ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ವಿದ್ಯುತ್ in ಡೇಂಜರ್; ಕರ್ನಾಟಕ ಮಾತ್ರ ಸೂಪರ್ 'ಪವರ್'- ಇದು ಹೇಗೆ?

|
Google Oneindia Kannada News

ಬೆಂಗಳೂರು, ಏ. 18: ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ಅಭಾವ ತಾಂಡವವಾಡುತ್ತಿದೆ. ಈ ಬಗ್ಗೆ ಕೆಲ ಬಾರಿ ಒನ್ಇಂಡಿಯಾದಲ್ಲಿ ವಿಶೇಷ ವರದಿಗಳನ್ನ ಪ್ರಕಟಿಸಿದ್ದೇವೆ. ಬೇಸಿಗೆ ಆರಂಭದಲ್ಲೇ ವಿದ್ಯುತ್ ಪೂರೈಕೆಯಲ್ಲಿ ವಿಪರೀತ ವ್ಯತ್ಯಯವಾಗುತ್ತಿದೆ. ದಿನಕ್ಕೆ ಕನಿಷ್ಠ ಮೂರ್ನಾಲ್ಕು ಗಂಟೆಗಳಾದರೂ ವಿದ್ಯುತ್ ಕಡಿತ ಆಗುವುದು ಸಾಮಾನ್ಯವಾಗಿದೆ. ಮುಂಬೈನಂಥ ನಗರಗಳಲ್ಲೂ ವಿದ್ಯುತ್ ಬಿಕ್ಕಟ್ಟು ಜನಸಾಮಾನ್ಯರ ಜೀವನವನ್ನು ಹೈರಾಣಗೊಳಿಸಿದೆ. ಇಲ್ಲೆಲ್ಲಾ ವಿದ್ಯುತ್ ಸಂಗ್ರಹ ಇಲ್ಲದ ಪರಿಣಾಮ ಇದು.

ಆದರೆ, ಕರ್ನಾಟಕದ ಸ್ಥಿತಿ ತುಸು ವಿಭಿನ್ನ. ಬೆಂಗಳೂರು ಮೊದಲಾದೆಡೆ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಸಾಮಾನ್ಯವಾಗಿ ನೋಡಬಹುದು. ಆದರೆ, ಪವರ್ ಕಟ್ ಇದ್ದರೂ ಕರ್ನಾಟಕದಲ್ಲಿ ಪವರ್ ಸಂಗ್ರಹ ಸಮರ್ಪಕವಾಗಿದೆ. ಇಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲು ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿಗಳು ನಡೆಯುತ್ತಿರುವುದೇ ಕಾರಣ. ಹೊರತು ವಿದ್ಯುತ್ ಅಭಾವದಿಂದ ಬೆಂಗಳೂರು ಮೊದಲಾದೆಡೆ ಪವರ್ ಕಟ್ ಆಗುತ್ತಿಲ್ಲ.

Power cut Crisis: ದೇಶಾದ್ಯಂತ ವಿದ್ಯುತ್ ಕೊರತೆ, ಪವರ್ ಕಟ್; ಕರ್ನಾಟಕದಲ್ಲೂ ಲೋಡ್ ಶೆಡ್ಡಿಂಗ್Power cut Crisis: ದೇಶಾದ್ಯಂತ ವಿದ್ಯುತ್ ಕೊರತೆ, ಪವರ್ ಕಟ್; ಕರ್ನಾಟಕದಲ್ಲೂ ಲೋಡ್ ಶೆಡ್ಡಿಂಗ್

ವಿದ್ಯುತ್ ಅಭಾವ ಯಾಕಾಗುತ್ತಿದೆ?

ವಿದ್ಯುತ್ ಅಭಾವ ಯಾಕಾಗುತ್ತಿದೆ?

