ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಒಳಗೊಂಡಿರುವ ಕ್ವಾಡ್ ಗುಂಪು ಏನು? ಚೀನಾಗೆ ಕಣ್ಣುರಿ ಯಾಕೆ?

|
Google Oneindia Kannada News

ಅಪರಿಮಿತ ಜನಸಂಖ್ಯಾ ಬಲ ಮತ್ತು ಮಿಲಿಟರಿ ಬಲ ಹೊಂದಿರುವ ಭಾರತ ಜಾಗತಿಕ ರಾಜಕೀಯದಲ್ಲಿ ಯಾವತ್ತೂ ನಿಕೃಷ್ಟವಾಗಿ ಉಳಿದಿಲ್ಲ. ಇಂದು ಜಾಗತಿಕವಾಗಿ ಪ್ರಮುಖ ಬೆಳವಣಿಗೆಗಳಲ್ಲಿ ಭಾರತದ ಪಾತ್ರ ಸ್ವಲ್ಪವಾದರೂ ಇರುತ್ತದೆ. ಇದೀಗ ಜಪಾನ್ ದೇಶದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆ ಅನೇಕ ರಾಷ್ಟ್ರಗಳ ಗಮನ ಸೆಳೆದಿದೆ. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ಒಂದು ಸಹಕಾರ ಗುಂಪು ಇದಾಗಿದ್ದು, ಈ ನಾಲ್ಕು ದೇಶಗಳ ಮುಖ್ಯಸ್ಥರು ಮುಖತಃ ಭೇಟಿಯಾಗಿ ವಿವಿಧ ವಿಚಾರಗಳನ್ನು ಚರ್ಚಿಸಿದ್ದಾರೆ, ಹಲವು ಸಹಕಾರ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರೆ.

ಭಾರತ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಜಪಾನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿಗಳಿಗೆ ಇದು ಮೊದಲ ಕ್ವಾಡ್ ಸಭೆ ಹೌದು.

ಪಾಂಗೋಂಗ್ ತ್ಸೋ ಮೇಲೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಭಾರತಕ್ಕೆ ಎಷ್ಟು ಅಪಾಯಕಾರಿ?ಪಾಂಗೋಂಗ್ ತ್ಸೋ ಮೇಲೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಭಾರತಕ್ಕೆ ಎಷ್ಟು ಅಪಾಯಕಾರಿ?

ಈ ನಾಲ್ಕು ದೇಶಗಳ ಈ ಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದನ್ನು ಖಂಡಿಸುವುದು ಅಧಿಕೃತ ಅಜೆಂಡಾ ಇದ್ದಂತಿದೆಯಾದರೂ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಮಿಲಿಟರಿ ಮತ್ತು ನಾಗರಿಕ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆಗಳಾಗಿವೆ. ನಾಲ್ಕು ರಾಷ್ಟ್ರಗಳು ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದಾರೆ. ಉದಾಹರಣೆಗೆ, ಭಾರತ ಮತ್ತು ಅಮೆರಿಕ ಮಧ್ಯೆ ದ್ವಿಪಕ್ಷೀಯ ಚರ್ಚೆಗಳಾದವು. ಜಪಾನ್ ಜೊತೆ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಿತು. ಆಸ್ಟ್ರೇಲಿಯಾ ಪ್ರಧಾನಿ ಜೊತೆಗೂ ಮೋದಿ ಪ್ರತ್ಯೇಕವಾಗಿ ಮಾತನಾಡಿದರು.

ಕ್ವಾಡ್ ಎಂದರೇನು?

ಕ್ವಾಡ್ ಎಂದರೇನು?

ಕ್ವಾಡ್ರಿಲಾಟರಲ್ ಸೆಕ್ಯೂರಿಟಿ ಡೈಲಾಗ್ ಎಂಬುದಕ್ಕೆ ಕ್ವಾಡ್ ಎಂದು ಸರಳವಾಗಿ ಕರೆಯುತ್ತಾರೆ. ಕ್ವಾಡ್ ಎಂದರೆ ನಾಲ್ಕು ಎಂದೂ ಆಗುತ್ತದೆ. ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ಈ ನಾಲ್ಕು ದೇಶಗಳು ಸೇರಿ ಮಾಡಿರುವ ಗುಂಪಾದ್ದರಿಂದ ಕ್ವಾಡ್ ಎಂದೇ ಕರೆಯಲಾಗುತ್ತಿದೆ.

