ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಇಮ್ರಾನ್ ಖಾನ್‌ಗೆ ಫಂಡಿಂಗ್ ಮಾಡಿದ ರೋಮಿತಾ ಶೆಟ್ಟಿ ಯಾರು?

|
Google Oneindia Kannada News

ಪಾಕಿಸ್ತಾನದಲ್ಲಿ ಅಧಿಕಾರ ಕಳೆದುಕೊಂಡ ಬಳಿಕವೂ ಇಮ್ರಾನ್ ಖಾನ್ ಪದೇ ಪದೇ ಸುದ್ದಿಯಲ್ಲಿರುತ್ತಾರೆ. ಇದೀಗ ಇಮ್ರಾನ್ ಖಾನ್ ಜೊತೆ ಭಾರತ ಮೂಲದ ಮಹಿಳೆ ರೋಮಿತಾ ಶೆಟ್ಟಿ ಹೆಸರೂ ಜೋರು ಸದ್ದು ಮಾಡುತ್ತಿದೆ.

ಪಾಕಿಸ್ತಾನದ ಚುನಾವಣಾ ಆಯೋಗ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷಕ್ಕೆ ಸಂದಾಯದವಾದ ದೇಣಿಗೆಯ ವಿವರವನ್ನು ಮೂರು ದಿನಗಳ ಹಿಂದೆ ಬಿಡುಗಡೆ ಮಾಡಿದೆ. ಇದರಲ್ಲಿ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷಕ್ಕೆ ಅಕ್ರಮವಾಗಿ ಹಣ ಸಂದಾಯವಾಗಿರುವುದನ್ನು ದಾಖಲೆ ಸಮೇತ ಕೊಟ್ಟಿದೆ.

ಪಾಕಿಸ್ತಾನದಲ್ಲಿ 1200 ವರ್ಷದ ಹಳೆಯ 2ನೇ ಹಿಂದೂ ದೇವಾಲಯ ಸಾರ್ವಜನಿಕರಿಗೆ ಮುಕ್ತಪಾಕಿಸ್ತಾನದಲ್ಲಿ 1200 ವರ್ಷದ ಹಳೆಯ 2ನೇ ಹಿಂದೂ ದೇವಾಲಯ ಸಾರ್ವಜನಿಕರಿಗೆ ಮುಕ್ತ

ತನ್ನ ಸರಕಾರದ ಪತನಕ್ಕೆ ವಿದೇಶಿ ಶಕ್ತಿಗಳ ಸಂಚು ಮತ್ತು ಅಮೆರಿಕದ ಪಿತೂರಿ ಎಂದು ಹೇಳುತ್ತಿದ್ದ ಇಮ್ರಾನ್ ಖಾನ್‌ರ ಪಿಟಿಐ ಪಕ್ಷಕ್ಕೆ ಹಲವು ವಿದೇಶಿ ರಾಷ್ಟ್ರೀಯರು ಮತ್ತು ವಿದೇಶೀ ಮೂಲದ ಕಂಪನಿಗಳಿಂದ ಕಾನೂನುಬಾಹಿರವಾಗಿ ದೇಣಿಗೆ ಸಿಕ್ಕಿದೆ. ಚುನಾವಣಾ ಆಯೋಗ ಪಿಟಿಐ ಪಕ್ಷಕ್ಕೆ ಶೋಕಾಸ್ ನೋಟೀಸ್ ಜಾರಿ ಮಾಡಿದೆ.

ಇಷ್ಟೇ ಅಗಿದ್ದರೆ ಪಾಕಿಸ್ತಾನದಲ್ಲಿ ಅಷ್ಟೇನೂ ಸಂಚಲನವಾಗುತ್ತಿರಲಿಲ್ಲ. ಆದರೆ, ಅಕ್ರಮವಾಗಿ ಪಿಟಿಐಗೆ ದೇಣಿಗೆ ನೀಡಿದವರ ಪಟ್ಟಿಯಲ್ಲಿ ಭಾರತ ಮೂಲದ ರೋಮಿತಾ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿದೆ. ಹಲವು ಸಂದೇಹ, ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಯಾರು ರೋಮಿತಾ ಶೆಟ್ಟಿ?

ಯಾರು ರೋಮಿತಾ ಶೆಟ್ಟಿ?

