ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಧಿಕ' ವರ್ಷಕ್ಕಿದೆ ಭೀಕರ ಇತಿಹಾಸ: 'ವಿಪತ್ತು'ಗಳನ್ನೇ ತರಲಿದ್ಯಾ 2020?

|
Google Oneindia Kannada News

ಫ್ಯಾನ್ಸಿ ನಂಬರ್ ನಂತಿರುವ, ಕ್ಯಾಲೆಂಡರ್ ನಲ್ಲಿ ಸುಂದರವಾಗಿ ಕಾಣುವ 2020 ಮನುಕುಲದ ಪಾಲಿಗೆ ಕರಾಳ ವರ್ಷವಾಗುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಯಾಕಂದ್ರೆ, 2020 ಅಧಿಕ ವರ್ಷ.!

ಅಧಿಕ ವರ್ಷದ ಕಲ್ಪನೆಯೇ ಬಹಳ ಕುತೂಹಲಕಾರಿ. ಸೂರ್ಯನನ್ನು ಒಂದು ಸುತ್ತು ಹಾಕಲು ಭೂಮಿ ತೆಗೆದುಕೊಳ್ಳುವ ಕಾಲಾವಕಾಶ ಸರಿಯಾಗಿ 365.256 ದಿನಗಳು. ಆದ್ರೆ, ಕ್ಯಾಲೆಂಡರ್ ಗೆ ಸರಿಹೊಂದುವ ಹಾಗೆ ವರ್ಷಕ್ಕೆ 365 ದಿನಗಳನ್ನು ಮಾಡಿ, ಉಳಿದ 0.242 (ಆರು ಗಂಟೆ) ದಿನವನ್ನು ನಾಲ್ಕು ವರ್ಷಗಳಲ್ಲಿ ಸಮನಾಗಿಸಿ, ಇನ್ನೊಂದು ದಿನವೆಂದು ಪರಿಗಣಿಸುವ ವರ್ಷವನ್ನು 'ಅಧಿಕ ವರ್ಷ' ಅಥವಾ 'ಲೀಪ್ ಇಯರ್' ಎನ್ನಲಾಗುತ್ತದೆ.

ಪ್ಲೀಸ್ ಒಮ್ಮೆ ನನ್ನ ಪತ್ರ ಓದ್ತೀರಾ - ನಿಮ್ಮ ಜಿಮ್ಮಿಪ್ಲೀಸ್ ಒಮ್ಮೆ ನನ್ನ ಪತ್ರ ಓದ್ತೀರಾ - ನಿಮ್ಮ ಜಿಮ್ಮಿ

ಅಸಲಿಗೆ ಅಧಿಕ ವರ್ಷವನ್ನು ಮೊದಲ ಬಾರಿಗೆ ಪರಿಚಯಿಸಿದ್ದು ಜೂಲಿಯಸ್ ಸೀಸರ್. ಆ ಸಮಯದಲ್ಲಿ ವರ್ಷದ ಕೊನೆಯ ತಿಂಗಳಾಗಿ ಫೆಬ್ರವರಿ ಇದ್ದಿದ್ರಿಂದ, ಹೆಚ್ಚುವರಿ ದಿನವನ್ನ ಅದಕ್ಕೆ ಸೇರಿಸಲಾಯಿತು.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಬರುವ 'ಅಧಿಕ' ವರ್ಷ ಅಪಶಕುನ ತರುತ್ತದೆ ಎಂಬ ಮೂಢನಂಬಿಕೆ ಜಗತ್ತಿನ ಹಲವು ದೇಶಗಳಲ್ಲಿವೆ. ರೋಮ್ ನಗರ ಸುಟ್ಟು ಬೂದಿಯಾಗಿದ್ದು, ಟೈಟಾನಿಕ್ ಹಡಗು ಮುಳುಗಿದ್ದು, ಸ್ಪ್ಯಾನಿಶ್ ಸಿವಿಲ್ ವಾರ್ ನಡೆದಿದ್ದು, ಸುನಾಮಿ ಬಂದಿದ್ದು ಅಧಿಕ ವರ್ಷಗಳಲ್ಲೇ.!