ಕ್ವಾಡ್ ಆರಂಭ

ಕ್ವಾಡ್ ಆರಂಭ

2004ರಲ್ಲಿ ಭಾರತ, ಇಂಡೋನೇಷ್ಯಾ ಮೊದಲಾದ ಕಡೆ ಭೀಕರ ಸುನಾಮಿ ರಾಚಿತ್ತು. ಆಗ ಪರಿಹಾರ ಕಾರ್ಯಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗುವಂತೆ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ದೇಶಗಳು ಅನೌಪಚಾರಿಕವಾಗಿ ಮೈತ್ರಿ ರೀತಿಯ ಸಹಕಾರ ಗುಂಪು ಮಾಡಿಕೊಂಡವು. 2007ರಲ್ಲಿ ಅಂದಿನ ಜಪಾನ್ ಪ್ರಧಾನಿ ಶಿಂಜೋ ಆಬೆ ಈ ಕ್ವಾಡ್ ಗುಂಪಿಗೆ ಅಧಿಕೃತತೆ ತರುವ ಪ್ರಯತ್ನ ಮಾಡಿದರು.

ಭಾರತಕ್ಕೆ ಒಮ್ಮೆಯಾದರೂ ಬನ್ನಿ ಜಪಾನಿ ಯುವಕರಿಗೆ ಪ್ರಧಾನಿ ಮೋದಿ ಕರೆಭಾರತಕ್ಕೆ ಒಮ್ಮೆಯಾದರೂ ಬನ್ನಿ ಜಪಾನಿ ಯುವಕರಿಗೆ ಪ್ರಧಾನಿ ಮೋದಿ ಕರೆ

ಆಸ್ಟ್ರೇಲಿಯಾ 10 ವರ್ಷ ಔಟ್

ಆಸ್ಟ್ರೇಲಿಯಾ 10 ವರ್ಷ ಔಟ್

ಜಪಾನ್ ಪ್ರಧಾನಿ ಪ್ರಯತ್ನದ ಫಲವಾಗಿ ಕ್ವಾಡ್ ಗುಂಪಿಗೆ 2007ರಲ್ಲಿ ಅಧಿಕೃತತೆ ಸಿಕ್ಕಿತಾದರೂ ಅದಾಗಿ ಒಂದು ವರ್ಷದಲ್ಲೇ ಆಸ್ಟ್ರೇಲಿಯಾ ಈ ಗುಂಪಿನಿಂದ ಹೊರಬಿದ್ದಿತು. ಚೀನಾವನ್ನು ಹತ್ತಿಕ್ಕಲು ಕ್ವಾಡ್ ರೂಪಿಸಲಾಗಿದೆ ಎಂಬ ವಾದ ಇತ್ತಾದ್ದರಿಂದ ಆಸ್ಟ್ರೇಲಿಯಾಗೆ ಚೀನಾವನ್ನು ಎದಿರುಹಾಕಿಕೊಳ್ಳುವ ಮನಸ್ಸಾಗಲೀ ಧೈರ್ಯವಾಗಲೀ ಇರಲಿಲ್ಲ. ಹೀಗಾಗಿ, ಹೆಚ್ಚೂಕಡಿಮೆ 8-10 ವರ್ಷ ಕಾಲ ಆಸ್ಟ್ರೇಲಿಯಾ ಕ್ವಾಡ್‌ನಿಂದ ದೂರ ಉಳಿಯಿತು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಚೀನಾ ಪೆಸಿಫಿಕ್ ಸಾಗರ ವ್ಯಾಪ್ತಿಯಲ್ಲಿ ಸಾಧಿಸುತ್ತಿರುವ ಪ್ರಾಬಲ್ಯ, ಏರಿಕೆಯಾಗುತ್ತಿರುವ ಅದರ ಮಿಲಿಟರಿ ಬಲ ಇತ್ಯಾದಿ ಅಂಶಗಳು ಆಸ್ಟ್ರೇಲಿಯಾವನ್ನು ಕ್ವಾಡ್‌ನತ್ತ ವಾಪಸ್ ತರುವಂತೆ ಮಾಡಿತು, 2017ರಲ್ಲಿ ಕ್ವಾಡ್ ಮತ್ತೆ ಸೆಟೆದು ನಿಂತಿತು. ಈಗ ನಡೆದದ್ದು ಕ್ವಾಡ್‌ನ ನಾಲ್ಕನೇ ಶೃಂಗಸಭೆ. 2017ರಿಂದಲೂ ಈ ನಾಲ್ಕು ದೇಶಗಳು ಮಿಲಿಟರಿ ಡ್ರಿಲ್‌ಗಳನ್ನು ನಡೆಸಿ ಚೀನಾವನ್ನು ಉರಿಸುವ ಕೆಲಸ ಮಾಡುತ್ತಿವೆ.

