ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲ್ ರೆಕಾರ್ಡರ್ ಆ್ಯಪ್ಸ್‌ಗೆ ನಿಷೇಧ, ಗೂಗಲ್‌ನಿಂದ ಏಕೀ ವಿರೋಧ?

|
Google Oneindia Kannada News

ಬೆಂಗಳೂರು, ಏ. 25: ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಮೇ 12ರಿಂದ ಕಾಲ್ ರೆಕಾರ್ಡಿಂಗ್ ಆ್ಯಪ್‌ಗಳನ್ನು (Call Recording Apps) ಇಟ್ಟುಕೊಳ್ಳುವುದು ಕಷ್ಟ. ಥರ್ಡ್ ಪಾರ್ಟಿ ಕಾಲ್ ರೆಕಾರ್ಡಿಂಗ್ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಲಭ್ಯ ಇರೋದಿಲ್ಲ. ಗೂಗಲ್ ಸಂಸ್ಥೆ ಇಂಥ ಆ್ಯಪ್‌ಗಳನ್ನು ನಿಷೇಧಿಸುತ್ತಿದೆ.

ಆಂಡ್ರಾಯ್ಡ್ ತಂತ್ರಾಂಶ (Android Software) ದಲ್ಲಿರುವ ಅಕ್ಸೆಸಿಬಿಲಿಟಿ ಎಪಿಐ (Accessibility API) ಅನ್ನು ಕಾಲ್ ರೆಕಾರ್ಡಿಂಗ್ ಉದ್ದೇಶಕ್ಕೆ ಬಳಸಲು ಯಾವುದೇ ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ಗೂಗಲ್ ಅನುಮತಿ ನಿರಾಕರಿಸುತ್ತಿದೆ. ಅಂದರೆ ಥರ್ಡ್ ಪಾರ್ಟಿ ಆ್ಯಪ್‌ಗಳು ಗೂಗಲ್‌ನ ಅಕ್ಸೆಸಿಬಿಲಿಟಿ ಎಪಿಐ ಸೌಲಭ್ಯವನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಬಹುತೇಕ ಕಾಲ್ ರೆಕಾರ್ಡ್ ಆ್ಯಪ್‌ಗಳು ಗೂಗಲ್‌ನ ಈ ಫೀಚರ್ ಅನ್ನು ಬಳಸಿಕೊಂಡು ಕಾಲ್ ರೆಕಾರ್ಡ್ ಮಾಡುತ್ತಿದ್ದವು. ಈಗ ಗೂಗಲ್ ಇದಕ್ಕೆಲ್ಲಾ ಕೊಕ್ಕೆ ಹಾಕಿದ್ದು, ಇನ್ಮುಂದೆ ಕಾಲ್ ರೆಕಾರ್ಡಿಂಗ್ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಿಸ್ಟ್ ಕೂಡ ಆಗುವುದಿಲ್ಲ.

ಜಿಮೇಲ್ ಸ್ಟೋರೆಜ್ ಫುಲ್‌ ಆಗಿದೆಯೇ?, ಮೇಲ್ ಕ್ಲಿಯರ್ ಮಾಡಲು ಸರಳ ವಿಧಾನ ಇಲ್ಲಿದೆಜಿಮೇಲ್ ಸ್ಟೋರೆಜ್ ಫುಲ್‌ ಆಗಿದೆಯೇ?, ಮೇಲ್ ಕ್ಲಿಯರ್ ಮಾಡಲು ಸರಳ ವಿಧಾನ ಇಲ್ಲಿದೆ

ಗೂಗಲ್ ಯಾಕೆ ನಿಷೇಧಿಸಿದೆ?

ಗೂಗಲ್ ಯಾಕೆ ನಿಷೇಧಿಸಿದೆ?

