• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್‌ಐಸಿಗೆ 65ನೇ ಹುಟ್ಟುಹಬ್ಬದ ಸಂಭ್ರಮ: ಕೊರೊನಾ ನಡುವೆಯೂ ದಾಖಲೆಯ ಪ್ರಗತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 2020ರ ಸೆ. 1ರಂದು ತನ್ನ 65ನೇ ವರ್ಷಕ್ಕೆ ಕಾಲಿರಿಸಿದೆ. ದೇಶದ ಉನ್ನತ ಹಣಕಾಸು ಸಂಸ್ಥೆಯಾಗಿ ಜೀವ ವಿಮೆ ಕುರಿತು ಸಂದೇಶ ಬಿತ್ತುವಲ್ಲಿ ಅಪಾರ ಪಾತ್ರ ವಹಿಸಿದೆ. ತನ್ನ 64 ವರ್ಷದ ಅಸ್ತಿತ್ವದಲ್ಲಿ ಎಲ್‌ಐಸಿ, ಮುಂಚೂಣಿ ಜೀವ ವಿಮಾ ಕಂಪೆನಿಯಾಗಿ ತನ್ನ ರೆಕ್ಕೆಗಳನ್ನು ಹರವಿಕೊಂಡು ಪ್ರಸ್ತುತ 14 ದೇಶಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಸಂಘಟಿತ ವ್ಯಾಪಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ.

ಎಲ್‌ಐಸಿ ಎಚ್‌ಎಫ್‌ಎಲ್ ಲಿಮಿಟೆಡ್, ಎಲ್‌ಐಸಿ ಪೆನ್ಷನ್ ಫಂಡ್ ಲಿಮಿಟೆಡ್, ಎಲ್‌ಐಸಿ ಮ್ಯೂಚುವಲ್ ಫಂಡ್, ಎಲ್‌ಐಸಿ ಕಾರ್ಡ್ಸ್ ಸರ್ವಿಸಸ್, ಐಡಿಬಿಐ ಬ್ಯಾಂಕ್ ಲಿ, ಎಲ್‌ಐಸಿ ಎಚ್‌ಎಫ್‌ಎಲ್ ಕೇರ್ ಹೋಮ್ಸ್ ಲಿ, ಎಲ್‌ಐಸಿ ಎಚ್‌ಎಫ್‌ಎಲ್ ಫೈನಾನ್ಷಿಯಲ್ ಸರ್ವಿಸಸ್ ಲಿ ಮತ್ತು ಎಲ್‌ಐಸಿ ಎಚ್‌ಎಫ್‌ಎಲ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿ ಲಿ ಮುಂತಾದ ತನ್ನ ಅಂಗಸಂಸ್ಥೆಗಳು ಮತ್ತು ಸಹ ಸಂಘಟನೆಗಳ ಮೂಲಕ ಇತರೆ ಹಣಕಾಸು ಸೇವೆಗಳನ್ನೂ ನೀಡುತ್ತಿದೆ.

ಕೊರೊನಾ ಕಾರಣ: ಎಲ್‌ಐಸಿ ಎನ್‌ಪಿಎ ಹೆಚ್ಚಳಕೊರೊನಾ ಕಾರಣ: ಎಲ್‌ಐಸಿ ಎನ್‌ಪಿಎ ಹೆಚ್ಚಳ

1956ರಲ್ಲ 5 ಕೋಟಿ ಮೂಲ ಬಂಡವಾಳದೊಂದಿಗೆ ಆರಂಭವಾದ ಎಲ್‌ಐಸಿ, ಇಂದು 31,96,214.81 ಕೋಟಿ ರೂ ಮೌಲ್ಯದ ಸಂಪತ್ತು ಹೊಂದಿದೆ. ಇದರಲ್ಲಿ ಲೈಫ್ ಫಂಡ್ ಮೌಲ್ಯ 31,14,496.50 ಕೋಟಿ ರೂ. ವಿಮೆದಾರರ ಅತ್ಯುತ್ತಮ ಅನುಕೂಲಗಳಿಗೆ ಮತ್ತು ಸಮುದಾಯ ಮಟ್ಟದಲ್ಲಿ ನಿಧಿ ಸೃಷ್ಟಿಸುವ ಮೂಲಕ ರಾಷ್ಟ್ರೀಯತೆಯ ನೈಜ ದಿಕ್ಕಿನಲ್ಲಿ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ಎಲ್‌ಐಸಿ ಸದಾ ಮುಂಚೂಣಿಯಲ್ಲಿದೆ. ಮುಂದೆ ಓದಿ.