ಕ್ವಾಡ್ ಪ್ಲಸ್

ಕ್ವಾಡ್ ಪ್ಲಸ್

ಕ್ವಾಡ್ ಗುಂಪಿನಲ್ಲಿ ಕೇವಲ ನಾಲ್ಕು ದೇಶಗಳು ಇವೆಯಾದರೂ, ಈ ಮೈತ್ರಿ ಮಾಡಿಕೊಂಡ ಉದ್ದೇಶ ಕೇವಲ ನಾಲ್ಕು ದೇಶಗಳಿಗೆ ಮಾತ್ರ ಸೀಮಿತವಾಗಿರಬೇಕೆಂದಿರಲಿಲ್ಲ. ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಚೀನಾವನ್ನು ಹೊರತುಪಡಿಸಿ ಬಹುತೇಕ ಮಿಕ್ಕ ದೇಶಗಳನ್ನು ಈ ಕೂಟದಲ್ಲಿ ಒಳಗೊಂಡು ದೊಡ್ಡ ಗುಂಪು ತಯಾರಾಗುವುದು ಮೂಲ ಉದ್ದೇಶ ಎನ್ನಲಾಗಿದೆ. ಈಗ ಗುಂಪನ್ನು ವಿಸ್ತರಿಸಲು ನಾಲ್ಕು ದೇಶಗಳು ಮನಸು ಮಾಡಿವೆ. ಸೌತ್ ಕೊರಿಯಾ, ನ್ಯೂಜಿಲೆಂಡ್, ವಿಯೆಟ್ನಾಂ ಮೊದಲಾದ ದೇಶಗಳನ್ನು ಒಳಗೊಂಡಿರುವ ಕ್ವಾಡ್ ಪ್ಲಸ್ ಮೈತ್ರಿ ಆರಂಭವಾಗಬಹುದು. ಮಧ್ಯ ಏಷ್ಯಾದ ದೇಶಗಳು, ಆಗ್ನೇಯ ಏಷ್ಯನ್ ದೇಶಗಳು, ಮಂಗೋಲಿಯಾ, ಕೊರಿಯಾ ಮೊದಲಾದ ದೇಶಗಳನ್ನು ಗುಂಪಿಗೆ ಸೇರಿಸಿಕೊಳ್ಳಬೇಕೆನ್ನುವ ಪ್ರಸ್ತಾಪವೂ ಇದೆ.