ಕಾಕತಾಳೀಯ ಅಂದ್ರೆ, 2020 ಕೂಡ ಅಧಿಕ ವರ್ಷವೇ. ಈ ಅಧಿಕ ವರ್ಷದಲ್ಲೇ ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಸಾವಿರಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಹಾಗಾದ್ರೆ, ಅಧಿಕ ವರ್ಷದಿಂದಲೇ ವಿಶ್ವಕ್ಕೆ ಕೊರೊನಾ ಕಂಟಕ ಎದುರಾಗಿದ್ಯಾ.? ಗೊತ್ತಿಲ್ಲ.! ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಕೆಲ ಭೀಕರ ಘಟನೆಗಳು ಘಟಿಸಿರುವುದು ಅಧಿಕ ವರ್ಷದಲ್ಲಿ ಎಂಬುದನ್ನು ತಳ್ಳಿಹಾಕುವಂತಿಲ್ಲ.

ಕಿಲ್ಲರ್ ಕೊರೊನಾಗೆ ವಿಶ್ವದಾದ್ಯಂತ 24 ಸಾವಿರಕ್ಕೂ ಅಧಿಕ ಮಂದಿ ಸಾವು!ಕಿಲ್ಲರ್ ಕೊರೊನಾಗೆ ವಿಶ್ವದಾದ್ಯಂತ 24 ಸಾವಿರಕ್ಕೂ ಅಧಿಕ ಮಂದಿ ಸಾವು!

ಹೊತ್ತಿ ಉರಿದಿದ್ದ ರೋಮ್ ನಗರ

ಹೊತ್ತಿ ಉರಿದಿದ್ದ ರೋಮ್ ನಗರ

64 AD ಸಮಯದಲ್ಲಿ ನೀರೋ ದೊರೆಯಾಗಿದ್ದ ಕಾಲದಲ್ಲಿ ರೋಮ್ ನಗರ ಹೊತ್ತಿ ಉರಿದಿತ್ತು. ಬೆಂಕಿ ಕೆನ್ನಾಲಿಗೆಗೆ ಸಾವಿರಾರು ರೋಮನ್ನರು ಬಲಿಯಾಗಿದ್ದರು. ಈ ದುರಂತ ನಡೆದಿದ್ದು ಅಧಿಕ ವರ್ಷದಲ್ಲೇ.!

ಕಣ್ಮರೆಯಾದ ಸಾಹಿತ್ಯ ಲೋಕದ ದಿಗ್ಗಜರು

ಕಣ್ಮರೆಯಾದ ಸಾಹಿತ್ಯ ಲೋಕದ ದಿಗ್ಗಜರು

ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಆಂಗ್ಲ ಭಾಷೆಯ ಪ್ರಖ್ಯಾತ ಬರಹಗಾರ ವಿಲಿಯಂ ಶೇಕ್ಸ್ ಪಿಯರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.? ಜಗದ್ವಿಖ್ಯಾತ ಕೃತಿಗಳ ಕರ್ತೃ ವಿಲಿಯಂ ಶೇಕ್ಸ್ ಪಿಯರ್ ಇಹಲೋಕ ತ್ಯಜಿಸಿದ್ದು ಅಧಿಕ ವರ್ಷದಲ್ಲಿ (1616). ಇನ್ನೂ ಸ್ಪ್ಯಾನಿಶ್ ಭಾಷೆಯ ಪ್ರಖ್ಯಾತ ಲೇಖಕ Miguel de Cervantes Saavedra ಕೂಡ ಇದೇ ವರ್ಷ ನಿಧನರಾದರು.

