ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಸಂಸ್ಥಾಪಕ ಜಾಕ್‌ರಿಂದ ವೆಬ್ 5, ಏನಿದರ ಅಸಲಿಯತ್ತು?

|
Google Oneindia Kannada News

ನ್ಯೂಯಾರ್ಕ್, ಜೂನ್ 12: ಟ್ವಿಟ್ಟರ್ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಡೋರ್ಸಿ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಭವಿಷ್ಯದ ಆಲೋಚನೆ ಮತ್ತು ತಂತ್ರಜ್ಞಾನವುಳ್ಳ Web5 ಎಂಬ ಹೊಸ ಪ್ಲಾಟ್‌ಫಾರ್ಮ್ ಆರಂಭಿಸುವುದಾಗಿ ಜ್ಯಾಕ್ ಘೋಷಿಸಿದ್ದಾರೆ.

ಇದು ನಮ್ಮ ಖಾಸಗಿ ದತ್ತಾಂಶವನ್ನು ನಮ್ಮ ಸುಪರ್ದಿಯಲ್ಲೇ ಉಳಿಸುವಂಥ ವಿನೂತನ ತಂತ್ರಜ್ಞಾನದ ವ್ಯವಸ್ಥೆಯಾಗಿದೆ. ಬ್ಲಾಕ್‌ಚೈನ್ ತಂತ್ರಜ್ಞಾನದ ಸಹಾಯದಿಂದ ವೆಬ್5 ಅನ್ನು ರೂಪಿಸಲಾಗುತ್ತಿದೆ.

ಆಧಾರ್ ಕಾರ್ಡ್ ಎಲ್ಲಿ ಬಳಸಬೇಕು, ಎಲ್ಲಿ ಬಳಸಬಾರದು, ತಿಳಿದಿರಿ ಆಧಾರ್ ಕಾರ್ಡ್ ಎಲ್ಲಿ ಬಳಸಬೇಕು, ಎಲ್ಲಿ ಬಳಸಬಾರದು, ತಿಳಿದಿರಿ

ಜಾಕ್ ಡೋರ್ಸಿ ಮಾಲಕತ್ವದ ಬ್ಲಾಕ್ ಎಂಬ ಸಂಸ್ಥೆಯ ಬಿಟ್‌ಕಾಯಿನ್ ವ್ಯವಹಾರ ಘಟಕಗಳಲ್ಲಿ ಒಂದೆನಿಸಿದ ದಿ ಬ್ಲಾಕ್ ಹೆಡ್ (The Block Head) ಕಂಪನಿಯಿಂದ ವೆಬ್5 ತಯಾರಾಗಿದೆ.

ಮೊಬೈಲ್ ಡಿಜಿಟಲ್‌ ವಹಿವಾಟಿಗೆ ಅಡ್ಡಿಯಾದ ನೆಟ್‌ವರ್ಕ್‌ಮೊಬೈಲ್ ಡಿಜಿಟಲ್‌ ವಹಿವಾಟಿಗೆ ಅಡ್ಡಿಯಾದ ನೆಟ್‌ವರ್ಕ್‌

"ವಿವಿಧ ಆ್ಯಪ್‌ಗಳಲ್ಲಿ ನಾವು ಮಾಡುವ ಲಾಗಿನ್ ಮತ್ತು ಪಾಸ್‌ವರ್ಡ್ ಇತ್ಯಾದಿ ನೂರಾರು ವೈಯಕ್ತಿಕ ದತ್ತಾಂಶಗಳನ್ನು ನೆನಪಿನಲ್ಲಿಡಲು ಮತ್ತು ಸುರಕ್ಷಿತವಾಗಿಡಲು ಕಷ್ಟಪಡುತ್ತೇವೆ. ಇವತ್ತು ನಮ್ಮ ಈ ವೈಯಕ್ತಿಕ ಮಾಹಿತಿ ಥರ್ಡ್ ಪಾರ್ಟಿಗಳಿಗೆ ಆಸ್ತಿಯಾಗಿ ಹೋಗಿದೆ. ನಮ್ಮ ಈ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಜನರು ಅವರ ವೈಯಕ್ತಿಕ ದತ್ತಾಂಶವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳಲು ಅವಕಾಶ ಇರುತ್ತದೆ" ಎಂದು ದಿ ಬ್ಲಾಕ್ ಹೆಡ್ ಹೇಳಿದೆ.

ಏನಿದು ವೆಬ್5?

ಏನಿದು ವೆಬ್5?