ಚೀನಾ ಮೇಲೆ ಗಮನ

ಚೀನಾ ಮೇಲೆ ಗಮನ

ಕಮ್ಯೂನಿಸ್ಟ್ ರಾಷ್ಟ್ರವಾದ ಚೀನಾದ ಬಲ ಕಳೆದ ಕೆಲ ದಶಕಗಳಿಂದ ಗಣನೀಯವಾಗಿ ಹೆಚ್ಚುತ್ತಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಸೇನಾ ಬಲದಲ್ಲಿ ಅಮೆರಿಕಕ್ಕೆ ಸೆಡ್ಡು ಹೊಡೆಯುವಷ್ಟು ಶಕ್ತಿಯನ್ನು ಚೀನಾ ಹೆಚ್ಚಿಸಿಕೊಳ್ಳುತ್ತಿದೆ. ಇದಿಷ್ಟೇ ಆಗಿದ್ದರೆ ಆರ್ಥಿಕ ಪೈಪೋಟಿ ಎಂದು ಅಮೆರಿಕ ಸುಮ್ಮನಾಗಬಹುದಿತ್ತು. ಆದರೆ, ಪೆಸಿಫಿಕ್ ಸಾಗರ ವ್ಯಾಪ್ತಿಗೆ ಬರುವ ಸೌತ್ ಚೀನಾ ಸೀ ಮೊದಲಾದ ಸಮುದ್ರ ಪ್ರದೇಶದಲ್ಲಿ ಚೀನಾ ಕಬಳಿಕೆ ಮಾಡುತ್ತಿದೆ. ಅಪಾರ ನೈಸರ್ಗಿಕ ಸಂಪತ್ತು ಇರುವ ಈ ಪ್ರದೇಶದಲ್ಲಿ ಬಹುತೇಕ ಭಾಗ ತನ್ನದು ಎಂದು ಚೀನಾ ಹೇಳಿಕೊಳ್ಳುತ್ತಿದೆ. ಇಡೀ ಪ್ರದೇಶದ ಮೇಲೆ ಹಕ್ಕು ಚಲಾಯಿಸುತ್ತಿದೆ. ಬೇರೆ ದೇಶಗಳ ಹಡಗುಗಳು ಇಲ್ಲಿ ಸಂಚಾರ ಮಾಡಲು ಚೀನಾದ ಅನುಮತಿ ಬೇಕು ಎಂಬಂತಾಗಿದೆ. ಸೌತ್ ಚೀನಾ ಸಮುದ್ರ ಭಾಗದಲ್ಲಿ ಇರುವ ಫಿಲಿಪ್ಪೈನ್ಸ್ ಮುಂತಾದ ಸಣ್ಣಪುಟ್ಟ ರಾಷ್ಟ್ರಗಳನ್ನು ಚೀನಾ ಬೆದರಿಸಿ ತನ್ನ ಹಕ್ಕು ಸ್ಥಾಪಿಸುತ್ತಿದೆ. ಹೀಗಾಗಿ, ಚೀನಾ ಮೇಲೆ ಹಲವು ದೇಶಗಳು ಒಳಗಿಂದೊಳಗೆ ಮುರಿದುಕೊಂಡುಬೀಳುತ್ತಿವೆ.

ಕ್ವಾಡ್ ಆರಂಭದ ಉದ್ದೇಶ

ಕ್ವಾಡ್ ಆರಂಭದ ಉದ್ದೇಶ

ಕ್ವಾಡ್ ಗುಂಪು ರಚನೆ ಮಾಡಿದ್ದೇ ಚೀನಾದ ಪ್ರಾಬಲ್ಯಕ್ಕೆ ಒಂದು ಕೊಕ್ಕೆ ಹಾಕಲೆಂದು ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಅಧಿಕೃತವಾಗಿ ಇದರ ಮುಖ್ಯ ಉದ್ದೇಶ ಸಾಗರ ಪ್ರದೇಶದಲ್ಲಿ ಭದ್ರತೆ, ಕೋವಿಡ್ ಬಿಕ್ಕಟ್ಟಿಗೆ ಪರಿಹಾರ, ಹವಾಮಾನ ಬದಲಾವಣೆಯ ಅಪಾಯವನ್ನು ಎದುರಿಸುವ ಕ್ರಮ, ಹೂಡಿಕೆಯ ವಾತಾವರಣ ನಿರ್ಮಾಣ, ವಿನೂತನ ತಂತ್ರಜ್ಞಾನ ಅಳವಡಿಕೆಗೆ ಉತ್ತೇಜನ ಇತ್ಯಾದಿ ಇವೆ.

ಭಾರತ-ಪೆಸಿಫಿಕ್ ಪ್ರದೇಶದಲ್ಲಿ ಸಂಚಾರಕ್ಕೆ ಮುಕ್ತವಾಗಿರುವ ಸಮುದ್ರ ಮಾರ್ಗಗಳನ್ನು ರೂಪಿಸುವುದು ಕ್ವಾಡ್ ಗುಂಪಿನ ಇನ್ನೊಂದು ಮುಖ್ಯೋದ್ದೇಶ.