ತಲೆ ಕತ್ತರಿಸುವ ಗಿಲೋಟಿನ್ ಯಂತ್ರ

ತಲೆ ಕತ್ತರಿಸುವ ಗಿಲೋಟಿನ್ ಯಂತ್ರ

'ಕಿಲ್ಲಿಂಗ್ ಮಷಿನ್' ಎಂದೇ ಕುಖ್ಯಾತಿ ಪಡೆದಿದ್ದ ಗಿಲೋಟಿನ್ ಯಂತ್ರದ ಆವಿಷ್ಕಾರವಾಗಿದ್ದು 1792 ರಲ್ಲಿ (ಅಧಿಕ ವರ್ಷ). ಫ್ರಾನ್ಸ್ ನಲ್ಲಿ ಸಿದ್ಧಗೊಂಡ ಈ ಯಂತ್ರದಿಂದ ರಕ್ತಪಾತ ಸಂಭವಿಸಿತ್ತು. 16,594 ಮಂದಿಯ ತಲೆಗಳು ಉರುಳಿದ್ದವು.

ಫ್ರಾನ್ಸ್ ದುರಂತ

ಫ್ರಾನ್ಸ್ ದುರಂತ

ಜಗದ್ವಿಖ್ಯಾತ ನಾಯಕ ನೆಪೋಲಿಯನ್ ಬೋನಪಾರ್ಟೆಯೂ ಅಧಿಕ ವರ್ಷದಿಂದ ಸಂತ್ರಸ್ತನಾದವನೇ! 1812 (ಅಧಿಕ ವರ್ಷ) ರಲ್ಲಿ ರಷ್ಯಾ ಆಕ್ರಮಣಕ್ಕೆ ಮುಂದಾದ ವೇಳೆ ಚಳಿಗಾಳಿಯ ಹೊಡೆತಕ್ಕೆ ಸಿಲುಕಿ ನೆಪೋಲಿಯನ್ ಸೈನ್ಯದ 6 ಲಕ್ಷ ಸೈನಿಕರು ಜೀವ ಕಳೆದುಕೊಂಡರು. ಇದು ಫ್ರಾನ್ಸ್ ಇತಿಹಾಸದಲ್ಲೇ ಅತಿ ದೊಡ್ಡ ದುರಂತ.

ಟೈಟಾನಿಕ್ ಹಡಗು ಮುಳುಗಡೆ

ಟೈಟಾನಿಕ್ ಹಡಗು ಮುಳುಗಡೆ

ಸುಮಾರು 2224 ಬ್ರಿಟಿಷ್ ಪ್ರಯಾಣಿಕರನ್ನು ಹೊಂದಿದ್ದ ಐಷಾರಾಮಿ ಹಡಗು RMS ಟೈಟಾನಿಕ್ ಏಪ್ರಿಲ್ 14, 1912 ರಂದು ನ್ಯೂಫೌಂಡ್ ಲ್ಯಾಂಡ್ ಕರಾವಳಿ ಪ್ರದೇಶದಲ್ಲಿದ್ದ ಬೃಹತ್ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಮುಳುಗಿತ್ತು. ಇದರಿಂದ 1500 ಕ್ಕೂ ಅಧಿಕ ಮಂದಿ ನೀರುಪಾಲಾಗಿ ಜೀವ ಬಿಟ್ಟರು. ಅಂದ್ಹಾಗೆ, ಈ ಘಟನೆಗೆ ಸಾಕ್ಷಿ ಆಗಿದ್ದು 1912 ಅಧಿಕ ವರ್ಷ.

ಸ್ಪ್ಯಾನಿಶ್ ವಾರ್

ಸ್ಪ್ಯಾನಿಶ್ ವಾರ್

1936 ರಲ್ಲಿ ಸ್ಪ್ಯಾನಿಶ್ ಸಿವಿಲ್ ವಾರ್ ಆರಂಭವಾಯಿತು. 1939 ರವರೆಗೂ ನಡೆದ ಈ ಯುದ್ಧದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಮೃತರಾದರು. ಅಸಲಿಗೆ, 1936 ಅಧಿಕ ವರ್ಷ ಅನ್ನೋದು ನಿಮ್ಮ ಗಮನದಲ್ಲಿರಲಿ.

