ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲ್ಕಿಸ್ ಬಾನೊ ಯಾರು? ಗ್ಯಾಂಗ್ ರೇಪಿಸ್ಟರಿಗೆ ಬಿಡುಗಡೆ ಸಿಕ್ಕಿದ್ದೇಗೆ?

|
Google Oneindia Kannada News

ಗುಜರಾತ್ ಗಲಭೆ ವೇಳೆ ತಮ್ಮ ಕುಟುಂಬದ ಏಳು ಮಂದಿಯನ್ನು ಕಳೆದುಕೊಂಡ ಮತ್ತು ಅಮಾನುಷವಾಗಿ ಅತ್ಯಾಚಾರಗೊಂಡಿದ್ದ ಬಿಲ್ಕಿಸ್ ಬಾನೊಗೆ ಇದೀಗ ಮತ್ತೊಮ್ಮೆ ಅಂಥದ್ದೇ ರೀತಿಯ ಆಘಾತ ಸಿಕ್ಕಿದೆ. ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಹನ್ನೊಂದು ಮಂದಿ ಅಪರಾಧಿಗಳನ್ನು ಗುಜರಾತ್ ಸರಕಾರ ಬಿಡುಗಡೆ ಮಾಡಿದೆ.

2002ರ ಈ ಭೀಕರ ಪ್ರಕರಣದ 11 ಅಪರಾಧಿಗಳನ್ನು ಅವರ ಜೈಲಿನ ಅವಧಿ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆ ಮಾಡಿರುವುದು ಬಹಳಷ್ಟು ಟೀಕೆಗಳಿಗೆ ಕಾರಣವಾಗಿದೆ. ಅವರಿಗಿಂತಲೂ ಕಡಿಮೆ ಕ್ರೌರ್ಯ ಎಸಗಿದ ಅನೇಕ ಅಪರಾಧಿಗಳು ಜೈಲಿನಲ್ಲಿ ಈಗಲೂ ಕೊಳೆಯುತ್ತಾ ಇದ್ದಾರೆ ಎಂದು ಮಾನವಹಕ್ಕು ವಕೀಲ ಶಂಶದ್ ಪಠಾಣ್ ಹೇಳಿದ್ದಾರೆ.

Atal Bihari Vajpayee- ರಾಜಕೀಯ ಅಜಾತಶತ್ರು ಬಗ್ಗೆ ವಿಶೇಷ ನೆನಪು Atal Bihari Vajpayee- ರಾಜಕೀಯ ಅಜಾತಶತ್ರು ಬಗ್ಗೆ ವಿಶೇಷ ನೆನಪು

"ಇದು ಆಜಾದಿ ಕಾ ಅಮೃತ್‌ನ ಬಿಜೆಪಿ ಆವೃತ್ತಿ. ಘೋರ ಅಪರಾಧ ಎಸಗಿದ ಜನರಿಗೆ ಸ್ವಾತಂತ್ರ್ಯ ಸಿಕ್ಕಿದೆ. ಒಂದು ಧರ್ಮದ ಪರವಾಗಿ ಬಿಜೆಪಿ ಎಷ್ಟರಮಟ್ಟಗೆ ನಿಂತಿದೆ ಎಂದರೆ ಅಮಾನುಷ ಅತ್ಯಾಚಾರ ಮತ್ತು ದ್ವೇಷ ಅಪರಾಧಗಳು ಕ್ಷಮೆಗೆ ಅರ್ಹವಾಗಿ ಪರಿಗಣಿತವಾಗುತ್ತವೆ. ರುಬಿನಾ ಮೆಮೋನ್‌ಗೆ ಬಿಡುಗಡೆ ಮಾಡಲು ಮಹಾರಾಷ್ಟ್ರ ಸರಕಾರ ಸಮಿತಿ ರಚನೆ ಮಾಡುತ್ತದಾ?

"ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಮಹಿಳೆಯರ ಘನತೆ ಕುಂದುವಂತಹ ಯಾವುದೇ ಕೆಲಸವನ್ನು ಮಾಡಬೇಡಿ ಎಂದು ಭಾರತೀಯರಿಗೆ ಕರೆಕೊಟ್ಟಿದ್ದರು. ನಾರಿ ಶಕ್ತಿಗೆ ಬೆಂಬಲ ಕೊಡಬೇಕೆಂದು ಏನೋ ಹೇಳಿದ್ದರು. ಅದೇ ದಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳನ್ನು ಗುಜರಾತ್‌ನ ಬಿಜೆಪಿ ಸರಕಾರ ಬಿಡುಗಡೆ ಮಾಡಿದೆ. ಅದರ ಸಂದೇಶ ಬಹಳ ಸ್ಪಷ್ಟವಾಗಿದೆ" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಕುಟುಕಿದ್ದಾರೆ.

