ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ

|
Google Oneindia Kannada News

ಮಹಾರಾಷ್ಟ್ರ ರಾಜ್ಯದ ಒಂದು ಲೋಕಸಭಾ ಕ್ಷೇತ್ರ ಲಾಥೂರ್. ತೀವ್ರ ಬರಪೀಡಿತವಾದ ಜಿಲ್ಲೆಗೆ ಮಹಾರಾಷ್ಟ್ರ ಸರ್ಕಾರ ರೈಲ್ವೆ ಇಲಾಖೆಯ ಸಹಕಾರದ ಮೂಲಕ ಕುಡಿಯುವ ನೀರನ್ನು ರೈಲಿನ ಮೂಲಕ ಪೂರೈಕೆ ಮಾಡಿತ್ತು. ಆಗ ದೇಶದ ಮಟ್ಟದಲ್ಲಿ ಲಾಥೂರ್ ಗಮನ ಸೆಳೆದಿತ್ತು.

ರಾಷ್ಟ್ರಕೂಟರ ಇತಿಹಾಸವನ್ನು ತಿಳಿಯುವಾಗ ಲಾಥೂರ್ ಅನ್ನು ಮರೆಯುವಂತಿಲ್ಲ. ಲಟ್ಟಲೂರು ಎಂಬುದು ಲಾಥೂರ್ ಹಳೆಯ ಹೆಸರು. ರಾಷ್ಟ್ರಕೂಟರ ಮೊದಲ ದೊರೆ ದಂತಿದುರ್ಗ ಲಾಥೂರ್‌ಗೆ ಸೇರಿದವನು ಎನ್ನುತ್ತದೆ ಇತಿಹಾಸ.

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ

ಅಮೋಘವರ್ಷ ಲಾಥೂರ್‌ ಅನ್ನು ಅಭಿವೃದ್ಧಿ ಮಾಡಿದನು. ಕರ್ನಾಟಕದ ಬಾದಾಮಿಯನ್ನು ಆಳಿದ ಚಾಲುಕ್ಯರು ಸಹ ತಾವು ಲಾಥೂರ್ ಮೂಲದವರು ಎಂದು ಹೇಳಿಕೊಳ್ಳುತ್ತಾರೆ. ಮಂಜಿರಾ ನದಿಯಿಂದ ಲಾಥೂರ್‌ಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ. ಆದರೆ, ಬರಗಾಲದ ಸಂದರ್ಭದಲ್ಲಿ ನದಿ ಬತ್ತಿಹೋಗುತ್ತದೆ.

Latur Lok Sabha constituency profile

1993ರ ಸೆಪ್ಟೆಂಬರ್‌ನಲ್ಲಿ ಲಾಥೂರ್‌ನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ಸುಮಾರು 6.3 ತೀವ್ರತೆಯ ಕಂಪನದಿಂದ 10 ಸಾವಿರ ಜನರು ಮೃತಪಟ್ಟಿದ್ದರು. 30 ಸಾವಿರ ಜನರು ಗಾಯಗೊಂಡಿದ್ದರು. ಕೋಟ್ಯಾಂತರ ರೂಪಾಯಿ ನಷ್ಟವಾಗಿತ್ತು.

ಶಿರಡಿ ಲೋಕಸಭಾ ಕ್ಷೇತ್ರದ ಪರಿಚಯ ಶಿರಡಿ ಲೋಕಸಭಾ ಕ್ಷೇತ್ರದ ಪರಿಚಯ

ಲಾಥೂರ್‌ನ ಒಟ್ಟು ಜನಸಂಖ್ಯೆ 24,40,559. ಇವರಲ್ಲಿ ಶೇ 73.87ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ, ಶೇ 26.13ರಷ್ಟು ಜನರು ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಶೇ 19.90 ಎಸ್‌ಸಿ, 2.27ರಷ್ಟು ಎಸ್‌ಟಿ ಸಮುದಾಯದ ಜನರಿದ್ದಾರೆ.

Latur Lok Sabha constituency profile

ಮೀರಜ್‌ನಿಂದ ಲಾಥೂರ್‌ಗೆ 10 ಟ್ಯಾಂಕ್‌ಗಳ 'ಜಲದೂತ್' ಮೂಲಕ 5 ಲಕ್ಷ ಲೀಟರ್ ನೀರನ್ನು ಮೊದಲು ಪೂರೈಸಲಾಗಿತ್ತು. ಬಳಿಕ ರಾಜಸ್ಥಾನದ ಕೋಟಾದಿಂದ 50 ಟ್ಯಾಂಕ್‌ನ ರೈಲಿನಲ್ಲಿ 25 ಲಕ್ಷ ಲೀಟರ್ ನೀರನ್ನು ಸರಬರಾಜು ಮಾಡಲಾಗಿತ್ತು.