ಕರ್ನಾಟಕದಲ್ಲಿ ವಿದ್ಯುತ್ ಅಭಾವ ಯಾಕೆ ಆಗಿಲ್ಲ ಎಂಬ ಪ್ರಶ್ನೆ ಬರಬಹುದು. ಇದಕ್ಕೆ ಉತ್ತರ ಕೊಡುವ ಮೊದಲು ಬೇರೆ ರಾಜ್ಯಗಳಲ್ಲಿ ವಿದ್ಯುತ್ ಅಭಾವ ಯಾಕಾಗಿದೆ ಎಂಬುದಕ್ಕೆ ಉತ್ತರ ಕಂಡುಕೊಳ್ಳೋಣ. ದೇಶದೆಲ್ಲೆಡೆ ವಿದ್ಯುತ್ ಉತ್ಪಾದನೆಗೆ ಪ್ರಮುಖವಾಗಿ ಅವಲಂಬಿತವಾಗಿರುವುದು ಜಲವಿದ್ಯುತ್ ಮತ್ತು ಉಷ್ಣ ವಿದ್ಯುತ್ ಉತ್ಪಾದನೆ ಘಟಕಗಳ ಮೇಲೆ. ಜಲವಿದ್ಯುತ್ ಉತ್ಪಾದನೆಗೆ ಮಳೆ ಚೆನ್ನಾಗಿ ಆಗಬೇಕು. ಉಷ್ಣ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು (Coal) ಸಂಗ್ರಹ ಇರಬೇಕು. ಕಲ್ಲಿದ್ದಲು ಸರಬರಾಜು ಬಹುತೇಕ ನಿಂತುಹೋಗಿದೆ. ಹೀಗಾಗಿ, ಎಲ್ಲೆಡೆ ವಿದ್ಯುತ್ ಉತ್ಪಾದನೆ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಮತ್ತೊಂದು ಕಾರಣ ಎಂದರೆ ಕೋವಿಡ್ ನಂತರ ದೇಶದ ವಿವಿಧ ಉದ್ಯಮಗಳು ಮತ್ತು ಕೈಗಾರಿಕೆಗಳು ಚೇತರಿಕೆ ಕಂಡು ಮತ್ತೆ ಯಥಾಪ್ರಕಾರ ಚಾಲನೆಗೊಳ್ಳುತ್ತಿವೆ. ಹೀಗಾಗಿ, ಎಲ್ಲೆಡೆ ನಿರಂತರ ವಿದ್ಯುತ್‌ಗೆ ಬೇಡಿಕೆ ಇದೆ. ಅದಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲದಿರುವುದು ಸಮಸ್ಯೆ.

ಕರ್ನಾಟಕದಲ್ಲಿ ಯಾಕೆ ವಿದ್ಯುತ್ ಸಮಸ್ಯೆ ಇಲ್ಲ?

ಕರ್ನಾಟಕದಲ್ಲಿ ಯಾಕೆ ವಿದ್ಯುತ್ ಸಮಸ್ಯೆ ಇಲ್ಲ?

ಕರ್ನಾಟಕದಲ್ಲಿ ಕೆಲ ವರ್ಷಗಳಿಂದ ವಿದ್ಯುತ್ ಉತ್ಪಾದನೆಗೆ ವಿವಿಧ ಮಾರ್ಗೋಪಾಯಗಳನ್ನು ಹುಡುಕಲಾಗಿದೆ. ಕೇವಲ ಉಷ್ಣವಿದ್ಯುತ್ (Thermal Energy) ಮತ್ತು ಜಲ ವಿದ್ಯುತ್ (Hydro Electric) ಘಟಕಗಳಷ್ಟೇ ಅಲ್ಲ ಇತರ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ.

"ಮಿಶ್ರ ಇಂಧನ ಸಂಪನ್ಮೂಲಗಳಿಂದಾಗಿ ನಮಗೆ ಸಮಸ್ಯೆಗಳು ತಾಕಿಲ್ಲ. ನಮ್ಮ ಶೇ. 51ರಷ್ಟು ಭಾಗದ ವಿದ್ಯುತ್ ಸೌರಶಕ್ತಿ, ಗಾಳಿ ಇತ್ಯಾದಿ ಮರುಬಳಕೆ ಶಕ್ತಿ ಮೂಲಗಳಿಂದ ಉತ್ತಾದನೆ ಆಗುತ್ತಿದೆ. ಉಷ್ಣ ವಿದ್ಯುತ್ ಘಟಕಗಳಿಂದ ನಾವು ಶೇ. 34ರಷ್ಟು ವಿದ್ಯುತ್ ಪಡೆಯುತ್ತೇವೆ. ಜಲವಿದ್ಯುತ್ ಘಟಕಗಳಿಂದ ಶೇ 12 ಮತ್ತು ಪರಮಾಣು ವಿದ್ಯುತ್ ಘಟಕಗಳಿಂದ ಶೇ. 3ರಷ್ಟು ವಿದ್ಯುತ್ ಅನ್ನು ನಾವು ಪಡೆಯುತ್ತೇವೆ" ಎಂದು ರಾಜ್ಯ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಹೇಳಿದ್ದಾರೆ.

ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆ

ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆ

ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಮೇಲೆ ಎಷ್ಟೆಷ್ಟು ಅವಲಂಬಿತ?
ಉತ್ತರ ಪ್ರದೇಶ: ಶೇ. 72
ಮಹಾರಾಷ್ಟ್ರ: ಶೇ. 66
ಗುಜರಾತ್: ಶೇ. 59
ತೆಲಂಗಾಣ ಶೇ. 58
ಆಂಧ್ರ ಪ್ರದೇಶ ಶೇ. 57
ತಮಿಳುನಾಡು ಶೇ. 44
ಕರ್ನಾಟಕ ಶೇ. 34.
ಈ ಮೇಲಿನ ಪಟ್ಟಿ ಗಮನಿಸಿದರೆ ಪ್ರಮುಖ ರಾಜ್ಯಗಳ ಪೈಕಿ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಮೇಲೆ ಅತಿ ಕಡಿಮೆ ಅವಲಂಬಿತವಾಗಿರುವುದು ಕರ್ನಾಟಕವೇ. ಹೀಗಾಗಿ, ಕಲ್ಲಿದ್ದಲು ಅಭಾವ ಕರ್ನಾಟಕವನ್ನು ಹೆಚ್ಚು ಬಾಧಿಸಿಲ್ಲ.

"ಜನರ ವಿದ್ಯುತ್ ಅಗತ್ಯತೆಯನ್ನು ಮತ್ತು ಮುಂದಿನ ದಿನಗಳಲ್ಲಿ ಎಷ್ಟೆಷ್ಟು ವಿದ್ಯುತ್ ಬಳಕೆ ಆಗಬಹುದು ಎಂಬುದನ್ನು ಮುಂದಾಲೋಚಿಸಿ ಈ ಮುಂಚೆಯೇ ಪರಿಣಾಮಕಾರಿ ಯೋಜಿಸಿದ್ದೆವು. ಇದರಿಂದಾಗಿ ಇಂದು ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಸಂಗ್ರಹ ಇರಲು ಸಾಧ್ಯವಾಗಿದೆ" ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಹೇಳಿದ್ದಾರೆ ಎಂದು ಡೆಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಕರ್ನಾಟಕದಲ್ಲಿ ದಾಖಲೆ ಮಟ್ಟಕ್ಕೆ ವಿದ್ಯುತ್ ಉತ್ಪಾದನೆ

ಕರ್ನಾಟಕದಲ್ಲಿ ದಾಖಲೆ ಮಟ್ಟಕ್ಕೆ ವಿದ್ಯುತ್ ಉತ್ಪಾದನೆ

ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ದಿನವೊಂದಕ್ಕೆ 15 ಸಾವಿರ ಮೆಗ್ಯಾವ್ಯಾಟ್ ವಿದ್ಯುತ್ ಖರ್ಚಾಗುತ್ತಿದೆ. ಆದರೂ ಬಹುತೇಕ ಪೂರೈಕೆ ಆಗಿದೆ. ಕರ್ನಾಟಕದಲ್ಲಿ ಈಗ್ಗೆ ಕೆಲವಾರು ವರ್ಷಗಳಿಂದ ವಿದ್ಯುತ್ ಉತ್ಪಾದನೆ ಕಾರ್ಯ ಸಮಪರ್ಕವಾಗಿ ಆಗುತ್ತಿದೆ. 2014-15ಲ್ಲಿ ಹತ್ತಿರಹತ್ತಿರ 30 ಸಾವಿರ ಎಂಯುನಷ್ಟು ವಿದ್ಯುತ್ ಉತ್ಪಾದನೆ ಆಗಿತ್ತು. ಈ ವರ್ಷದ 32,503 ಎಂಯುನಷ್ಟು ವಿದ್ಯುತ್ ಉತ್ಪಾದನೆ ಆಗಿದೆಯಂತೆ.

"ರಾಜ್ಯದಲ್ಲಿ ಸದ್ಯ ಇರುವ ಎಲ್ಲಾ ಕಲ್ಲಿದ್ದಲು ಘಟಕಗಳು ಕನಿಷ್ಠ ಮಟ್ಟದಲ್ಲಿ ಮಾತ್ರ ಬಳಕೆ ಆಗುತ್ತಿವೆ. ಹೀಗಾಗಿ, ಕಲ್ಲಿದ್ದಲು ಸಂಗ್ರಹ ಹೆಚ್ಚು ವ್ಯಯವಾಗಿಲ್ಲ. ಇಲ್ಲದಿದ್ದರೆ ಕಲ್ಲಿದ್ದಲು ಕೊಳ್ಳಲು ದುಬಾರಿ ಹಣ ತೆರಬೇಕಾಗುತ್ತಿತ್ತು. ಆಗ ವಿದ್ಯುತ್ ಉತ್ಪಾದನೆ ವೆಚ್ಚ ಪ್ರತೀ ಯೂನಿಟ್‌ಗೆ 11 ರೂ ಆಗಿಬಿಡುತ್ತಿತ್ತು" ಎಂದು ಇಂಧನ ಇಲಾಖೆಯ ಎಂಜಿನಿಯರ್‌ವೊಬ್ಬರು ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Most of the states are facing power crisis due to high demand and severe shortage of coal. But, Karnataka has surplus energy to meet peak demand in the summer. This is due to pre-planning from past few years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X