ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈವಾನ್‌ಗೆ ತೆರಳಿ ಚೀನಾವನ್ನು ಉರಿಸುತ್ತಿರುವ ನ್ಯಾನ್ಸಿ ಪೆಲೋಸಿ ಯಾರು?

|
Google Oneindia Kannada News

ಅಮೆರಿಕ ಜನಪ್ರತಿನಿಧಿಗಳ ಸಭೆಯ (ಲೋಕಸಭೆ) ಸ್ಪೀಕರ್ ನ್ಯಾನ್ಸಿ ಪೆಲೋಸಿ ಸುದ್ದಿಯಲ್ಲಿದ್ದಾರೆ. ಚೀನಾ ಬೇಡ ಬೇಡ ಎಂದರೂ ಇವರು ತೈವಾನ್ ನೆಲಕ್ಕೆ ಕಾಲಿರಿಸಿದ್ದಾರೆ.

ನ್ಯಾನ್ಸಿ ಪೆಲೋಸಿ ಸುದ್ದಿಯಲ್ಲಿರುವುದು ಹೊಸದೇನಲ್ಲ. 82 ವರ್ಷದ ಪೆಲೋಸಿ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಲು ಧರೆಗಿಳಿದ ದೇವತೆಯಂತೆ ಕೆಲವರಿಗೆ ಕಾಣುತ್ತಾರೆ. ಕೆಲವರಿಗೆ ಈಕೆ ವಿವಾದ ಸೆಳೆಯುವ ವ್ಯಕ್ತಿತ್ವದಂತೆ ಗೋಚರಿಸುತ್ತಾರೆ.

ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಹೋಗಿದ್ದು ಐತಿಹಾಸಿಕ ನಿಲುವು ಎನ್ನದೇ ಬೇರೆ ವಿಧಿ ಇಲ್ಲ. ಅಲ್ಲೇನೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೋ, ಅಥವಾ ಮಾತುಕತೆ ನಡೆಸಲೋ ಅಲ್ಲ ಪೆಲೋಸಿ ಹೋಗಿದ್ದು. ನಿಜ ಹೇಳಬೇಕೆಂದರೆ ನ್ಯಾನ್ಸಿ ಪೆಲೋಸಿ ರಾಜಧಾನಿ ಥೈಪೆ ನಗರಕ್ಕೆ ಹೋಗಿ ಅಲ್ಲಿಂದ ಹೋಟೆಲ್‌ವೊಂದರ ರೂಮಿಗೆ ಹೋಗಿ ಏಕಾಂಗಿಯಾಗಿ ಕೂತರಷ್ಟೇ.

ಅಷ್ಟು ಮಾಡುವುದಕ್ಕೆ ಪೆಲೋಸಿ ತೈವಾನ್‌ಗೆ ಹೋಗಬೇಕಾ? ಜಗತ್ತಿಗೆ, ಅದರಲ್ಲೂ ಚೀನಾಗೆ ಒಂದು ಪರೋಕ್ಷ ಸಂದೇಶ ರವಾನಿಸಲು ಪೆಲೋಸಿ ಅಲ್ಲಿಗೆ ಹೋಗಿದ್ದು. ಏನದು ಸಂದೇಶ? ಪೆಲೋಸಿಯ ವ್ಯಕ್ತಿತ್ವ ಏನು? ಎಂಬಿತ್ಯಾದಿ ವಿವರ ಇಲ್ಲಿದೆ.

ತೈವಾನ್‌ಗೆ ಪೆಲೋಸಿ ಹೋಗಿದ್ದು ಯಾಕೆ?

ತೈವಾನ್‌ಗೆ ಪೆಲೋಸಿ ಹೋಗಿದ್ದು ಯಾಕೆ?