ಭೀಕರತೆ ಕಂಡ ಎರಡನೇ ಮಹಾಯುದ್ಧ

ಭೀಕರತೆ ಕಂಡ ಎರಡನೇ ಮಹಾಯುದ್ಧ

ವಿಶ್ವದ ಎರಡನೇ ಮಹಾಯುದ್ಧ ಆರಂಭವಾಗಿದ್ದು 1939 ರಲ್ಲಾದರೂ, ಅದರ ಕರಾಳ ದೃಶ್ಯ ದಾಖಲಾಗಿದ್ದು 1940 ರಲ್ಲಿ (ಅಧಿಕ ವರ್ಷ). ಇದೇ ವರ್ಷ ಪೊಲ್ಯಾಂಡ್ ನಲ್ಲಿ ನಿರ್ಮಿಸಿದ್ದ ಕಾನ್ಸಂಟ್ರೇಶನ್ ಕ್ಯಾಂಪ್ ಗೆ ಒಂದು ಮಿಲಿಯನ್ ಗೂ ಅಧಿಕ ಮಂದಿಯನ್ನು ಯುದ್ಧದ ಸೆರೆಯಾಳಾಗಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಸೈನ್ಯ ಕಳುಹಿಸಿತ್ತು. ಅದರಲ್ಲಿ 90% ರಷ್ಟು ಮಂದಿ ಸಾವನ್ನಪ್ಪಿದ್ದು ಎರಡನೇ ಮಹಾಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ.

ಮಾರ್ಟಿನ್ ಲೂದರ್ ಕಿಂಗ್ ಹತ್ಯೆ

ಮಾರ್ಟಿನ್ ಲೂದರ್ ಕಿಂಗ್ ಹತ್ಯೆ

ಅಮೇರಿಕಾದ ಧೀಮಂತ ನಾಯಕ, ನಾಗರಿಕ ಹಕ್ಕುಗಳ ಚಳುವಳಿಗಾರ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಾರ್ಟಿನ್ ಲೂದರ್ ಕಿಂಗ್ ಹತ್ಯೆಗೀಡಾಗಿದ್ದು 1968 ರಲ್ಲಿ. ಇನ್ನೂ ಅಮೇರಿಕಾದ ಪ್ರಖ್ಯಾತ ರಾಜಕಾರಣಿ ಮತ್ತು ವಕೀಲ ರಾಬರ್ಟ್.ಎಫ್.ಕೆನೆಡಿ ರನ್ನೂ 1968 ರಲ್ಲೇ ಹತ್ಯೆ ಮಾಡಲಾಯಿತು. ಅಮೇರಿಕಾ ತನ್ನ ಇಬ್ಬರು ನಾಯಕರನ್ನು ಕಳೆದುಕೊಂಡಿದ್ದು ಅಧಿಕ ವರ್ಷದಲ್ಲೇ (1968)!

ಮಹಾತ್ಮ ಗಾಂಧಿ ಹತ್ಯೆ

ಮಹಾತ್ಮ ಗಾಂಧಿ ಹತ್ಯೆ

ಭಾರತದ ರಾಷ್ಟ್ರಪಿತ, ಬಾಪು ಮಹಾತ್ಮ ಗಾಂಧಿ ಹತ್ಯೆಗೀಡಾಗಿದ್ದು 1948 ರಲ್ಲಿ. ನಾತೂರಾಮ್ ಗೋಡ್ಸೆ ಗುಂಡೇಟಿಗೆ ಬಲಿಯಾಗಿ ಮಹಾತ್ಮ ಗಾಂಧಿ ಪ್ರಾಣ ಬಿಟ್ಟರು. ಕಾಕತಾಳೀಯ ಅಂದ್ರೆ, 1948 ಕೂಡ ಅಧಿಕ ವರ್ಷ.

