ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ 2021ರ ಕೊನೆಯ ಸೂರ್ಯಗ್ರಹಣ: ಎಷ್ಟು ಗಂಟೆಗೆ, ಹೇಗೆ ನೋಡುವುದು? ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಡಿಸೆಂಬರ್‌ 03: ಈ ವರ್ಷದ ಎರಡನೇ ಸೂರ್ಯ ಗ್ರಹಣ ಹಾಗೂ ವರ್ಷದ ಕೊನೆಯ ಸೂರ್ಯ ಗ್ರಹಣವು ಶನಿವಾರ, ಡಿಸೆಂಬರ್‌ 4 ರಂದು ಸಂಭವಿಸಲಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಸೂರ್ಯಗ್ರಹಣವು ಇರಲಿದೆ.

ಅಮಾವಾಸ್ಯೆಯ ದಿನ ಸೂರ್ಯ ಹಾಗೂ ಭೂಮಿಯ ಮಧ್ಯೆ ಚಂದ್ರ ಆಗಮಿಸಿದ ಸಂದರ್ಭದಲ್ಲಿ ಸೂರ್ಯ ಗ್ರಹಣವು ಸಂಭವಿಸುತ್ತದೆ. ಈ ಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಗೋಚರ ಆಗಲಿದೆ.

ಡಿ. 4 ಖಗ್ರಾಸ ಸೂರ್ಯ ಗ್ರಹಣದ ಭವಿಷ್ಯ ಫಲ: ವಕ್ರ ದೃಷ್ಟಿಯ ಸರಮಾಲೆಡಿ. 4 ಖಗ್ರಾಸ ಸೂರ್ಯ ಗ್ರಹಣದ ಭವಿಷ್ಯ ಫಲ: ವಕ್ರ ದೃಷ್ಟಿಯ ಸರಮಾಲೆ

ಸಂಪೂರ್ಣವಾಗಿ ಸೂರ್ಯಗ್ರಹಣವು ಆದ ಸಂದರ್ಭದಲ್ಲಿ ಸೂರ್ಯನ ಮೇಲ್ಮೈ ಸಂಪೂರ್ಣವಾಗಿ ಚಂದ್ರನಿಂದ ಮುಚ್ಚಲ್ಪಡುತ್ತದೆ. ಆದರೂ ಭಾಗಶಃ ಮತ್ತು ವಾರ್ಷಿಕ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗ ಮಾತ್ರ ಅಸ್ಪಷ್ಟಗೊಳ್ಳಲಿದೆ. ಭೂಮಿಯ ಮೇಲ್ಮೈಯಲ್ಲಿ ಸೂರ್ಯಗ್ರಹಣದ ಹಾದಿಯಲ್ಲಿ ಪತ್ತೆ ಹಚ್ಚುವ ನಕ್ಷೆಯನ್ನು ನಾಸಾ ಬಿಡುಗಡೆ ಮಾಡಿದೆ. ನಾಸಾ ಪ್ರಕಾರ "ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಚಲಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಭೂಮಿಯ ಮೇಲೆ ನೆರಳು ಬೀಳುತ್ತದೆ, ಕೆಲವು ಪ್ರದೇಶಗಳಲ್ಲಿ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿಹೋಗುತ್ತದೆ. ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲು, ಸೂರ್ಯ, ಚಂದ್ರ, ಮತ್ತು ಭೂಮಿಯು ನೇರ ಸಾಲಿನಲ್ಲಿರಬೇಕು."

 ಭಾರತದಲ್ಲಿ ಈ ಸೂರ್ಯಗ್ರಹಣ ಕಾಣಲಿದೆಯೇ?

ಭಾರತದಲ್ಲಿ ಈ ಸೂರ್ಯಗ್ರಹಣ ಕಾಣಲಿದೆಯೇ?

