹಾಲು ಅಥವಾ ಮೊಸರು ಸೇವಿಸಬೇಕು. ಕೇವಲ ಬಾಯಿ ಚಪಲಕ್ಕೆ ಸಿಕ್ಕಿದನೆಲ್ಲ ತಿಂದು ಆರೋಗ್ಯ ಸಮಸ್ಯೆ ತಂದುದಕೊಳ್ಳಬೇಡಿ.

ಪೌಷ್ಠಿಕಾಂಶಯುಕ್ತ ಆಹಾರ

ಪೌಷ್ಠಿಕಾಂಶಯುಕ್ತ ಆಹಾರ

ಮೊಳಕೆ ಕಾಳುಗಳು, ಮೊಟ್ಟೆಯ ಬಿಳಿಭಾಗ, ಮೀನು, ಜತೆಗೆ ಸೊಪ್ಪು ಸೇರಿದಂತೆ ಗೆಡ್ಡೆಗೆಣಸು ತರಕಾರಿ ಸೇವಿಸುವುದು ಅಗತ್ಯ. ಮಲವಿಸರ್ಜನೆ ಸಲೀಸಾಗಿ ನಡೆಯಲು ಅನುಕೂಲವಾಗುವಂತೆ ನಾರಿನ ಅಂಶವಿರುವ ಹಣ್ಣು, ತರಕಾರಿ, ಉಂಡೆಕಾಳುಗಳನ್ನು ಆಹಾರದಲ್ಲಿ ಸೇರಿಸಬೇಕು. ನಾರಿನ ಅಂಶವು ರಕ್ತದ ಕೊಲೆಸ್ಟ್ರಾಲ್‍ನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೊಡ್ಡ ಕರುಳಿನ ಕ್ಯಾನ್ಸರನ್ನು ತಡೆಗಟ್ಟುವ ಗುಣವನ್ನು ಹೊಂದಿದೆ. ಇನ್ನು ಹಲ್ಲುಗಳು ಇಲ್ಲದಿದ್ದಲ್ಲಿ ಮೆದುವಾದ ಮತ್ತು ಚೆನ್ನಾಗಿ ಬೆಂದಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಜತೆಗೆ ಸುಲಭವಾಗಿ ಜೀರ್ಣವಾಗುವಂತಹ ಆಹಾರಪದಾರ್ಥಗಳಿಗೆ ಆದ್ಯತೆ ನೀಡಬೇಕಾಗುತ್ತದೆ.

ಕ್ಯಾಲ್ಸಿಯಂ ಯುಕ್ತ ಆಹಾರ

ಕ್ಯಾಲ್ಸಿಯಂ ಯುಕ್ತ ಆಹಾರ

ವಯಸ್ಸಾದಂತೆ ಮೂಳೆಗಳ ಸವೆತ ಮತ್ತು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಇದು ಕ್ಯಾಲ್ಸಿಯಂನಿಂದ ಆಗುವ ತೊಂದರೆಯಾಗಿದ್ದು, ಕ್ಯಾಲ್ಸಿಯಂ ಅಂಶ ಹೆಚ್ಚಾಗಲು ಹಾಲಿನ ಉತ್ಪನ್ನ, ರಾಗಿ, ಮೀನು, ಸೊಪ್ಪುಗಳನ್ನು ಸೇವಿಸುವುದು ಉತ್ತಮ. ನಿಯಮಿತ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರಗಳನ್ನು ಸೇವಿಸಬೇಕು. ಇನ್ನು ಆರೋಗ್ಯದ ದೃಷ್ಠಿಯಿಂದ ಕೆಲವೊಂದು ಆಹಾರ ಪದಾರ್ಥದ ಸೇವನೆ ಕಡಿಮೆ ಮಾಡುವುದು, ಇನ್ನು ಕೆಲವೊಂದನ್ನು ವರ್ಜಿಸುವುದು ಕೂಡ ಅನಿವಾರ್ಯ. ಕೊಬ್ಬು, ಎಣ್ಣೆ ಮತ್ತು ಸಕ್ಕರೆ ಸೇವನೆ ಕಡಿಮೆ ಮಾಡಬೇಕು ಕಾರಣ ಇವುಗಳಿಂದ ಅಜೀರ್ಣ ಸಮಸ್ಯೆ ಉದ್ಭವಿಸುವ ಸಾಧ್ಯತೆ ಹೆಚ್ಚ್ಚಿರುತ್ತದೆ.

ಉಪ್ಪಿನ ಬಳಕೆ ಕಡಿಮೆ

ಉಪ್ಪಿನ ಬಳಕೆ ಕಡಿಮೆ

ನಾರಿನ ಅಂಶವಿಲ್ಲದ ಸಂಸ್ಕರಿಸಿದ ಆಹಾರ ಪದಾರ್ಥ, ಮೈದಾದಿಂದ ತಯಾರಿಸಿದ ಬ್ರೆಡ್, ಬನ್, ನೂಡಲ್ಸ್, ನಾನ್ ಮುಂತಾದ ಆಹಾರಗಳನ್ನು ಸೇವಿಸಬೇಡಿ. ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ, ಮದ್ಯಪಾನ, ಧೂಮಪಾನವನ್ನು ತ್ಯಜಿಸಿ, ಕೊಲೆಸ್ಟ್ರಾಲ್ ಹೆಚ್ಚಿಸುವ ಬೆಣ್ಣೆ, ತುಪ್ಪ, ವನಸ್ಪತಿ, ಬಜ್ಜಿ, ಬೋಂಡ, ಪೂರಿ, ಹಪ್ಪಳ ಮೊದಲಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಅತಿಯಾದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ಆಹಾರ ಸೇವನೆಯಲ್ಲಿ ಉಪ್ಪಿನ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಿ.

ಕಡಿಮೆ ಆಹಾರ ಹೆಚ್ಚು ಬಾರಿ ಸೇವಿಸಿ; ಅನಗತ್ಯ ಉಪವಾಸ ಮಾಡುವುದನ್ನು ಬಿಟ್ಟು ಬಿಡಿ. ಜೀರ್ಣಶಕ್ತಿ ಉಂಟಾಗಲು ಕಡಿಮೆ ಆಹಾರವನ್ನು ಹೆಚ್ಚು ಬಾರಿ ತಿನ್ನುವುದನ್ನು ರೂಢಿಸಿಕೊಳ್ಳಿ ಇವುಗಳನ್ನೆಲ್ಲ ತಮ್ಮ ನಿತ್ಯದ ಜೀವನದಲ್ಲಿ ರೂಢಿಸಿಕೊಂಡರೆ ವಯಸ್ಸಾದವರು ಆಹಾರದಿಂದ ಉಂಟಾಗುವ ಸಮಸ್ಯೆಯಿಂದ ದೂರವಾಗಿ ನೆಮ್ಮದಿ ಮತ್ತು ಆರೋಗ್ಯಯುತ ಸಂಧ್ಯಾಕಾಲವನ್ನು ಕಳೆಯಲು ಸಾಧ್ಯವಾಗುತ್ತದೆ.

English summary
Stay fit and strong by eating a variety of protein-rich foods each day. Here are the tips for old age people what should they eat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X