ಎಲ್‌ಐಸಿಯ ಶಕ್ತಿಗಳು

ಎಲ್‌ಐಸಿಯ ಶಕ್ತಿಗಳು

ರಾಷ್ಟ್ರೀಯ ಆದ್ಯತೆಗಳು ಮತ್ತು ವಿಮೆದಾರರಿಗೆ ಸಮಂಜಸವಾದ ರಿಟರ್ನ್ಸ್ ಒದಗಿಸುವ ಬಾದ್ಯತೆ ಎಲ್‌ಐಸಿ ಹೂಡಿಕೆಯ ಮುಖ್ಯ ಮಾನದಂಡವಾಗಿದೆ. ಸಮುದಾಯದ ಪ್ರಯೋಜನಕ್ಕಾಗಿ 2020ರ ಮಾರ್ಚ್ 31ರವರೆಗೆ ಎಲ್‌ಐಸಿ ಒಟ್ಟು 30,69,942 ಕೋಟಿ ರೂ ಹೂಡಿಕೆ ಮಾಡಿದೆ.

ಎಂಟು ವಲಯ ಕಚೇರಿಗಳು, 113 ವಿಭಾಗೀಯ ಕಚೇರಿಗಳು, 74 ಗ್ರಾಹಕ ವಲಯಗಳು, 2048 ಶಾಖಾ ಕಚೇರಿಗಳು, 1526 ಸ್ಯಾಟಲೈಟ್ ಕಚೇರಿಗಳು, 3354 ಲೈಫ್ ಪ್ಲಸ್ ಕಚೇರಿಗಳು ಮತ್ತು 31,556 ಪ್ರೀಮಿಯಂ ಪಾಯಿಂಟ್‌ಗಳನ್ನು ಹೊಂದಿದೆ. ಎಲ್‌ಐಸಿ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು, 12.08 ಲಕ್ಷ ಏಜೆಂಟ್‌ಗಳನ್ನು ಮತ್ತು 28.92 ಕೋಟಿ ಪ್ಲಸ್ ಪಾಲಿಸಿಗಳನ್ನು ಒಳಗೊಂಡಿದೆ. ಇಂದು ಎಲ್‌ಐಸಿ ವೈಯಕ್ತಿಕ ವ್ಯವಹಾರಗಳ ಅಡಿಯಲ್ಲಿ 28 ಯೋಜನೆಗಳನ್ನು ಹೊಂದಿದೆ.

ಕೊರೊನಾ ನಡುವೆಯೂ 2.19 ಕೋಟಿ ಹೊಸ ಪಾಲಿಸಿ

ಕೊರೊನಾ ನಡುವೆಯೂ 2.19 ಕೋಟಿ ಹೊಸ ಪಾಲಿಸಿ

2019-20ರಲ್ಲಿ ಎಲ್‌ಐಸಿ ಮೊದಲ ವರ್ಷದ ಪ್ರೀಮಿಯಂನ ಹೊಸ ವಹಿವಾಟಿನಡಿ ಶೇ 25.17ರಷ್ಟು ಪ್ರಗತಿ ದಾಖಲಿಸಿದೆ. ಮಾರ್ಚ್ 31ರ ಅಂತ್ಯಕ್ಕೆ ಒಟ್ಟು ಮೊದಲ ವರ್ಷದ ಪ್ರೀಮಿಯಂ ಮೊತ್ತ 1.78 ಲಕ್ಷ ಕೋಟಿ. ಮಾರುಕಟ್ಟೆ ಷೇರಿನ ಶೇ 68.74ರಷ್ಟನ್ನು ಎಲ್‌ಐಸಿಯೇ ಒಳಗೊಂಡಿತ್ತು. 2020ರಲ್ಲಿ ಎಲ್‌ಐಸಿಯ ಮಾರುಕಟ್ಟೆ ಷೇರು ಪಾಲಿಸಿಗಳ ಸಂಖ್ಯೆ ಆಧಾರದಲ್ಲಿ ಶೇ 75.90ರಷ್ಟಿದೆ. ವರ್ಷದ ಅಂತ್ಯದಿಂದ ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೂ ಆರು ವರ್ಷದಲ್ಲಿಯೇ ಅತ್ಯಧಿಕವಾದ 2.19 ಕೋಟಿ ಹೊಸ ಪಾಲಿಸಿಗಳನ್ನು ಪಡೆದುಕೊಂಡಿದೆ.