ವಿಶ್ವದಲ್ಲಿ ಸರ್ವಾಧಿಕಾರಿ ಪ್ರಭುತ್ವದ ದೇಶಗಳು ಅನೇಕ ಇವೆ. ಅವುಗಳ ಮಧ್ಯೆ ಪ್ರಜಾಪ್ರಭುತ್ವ ದೇಶಗಳ ಅಸ್ತಿತ್ವ ಉಳಿಸಲು ಅಮೆರಿಕ ಸೇರಿದಂತೆ ಕೆಲವಾರು ದೇಶಗಳು ಬದ್ಧತೆ ಹೊಂದಿವೆ. ಅಂತೆಯೇ, ಚೀನಾ, ಉತ್ತರ ಕೊರಿಯಾ, ಕ್ಯೂಬಾ, ಇರಾಕ್ ಇತ್ಯಾದಿ ಕಮ್ಯೂನಿಸ್ಟ್ ಮತ್ತು ಸರ್ವಾಧಿಕಾರ ದೇಶಗಳ ವಿರುದ್ಧ ಅಮೆರಿಕ ನಿರಂತರ ಸಂಘರ್ಷದಲ್ಲಿರುತ್ತದೆ.

ಕಮ್ಯೂನಿಸ್ಟ್ ಆಡಳಿತದ ಚೀನಾಗೆ ಎದುರಾಗಿ ಸ್ವತಂತ್ರವಾಗಿ ಉಳಿದಿರುವ ತೈವಾನ್ ದೇಶಕ್ಕೆ ಬೆಂಬಲವಾಗಿ ನ್ಯಾನ್ಸಿ ಪೆಲೋಸಿ ಹೋಗಿದ್ದಾರೆ. ಅದು ಬಿಟ್ಟರೆ ತೈವಾನ್‌ನಲ್ಲಿ ಇವರು ಚೀನಾ ವಿರುದ್ಧ ಕತ್ತಿ ಮಸೆಯಲೋ ಹೋಗಿದ್ದಲ್ಲ.

ಚೀನಾವನ್ನೂ ಬಿಡಲಿಲ್ಲ ಪೆಲೋಸಿ

ಚೀನಾವನ್ನೂ ಬಿಡಲಿಲ್ಲ ಪೆಲೋಸಿ

ನ್ಯಾನ್ಸಿ ಪೆಲೋಸಿ ವೃತ್ತಿಬದುಕಿನಲ್ಲಿ ಇಂಥ ಹಲವು ಕಾರ್ಯಗಳು ಇವೆ. ಅದರಲ್ಲಿ ಮರೆಯಲು ಸಾಧ್ಯವೇ ಇಲ್ಲ ಎನ್ನುವಂಥದ್ದು 1991ರಲ್ಲಿ ಟಿಯಾನನ್ಮೆನ್ ಸ್ಕ್ವಯರ್‌ಗೆ ಇವರು ಭೇಟಿ ನೀಡಿದ್ದು.

ಆಧುನಿಕ ಚೀನಾದ ಇತಿಹಾಸ ಓದಿದವರಿಗೆ ಟಿಯಾನನ್ಮೆನ್ ಸ್ಕ್ವಯರ್ ಚೆನ್ನಾಗಿ ಗೊತ್ತಿರುತ್ತದೆ. ಚೀನಾದ ಕಮ್ಯೂನಿಸ್ಟ್ ಆಡಳಿತ ವಿರುದ್ಧ ಜನರು ನಡೆಸಿದ ಹೋರಾಟ ಇದಕ್ಕೆ ತಳುಕು ಹಾಕಿಕೊಂಡಿದೆ. ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವದ ಹೋರಾಟ ನಡೆದಂತೆ ಎಂಬತ್ತರ ದಶಕದಲ್ಲಿ ಚೀನಾದಲ್ಲಿ ಪ್ರಜಾತಂತ್ರಕ್ಕಾಗಿ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಜನರು ಹೋರಾಟ ನಡೆಸಿದ್ದರು.

1989ರಲ್ಲಿ ಬೀಜಿಂಗ್‌ನ ಟಿಯಾನನ್ಮೆನ್ ಸ್ಕ್ವಯರ್‌ನಲ್ಲಿ ಲಕ್ಷಾಂತರ ಜನರು ಸೇರಿ ಪ್ರತಿಭಟನೆ ನಡೆಸಿದ್ದರು. ಆದರೆ, ಕಮ್ಯೂನಿಸ್ಟ್ ಆಡಳಿತ ಸೇನೆಯನ್ನು ಬಳಸಿ ಈ ಹೋರಾಟವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿತು.