ಆಂಡ್ರಾಯ್ಡ್ ಫೋನ್ ಬಳಕೆದಾರರ ಖಾಸಗಿತ್ವ ಮತ್ತು ಭದ್ರತೆ ಕಾಪಾಡುವ ದೃಷ್ಟಿಯಿಂದ ಗೂಗಲ್ ಇಂಥ ಥರ್ಡ್ ಪಾರ್ಟಿ ಕಾಲ್ ರೆಕಾರ್ಡಿಂಗ್ ಆ್ಯಪ್‌ಗಳನ್ನು ನಿಷೇಧಿಸಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಕಾಲ್ ರೆಕಾರ್ಡಿಂಗ್ ವಿಚಾರದಲ್ಲಿ ವಿವಿಧ ದೇಶಗಳಲ್ಲಿ ವಿವಿಧ ರೀತಿಯ ನಿಯಮಗಳು ಮತ್ತು ಕಾನೂನುಗಳು ಇವೆ. ಆಂಡ್ರಾಯ್ಡ್‌ನಲ್ಲಿರುವ ಅಕ್ಸೆಸಿಬಿಲಿಟಿ ಎಪಿಐ ಫೀಚರ್ ಅನ್ನು ಬಳಸಿಕೊಂಡು ಕಾಲ್ ರೆಕಾರ್ಡಿಂಗ್ ಸೇವೆ ನೀಡುವ ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ಕಡಿವಾಣ ಹಾಕುವುದೊಂದೇ ಗೂಗಲ್ ಬಳಿ ಉಳಿದಿರುವ ಒಂದೇ ಮಾರ್ಗವೆನ್ನಲಾಗಿದೆ.

ಫೋನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಅವಕಾಶವೇ ಇರುವುದಿಲ್ಲವಾ?

ಫೋನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಅವಕಾಶವೇ ಇರುವುದಿಲ್ಲವಾ?

ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾರಾಟಪೂರ್ವದಲ್ಲೇ ಕೆಲ ಆ್ಯಪ್‌ಗಳನ್ನು ಅಳವಡಿಸಲಾಗಿರುತ್ತದೆ (Pre-installed Apps). ಇಂಥವಲ್ಲಿ ಗೂಗಲ್‌ನ ಫೋನ್ ಆ್ಯಪ್ ಕೂಡ ಒಂದು. ಇಂಥ ಪ್ರೀ-ಇನ್‌ಸ್ಟಾಲ್ಡ್ ಆ್ಯಪ್‌ಗಳು ಫಸ್ಟ್ ಪಾರ್ಟಿ Appಗಳಾಗಿರುತ್ತವೆ. ಇವಕ್ಕೆ ಯಾವುದೇ ಭಂಗ ಇರುವುದಿಲ್ಲ. ಗೂಗಲ್ ನಿಷೇಧ ಜಾರಿಗೆ ಬಂದ ನಂತರವೂ ಈ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿರುತ್ತವೆ.

Google Map: ಕೆಲಸ ಮಾಡದ ಗೂಗಲ್ ನಕ್ಷೆ; ದಿಕ್ಕು ತೋಚದೇ ಜನ ಕಂಗಾಲು!Google Map: ಕೆಲಸ ಮಾಡದ ಗೂಗಲ್ ನಕ್ಷೆ; ದಿಕ್ಕು ತೋಚದೇ ಜನ ಕಂಗಾಲು!

ಏನಿದು ಅಕ್ಸೆಸಿಬಿಲಿಟಿ ಎಪಿಐ?:

ಏನಿದು ಅಕ್ಸೆಸಿಬಿಲಿಟಿ ಎಪಿಐ?:

ಎಪಿಐ ಎಂದರೆ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್ (Application Programming Interface). ಆಂಡ್ರಾಯ್ಡ್‌ನಲ್ಲಿ ಅಕ್ಸೆಸಿಬಿಲಿಟಿ ಎಪಿಐ ಎಂಬ ಫೀಚರ್ ಅನ್ನು ವಿವಿಧ ವಿಕಲಚೇತನರ ನೆರವಿಗೆಂದು ರೂಪಿಸಲಾಗಿದೆ. ಈ ಸೇವೆ ನೀಡಲು ಕಾಲ್ ರೆಕಾರ್ಡ್ ಮೊದಲಾದ ವಿಶೇಷ ಅನುಮತಿ ಇದಕ್ಕೆ ಇರುತ್ತದೆ.