ಬಜೆಟ್ 2020: ವಿತ್ತಿಯ ಕೊರತೆ ಸರಿತೂಗಿಸಲು ಸರ್ಕಾರದ ಪಾಲುದಾರಿಕೆ ಮಾರಾಟಬಜೆಟ್ 2020: ವಿತ್ತಿಯ ಕೊರತೆ ಸರಿತೂಗಿಸಲು ಸರ್ಕಾರದ ಪಾಲುದಾರಿಕೆ ಮಾರಾಟ

ಐತಿಹಾಸಿಕ ಸಾಧನೆ

ಐತಿಹಾಸಿಕ ಸಾಧನೆ

ಪೆನ್ಷನ್ ಮತ್ತು ಸಮೂಹ ನಿವೃತ್ತಿ ವ್ಯವಹಾರದ ವಿಭಾಗಗಳು ಇತಿಹಾಸ ಸೃಷ್ಟಿಸಿವೆ. ಒಂದು ಲಕ್ಷ ಕೋಟಿಯನ್ನು ಕ್ರಮಿಸಿ 1,26,696 ಕೋಟಿ ರೂ ಸಂಗ್ರಹ ಮಾಡಿದೆ. ಹೊಸ ವ್ಯವಹಾರ ಪ್ರೀಮಿಯಮ್ ಆದಾಯವು ಶೇ 39.46ರಷ್ಟು ಪ್ರಗತಿ ಸಾಧಿಸಿದೆ. 2019-20ರಲ್ಲಿ ಎಲ್‌ಐಸಿಯು 215.98 ಲಕ್ಷ ಕ್ಲೇಮುಗಳನ್ನು ಪಾವತಿಸಿದೆ. ಇದರ ಮೊತ್ತ 1,59,770.32 ಕೋಟಿ ರೂ.

ತನ್ನ ಮಾರಾಟ ಮತ್ತು ಸೇವಾ ಕಾರ್ಯ ಚಟುವಟಿಕೆಗಳ ಬೆಳವಣಿಗೆಗೆ ಪೂರಕವಾದ ತಾಂತ್ರಿಕತೆಯನ್ನು ಎಲ್‌ಐಸಿ ಅಳವಡಿಸಿಕೊಂಡಿದೆ. ಈಗ ಇದರ ಗಮನವನ್ನು ಗ್ರಾಹಕ ಕೇಂದ್ರಿತವಾಗಿ ಉಳಿದುಕೊಳ್ಳುವ, ಕಾರ್ಯಚಟುವಟಿಕೆಗಳ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಆನ್‌ಲೈನ್ ಮತ್ತು ಡಿಜಿಟಲ್ ಸೌಲಭ್ಯಗಳನ್ನು ಸುಧಾರಣೆ ಮಾಡುವುದರ ಮೇಲೆ ಬದಲಿಸಿಕೊಳ್ಳಲಾಗಿದೆ.

ಡಿಜಿಟಲ್ ಪ್ರಗತಿ

ಡಿಜಿಟಲ್ ಪ್ರಗತಿ

ಎಲ್‌ಐಸಿ ಆನ್‌ಲೈನ್‌ನಲ್ಲಿ ಸದಾ ಸಕ್ರಿಯವಾಗಿದೆ. ಆಂತರಿಕ ಹಾಗೂ ಬಾಹ್ಯ ಗ್ರಾಹಕರಿಗೆ ನವ ವ್ಯವಹಾರ ಮತ್ತು ಸೇವಾ ಕಾರ್ಯಗಳನ್ನು ಒದಗಿಸಲು ಡಿಜಿಟಲ್ ವೇದಿಕೆಯನ್ನು ಒದಗಿಸಿದೆ. ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳ ವೇದಿಕೆಗಳನ್ನೂ ಇದು ಕಲ್ಪಿಸುತ್ತಿದೆ. ಡಿಜಿಟಲ್ ಅನುಭವವನ್ನು ವೃದ್ಧಿಸಲು ಮತ್ತು ಗ್ರಾಹಕರಿಗೆ ಆನ್‌ಲೈನ್ ಸೇವೆಗಳನ್ನು ಒದಗಿಸಲು ಸೂಕ್ತವಾಗಿ ಕಸ್ಟಮರ್ ಪೋರ್ಟಲ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕಸ್ಟಮರ್ ಮೊಬೈಲ್ ಆಪ್ ಈಗ ಆಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಲಭ್ಯ. ಇದು 34 ಲಕ್ಷಕ್ಕೂ ಅಧಿಕ ಬ್ಯಾಂಕ್ ಬಳಕೆದಾರರನ್ನು ಹೊಂದಿದೆ.