ರೋಮಿತಾ ಶೆಟ್ಟಿ ಮಂಗಳೂರು ಮೂಲದವರಾ ಎಂಬುದು ಗೊತ್ತಿಲ್ಲ. ಆದರೆ ಭಾರತ ಮೂಲದವರು ಎಂಬುದು ಖಚಿತವಾದ ಸಂಗತಿ. ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಮಾಡಿದ್ದ ಅವರು ನಂತರ ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಎಂಎ ಮಾಡಿದ್ದಾರೆ.

ಪಾಕಿಸ್ತಾನ ಮೂಲದ ನಸೀರ್ ಅಜೀಜ್ ಅಹಮದ್ ಅವರನ್ನು ವಿವಾಹವಾಗಿರುವ ಇವರು DiMaio ಅಹ್ಮದ್ ಕ್ಯಾಪಿಟಲ್ ಎಲ್‌ಎಲ್‌ಎಲ್ (ಡಿಎ ಕ್ಯಾಪಿಟಲ್) ಎಂಬ ಕಂಪನಿಯ ಎಂಡಿಯಾಗಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಇವರ ಡಿಎ ಕ್ಯಾಪಿಟಲ್ ಸಂಸ್ಥೆ ಹೂಡಿಕೆ ಇತ್ಯಾದಿ ಹಣಕಾಸು ವಿಚಾರದಲ್ಲಿ ಸಲಹೆ ನೀಡುವ ಕೆಲಸ ಮಾಡುತ್ತದೆ. ಅರ್ಥಶಾಸ್ತ್ರ ಕ್ಷೇತ್ರದಲ್ಲಿ ರೋಮಿತಾ ಶೆಟ್ಟಿ 27 ವರ್ಷದ ಅನುಭವ ಹೊಂದಿರುವುದು ಅವರ ಲಿಂಕ್ಡ್ ಇನ್ ಪ್ರೊಫೈಲ್‌ನಿಂದ ತಿಳಿದುಬರುತ್ತದೆ.

ಇದು ಪಾಕಿಸ್ತಾನದಲ್ಲಿ ಕೆಎಫ್‌ಸಿ ರೈಡರ್ ಆಗಿ ನೈಟ್ ಡ್ಯೂಟಿ ಮಾಡುವ ಹುಡುಗಿ ಕಥೆಇದು ಪಾಕಿಸ್ತಾನದಲ್ಲಿ ಕೆಎಫ್‌ಸಿ ರೈಡರ್ ಆಗಿ ನೈಟ್ ಡ್ಯೂಟಿ ಮಾಡುವ ಹುಡುಗಿ ಕಥೆ

ಇಮ್ರಾನ್ ಖಾನ್‌ಗೆ ಶೆಟ್ಟಿ ದೇಣಿಗೆ ಯಾಕೆ?

ಇಮ್ರಾನ್ ಖಾನ್‌ಗೆ ಶೆಟ್ಟಿ ದೇಣಿಗೆ ಯಾಕೆ?

ರೋಮಿತಾ ಶೆಟ್ಟಿ ಭಾರತ ಮೂಲದವರಾಗಿರುವ ಹಿನ್ನೆಲೆಯಲ್ಲಿ ಪಿಟಿಐಗೆ ಅವರು ನೀಡಿರುವ ದೇಣಿಗೆ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ರೋಮಿತಾ ಶೆಟ್ಟಿ ಪಿಟಿಐ ಪಕ್ಷಕ್ಕೆ ನೀಡಿರುವುದು 13,750 ಡಾಲರ್ ಹಣ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು ಸುಮಾರು 10 ಲಕ್ಷ ರೂಪಾಯಿ. ಆದರೆ ಇತರ ಕೆಲ ದೇಣಿಗೆಗಳಿಗೆ ಹೋಲಿಸಿದರೆ ರೋಮಿತಾ ಶೆಟ್ಟಿ ಕೊಟ್ಟಿರುವ ಹಣ ತುಸು ನಗಣ್ಯವೇ.

ರೋಮಿತಾ ಶೆಟ್ಟಿ ಪತಿ ನಸೀರ್ ಅಜೀಜ್ ಅಹ್ಮದ್ ಪಾಕಿಸ್ತಾನೀ ಅಮೆರಿಕನ್ ವ್ಯಕ್ತಿ. ಸಹಜವಾಗಿಯೇ ಈಕೆ ಪಾಕಿಸ್ತಾನದ ರಾಜಕೀಯದಲ್ಲಿ ಹಿತಾಸಕ್ತಿ ಹೊಂದಿರುತ್ತಾರೆ ಎಂಬುದು ಕೆಲ ಪಾಕಿಸ್ತಾನಿಗರ ಅಭಿಮತ.

