• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

BJP Ruled States : 4 ರಾಜ್ಯಗಳ ಗೆಲುವಿನ ನಂತರ ಬಿಜೆಪಿ ಆಡಳಿತವಿರುವ ರಾಜ್ಯಗಳು ಎಷ್ಟು?

|
Google Oneindia Kannada News

ಲಕ್ನೋ, ಮಾರ್ಚ್ 11: ಕಾಂಗ್ರೆಸ್ ಮುಕ್ತ ಭಾರತ ಕನಸು ಹೊತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಹೆಜ್ಜೆ ಗುರುತನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಕಳೆದ ಎರಡು ತಿಂಗಳುಗಳ ಕಾಲ ನಡೆದ ಐದು ರಾಜ್ಯಗಳ ಚುನಾವಣೆಗಳಲ್ಲಿ ಪಂಜಾಬ್ ಹೊರತುಪಡಿಸಿ ಮಿಕ್ಕ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಗಳಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದೆ.

2019ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿತ್ತು. 2014ರಿಂದ ಇಲ್ಲಿ ತನಕ ಭಾರತದ ಶೇ 71ಕ್ಕೂ ಅಧಿಕ ಭಾಗದಲ್ಲಿ ಕೇಸರಿ ಪತಾಕೆ ಹಾರಿಸಿದ್ದ ಬಿಜೆಪಿ ಈಗ ಶೇ 40ಕ್ಕೆ ಕುಸಿದಿತ್ತು. ಆದರೆ, ನಂತರ ಗೆಲುವಿನ ಹಳಿಗೆ ಮರಳಿದ ಮೋದಿ- ಅಮಿತ್ ಶಾ ಜೋಡಿ ಈಗ ಐದು ರಾಜ್ಯಗಳಲ್ಲಿ ನಾಲ್ಕು ರಾಜ್ಯಗಳನ್ನು ಗೆದ್ದು ಬೀಗಿದೆ. ಇಂದಿರಾಗಾಂಧಿಯ ನಂತರ ಮೋದಿ ಅವರೇ ಅತಿ ಹೆಚ್ಚು ರಾಜ್ಯಗಳಲ್ಲಿ ಆಡಳಿತವಿರುವ ಪಕ್ಷದ ಪ್ರಧಾನಿ ಎನಿಸಿಕೊಂಡಿದ್ದಾರೆ.

Assembly Election 2022 Results Live: 4 ರಾಜ್ಯಗಳಲ್ಲಿ ಅರಳಿದ ಕಮಲAssembly Election 2022 Results Live: 4 ರಾಜ್ಯಗಳಲ್ಲಿ ಅರಳಿದ ಕಮಲ

2014ಕ್ಕೂ ಮುನ್ನ ಬಿಜೆಪಿ 7 ರಾಜ್ಯ 2014ರಲ್ಲಿ ಬಿಜೆಪಿ 7 ರಾಜ್ಯ, ಕಾಂಗ್ರೆಸ್ 13 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಗೋವಾ ಹಾಗೂ ಅರುಣಾಚಲಪ್ರದೇಶ ಪ್ರಮುಖವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2016ರಲ್ಲಿ 15, 2017ರಲ್ಲಿ 19, 2018ರಲ್ಲಿ ಬಿಜೆಪಿ ಒಟ್ಟು 21ರಾಜ್ಯಕ್ಕೆ ತನ್ನ ಆಡಳಿತವನ್ನು ವಿಸ್ತರಿಸಿತು. ಕಾಂಗ್ರೆಸ್ 3 ರಾಜ್ಯಕ್ಕೆ ಸೀಮಿತವಾಯಿತು.

ಈಶಾನ್ಯ ರಾಜ್ಯಗಳಲ್ಲೂ ಕೇಸರಿ ಪತಾಕೆ 2018ರಲ್ಲಿ ಈಶಾನ್ಯ ರಾಜ್ಯಗಳಲ್ಲೂ ಕೇಸರಿ ಪತಾಕೆ ಹಾರಿಸಿದ ಬಿಜೆಪಿಗೆ ಪಂಚರಾಜ್ಯಗಳ ಚುನಾವಣೆ ಹೊಡೆತ ನೀಡಿತು. 2018ರಲ್ಲಿ ತ್ರಿಪುರಾದಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್ ಪಿಪಿ, ನಾಗಾಲ್ಯಾಂಡ್ ನಲ್ಲಿ ಎನ್ಡಿಪಿಪಿ, ಕರ್ನಾಟಕದಲ್ಲಿ ಅಲ್ಪಾವಧಿ ಸರ್ಕಾರ, ಮಿಜೋರಾಂನಲ್ಲಿ ಎಂಎನ್ ಎಫ್ ಅಧಿಕಾರಕ್ಕೆ ಬಂದರೆ, ಛತ್ತೀಸ್ ಗಢ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ತೆಲಂಗಾಣಾ ರಾಷ್ಟ್ರ ಸಮಿತಿ ಅಧಿಕಾರಕ್ಕೆ ಬಂದಿವೆ.

List of BJP Ruling States in India after Assembly Election Results 2022

2019ರಲ್ಲಿ ಬಿಜೆಪಿಗೆ ಮಿಶ್ರಫಲ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರು. ಕರ್ನಾಟಕದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನ ನಂತರ ಯಡಿಯೂರಪ್ಪ ಮತ್ತೆ ಅಧಿಕಾರ ಹಿಡಿದರು. ಆದರೆ, ಈಗ ಆರೆಸ್ಸೆಸ್ ಕೇಂದ್ರ ಕಚೇರಿ ಹೊಂದಿರುವ ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್ಸಿಪಿ ನಡುವಿನ ತಂತ್ರಗಾರಿಕೆ ಮುಂದೆ ಬಿಜೆಪಿ ಹಿಂದೆ ಬಿದ್ದು ಅಧಿಕಾರ ಸಿಕ್ಕರೂ ಉಳಿಸಿಕೊಳ್ಳಲಾಗದೆ ವಿಪಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಸದ್ಯ ಭಾರತ ಭೂಪಟದಲ್ಲಿ ಕೇಸರಿ ಪತಾಕೆ ಶೇ 40 ಭಾಗ ಮಾತ್ರ ತುಂಬಿತ್ತು.

ಅಮಿತ್ ಶಾ
Know all about
ಅಮಿತ್ ಶಾ

ಈಗ ರಾಜಸ್ಥಾನ ಸೇರಿದಂತೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ 5 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಪಂಜಾಬ್ ಗೆದ್ದು ಎಎಪಿ 2 ರಾಜ್ಯಗಳಲ್ಲಿ ತನ್ನ ಅಧಿಕಾರ ಹೊಂದಿದೆ. ಬಿಜೆಪಿ ಹಾಗೂ ಬಿಜೆಪಿ ಮೈತ್ರಿಕೂಟ 18 ರಾಜ್ಯಗಳಲ್ಲಿ ತನ್ನ ಅಧಿಕಾರ ಸ್ಥಾಪಿಸಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾನ್ಯತೆ ಪಡೆದುಕೊಂಡರೂ ರಾಷ್ಟ್ರಪತಿಗಳ ಆಡಳಿತ ಹೊಂದಿದ್ದು, ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿದೆ. (ಮಾಹಿತಿ ಕೃಪೆ: ವಿಕಿಪೀಡಿಯಾ)

English summary
With the registering victorious in four out of five states in the assembly elections, the BJP has continued to be a dominant force in Indian politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X