ದೇಶದ ಅತಿ ಚಿಕ್ಕ ಲೋಕಸಭಾ ಕ್ಷೇತ್ರ ಚೆನ್ನೈ ಸೆಂಟ್ರಲ್ ಪರಿಚಯ ದೇಶದ ಅತಿ ಚಿಕ್ಕ ಲೋಕಸಭಾ ಕ್ಷೇತ್ರ ಚೆನ್ನೈ ಸೆಂಟ್ರಲ್ ಪರಿಚಯ

ರೈಲಿನ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಿದಾಗ ಲಾಥೂರ್ ದೇಶದ ಗಮನ ಸೆಳೆದಿತ್ತು. ಲಾಥೂರ್‌ ಸಕ್ಕರೆ ಕಾರ್ಖನೆಗಳಿಗೂ ಪ್ರಸಿದ್ಧಿಪಡೆದಿದೆ. ಹಲವು ಸಕ್ಕರೆ ಕಾರ್ಖನೆಗಳು ಇಲ್ಲಿದ್ದು, ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತವೆ.

Latur Lok Sabha constituency profile

ಹಲವಾರು ಪ್ರವಾಸಿ ತಾಣಗಳನ್ನು ಹೊಂದಿರುವ ಲಾಥೂರ್‌ ರಸ್ತೆ ಮಾರ್ಗದ ಮೂಲಕ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ರೈಲು ಮತ್ತು ವಿಮಾನ ನಿಲ್ದಾಣಗಳು ಇಲ್ಲಿವೆ. ವಿಲಾಸ್‌ರಾವ್ ದೇಶ್‌ಮುಖ್ ಪುತ್ರ ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಲಾಥೂರ್‌ನವರು.

ಲಾಥೂರ್‌ ಕ್ಷೇತ್ರದ ಸಂಸದ ಬಿಜೆಪಿಯ ಡಾ.ಸುನೀಲ್ ಬಿ.ಗಾಯಕ್‌ವಾಡ್. 2014ರ ಚುನಾವಣೆಯಲ್ಲಿ ಅವರು 6,16,509 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸುನೀಲ್ ಎದುರಾಳಿಯಾಗಿದ್ದ ಬಿ.ದತ್ತಾತ್ರೇಯ ಗುಂಡೇರಾವ್ 3,63,114 ಮತಗಳನ್ನು ಪಡೆದಿದ್ದರು.

Latur Lok Sabha constituency profile

ಲಾಥೂರ್ ಕ್ಷೇತ್ರದ ಒಟ್ಟು ಮತದಾರರು 16,82,607. ಇವರಲ್ಲಿ 8,97,919 ಪುರುಷರು, 7,84,688 ಮಹಿಳಯೆರು. 2014ರ ಚುನಾವಣೆಯಲ್ಲಿ 10,57,156 ಜನರು ಮತದಾನ ಮಾಡಿದ್ದು ಶೇ 63ರಷ್ಟು ಮತದಾನವಾಗಿತ್ತು.

ಲಾಥೂರ್ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. 1962ರ ಬಳಿಕ ಕಾಂಗ್ರೆಸ್‌ 11 ಬಾರಿ ಕ್ಷೇತ್ರದಲ್ಲಿ ಜಯಗಳಿಸಿದೆ. ಬಿಜೆಪಿ 2 ಬಾರಿ ಗೆಲುವು ಸಾಧಿಸಿದೆ. ಹಾಲಿ ಸಂಸದ ಡಾ.ಸುನೀಲ್ ಬಿ.ಗಾಯಕ್‌ವಾಡ್ ಸಂಸತ್‌ನಲ್ಲಿ ಶೇ 97ರಷ್ಟು ಹಾಜರಾತಿ ಹೊಂದಿದ್ದಾರೆ. 40 ಚರ್ಚೆಗಳಲ್ಲಿ ಪಾಲ್ಗೊಂಡಿದ್ದು,640 ಪ್ರಶ್ನೆಗಳನ್ನು ಕೇಳಿದ್ದಾರೆ.

English summary
Latur Lok Sabha constituency is one of the 48 Lok Sabha constituencies of Maharashtra state. Latur one of the 256 drought hit districts of India. Maharashtra govt delivered drinking water to Latur by train
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X