ಪಟ್ಟಿಯಲ್ಲಿ ಇನ್ನೂ ಕೆಲ ಭಾರತ ಮೂಲದವರ ಹೆಸರು

ಪಟ್ಟಿಯಲ್ಲಿ ಇನ್ನೂ ಕೆಲ ಭಾರತ ಮೂಲದವರ ಹೆಸರು

ಪಿಟಿಐಗೆ ದೇಣಿಗೆ ನೀಡಿದವರ ಪಟ್ಟಿಯಲ್ಲಿ ಇನ್ನೂ ಕೆಲ ಅಚ್ಚರಿಯ ಹೆಸರುಗಳು ಕಂಡುಬಂದಿವೆ. ರೋಮಿತಾ ಶೆಟ್ಟಿ ನೀಡಿದ ದೇಣಿಗೆಯು ಪಾಕಿಸ್ತಾನದ ಅಧಿಕೃತ ನಿಯಮಗಳನ್ನು ಮೀರಿದೆ ಎಂಬುದು ದೂರು. ಆದರೆ, ಸಕ್ರಮವಾಗಿ ದೇಣಿಗೆ ನೀಡಿದವರ ಪಟ್ಟಿಯಲ್ಲಿ ಭಾರತ ಮೂಲದವರ ಹೆಸರೂ ಇರುವುದು ಕಂಡು ಬಂದಿದೆ.

ಇಂದರ್ ದೋಸಾಂಜ್, ವಿರಳ್ ಲಾಲ್, ಮುರ್ತಾಜಾ ಲೋಖಂಡವಾಲ, ಚರಣಜೀತ್ ಸಿಂಗ್, ವರ್ಷಾ ಲಾತ್ರ ಮೊದಲಾದವರ ಹೆಸರು ಈ ಪಟ್ಟಿಯಲ್ಲಿವೆ.

ಕ್ರಿಕೆಟ್ ನಂಟು

ಕ್ರಿಕೆಟ್ ನಂಟು

ಕುತೂಹಲ ಎಂದರೆ ಪಿಟಿಐ ಸಂಸ್ಥೆ ರೋಮಿತಾ ಶೆಟ್ಟಿಯದ್ದು ಸೇರಿದಂತೆ 13 ದೇಣಿಗೆಗಳ ವಿವರವನ್ನು ಗೌಪ್ಯವಾಗಿ ಇಟ್ಟುಕೊಂಡಿತ್ತು. ಪಿಟಿಐಗೆ ಅಕ್ರಮವಾಗಿ ದೇಣಿಗೆ ಮಾಡಿದವರ ಈ ರಹಸ್ಯ ಪಟ್ಟಿಯಲ್ಲಿ ವುಟನ್ ಕ್ರಿಕೆಟ್ ಎಂಬ ಕಂಪನಿ ಹೆಸರು ಇದೆ. ಇದು ದುಬೈ ಮೂಲದ ಅಬ್ರಾಜ್ ಗ್ರೂಪ್ ಸಂಸ್ಥೆಯ ಸಂಸ್ಥಾಪಕ ನಖ್ವಿ ಎಂಬುವವರಿಗೆ ಸೇರಿದ ಕಂಪನಿ. ಆದರೆ, ಕೇಮ್ಯಾನ್ ಐಲೆಂಡ್ಸ್‌ನಲ್ಲಿ ನೊಂದಾಯಿತವಾದ ಕಂಪನಿ ಎನ್ನಲಾಗಿದೆ. ಇದು ಬರೋಬ್ಬರಿ 21 ಲಕ್ಷ ಡಾಲರ್‌ಗೂ ಹೆಚ್ಚು ಹಣವನ್ನು ಪಿಟಿಐಗೆ ರವಾನೆ ಮಾಡಿರುವುದು ತಿಳಿದುಬಂದಿದೆ.

(ಒನ್ಇಂಡಿಯಾ ಸುದ್ದಿ)

Recommended Video

Taiwan ಕಡಲ ತೀರದಲ್ಲಿ ಸಮರಾಭ್ಯಾಸ ಶುರು ಮಾಡಿರೋ ಚೀನಾ! | *World | OneIndia Kannda

English summary
Romita Shetty is said to have made donations to Pakistan's PTI party. This was revealed by the list made by election commission of Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X