ಥರ್ಡ್ ಪಾರ್ಟಿ ಕಾಲ್ ರೆಕಾರ್ಡರ್ ಆ್ಯಪ್‌ಗಳನ್ನ ಬಳಸಲು ಸಾಧ್ಯವೇ ಇಲ್ಲವಾ?

ಥರ್ಡ್ ಪಾರ್ಟಿ ಕಾಲ್ ರೆಕಾರ್ಡರ್ ಆ್ಯಪ್‌ಗಳನ್ನ ಬಳಸಲು ಸಾಧ್ಯವೇ ಇಲ್ಲವಾ?

ಗೂಗಲ್ ಬ್ಯಾನ್ ಮಾಡಿರುವ ಪರಿಣಾಮ ಅಕ್ಸೆಸಿಬಿಲಿಟಿ ಎಪಿಐ ಬಳಸುವ ಯಾವುದೇ ಥರ್ಡ್ ಪಾರ್ಟಿ ಆ್ಯಪ್‌ಗಳು ಪ್ಲೇ ಸ್ಟೋರ್‌ನಿಂದ ಡಿಲೀಟ್ ಆಗುತ್ತವೆ. ಅಂದರೆ ನೀವು ಪ್ಲೇ ಸ್ಟೋರ್‌ನಲ್ಲಿ ಕಾಲ್ ರೆಕಾರ್ಡರ್ ಆ್ಯಪ್‌ಗಳನ್ನ ಹುಡುಕಿದರೂ ಸಿಗುವುದಿಲ್ಲ. ಹಾಗಂತ ಇಂಥ ಆ್ಯಪ್‌ಗಳನ್ನ ಬಳಸಲು ಸಾಧ್ಯವೇ ಇಲ್ಲ ಎನ್ನುವಂತಿಲ್ಲ.

ಯಾಕೆಂದರೆ ಆಂಡ್ರಾಯ್ಡ್ ಎಂಬುದು ಓಪನ್ ಸೋರ್ಸ್ ಸಾಫ್ಟ್‌ವೇರ್. ಹೀಗಾಗಿ, ಥರ್ಡ್ ಪಾರ್ಟಿ ಆ್ಯಪ್‌ಗಳು ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಇನ್ಸ್‌ಟಾಲ್ ಆಗದಂತೆ ತಡೆಯಲು ಸಾಧ್ಯವಾಗುವುದಿಲ್ಲ. ಬೇರೆ ವೈಯಕ್ತಿಕ ಪ್ಲಾಟ್‌ಫಾರ್ಮ್‌ಗಳ ಮೂಲಕ ನೇರವಾಗಿ ಇಂಥ ಕಾಲ್ ರೆಕಾರ್ಡರ್ ಆ್ಯಪ್‌ಗಳನ್ನ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಥವಾ ಥರ್ಡ್ ಪಾರ್ಟಿ ಆ್ಯಪ್ ಸ್ಟೋರ್‌ಗಳ ಮೂಲಕವೂ ಇಂಥ ಆ್ಯಪ್‌ಗಳು ಲಭ್ಯ ಇದ್ದರೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈಗ ಚಾಲ್ತಿಯಲ್ಲಿರುವ ಮೊಬೈಲ್ ತಂತ್ರಾಂಶಗಳಲ್ಲಿ ಹೆಚ್ಚಿನವು ಮತ್ತು ಅತಿ ಹೆಚ್ಚು ಜನಪ್ರಿಯವಾದವೆಂದರೆ ಆಂಡ್ರಾಯ್ಡ್ ಮತ್ತು ಆ್ಯಪಲ್ ಸಾಫ್ಟ್‌ವೇರ್. ಈಗ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಇರುತ್ತದೆ. ಆದರೆ, ಈ ಆಂಡ್ರಾಯ್ಡ್ ಫೋನ್‌ಗಳಲ್ಲಿ ಬೇರೆ ಥರ್ಡ್ ಪಾರ್ಟಿ ಆ್ಯಪ್ ಸ್ಟೋರ್‌ಗಳು ಇರಬಹುದು.

(ಒನ್ಇಂಡಿಯಾ ಸುದ್ದಿ)

English summary
Google is banning all third-party call recording apps from getting listed on Play Store in a move to enhance users’ safety and privacy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X