ಮ್ಯೂನಿಚ್ ಒಲಿಂಪಿಕ್ಸ್

ಮ್ಯೂನಿಚ್ ಒಲಿಂಪಿಕ್ಸ್

ಉಗ್ರರ ಅಟ್ಟಹಾಸದಿಂದ ಸಾಮರಸ್ಯದ ಕ್ರೀಡಾಂಗಣ ರಕ್ತಸಿಕ್ತವಾಗಿದ್ದು 1972 ರಲ್ಲಿ (ಅಧಿಕ ವರ್ಷ). ಇದೇ ವರ್ಷ ನಡೆದ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ 11 ಇಸ್ರೇಲಿ ಅಥ್ಲೀಟ್ ಗಳನ್ನು ಅಪಹರಿಸಿದ ಪ್ಯಾಲೆಸ್ಟೈನ್ ಉಗ್ರರು ಬಳಿಕ ಅವರನ್ನು ಕೊಲೆಗೈದಿದ್ದರು.

ಡೆಡ್ಲಿ ಸುನಾಮಿ

ಡೆಡ್ಲಿ ಸುನಾಮಿ

ಇತಿಹಾಸದ ಪುಟಗಳಲ್ಲಿ ಅತ್ಯಂತ ಡೆಡ್ಲಿಯೆಸ್ಟ್ ಸುನಾಮಿ ದಾಖಲಾಗಿರುವುದು ಡಿಸೆಂಬರ್ 26, 2004 ರಲ್ಲಿ. ಇಂಡೋನೇಶಿಯಾದ ಸುಮಾತ್ರಾದಲ್ಲಿ ಸಂಭವಿಸಿದ ಭೂಕಂಪನದಿಂದ 50 ಅಡಿಗೂ ಎತ್ತರ ಅಲೆಗಳು ಸುಮಾರು 11 ದೇಶಗಳ ಕರಾವಳಿಯನ್ನ ಇನ್ನಿಲ್ಲದಂತೆ ಮಾಡಿದ್ವು. ಸುನಾಮಿಯಿಂದಾಗಿ 275,000 ಕ್ಕೂ ಅಧಿಕ ಮಂದಿ ಮೃತಪಟ್ಟರು. ಲಕ್ಷಾಂತರ ಮಂದಿ ಸೂರು ಕಳೆದುಕೊಂಡರು. ವಿಚಿತ್ರ ಅಂದ್ರೆ, 2004 ಕೂಡ ಅಧಿಕ ವರ್ಷ.

2008 ರಲ್ಲಿ ಬಿರುಗಾಳಿ, ಭೂಕಂಪಕ್ಕೆ ಸಿಲುಕಿದ ಚೀನಾ

2008 ರಲ್ಲಿ ಬಿರುಗಾಳಿ, ಭೂಕಂಪಕ್ಕೆ ಸಿಲುಕಿದ ಚೀನಾ

2008 ರಲ್ಲಿ (ಅಧಿಕ ವರ್ಷ) ಭೀಕರ ಬಿರುಗಾಳಿ ಮತ್ತು ಭೂಕಂಪಕ್ಕೆ ಸಿಲುಕಿ ಚೀನಾ ತತ್ತರಿಸಿ ಹೋಗಿತ್ತು. ಇದರಿಂದ 220,000 ಮಂದಿ ಸಾವನ್ನಪ್ಪುವಂತಾಗಿತ್ತು.

2012 ರ ದುರಂತ

2012 ರ ದುರಂತ

ಜಗತ್ತಿನಾದ್ಯಂತ ವರುಣ ಅಬ್ಬರಿಸಿದ ವರ್ಷ 2012 (ಅಧಿಕ ವರ್ಷ). ಸ್ಯಾಂಡಿ ಚಂಡಮಾರುತದಿಂದ ಅಮೇರಿಕಾದಲ್ಲಿ 125 ಮಂದಿ ಜೀವ ಕಳೆದುಕೊಂಡರು. ಇನ್ನು, ಇಟಲಿ, ಫಿಲಿಪ್ಪೀನ್ಸ್, ಇರಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿ ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟರು.

