ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೇ ದಿನದಲ್ಲಿ ವೀರಪ್ಪನ್ ಹಿಡಿಯುತ್ತೇನೆ ಎಂದಿದ್ದ 3 ವರ್ಷದ ಪೋರ; ಇದು ಯಶ್ ಪವರ್

|
Google Oneindia Kannada News

ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವ ಗಾದೆ ಮಾತಿದೆ. ಇದು ಯಶ್ ಜೀವನಕ್ಕೆ ಅನ್ವಯ ಆಗುತ್ತದೆ. ರಾಕಿಂಗ್ ಸ್ಟಾರ್ ಯಶ್ ಹಾಗೆ ಸುಮ್ಮನೆ ಅದೃಷ್ಟಬಲದಲ್ಲಿ ಸ್ಟಾರ್ ಆದವರಲ್ಲ. ಅಸೆ ಆಕಾಂಕ್ಷೆಗಳನ್ನ ಹೊತ್ತು ಬಹಳ ಕಷ್ಟಪಟ್ಟು ಬೆಳೆದು ಸ್ಯಾಂಡಲ್‌ವುಡ್ ವ್ಯಾಪ್ತಿಯನ್ನೂ ಮೀರಿ ಪಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ಯಶ್ ಅವರ ಲೈಫ್ ಜರ್ನಿಯಲ್ಲಿ ಭವಿಷ್ಯದ ತಾರಾಬಲದ ಸುಳಿವು ನೀಡುವ ಹಲವು ಸಂಗತಿಗಳು ಅಡಕವಾಗಿದ್ದವು. ಯಶ್ ಹುಟ್ಟು ಹೆಸರು ನವೀನ್ ಕುಮಾರ್ ಗೌಡ. ಹಾಸನ ಮೂಲದ ಇವರ ಕುಟುಂಬ ಮೈಸೂರಿನಲ್ಲಿ ನೆಲಸಿತ್ತು. ಅಪ್ಪ ಕೆಎಸ್ಸಾರ್ಟಿಸಿ ಬಸ್ ಡ್ರೈವರ್. ಆರ್ಥಿಕವಾಗಿ ದುರ್ಬಲವಾಗಿದ್ದ ಕುಟುಂಬ ಅವರದ್ದೇನಲ್ಲ. ಆದರೆ, ಅಷ್ಟೇ ಆಗಿದ್ದರೆ ಯಶ್ ಈ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ. ಚಿಕ್ಕಂದಿನಿಂದಲೇ ಅವರಲ್ಲಿ ಅಡಕವಾಗಿದ್ದ ಮಹತ್ವಾಕಾಂಕ್ಷೆ ಅವರನ್ನ ಮೇಲೇರಿಸುತ್ತಾ ಬಂದಿದೆ.

ಯಶ್ ರಿಯಲ್ ಲೈಫ್: ಅಪ್ಪ, ಗಂಡ, ಸೇವಕ, ಉದ್ಯಮಿ, ಎಲ್ಲದರಲ್ಲೂ ಸೈಯಶ್ ರಿಯಲ್ ಲೈಫ್: ಅಪ್ಪ, ಗಂಡ, ಸೇವಕ, ಉದ್ಯಮಿ, ಎಲ್ಲದರಲ್ಲೂ ಸೈ

ವೀರಪ್ಪನ್ ಹಿಡಿಯುವ ಹಂಬಲ:
ಯಶ್ ಮೂರು ವರ್ಷ ವಯಸ್ಸಿನಲ್ಲಿದ್ದಾಗ ಅವರ ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಇತ್ತು. ಅದರಲ್ಲಿ ಪೊಲೀಸ್ ಅಧಿಕಾರಿ ಪೋಷಾಕು ತೊಟ್ಟು ಅವರು, "ನನಗೆ ಕಾಡಿಗೆ ಬಿಟ್ಟು ನೋಡಿ, ಎರಡೇ ದಿನದಲ್ಲಿ ವೀರಪ್ಪನ್‌ನನ್ನು ಹಿಡಿದು ತರುತ್ತೇನೆ" ಎಂದು ಡೈಲಾಗ್ ಹೊಡೆದಿದ್ದರಂತೆ. ಆಗಲೇ ಅವರ ಪಂಚಿಂಗ್ ಡೈಲಾಗ್‌ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದರಂತೆ.

Life of Rocking Star Yash before start of film journey

ಸಣ್ಣ ಹುಡುಗನಿದ್ದಾಗಲೇ ಹೊಗಳಿಕೆಗಳಿಗೆ ಒಗ್ಗಿಹೋಗಿದ್ದ ಯಶ್‌ಗೆ ತಾನು ಸೂಪರ್ ಸ್ಟಾರ್ ಆಗುವ ಕನಸು ಹೊಂದಿದ್ದರು. ಶಾಲೆಯಲ್ಲಿ ಯಾರಾದರೂ ಯಶ್ ಅವರನ್ನ ದೊಡ್ಡವನಾದ ಮೇಲೆ ಏನಾಗಬೇಕೆಂದು ಕೇಳಿದರೆ, ಅವರಿಂದ ಬರುತ್ತಿದ್ದ ಉತ್ತರ, ನಾನು ಹೀರೋ ಆಗಬೇಕು ಎಂದಾಗುತ್ತಿತ್ತಂತೆ.