ನಾಸಾವು ಭೂಮಿಯ ಮೇಲ್ಮೈಯಲ್ಲಿ ಸೂರ್ಯಗ್ರಹಣದ ಹಾದಿಯಲ್ಲಿ ಪತ್ತೆ ಹಚ್ಚುವ ನಕ್ಷೆಯನ್ನು ಬಿಡುಗಡೆ ಮಾಡಿದೆ. ಈ ನಾಸಾದ ನಕ್ಷೆಯ ಪ್ರಕಾರ ಡಿಸೆಂಬರ್‌ 4 ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಹಿಂದಿನ 2021 ರ ಕೊನೆಯ ಸೂರ್ಯಗ್ರಹಣವು ಈ ಮೊದಲು ಅಂದರೆ ಇದೇ ವರ್ಷ ಜೂನ್​ 10 ರಂದು ಸಂಭವಿಸಿದ ಮಾದರಿಯಲ್ಲಿಯೇ ಇರಲಿದೆ.

 ಹಾಗಾದರೆ ಎಲ್ಲೆಲ್ಲಾ ಸೂರ್ಯಗ್ರಹಣ ಗೋಚರಿಸಲಿದೆ?

ಹಾಗಾದರೆ ಎಲ್ಲೆಲ್ಲಾ ಸೂರ್ಯಗ್ರಹಣ ಗೋಚರಿಸಲಿದೆ?

ಶನಿವಾರ, ಡಿಸೆಂಬರ್‌ 4 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಮುಖ್ಯವಾಗಿ ಈ ಸೂರ್ಯಗ್ರಹಣವು ದಕ್ಷಿಣ ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾದಲ್ಲಿ ಕಾಣಿಸಿಕೊಳ್ಳಲಿದೆ.

Surya Grahan 2021 Effects : ವರ್ಷದ ಕೊನೆಯ ಸೂರ್ಯಗ್ರಹಣ, ಯಾರ ಮೇಲೆ ಯಾವ ಪರಿಣಾಮ?Surya Grahan 2021 Effects : ವರ್ಷದ ಕೊನೆಯ ಸೂರ್ಯಗ್ರಹಣ, ಯಾರ ಮೇಲೆ ಯಾವ ಪರಿಣಾಮ?

 ಸೌರ ಗ್ರಹಣ 2021 ಸಮಯ

ಸೌರ ಗ್ರಹಣ 2021 ಸಮಯ

ಶನಿವಾರ, ಡಿಸೆಂಬರ್ 4 ರಂದು, ಈ ವರ್ಷದ ಕೊನೆಯ ಸೂರ್ಯ ಗ್ರಹಣವು 10:59 ಕ್ಕೆ ಪ್ರಾರಂಭವಾಗುತ್ತದೆ. ಸಂಪೂರ್ಣ ಗ್ರಹಣವು ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ಗ್ರಹಣವು ಮಧ್ಯಾಹ್ನ 1:03 ಕ್ಕೆ ಸಂಭವಿಸುತ್ತದೆ. ಅಂತಿಮವಾಗಿ 3.07ಕ್ಕೆ ಮುಕ್ತಾಯವಾಗುತ್ತದೆ. ಗ್ರಹಣದ ಅವಧಿ 4 ತಾಸು 8 ನಿಮಿಷಗಳವರೆಗೆ ಇರುತ್ತದೆ.

 2021 ರ ಸೂರ್ಯಗ್ರಹಣವನ್ನು ಎಲ್ಲಿ ಮತ್ತು ಹೇಗೆ ವೀಕ್ಷಿಸುವುದು?

2021 ರ ಸೂರ್ಯಗ್ರಹಣವನ್ನು ಎಲ್ಲಿ ಮತ್ತು ಹೇಗೆ ವೀಕ್ಷಿಸುವುದು?

ಭಾರತದಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣವು ಕಾಣಸಿಗುವುದಿಲ್ಲ. ಆದರೆ ನಾವು Timeanddate.com ವೆಬ್​ಸೈಟ್ ಮೂಲಕ ಡಿಸೆಂಬರ್ 4 ರ ಸೂರ್ಯಗ್ರಹಣವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ ನಾಸಾವು ಈ ಸೂರ್ಯಗ್ರಹಣದ ನೇರ ಪ್ರಸಾರವನ್ನು ಮಾಡಲಿದೆ. ನಾಸಾದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ. ಇನ್ನು ಗ್ರಹಣ ಸಂದರ್ಭದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು. ಅತೀ ಕಡಿಮೆ ಅವಧಿಯಾದರೂ ನಾವು ಬರೀ ಗಣ್ಣಿನಿಂದ ನೋಡಬಾರದು. ಇದರಿಂದಾಗಿ ನಮ್ಮ ಕಣ್ಣಿಗೆ ಹಾನಿ ಉಂಟಾಗುವ ಸಾಧ್ಯತೆಗಳು ಇದೆ.