ಚಾಟ್ ಬಾಕ್ಸ್ ಸೌಲಭ್ಯ

ಚಾಟ್ ಬಾಕ್ಸ್ ಸೌಲಭ್ಯ

ಎಲ್‌ಐಸಿ ಎಲೆಕ್ಟ್ರಾನಿಕ್ ಪ್ರೀಮಿಯಂ ಪಾವತಿಯು ಸರಾಗವಾಗಿ ನಡೆಯಲು ವಿವಿಧ ಡಿಜಿಟಲ್ ಪ್ಲಾಟ್‌ ಫಾರ್ಮ್‌ಗಳಲ್ಲಿ ಅವಕಾಶ ನೀಡುತ್ತಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮುಂತಾದ ಇತ್ತೀಚಿನ ಮಾಧ್ಯಮಗಳು ಡಿಜಿಟಲ್ ಮೂಲಕ ಪ್ರೀಮಿಯಂ ಪಾವತಿಗೆ ಗ್ರಾಹಕರಿಗೆ ಸೌಲಭ್ಯ ಒದಗಿಸಿವೆ. ಡಿಜಿಟಲ್ ಮೂಲಸೌಕರ್ಯದ ಮೂಲಕ ಪ್ರೀಮಿಯಂ ಸಂಗ್ರಹ ನವೀಕರಣವು ಶೇ 40.23ರಷ್ಟು ಸಾರ್ವಕಾಲಿಕ ಏರಿಕೆ ಕಂಡಿದೆ. ತನ್ನ ಕಾರ್ಪೊರೇಟ್ ವೆಬ್‌ಸೈಟ್‌ಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ಚಾಟ್ ಬಾಕ್ಸ್ ಆರಂಭಿಸಿದೆ. ಎಲ್‌ಐಸಿ ಮಿತ್ರ ಎಂಬ ಚಾಟ್‌ಬಾಕ್ಸ್ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ಪ್ರತಿಷ್ಠಾನದಿಂದ ಸೇವಾ ಕಾರ್ಯಗಳು

ಪ್ರತಿಷ್ಠಾನದಿಂದ ಸೇವಾ ಕಾರ್ಯಗಳು

2006ರಲ್ಲಿ ಆರಂಭವಾದ ಎಲ್‌ಐಸಿ ಸುವರ್ಣ ಮಹೋತ್ಸವ ಪ್ರತಿಷ್ಠಾನ ನಿಗಮದ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸುತ್ತಿದೆ. ಬಡತನ, ಸಂಕಷ್ಟ, ಶಿಕ್ಷಣದ ಉನ್ನತೀಕರಣ, ವೈದ್ಯಕೀಯ ನೆರವು ಅಥವಾ ಸಾರ್ವಜನಿಕ ಬಳಕೆಯ ಯಾವುದೇ ವಿಷಯದ ಕುರಿತು ಇದು ಗಮನ ಹರಿಸುತ್ತಿದೆ. 543 ಯೋಜನೆಗಳ ಮೂಲಕ ವಿವಿಧ ಉದ್ದೇಸಗಳಿಗೆ ಸೇವೆ ಸಲ್ಲಿಸುತ್ತಿರುವ ಎನ್‌ಜಿಒಗಳಿಗೆ ಪ್ರತಿಷ್ಠಾನ ಬೆಂಬಲ ನೀಡುತ್ತಿದೆ.

English summary
Life Insurance Corporation has completes 64 and enters 65th year of its existence. Here is a small glance on India's leading Life Insurance Company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X