Breaking: ಗುಜರಾತ್ ಚುನಾವಣೆ; ಜನರಿಗೆ ಕೇಜ್ರಿವಾಲ್ ಕೊಟ್ಟ ಭರವಸೆBreaking: ಗುಜರಾತ್ ಚುನಾವಣೆ; ಜನರಿಗೆ ಕೇಜ್ರಿವಾಲ್ ಕೊಟ್ಟ ಭರವಸೆ

ಇನ್ನೂ ಅನೇಕರು ಈ ಬೆಳವಣಿಗೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಷ್ಟಕ್ಕೂ ಯಾವುದಿದು ಗ್ಯಾಂಗ್ ರೇಪ್ ಪ್ರಕರಣ, ಬಿಲ್ಕಿಸ್ ಬಾನೊ ಯಾರು ಇತ್ಯಾದಿ ಮಾಹಿತಿ ಇಲ್ಲಿದೆ.

ಬಿಲ್ಕಿಸ್ ಬಾನೊ ಯಾರು?

ಬಿಲ್ಕಿಸ್ ಬಾನೊ ಯಾರು?

2002ರ ಗುಜರಾತ್ ಗಲಭೆ ವೇಳೆ ಉದ್ರಿಕ್ತ ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆ ಬಿಲ್ಕಿಸ್ ಬಾನೊ. ಅತ್ಯಾಚಾರಕ್ಕೊಳಗಾದಾಗ ಬಾನೊ ಐದು ತಿಂಗಳ ಗರ್ಭಿಣಿ. ದುರುಳರು ಈಕೆಯ ಮೇಲೆ ಅತ್ಯಾಚಾರ ಎಸಗಿದ್ದೂ ಅಲ್ಲದೇ, ಆಕೆಯ ಜೊತೆ ಇದ್ದ ಕುಟುಂದವರಲ್ಲಿ ಏಳು ಮಂದಿಯನ್ನು ಕೊಂದುಹಾಕಿದ್ದರು.

ಅತ್ಯಾಚಾರ ಪ್ರಕರಣ ಹೇಗೆ?

ಅತ್ಯಾಚಾರ ಪ್ರಕರಣ ಹೇಗೆ?

2002ರಲ್ಲಿ ಗೋದ್ರಾ ರೈಲು ಅಗ್ನಿ ದುರಂತ ಘಟನೆಯಲ್ಲಿ 59 ಮಂದಿ ಕರಸೇವಕರು ಬಲಿಯಾಗಿದ್ದರು. ಇದು ಮುಸ್ಲಿಮರು ನಡೆಸಿದ ಕೃತ್ಯ ಎಂಬ ಶಂಕೆಯಿಂದ ಗುಜರಾತ್‌ನಾದ್ಯಂತ ವ್ಯಾಪಕವಾಗಿ ಕೋಮುದಳ್ಳುರಿ ಹೊತ್ತಿಕೊಂಡಿತು.

ಈ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ತುಂಬು ಗರ್ಭಿಣಿಯಾಗಿರುತ್ತಾರೆ. ಒಂದು ಎಳೆಯ ಕೂಸೂ ಇರುತ್ತದೆ. ಈಕೆ ತನ್ನ ಮಗಳು ಹಾಗೂ ಇತರ 15 ಮಂದಿ ಜೊತೆ ಸುರಕ್ಷಿತ ಸ್ಥಳ ಸೇರಿಕೊಳ್ಳಲು ಊರು ತೊರೆದಿರುತ್ತಾರೆ. ಈ ವೇಳೆ, ತೋಟವೊಂದರಲ್ಲಿ ಈಕೆ ಹಾಗು ಇತರರು ಅಡಗಿಕೊಂಡಿರುತ್ತಾರೆ. ಆಗ ಅಲ್ಲಿಗೆ ಮಾರಕಾಸ್ತ್ರಗಳನ್ನು ಹೊಂದಿದ್ದ 20-30 ಮಂದಿಯ ಗುಂಪು ನುಗ್ಗುತ್ತದೆ.

ಬಿಲ್ಕಿಸ್ ಬಾನೋ ಮತ್ತಿತರರ ಮೇಲೆ ಈ ಗುಂಪು ದಾಳಿ ಮಾಡುತ್ತದೆ. ಏಳು ಮಂದಿಯನ್ನು ಕೊಂದುಹಾಕುತ್ತದೆ. ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಮೇಲೆ ಈ ದುರುಳರು ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ. ಈಕೆಯ ಜೊತೆಗೆ ಇದ್ದ ಏಳು ಮಂದಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಬಿಲ್ಕಿಸ್ ಬಾನೊ ಅವರ ಮೂರು ವರ್ಷದ ಹೆಣ್ಮಗುವನ್ನು ದುರುಳರು ಬಂಡೆಗೆ ತಲೆ ಬಡಿದು ಘೋರ ರೀತಿಯಲ್ಲಿ ಸಾಯಿಸುತ್ತಾರೆ.

ಅಪರಾಧಿಗಳ ಬಂಧನ

ಅಪರಾಧಿಗಳ ಬಂಧನ

2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಘೋರ ಘಟನೆಗಳಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಮತ್ತು ಏಳು ಮಂದಿ ಹತ್ಯೆ ಘಟನೆಯೂ ಒಂದು. ಈ ಘಟನೆಯ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸುತ್ತದೆ. 2004ರಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ.