2016 ರ ಭೀಕರತೆ

2016 ರ ಭೀಕರತೆ

ಅಮೇರಿಕಾದಲ್ಲಿ ಕಾಣಿಸಿಕೊಂಡ ಜೋನಸ್ ಶೀತ ಮಾರುತ, ತೈವಾನ್ ನಲ್ಲಿ ಭೂಕಂಪ, ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು, ಲೂಸಿಯಾನಾದಲ್ಲಿ ಪ್ರವಾಹ, ಇಟಲಿಯಲ್ಲಿ ಭೂಕಂಪ, ನ್ಯೂಝೀಲ್ಯಾಂಡ್ ನಲ್ಲಿ ಭೂಕಂಪ ಸಹಿತ ಕಾಣಿಸಿಕೊಂಡ ಸುನಾಮಿ, ಫುಕುಶಿಮಾದಲ್ಲಿ ಭೂಕಂಪ ಸೇರಿದಂತೆ ಜಗತ್ತಿನಾದ್ಯಂತ ಹಲವು ದುರಂತಗಳಿಗೆ 2016 (ಅಧಿಕ ವರ್ಷ) ಸಾಕ್ಷಿಯಾಗಿತ್ತು.

2020 ಕೂಡ ಅಧಿಕ ವರ್ಷವೇ!

2020 ಕೂಡ ಅಧಿಕ ವರ್ಷವೇ!

2020 ರ ಅಧಿಕ ವರ್ಷವೂ ದುರಂತದಿಂದ ಹೊರತಾಗಿಲ್ಲ. 2019 ರಲ್ಲಿ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು, 2020 ರಲ್ಲಿ ಹೆಚ್ಚು ಭೀಕರತೆ ಸೃಷ್ಟಿಸಿತ್ತು. ಇನ್ನೂ ಇದೇ ವರ್ಷ ಕೊರೊನಾದ ಕರಾಳ ದರ್ಶನ ಎಲ್ಲರಿಗೂ ಆಗುತ್ತಲೇ ಇದೆ.

ಎಲ್ಲವೂ ಕಾಕತಾಳೀಯ.?

ಎಲ್ಲವೂ ಕಾಕತಾಳೀಯ.?

ಅಧಿಕ ವರ್ಷಗಳಂದು ನಡೆದಿರುವ ದುರಂತಗಳ ಪಟ್ಟಿ ಅಪೂರ್ಣ ಎಂದು ನಿಮಗೆ ಅನಿಸಬಹುದು. ಆದ್ರೆ, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕರಾಳ ಅಧ್ಯಾಯಗಳನ್ನೆಷ್ಟೇ ನಾವಿಲ್ಲಿ ಉಲ್ಲೇಖಿಸಿದ್ದೇವೆ. ಇನ್ನು ಅಧಿಕ ವರ್ಷಗಳಲ್ಲಿ ಮಾತ್ರ ಅಲ್ಲ... ಉಳಿದ ವರ್ಷಗಳಲ್ಲೂ ಇದಕ್ಕಿಂತ ದೊಡ್ಡ ದುರಂತಗಳು ಘಟಿಸಿವೆ. ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಅಧಿಕ ವರ್ಷಗಳಲ್ಲಿ ಜರುಗಿರುವುದಕ್ಕೆ ಆತಂಕ ಪಡಬೇಕೋ, ಇಲ್ಲ ಕಾಕತಾಳೀಯ ಎನ್ನಬೇಕೋ ಅಥವಾ ಮೂಡನಂಬಿಕೆ ಎಂದು ಮೂಗು ಮುರಿಯಬೇಕೋ ನಿಮಗೆ ಬಿಟ್ಟಿದ್ದು.!

English summary
Here is the List of Tragedies that have occurred during Leap Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X