ವೆಬ್5 ಎಂಬುದು ವೆಬ್3 ಮತ್ತು ವೆಬ್2 ಪ್ಲಾಟ್‌ಫಾರ್ಮ್‌ಗಳ ಸಮ್ಮಿಳನವಾಗಿದೆ. ಇನ್ನೂ ಸ್ಪಷ್ಟವಾಗಬೇಕೆಂದರೆ ಈ ವೆಬ್ ಸರಣಿ ಬಗ್ಗೆ ತಿಳಿಯುವುದು ಅಗತ್ಯ. ವೆಬ್1 ಎಂದರೆ ನಾವು ನೀವು ಈಗ ಸಾಮಾನ್ಯವಾಗಿ ಬಳಸುವ ಇಂಟರ್ನೆಟ್ ವ್ಯವಸ್ಥೆಯಾಗಿದೆ. ಇಲ್ಲಿ ಬಳಕೆದಾರನದ್ದು ವೀಕ್ಷಕ ಅಥವಾ ಪ್ರೇಕ್ಷಕನ ಪಾತ್ರ ಮಾತ್ರ. ಇನ್ನು, ವೆಬ್2 ಎನ್ನುವುದು ಬಳಕೆದಾರನಿಂದ ಸೃಷ್ಟಿಯಾದ ಜಾಲ. ಸೋಷಿಯಲ್ ಮೀಡಿಯಾದ ಜಗತ್ತು.

ಈಗ ಹೆಚ್ಚು ಸುದ್ದಿಯಲ್ಲಿರುವುದು ವೆಬ್ 3. ಇದು ಇಂಟರ್ನೆಟ್‌ನ ಮುಂದಿನ ಹಂತ ಎಂದು ಬಣ್ಣಿಸಲಾಗುತ್ತಿದೆ. ಯಾವುದೇ ಸರಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಿಯಂತ್ರಣದಲ್ಲಿ ವೆಬ್3 ಇರುವುದಿಲ್ಲ. ಇದು ಸಂಪೂರ್ಣ ವಿಕೇಂದ್ರೀಕೃತ ಇಂಟರ್ನೆಟ್ ವ್ಯವಸ್ಥೆಯಾಗಿರುತ್ತದೆ. ಮೆಟಾವರ್ಸ್ ಎಂಬ ವರ್ಚುವಲ್ ಜಗತ್ತಿನ ಪರಿಕಲ್ಪನೆಗೆ ಹೋಲುತ್ತದೆ ಎಂದು ಹೇಳುತ್ತಾರೆ. ಇದೀಗ ಜಾಕ್ ಡೋರ್ಸಿ ಹೇಳಿರುವ ವೆಬ್5 ಎಂಬುದು ವೆಬ್3 ಮತ್ತು ವೆಬ್2 ಎರಡರ ಮೇಳವಾಗಿದೆ.

ವೆಬ್3 ಬದಲು ವೆಬ್5 ಯಾಕೆ?

ವೆಬ್3 ಬದಲು ವೆಬ್5 ಯಾಕೆ?

ಜಾಕ್ ಡೋರ್ಸಿ ಟ್ವಿಟ್ಟರ್‌ನಲ್ಲಿ ತಮ್ಮ ವೆಬ್5 ಪರಿಕಲ್ಪನೆಯನ್ನು ಘೋಷಣೆ ಮಾಡಿದಾಗ ಒಬ್ಬ ಯೂಸರ್ ಕೇಳಿದ ಒಂದು ಪ್ರಶ್ನೆ ಇದು: "ವಿಕೇಂದ್ರೀಕೃತ ವ್ಯವಸ್ಥೆಯ ಪರಿಕಲ್ಪನೆ ಇರುವ ವೆಬ್3 ಇದ್ದರೂ ನೀವು ಇನ್ನೂ ಮುಂದುವರಿದ ವೆಬ್5 ನ ಅಗತ್ಯತೆ ಏನು?" ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಜಾಕ್ ಡೋರ್ಸಿ ಅವರು ಬ್ಲಾಕ್‌ಚೈನ್ ಸೌಕರ್ಯ ನಿರ್ಮಾತೃಗಳ (ಸೊಲೋನಾ, ಎತಿರಿಯಂ ಇತ್ಯಾದಿ) ವೈಫಲ್ಯ ಮತ್ತು ವಿಕೇಂದ್ರೀಕೃತ ವ್ಯವಸ್ಥೆ ಬಗ್ಗೆ ಹೇಳಲಾಗುತ್ತಿರುವ ಸುಳ್ಳುಗಳನ್ನು ಪ್ರಸ್ತಾಪಿಸಿದರು. "ವೆಬ್ 3 ಎನ್ನುವುದು ಬಳಕೆದಾರನ ನಿಯಂತ್ರಣದಲ್ಲಿ ಇರುತ್ತದೆ ಎನ್ನುವುದು, ಅಥವಾ ಅದು ವಿಕೇಂದ್ರೀಕೃತ ವ್ಯವಸ್ಥೆಯಾಗಿರುತ್ತದೆ ಎಂಬುದು ಸತ್ಯವಲ್ಲ. ಅವು ಉದ್ದಿಮೆ ಹೂಡಿಕೆದಾರರು ಮತ್ತು ಪಾಲುದಾರರ ಅಂಕೆಯಲ್ಲಿ ಇರುತ್ತದೆ" ಎಂದು ಜಾಕ್ ಡೋರ್ಸಿ ಹೇಳುತ್ತಾರೆ.

