ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?

|
Google Oneindia Kannada News

ಮನುಕುಲದ ಇತಿಹಾಸದಲ್ಲಿ, ಸಾಂಕ್ರಾಮಿಕ ರೋಗಗಳು ಸೃಷ್ಟಿಸಿದ ಭಯಾನಕತೆ ಹಾಗೂ ಸಾಮೂಹಿಕ ಸಮಾಧಿಗಳು ಸೃಷ್ಟಿಯಾದ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಇದೀಗ ಎದುರಾಗಿರುವ ಕೊರೊನಾವೈರಸ್ ಕೂಡ ಇದೇ ಹಾದಿಯಲ್ಲಿ ಆಧುನಿಕ ವೈದ್ಯಲೋಕಕ್ಕೆ ಸವಾಲು ಎಸೆದಿದೆ, ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ.

Recommended Video

ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಮಿಷನರ್ ಭಾಸ್ಕರ್ ರಾವ್ | Bhaskar Rao | Bengaluru | Oneindia kannada

ನಮ್ಮದೇ ತಲೆಮಾರಿನಲ್ಲಿ, 2003ರಲ್ಲಿ ಸಾರ್ಸ್‌ ಎಂಬ ಇಂತಹದ್ದೇ ಒಂದು ವೈರಸ್‌ ಜನರನ್ನು ಸಾವಿನ ಆತಂಕಕ್ಕೆ ತಳ್ಳಿತ್ತು. ಇದಾದ ನಂತರವಾದರೂ ಜಾಗತಿಕ ಔಷಧ ಕಂಪನಿಗಳು ಸಾಂಕ್ರಾಮಿಕ ರೋಗಗಳಿಗೆ ಲಸಿಕೆಯನ್ನು ಕಂಡುಹಿಡಿಯಬೇಕಿತ್ತು. ಆದರೆ ಜನರ ನೋವು, ನರಳಾಟಗಳ ಮುಂದುವರಿಕೆಯಲ್ಲಿಯೇ ಲಾಭವನ್ನು ಕಂಡುಕೊಂಡಿರುವ ಫಾರ್ಮಾ ಕಂಪನಿಗಳಿಂದ ಜನರ ಆರೋಗ್ಯ ಸಂಬಂಧಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಹೀಗಿರುವಾಗ, ಈ ಹೊಣೆಗಾರಿಕೆಯನ್ನು ಜನರಿಂದ ಚುನಾಯಿತರಾದ ಸರಕಾರಗಳು ತೆಗೆದುಕೊಳ್ಳಬೇಕಿತ್ತು. ಜಡತ್ವವನ್ನು ಮೈಗೂಡಿಸಿಕೊಂಡು ಬೆಳೆದಿರುವ ಯಾವ ದೇಶದ ಆಡಳಿತ ವ್ಯವಸ್ಥೆ ಕೂಡ ಸಾಂಕ್ರಾಮಿಕ ರೋಗಗಳಿಗೆ ಶಾಶ್ವತ ಪರಿಹಾರ ಲಸಿಕೆ ಕಂಡುಕೊಳ್ಳುವ ಉತ್ಸಾಹ ತೋರಿಸಲಿಲ್ಲ. ಮುಂದುವರಿದ, ಎಲ್ಲಾ ರೀತಿಯ ಸೌಕರ್ಯಗಳನ್ನು, ಆರ್ಥಿಕ ಬಲವನ್ನು ಹೊಂದಿರುವ ದೇಶಗಳೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕೈಚೆಲ್ಲಿದವು. ಪರಿಣಾಮ ಈಗ ಕೊರೊನಾ ಮರಣ ಮೃದಂಗದ ಪಟ್ಟಿಯಲ್ಲಿ ಅಮೆರಿಕಾ ಆದಿಯಾಗಿ ಬಲಿಷ್ಠ ದೇಶಗಳೇ ಸ್ಥಾನ ಪಡೆದುಕೊಂಡಿವೆ.

#LifeAfterCorona: How the World will cope up with it

ಪರಿಣಾಮ, ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುತ್ತಿದ್ದಾರೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ.

ಈ ಹಿನ್ನೆಲೆಯಲ್ಲಿ, 'ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸುತ್ತಿದೆ.

ಕೊರೊನಾ ಸುತ್ತ ಸುಳ್ಳು ಸುದ್ದಿಗಳು, ಅಸಹ್ಯಕರ ರೀತಿಯಲ್ಲಿ ಮಾಹಿತಿ ಹಂಚಿಕೆಯಿಂದಾಗಿ ಗೋಜಲಾಗಿರುವ ಸನ್ನಿವೇಶದಲ್ಲಿ ಸಮುದಾಯಕ್ಕೆ ಮುನ್ನೋಟಗಳು ಬೇಕಿವೆ. ದೂರದೃಷ್ಟಿಯಿಂದ ಕೂಡಿರುವ ಸಲಹೆ, ಸೂಚನೆಗಳು ಜನರಲ್ಲಿ ಆತ್ಮವಿಶ್ವಾಸ ತುಂಬಬಹುದು, ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಲು ಜನರನ್ನು ಸಜ್ಜುಗೊಳಿಸಬಹುದು.

ಇದಕ್ಕಾಗಿ ಕೆಳಗೆ ನಾಲ್ಕು ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮ ಉತ್ತರಗಳನ್ನು ಸರಣಿ ರೂಪದಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ [email protected] ಮಾಡಿ.

English summary
#LifeAfterCorona: World has witnessed many pandemic and now entire medical field is battling it against Covid19. How will be life after Corona menace gets over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X