ಈ ಪ್ರಕರಣದಲ್ಲಿ ಇದ್ದ ಸಾಕ್ಷ್ಯಾಧಾರಗಳ ನಾಶ ಅಗಬಹುದು ಮತ್ತು ಸಾಕ್ಷಿಗಳ ಪ್ರಾಣಕ್ಕೆ ಕುತ್ತುಬರಬಹುದು ಎಂದು ಬಿಲ್ಕಿಸ್ ಬಾನೊ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಕೋರಿಕೆ ಮೇರೆಗೆ ಸುಪ್ರೀಂಕೋರ್ಟ್ 2004 ಆಗಸ್ಟ್‌ನಲ್ಲಿ ಈ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುತ್ತದೆ.

ಜೀವಾವಧಿ ಶಿಕ್ಷೆ

ಜೀವಾವಧಿ ಶಿಕ್ಷೆ

2008 ಜನವರಿ 21ರಂದು ವಿಶೇಷ ಸಿಬಿಐ ಕೋರ್ಟ್ ಈ ಪ್ರಕರಣದಲ್ಲಿ ಹನ್ನೆರಡು ಮಂದಿ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸುತ್ತದೆ.

ಗರ್ಭಿಣಿಯ ಮೆಲೆ ಅತ್ಯಾಚಾರ, ಕೊಲೆ ಮತ್ತು ಕಾನೂನುಬಾಹಿರವಾಗಿ ದೊಂಬಿ ಎಸಗಿದ್ದ ಆರೋಪಗಳು ಸಾಬೀತಾಗುತ್ತವೆ. ಅದೇ ವೇಳೆ, ಇತರ ಏಳು ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಳಿಸಲಾಗುತ್ತದೆ. ಮತ್ತೊಬ್ಬ ಆರೋಪಿ ವಿಚಾರಣೆ ವೇಳೆ ಮೃತಪಟ್ಟಿರುತ್ತಾನೆ.

2019, ಏಪ್ರಿಲ್‌ನಲ್ಲಿ ಬಿಲ್ಕಿಸ್ ಬಾನೊಗೆ ಉದ್ಯೋಗ ಮತ್ತು ಒಂದು ಮನೆ ಹಾಗು 50 ಲಕ್ಷ ರೂ ಪರಿಹಾರ ಒದಗಿಸುವಂತೆ ಗುಜರಾತ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅಪ್ಪಣೆ ಮಾಡುತ್ತದೆ.

ಅಪರಾಧಿಗಳ ಬಿಡುಗಡೆ ಹೇಗೆ?

ಅಪರಾಧಿಗಳ ಬಿಡುಗಡೆ ಹೇಗೆ?

ಹನ್ನೊಂದು ಅಪರಾಧಿಗಳಾದ ರಾಜುಭಾಯ್ ಸೋನಿ, ರಾಧೇಶ್ಯಾಮ್ ಶಾ, ಕೇಸರಭಾಯಿ ವೊಹಾನಿಯಾ, ಶೈಲೇಶ್ ಭಟ್, ಬಿಪಿನ್ ಚಂದ್ರ ಜೋಶಿ, ಬಾಕಾಭಾಯಿ ವೊಹಾನಿಯಾ, ರಮೇಶ್ ಚಂದನ, ಪ್ರದೀಪ್ ಮೋರ್ಧಿಯಾ, ಜಸವಂತ್‌ಭಾಯ್ ನಾಯ್, ಮಿತೇಶ್ ಭಟ್, ಗೋವಿಂದಭಾಯ್ ನಾಯ್ ಅವರು 15 ವರ್ಷದ ಜೀವಾವಧಿ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ನಿನ್ನೆ ಸೋಮವಾರ ಬಿಡುಗಡೆಯಾಗಿದ್ದಾರೆ.

ಈ 11 ಅಪರಾಧಿಗಳಲ್ಲಿ ಒಬ್ಬಾತ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿರುತ್ತಾನೆ. ಈ ಸಂಬಂಧ ಪಂಚಮಹಲ್ಕಲೆಕ್ಟರ್ ಸುಜಲ್ ಮಾಯತ್ರ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗುತ್ತದೆ.

"ಕೆಲ ತಿಂಗಳ ಹಿಂದೆ ರಚನೆಯಾದ ಸಮಿತಿಯು ಈ ಪ್ರಕರಣದ ಎಲ್ಲಾ 11 ಅಪರಾಧಿಗಳಿಗೆ ಬಿಡುಗಡೆ ಮಾಡುವ ಒಮ್ಮತದ ನಿರ್ಧಾರ ತೆಗೆದುಕೊಂಡಿತು. ಈ ಶಿಫಾರಸನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಯಿತು. ನಿನ್ನೆ, ಅವರ ಬಿಡುಗಡೆಗೆ ಆದೇಶ ಸಿಕ್ಕಿದೆ" ಎಂದು ಮಾಯತ್ರ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Bilkis Bano was gang raped by a mob during 2002 Gujarat riots. Her 7 family members including 3 year old daughter were brutally murdered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X