ಕೊರೊನಾ ಪ್ಯಾಂಡಮಿಕ್ ನಂತರ ದಕ್ಷಿಣ ಭಾರತ ಸಿನಿಮಾಗಳು ಬಾಲಿವುಡ್‌ಗೆ ಸೆಡ್ಡು ಹೊಡೆದಿದ್ದು ಹೇಗೆ?ಕೊರೊನಾ ಪ್ಯಾಂಡಮಿಕ್ ನಂತರ ದಕ್ಷಿಣ ಭಾರತ ಸಿನಿಮಾಗಳು ಬಾಲಿವುಡ್‌ಗೆ ಸೆಡ್ಡು ಹೊಡೆದಿದ್ದು ಹೇಗೆ?

ಯಶ್ ತಂದೆ ಬಸ್ ಡ್ರೈವರ್ ಆದ್ದರಿಂದ ಆರ್ಥಿಕವಾಗಿ ದುರ್ಬಲವಾದ ಕುಟುಂಬವಾಗಿರಲಿಲ್ಲ. ಆದರೆ, ಮಗನನ್ನು ಹೀರೋ ಮಾಡಲು ಹೋಗುವಷ್ಟು ಲಕ್ಸುರಿ ಲೈಫ್ ಅವರದ್ದಾಗಿರಲಿಲ್ಲ. ಎಸ್ಸೆಸ್ಸೆಲ್ಸಿ ಮುಗಿಯುತ್ತಲೇ ಹೀರೋ ಆಗುತ್ತೇನೆ ಎಂದು ಹೊರಟಿದ್ದ ಯಶ್‌ಗೆ ಬಲವಂತವಾಗಿ ಕಾಲೇಜಿಗೆ ಕಳುಹಿಸಲಾಯಿತು. ಆದರೆ, ಎರಡು ವರ್ಷ ಬಳಿಕ ಯಶ್ ಮತ್ತದೇ ಹೀರೋ ಹುಚ್ಚು ಹಿಡಿದುಕೊಂಡು ಅಪ್ಪ ಅಮ್ಮನ ವಿರೋಧವನ್ನೂ ಲೆಕ್ಕಿಸದೇ ಬೆಂಗಳೂರಿಗೆ ಬಂದದ್ದು ಅವರ ಜೀವನದ ಟರ್ನಿಂಗ್ ಪಾಯಿಂಟ್.

ಮನೆಗೆ ವಾಪಸ್ ಬಂದರೆ ಮತ್ತೆ ಚಿತ್ರರಂಗಕ್ಕೆ ಕಾಲಿಡುವಂತಿಲ್ಲ ಎಂದು ಅಪ್ಪ ಅಪ್ಪಣೆ ಮಾಡಿದ್ದರು. ಯಶ್ ಅವರು ಹಿಂದಿರುಗಿ ನೋಡುವಂತಿರಲಿಲ್ಲ. ಜೇಬಲ್ಲಿ 300 ರೂ ಇಟ್ಟುಕೊಂಡು ಬೆಂಗಳೂರಿಗೆ ಬಸ್ ಹತ್ತಿದಾಗ ಅವರ ವಯಸ್ಸು 16 ಮಾತ್ರ. 2003ರಲ್ಲಿ ಸಿನಿಮಾವೊಂದರಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡರು. ಅದಕ್ಕೆ ಸಂಭಾವನೆ ಇರಲಿಲ್ಲ. ಊಟ ತಿಂಡಿ, ಉಳಿದುಕೊಳ್ಳಲು ರೂಮಿನ ವ್ಯವಸ್ಥೆ ಇದ್ದದ್ದಕ್ಕೆ ಯಶ್ ತೃಪ್ತಿಪಟ್ಟರು. ಅವರ ದುರದೃಷ್ಟಕ್ಕೆ ಎರಡೇ ದಿನಕ್ಕೆ ಶೂಟಿಂಗ್ ಕ್ಯಾನ್ಸಲ್ ಆಯಿತು. ಆಗ ಯಶ್‌ಗೆ ದಿಕ್ಕು ತೋಚಲಿಲ್ಲ. ಮೈಸೂರಿಗೆ ವಾಪಸ್ ಹೋಗಲು ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್‌ಗೆ ಬಂದರು. ಅಲ್ಲಿ ಅವರಿಗೆ ಮತ್ತೊಂದು ಟರ್ನಿಂಗ್ ಪಾಯಿಂಟ್ ಸಿಕ್ಕಿತು.