ವೆಬ್5 ಕಾನ್ಸೆಪ್ಟ್ ಹೇಗೆ ಕೆಲಸ ಮಾಡುತ್ತದೆ?

ವೆಬ್5 ಕಾನ್ಸೆಪ್ಟ್ ಹೇಗೆ ಕೆಲಸ ಮಾಡುತ್ತದೆ?

ವೆಬ್5 ವ್ಯವಸ್ಥೆಯಲ್ಲಿ ಎರಡು ಪ್ರಮುಖ ಕಲ್ಪನೆಗಳಿವೆ. ಒಬ್ಬ ಬಳಕೆದಾರನಿಗೆ ಆತನ ಎಲ್ಲಾ ವೈಯಕ್ತಿಕ ಮಾಹಿತಿಯ ಎಲ್ಲಾ ನಿಯಂತ್ರಣ ಒದಗಿಸಲಾಗುವುದು ಒಂದು ಅಂಶ. ಹಾಗೆಯೇ, ಒಬ್ಬ ಬಳಕೆದಾರ ತನ್ನ ಗುರುತನ್ನು ತನ್ನ ನಿಯಂತ್ರಣದಲ್ಲೇ ಇರಿಸಿಕೊಳ್ಳಬಹುದಾದದ್ದು ಇನ್ನೊಂದು ಅಂಶ. ಈ ವೆಬ್5 ನಲ್ಲಿ ವ್ಯಾಲೆಟ್, ವಿಕೇಂದ್ರೀಕೃತ ವೆಬ್ ನೋಡ್ (DWNs- Decentralized Web Nodes) ಮತ್ತು ವಿಕೇಂದ್ರೀಕೃತ ವೆಬ್ ಆ್ಯಪ್ (DWAs- Decentralized Web Apps) ಎಂಬ ಹಂತಗಳಿರುತ್ತವೆ.

ಡಿಜಿಟಲ್ ವ್ಯಾಲಟ್ ಉದಾಹರಣೆ

ಡಿಜಿಟಲ್ ವ್ಯಾಲಟ್ ಉದಾಹರಣೆ

ವೆಬ್ 5 ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಇನ್ನೂ ಗೊಂದಲ ಇರುವುದು ಸಹಜ. ಇಲ್ಲಿ ಒಂದು ವಾಸ್ತವಿಕ ಉದಾಹರಣೆ ನಿಮ್ಮ ಗೊಂದಲಕ್ಕೆ ಪರಿಹಾರ ಒದಗಿಸಬಹುದು. ರೀಟಾ ಎಂಬ ಹುಡುಗಿ ಬಳಿ ಒಂದು ಡಿಜಿಟಲ್ ವ್ಯಾಲಟ್ ಇರುತ್ತದೆ ಎಂದಿಟ್ಟುಕೊಳ್ಳಿ. ಈ ಡಿಜಿಟಲ್ ವ್ಯಾಲಟ್‌ನಲ್ಲಿ ಆಕೆಯ ಗುರುತು, ಡಾಟಾ, ವಿವಿಧ ಆ್ಯಪ್ ಇತ್ಯಾದಿಗಳೊಂದಿಗಿನ ಲಾಗಿನ್ ವಿವರ ಮುಂತಾದವು ಇರುತ್ತದೆ.

ವಿಕೇಂದ್ರೀಕೃತವಾದ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್‌ವೊಂದಕ್ಕೆ ಲಾಗಿನ್ ಆಗಲು ರೀಟಾಗೆ ತನ್ನ ಡಿಜಿಟಲ್ ವ್ಯಾಲಟ್ ಸಾಕಾಗುತ್ತದೆ. ಅಂದರೆ ಆಕೆ ಈ ಸೋಷಿಯಲ್ ಮೀಡಿಯಾ ಆ್ಯಪ್‌ಗೆ ಪ್ರತ್ಯೇಕವಾಗಿ ಪ್ರೊಫೈಲ್ ಇತ್ಯಾದಿ ರಚಿಸುವ ಅಗತ್ಯ ಇರುವುದಿಲ್ಲ. ಈ ಆ್ಯಪ್‌ನಲ್ಲಿ ಆಕೆ ಮಾಡುವ ಪೋಸ್ಟ್ ಎಲ್ಲವೂ ಡೀಸೆಂಟ್ರಲೈಸಡ್ ವೆಬ್ ನೋಡ್ ಮೂಲಕ ಆಕೆಯ ನಿಯಂತ್ರಣದಲ್ಲೇ ಇರುತ್ತವೆ. ಈಗ ರೀಟಾ ತನ್ನೆಲ್ಲಾ ಸಾಮಾಜಿಕ ಚಟುವಟಿಕೆಯ ಮಾಹಿತಿಯನ್ನು ಬೇರೆ ಆ್ಯಪ್‌ಗಳಲ್ಲೂ ಬೇಕಾದಲ್ಲಿ ತೆಗೆದುಕೊಂಡು ಹೋಗಬಹುದು. ನಿಮ್ಮ ಹೆಜ್ಜೆ ಗುರುತುಗಳನ್ನು ನೀವು ಬೇಕಾದಲ್ಲಿ ಮೂಡಿಸುವ ಅವಕಾಶ ಇರುತ್ತದೆ.