 ಸೂರ್ಯಗ್ರಹಣ ವೇಳೆ ಏನೆಲ್ಲಾ ಮಾಡಬಹುದು ಹಾಗೂ ಮಾಡಬಾರದು?

ಸೂರ್ಯಗ್ರಹಣ ವೇಳೆ ಏನೆಲ್ಲಾ ಮಾಡಬಹುದು ಹಾಗೂ ಮಾಡಬಾರದು?

ಹಿಂದೂ ಧರ್ಮದ ಪ್ರಕಾರ, ಜನರು ಸೂರ್ಯಗ್ರಹಣದ ಸಮಯದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕು. ಅನೇಕ ಜನರು ಗ್ರಹಣದ ಸಮಯದಲ್ಲಿ ಚೂಪಾದ ವಸ್ತುವನ್ನು ಬಳಸುವುದಿಲ್ಲ. ಹಾಗೆಯೇ ಗ್ರಹಣದ ಸಂದರ್ಭದಲ್ಲಿ ಯಾವುದೇ ಆಹಾರವನ್ನು ಸೇವನೆ ಮಾಡುವುದಿಲ್ಲ. ಆದರೆ, ಗ್ರಹಣಕ್ಕೆ ಕನಿಷ್ಠ ಎರಡು ತಾಸುಗಳ ಮೊದಲೇ ಆಹಾರವನ್ನು ಸೇವನೆ ಮಾಡಿರುತ್ತಾರೆ. ಇನ್ನು ಮುಖ್ಯವಾಗಿ ಸೂರ್ಯಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗದಂತೆ ಸಲಹೆ ನೀಡಲಾಗುತ್ತದೆ. ಇದು ಸೂತಕದ ಅವಧಿ ಎಂದು ಕೂಡಾ ಪರಿಗಣಿಸಲಾಗುತ್ತದೆ. ಗರ್ಭಿಣಿಯರು ಮನೆಯಿಂದ ಹೊರಗೆ ಹೋಗದಿದ್ದರೆ ಸೂರ್ಯನ ಹಾನಿಕಾರಕ ಕಿರಣಗಳು ಮಹಿಳೆ ಮತ್ತು ಭ್ರೂಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆ ಇದೆ. ಹಾಗೆಯೇ ಗ್ರಹಣದ ಸಮಯದಲ್ಲಿ ಸೂರ್ಯನನ್ನು ನೇರವಾಗಿ ನೋಡ ಬಾರದು ಎಂಬ ನಂಬಿಕೆ ಇದೆ. ವೈಜ್ಞಾನಿಕವಾಗಿ ಗ್ರಹಣದ ಸಂದರ್ಭದಲ್ಲಿ ಸೂರ್ಯನ ಕಿರಣವು ಕಣ್ಣಿಗೆ ಹಾನಿ ಉಂಟು ಮಾಡುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕವಾಗಿ ಒಳ್ಳೆಯ ಶಕುನ ಅಲ್ಲ ಎಂಬ ನಂಬಿಕೆ ಇದೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯನ ಕಿರಣಗಳ ತೀವ್ರತೆಯು ಕಣ್ಣಿನಲ್ಲಿರುವ ಜೀವಕೋಶಗಳಿಗೆ ಹಾನಿಯನ್ನುಂಟುಮಾಡುತ್ತದೆ. ಇದರಿಂದಾಗಿ ರೆಟಿನಾ ಸುಡುತ್ತದೆ. ಇನ್ನು ಹಿಂದೂ ಧರ್ಮದ ಪ್ರಕಾರ ಗ್ರಹಣದ ಸಮಯದಲ್ಲಿ ಸ್ನಾನ ಮಾಡಬಾರದು. ಆದರೆ ಗ್ರಹಣ ಮುಗಿದ ಕೂಡಲೇ ಸ್ನಾನ ಮಾಡಿ ಶುಚಿಗೊಳ್ಳಬೇಕು.

(ಒನ್‌ಇಂಡಿಯಾ ಸುದ್ದಿ)

English summary
Last Surya Grahan of this year on December 4, check India timings, where and how to watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X