• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಸರ್ಗದ ರಹಸ್ಯ: ಈ ಕೆರೆಯಲ್ಲಿ ಬಿದ್ದ ತಕ್ಷಣ ಕಲ್ಲಾಗುವ ಮನುಷ್ಯ

|
Google Oneindia Kannada News

ಪ್ರಕೃತಿ ಹಲವು ರಹಸ್ಯಗಳನ್ನು ಹೊಂದಿದೆ. ನೀವು ಅನೇಕ ಸರೋವರಗಳನ್ನು ನೋಡಿರಬಹುದು. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಒಂದು ವಿಶೇಷ ಸರೋವರದ ಬಗ್ಗೆ. ಇದರಲ್ಲಿ ಮನುಷ್ಯರು ಅಥವಾ ಪ್ರಾಣಿಗಳು ಬಿದ್ದರೆ ಕಲ್ಲಿನಂತೆ ಗಟ್ಟಿಯಾಗುತ್ತವೆ. ಇದು ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸಂಪೂರ್ಣ ಸತ್ಯ.

ತಾಂಜಾನಿಯಾದ ನ್ಯಾಟ್ರಾನ್ ಸರೋವರ ಆಫ್ರಿಕಾದ ಅತ್ಯಂತ ಪ್ರಶಾಂತವಾದ ಸರೋವರಗಳಲ್ಲಿ ಒಂದಾಗಿದೆ. ಈ ಸರೋವರ ತಾಂಜಾನಿಯಾದ ಅರುಷಾ ಪ್ರದೇಶದ ಉತ್ತರ ನ್ಗೊರೊಂಗೊರೊ ಜಿಲ್ಲೆಯಲ್ಲಿದೆ. ಯಾವುದೇ ಸಾಮಾನ್ಯ ಜೀವಿ ಅದರಲ್ಲಿ ಇಳಿದರೆ, ಅದು ಕಲ್ಲಾಗಿ ಮಾರ್ಪಡುತ್ತದೆ. ಹೀಗಾಗಿ ಈ ಸರೋವರದ ಸುತ್ತ ವಾಸಿಸುವ ಯಾವುದೇ ಪ್ರಾಣಿ ಹೆಚ್ಚು ಕಾಲ ಬದುಕುಳಿಯುವುದಿಲ್ಲ. ಈ ಪ್ರದೇಶದಲ್ಲಿ ಫ್ಲೆಮಿಂಗೊ ​​ಹೆಸರಿನ ಸಾಕಷ್ಟು ಪಕ್ಷಿಗಳಿವೆ. ಅವುಗಳಲ್ಲಿ ಬಹುತೇಕ ಹಕ್ಕಿಗಳು ಕಲ್ಲಿನಾಕಾರಕ್ಕೆ ತಿರುಗಿರುವುದು ಕಂಡುಬಂದಿದೆ.

ನ್ಯಾಟ್ರಾನ್ ಸರೋವರದಲ್ಲಿನ ಕ್ಷಾರೀಯ ನೀರು 10.5 ಕ್ಕಿಂತ ಹೆಚ್ಚು pH ಅನ್ನು ಹೊಂದಿದೆ ಮತ್ತು ಇದು ಕಾಸ್ಟಿಕ್ ಆಗಿದ್ದು ಇದಕ್ಕೆ ಹೊಂದಿಕೊಳ್ಳದ ಪ್ರಾಣಿಗಳನ್ನು ಸುಡುತ್ತದೆ. ಸುತ್ತಮುತ್ತಲಿನ ಬೆಟ್ಟಗಳಿಂದ ಸರೋವರಕ್ಕೆ ಹರಿಯುವ ಸೋಡಿಯಂ ಕಾರ್ಬೋನೇಟ್ ಮತ್ತು ಇತರ ಖನಿಜಗಳು ನೀರನ್ನು ಮಾರ್ಪಡಿಸುತ್ತದೆ.

ಸರೋವರದ ರಹಸ್ಯವೇನು?

ಸರೋವರದ ರಹಸ್ಯವೇನು?

ಅಂದಹಾಗೆ ಈ ನಿಗೂಢ ಸರೋವರದ ರಹಸ್ಯವನ್ನು ದಶಕಗಳ ಹಿಂದೆ ವಿಜ್ಞಾನಿಗಳು ಪರಿಹರಿಸಿದ್ದಾರೆ. ಅವರ ಪ್ರಕಾರ, ಇದರ ನೀರು ತುಂಬಾ ಕ್ಷಾರೀಯವಾಗಿದೆ. ಇದಕ್ಕೆ ಕಾರಣ ಸರೋವರದಷ್ಟೇ ನಿಗೂಢವಾಗಿರುವ ಓಲ್ ಡೊನಿಯೊ ಲೆಂಗೈ ಜ್ವಾಲಾಮುಖಿ. ವಿಚಿತ್ರವಾದ ಲಾವಾ ಇದರಿಂದ ಹೊರಬರುತ್ತದೆ. ಇದನ್ನು ನ್ಯಾಟ್ರೋಕಾರ್ಬೊನಾಟೈಟ್ ಎಂದು ಕರೆಯಲಾಗುತ್ತದೆ. ಅದೇ ವೇಳೆಗೆ ಕೆರೆಯ ಸುತ್ತಲಿನ ಬೆಟ್ಟಗಳಲ್ಲಿ ಸೋಡಿಯಂ ಕಾರ್ಬೋನೇಟ್ ಮತ್ತಿತರ ಖನಿಜಾಂಶಗಳು ಬಂದು ಸೇರಿದ್ದವು. ಇದರಿಂದಾಗಿ ನೀರು ಕ್ಷಾರೀಯವಾಗಿ ಮಾರ್ಪಟ್ಟಿದೆ.