Life of Rocking Star Yash before start of film journey

ಕಷ್ಟ ಎಲ್ಲರಿಗೂ ಇದ್ದದ್ದೇ:
ಕರ್ನಾಟಕದ ಮೂಲೆಮೂಲೆಗಳಿಂದ ಸಿನಿಮಾ ಬಣ್ಣದ ಕನಸು ಹೊತ್ತು ನೂರಾರು ಮಂದಿ ಗಾಂಧಿನಗರಕ್ಕೆ ನಿತ್ಯ ಬಂದು ಹೋಗುತ್ತಲೇ ಇರುತ್ತಾರೆ. ಇವರಲ್ಲಿ ದೀರ್ಘ ಕಾಲ ಉಳಿಯುವವರು ಬಹಳ ಕಡಿಮೆ. ಯಶ್ ಅಂದು ಮೈಸೂರಿಗೆ ವಾಪಸ್ ಹೋಗತೊಡಗಿದ್ದಾಗ, ತನ್ನಂತೆ ನಿರಾಸೆ ಅನುಭವಿಸಿ ತಂತಮ್ಮ ಊರುಗಳಿಗೆ ಹಿಂದಿರುಗಲು ಹೋಗುತ್ತಿದ್ದ ಹಲವು ಮಂದಿಯನ್ನ ಕಂಡರು.

"ಆಡಿಶನ್‌ನಲ್ಲಿ ಆಯ್ಕೆಯಾಗಲು ಸಾಧ್ಯವಾಗದೇ ಪರಿತಪಿಸುತ್ತಿದ್ದ ಈ ನಟರ ಕಥೆ ಕೇಳಿದ ಮೇಲೆ ನನಗೆ ಅದೇನೋ ಆತ್ಮವಿಶ್ವಾಸ ಚಿಗುರಿತು. ಪ್ರತಿಯೊಬ್ಬನೂ ಜೀವನದಲ್ಲಿ ಕಷ್ಟ ಎದುರಿಸುತ್ತಾನೆ. ನಾನೇನು ಅದಕ್ಕೆ ಹೊರತಲ್ಲ. ಇರುವುದೊಂದೇ ಜೀವನ. ಅದನ್ನ ಸಂಪೂರ್ಣವಾಗಿ ಅನುಭವಿಸಿಬಿಡಬೇಕು ಎಂದು ನಾನು ಆ ಕ್ಷಣ ಆಲೋಚಿಸಿದೆ" ಎಂದು ಯಶ್ ಯಾವುದೋ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಅಲ್ಲಿಂದ ಅವರ ಮರುಹೋರಾಟ ಮೊದಲುಗೊಂಡಿತು. ನಾಟಕ ತಂಡವೊಂದರಲ್ಲಿ ತೊಡಗಿಸಿಕೊಂಡರು. ವರ್ಷದ ಬಳಿಕ ನಂದಗೋಕುಲ ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮಳೆಬಿಲ್ಲು, ಪ್ರೀತಿ ಇಲ್ಲದ ಮೇಲೆ ಧಾರಾವಾಹಿಗಳಲ್ಲೂ ನಟಿಸಿ ಗಮನ ಸೆಳೆದರು. ಇವರ ನಟನಾ ಪ್ರತಿಭೆಯನ್ನ ಗುರುತಿಸಿ 2007-08ರಲ್ಲಿ ಮೊಗ್ಗಿನ ಮೊನಸು ಸಿನಿಮಾದಲ್ಲಿ ನಟಿಸಿವು ಅವಕಾಶ ಸಿಕ್ಕಿತು. ಅಲ್ಲಿಂದ ಯಶ್ ಸಿನಿ ಜರ್ನಿ ಆರಂಭವಾಯಿತು. ಸೂಪರ್ ಸ್ಟಾರ್ ಆಗುವ ಅವರ ಕನಸು ಈ ದಾರಿಯಲ್ಲಿ ಗಟ್ಟಿಗೊಂಡಿತು. ಕೆಜಿಎಫ್-2 ವರೆಗಿನ ಅವರ ಜರ್ನಿ ಮಜಬೂತಾಗಿದೆ. ಯಶ್ ಅವರಿಗೆ ಈಗ ಮುಂದಿನ ಹೆಜ್ಜೆ ಹೇಗೆ ಇರಿಸಬೇಕು ಎಂಬ ಸವಾಲು ಇದೆ. ಅವರು ಅದನ್ನ ಹೇಗೆ ಎದುರಿಸುತ್ತಾರೆ, ಎಂಥ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಕನ್ನಡಿಗರಷ್ಟೇ ಅಲ್ಲ, ಎಲ್ಲಾ ಭಾರತೀಯರಿಗೂ ಶುರುವಾಗಿದೆ.

English summary
Rocking Star Yash's birthname was Naveen Kumar Gowda. He had ambition to become film star since childhood. That ambition never deteriorated and paved the way that took hime till KGF-2. Here's is initial struggling days' stories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X