ಅದಾಗಿ ಎರಡು ವರ್ಷಕ್ಕೆ ನ್ಯಾನ್ಸಿ ಪೆಲೋಸಿ ಹಾಗೂ ಇತರ ಕೆಲ ಅಮೆರಿಕನ್ ಸಂಸದರು ಟಿಯಾನನ್ಮೆನ್ ಸ್ಕ್ವಯರ್‌ಗೆ ತೆರಳಿದ್ದರು. ಅಲ್ಲಿ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಸ್ಲೋಗನ್‌ಗಳಿರುವ ಬ್ಯಾನರ್ ಅನ್ನು ಪ್ರದರ್ಶನ ಮಾಡಿ ಬಂದಿದ್ದರು ಅಷ್ಟೇ.

ಯಾರು ಈ ನ್ಯಾನ್ಸಿ ಪೆಲೋಸಿ?

ಯಾರು ಈ ನ್ಯಾನ್ಸಿ ಪೆಲೋಸಿ?

ಇಟಲಿ ಮೂಲದ ಕುಟುಂಬಕ್ಕೆ ಸೇರಿದ ನ್ಯಾನ್ಸಿ ಪೆಲೋಸಿ ಅಮೆರಿಕದ ಡೆಮಾಕ್ರಾಟ್ ಪಕ್ಷದ ಸದಸ್ಯೆ. ಸದ್ಯ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ನಮ್ಮ ಭಾಷೆಯಲ್ಲಿ ಲೋಕಸಭೆ) ಸಭೆಯಲ್ಲಿ ಸ್ಪೀಕರ್ ಆಗಿದ್ದಾರೆ. ಈ ಹಿಂದೆಯೂ 2007-2011ರ ಅವಧಿಯಲ್ಲೂ ಅವರು ಸಭಾಧ್ಯಕ್ಷರಾಗಿದ್ದರು. ಈ ಸ್ಥಾನ ಅಲಂಕರಿಸಿದ ಏಕೈಕ ಮಹಿಳೆ ಅವರಾಗಿದ್ದಾರೆ.

ಕಠಿಣ ನಿಲುವಿಗೆ ಹೆಸರಾದ ಪೆಲೋಸಿ

ಕಠಿಣ ನಿಲುವಿಗೆ ಹೆಸರಾದ ಪೆಲೋಸಿ

ನ್ಯಾನ್ಸಿ ಪೆಲೋಸಿ ಹಲವು ವಿಚಾರಗಳಲ್ಲಿ ಬಹಳ ಖಡಕ್ ನಿಲುವು ಹೊಂದಿರುವವರು. ಇರಾಕ್ ಮೇಲೆ ಅಮೆರಿಕ ಯುದ್ಧ ಮಾಡಿದಾಗ ಅದನ್ನು ವಿರೋಧಿಸಿದವರಲ್ಲಿ ಪೆಲೋಸಿ ಒಬ್ಬರು.

2019ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣ ಸಂಬಂಧ ತನಿಖೆಗೆ ಆದೇಶಿಸಿದ್ದರು. ನ್ಯಾಯಾಂಗ ಸಮಿತಿಯ ವಿಚಾರಣೆ ಕೂಡ ನಡೆಸಿದರು. ಅನೇಕ ಜನರು ಅಮೆರಿಕ ಕಂಡ ಅತ್ಯಂತ ಪ್ರಬಲ ಸ್ಪೀಕರ್ ಇವರು ಎಂದು ನ್ಯಾನ್ಸಿ ಪೆಲೋಸಿಯವರನ್ನು ಬಣ್ಣಿಸಿದರು.

(ಒನ್ಇಂಡಿಯಾ ಸುದ್ದಿ)

English summary
Nancy Pelosi is the speaker of US House. She supports democratic movements worldwide from past few decades. She even dared to visit Tiananmen Square in China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X