ಇದರ ಹಿಂದಿನ ಕಾರಣವೇನು?

ಇದರ ಹಿಂದಿನ ಕಾರಣವೇನು?

ವಿಜ್ಞಾನಿಗಳ ಪ್ರಕಾರ, ಸರೋವರದ ನೀರಿನ ಪಿಹೆಚ್ ಮಟ್ಟವು ತುಂಬಾ ಹೆಚ್ಚಾಗಿದೆ. ಇದರಿಂದ ಯಾವುದೇ ಮನುಷ್ಯ ಅಥವಾ ಪ್ರಾಣಿ ಅದರೊಳಗೆ ಹೋದರೆ, ಅವನ ದೇಹವು ಸುಡಲು ಪ್ರಾರಂಭಿಸುತ್ತದೆ ಮತ್ತು ನಂತರ ಅವನು ಸಾಯುತ್ತಾನೆ. ಫ್ಲೆಮಿಂಗೊ ಚರ್ಮವು ಕಠಿಣ ಮತ್ತು ಚಿಪ್ಪುಗಳುಳ್ಳದ್ದಾಗಿದೆ. ಇದರಿಂದಾಗಿ ಈ ನೀರಿನ ಪರಿಣಾಮವು ಅದರ ಮೇಲೆ ಬೀರುವುದಿಲ್ಲ. ಆದರೆ ಮೃದು ಚರ್ಮದ ಮಾನವರಿಗೆ ಇದು ಸಾಕಷ್ಟು ಮಾರಕವಾಗಿದೆ. ಅಂದಹಾಗೆ ಮಳೆಯಿಂದಾಗಿ ಈ ನೀರಿನ pH ಮಟ್ಟವು ಬದಲಾಗುತ್ತಲೇ ಇರುತ್ತದೆ.

ಸುಳ್ಳು ಸುದ್ದಿಯೇ?

ಸುಳ್ಳು ಸುದ್ದಿಯೇ?

ಕೆಲವು ಮಾಧ್ಯಮ ವರದಿಗಳ ಹೊರತಾಗಿಯೂ, ಸರೋವರದ ನೀರಿನ ಸಂಪರ್ಕಕ್ಕೆ ಬಂದ ನಂತರ ಪ್ರಾಣಿ ಕೇವಲ ಕಲ್ಲಾಗಿ ಬದಲಾಗಲಿಲ್ಲ ಮತ್ತು ಸಾಯಲಿಲ್ಲ. ಹೀಗಾಗಿ ಇದೊಂದು ಸುಳ್ಳು ಸುದ್ದಿ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಇದಕ್ಕೂ ಉತ್ತರ ಸಿಕ್ಕಿದೆ. ಸರೋವರದಲ್ಲಿ ಬಿದ್ದ ಎಲ್ಲಾ ಪಕ್ಷಿಗಳು ಕಲ್ಲಾಗಿ ಬದಲಾಗುವುದಿಲ್ಲ. ಇದಕ್ಕೆ ಕಾರಣವನ್ನೂ ಕಂಡುಹಿಡಿಯಲಾಗಿದೆ.

ಮೃತ ದೇಹಗಳು ಕಲ್ಲಿನಂತೆ ಏಕೆ ಕಾಣುತ್ತವೆ?

ಮೃತ ದೇಹಗಳು ಕಲ್ಲಿನಂತೆ ಏಕೆ ಕಾಣುತ್ತವೆ?

ಈ ಸರೋವರದಲ್ಲಿ ಹಲವು ಪ್ರಾಣಿಗಳ ಮೃತದೇಹಗಳು ಬಿದ್ದಿವೆ. ವಿಜ್ಞಾನಿಗಳ ಪ್ರಕಾರ, ದೇಹವು ಈ ನೀರಿನಲ್ಲಿ ಕೊಳೆಯುವುದಿಲ್ಲ, ಆದ್ದರಿಂದ ಅದರಲ್ಲಿ ಬೀಳುವ ಪ್ರಾಣಿಗಳು ಮತ್ತು ಮನುಷ್ಯರ ದೇಹವು ಕಲ್ಲಿನ ಆಕಾರಕ್ಕೆ ತಿರುಗುತ್ತವೆ. ದೇಹದ ನೀರು ಮತ್ತು ರಕ್ತ ಬತ್ತಿ ಹೋಗಿರುವುದರಿಂದ ಅವನು ದುರ್ಬಲನಾಗುತ್ತಾನೆ. ಈ ಕಾರಣದಿಂದ ದೂರದಿಂದ ನೋಡಿದಾಗ ಇದು ಕಲ್ಲಿನಿಂದ ಮಾಡಲ್ಪಟ್ಟಿದೆ ಎಂದು ತೋರುತ್ತದೆ.

English summary
If man and Birds fall in Africa's Natron Lake they will converted in to stone. Learn about this secret lake. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X