ಸರಳ ನಿದರ್ಶನ

ಸರಳ ನಿದರ್ಶನ

ವೆಬ್5 ಪ್ಲಾಟ್‌ಫಾರ್ಮ್‌ನ ಉಪಯುಕ್ತತೆ ಬಗ್ಗೆ ಇನ್ನೂ ಒಂದು ಸರಳ ನಿದರ್ಶನ ನೀಡಬಹುದು. ನೀವು ಸಂಗೀತಪ್ರೇಮಿಯಾಗಿದ್ದರೆ ಸ್ಟಾಪಿಫೈ, ರಾಗಾ ಇತ್ಯಾದಿ ಅನೇಕ ಮ್ಯೂಸಿಕ್ ಆ್ಯಪ್‌ಗಳನ್ನು ಹೊಂದಿರುತ್ತೀರಿ. ಅಲ್ಲೆಲ್ಲಾ ನೀವು ಪ್ರತ್ಯೇಕವಾಗಿ ನಿಮ್ಮಿಚ್ಛೆಯ ಪ್ಲೇಲಿಸ್ಟ್‌ಗಳನ್ನು ತಯಾರಿಸಬೇಕಾಗುತ್ತದೆ. ಅಧರೆ, ವೆಬ್5ನಲ್ಲಿ ಆ ಪ್ರಮೇಯ ಬರುವುದಿಲ್ಲ. ನೀವು ಒಂದು ಮ್ಯೂಸಿಕ್ ಆ್ಯಪ್‌ನಲ್ಲಿ ನಿಮ್ಮ ಆದ್ಯತೆಗಳನ್ನು ನಮೂದಿಸಿದರೆ ಅದೇ ದತ್ತಾಂಶವನ್ನು ಬೇರೆ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲೂ ಮುಂದುವರಿಸಿಕೊಂಡು ಹೋಗಬಹುದು.

ಇನ್ನೂ ಸರಳ ಎಂದರೆ, ನೀವು ಜಿಮೇಲ್ ಅಕೌಂಟ್ ಹೊಂದಿದಲ್ಲಿ ಯೂಟ್ಯೂಬ್‌ಗೂ ನೀವು ಆಟೊಮ್ಯಾಟಿಕ್ ಆಗಿ ಲಾಗಿನ್ ಆಗಬಹುದು. ನೀವು ಪ್ರತ್ಯೇಕವಾಗಿ ಪಾಸ್‌ವರ್ಡ್ ಹಾಕುವ ಪ್ರಮೇಯ ಇರುವುದಿಲ್ಲ. ಯೂಟ್ಯೂಬ್‌ನಲ್ಲಿ ನೀವು ಬೇಕಾದಲ್ಲಿ ಮಾತ್ರ ಪ್ರತ್ಯೇಕ ಪ್ರೊಫೈಲ್ ನಮೂದಿಸಬಹುದು. ಯೂಟ್ಯೂಬ್‌ನ ಮಾಲಕತ್ವ ಗೂಗಲ್ ಬಳಿ ಇರುವುದರಿಂದ ಇದು ಸಾಧ್ಯವಾಗಿದೆ. ಇಂಥದ್ದೇ ರೀತಿಯ ವ್ಯವಸ್ಥೆ ಹಾಗು ಬಳಕೆದಾರನಿಗೆ ಆತನ ದತ್ತಾಂಶದ ಮೇಲೆ ಹೆಚ್ಚು ನಿಯಂತ್ರಣ ಕೊಡುವ ಮುಂದುವರಿದ ವ್ಯವಸ್ಥೆ ಇಡೀ ಅಂತರ್ಜಾಲದಲ್ಲಿ ಒದಗಿಸುವುದೇ ವೆಬ್5 ತಂತ್ರಜ್ಞಾನದ ವಿಶೇಷತೆ..

(ಒನ್ಇಂಡಿಯಾ ಸುದ್ದಿ)

English summary
Former Twitter CEO Jack Dorsey has announced a new platform on Twitter called ‘Web5’, a combination of Web3 and Web 2.0, built on the Bitcoin blockchain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X