ಕ್ವಾಡ್ ಹಲ್ಲಿಲ್ಲದ ಹಾವೇ?

ಕ್ವಾಡ್ ಹಲ್ಲಿಲ್ಲದ ಹಾವೇ?

2017ರಲ್ಲಿ ಕ್ವಾಡ್ ಪುನಶ್ಚೇತನಗೊಂಡರೂ ದುರದೃಷ್ಟವೆಂಬಂತೆ ಪ್ರಬಲ ವ್ಯವಸ್ಥೆ ಇರುವ ಮೈತ್ರಿಗುಂಪಾಗಿಲ್ಲ. ಬಹುಪಕ್ಷೀಯ ಸಂಘಟನೆಗಳಲ್ಲಿ ಇರುವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಖಾಯಂ ಸಂಸ್ಥೆಯ ವ್ಯವಸ್ಥೆ ಇಲ್ಲ, ಸೆಕ್ರೆಟರಿಯಾಟ್ ಇಲ್ಲ. ಅಮೆರಿಕ ಹಾಗು ಕೆಲ ಯೂರೋಪಿಯನ್ ರಾಷ್ಟ್ರಗಳು ಸೇರಿ ಮಾಡಿರುವ ನಾಟೋ ಸಂಘಟನೆಯ ರೀತಿಯಲ್ಲಿ ಕ್ವಾಡ್ ದೇಶಗಳ ಮಧ್ಯೆ ರಕ್ಷಣಾ ಒಪ್ಪಂದಗಳಿಲ್ಲ. ಐರೋಪ್ಯ ಒಕ್ಕೂಟ ಅಥವಾ ವಿಶ್ವಸಂಸ್ಥೆಯ ರೀತಿಯಲ್ಲಿ ನೀತಿ ರೂಪಿಸುವ ಕಾರ್ಯವೂ ಕ್ವಾಡ್ ಗುಂಪಿನಲ್ಲಿ ಆಗಿಲ್ಲ. ಇದರ ಬದಲಾಗಿ ಈ ನಾಲ್ಕು ದೇಶಗಳ ಮಧ್ಯೆ ಚಾಲ್ತಿಯಲ್ಲಿರುವ ಒಪ್ಪಂದಗಳನ್ನು ವಿಸ್ತರಿಸುವುದರತ್ತ ಹೆಚ್ಚು ಗಮನ ಕೊಡಲಾಗುತ್ತಿದೆ. ಬರೀ ಬಾಯಿ ಮಾತಿನ ಚಟುವಟಿಕೆಗಳಾಗುತ್ತಿವೆ ಎಂಬ ಟೀಕೆ ಇದೆ.

ಚೀನಾ ಗಲಾಟೆ ಯಾಕೆ?

ಚೀನಾ ಗಲಾಟೆ ಯಾಕೆ?

ಕ್ವಾಡ್ ಗುಂಪಿನಿಂದ ಈವರೆಗೂ ಚೀನಾ ವಿರುದ್ಧವಾಗಿ ಯಾವ ನಡೆಯೂ ಬಂದಿಲ್ಲ. ಆದರೂ ಕೂಡ ಕೆಲ ಬಾರಿ ಚೀನಾ ರಾಜತಾಂತ್ರಿಕ ವಾಹಿನಿ ಮೂಲಕ ಪ್ರತಿಭಟನೆ ನಡೆಸಿದ್ದು ಇದೆ. ನಾಲ್ಕು ದೇಶಗಳ ಸೇನೆಗಳು ಮಲಬಾರ್ ಮಿಲಿಟರಿ ಡ್ರಿಲ್ ನಡೆಸುವುದು ಚೀನಾವನ್ನು ಪರೋಕ್ಷವಾಗಿ ಚುಚ್ಚುತ್ತಿದೆ. ಇಷ್ಟು ಮಾತ್ರಕ್ಕೆ ಚೀನಾ ಉರಿದುಕೊಂಡು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಚೀನಾ ಹೊರತುಪಡಿಸಿ ಪೆಸಿಫಿಕ್ ಮಹಾಸಾಗರ ವ್ಯಾಪ್ತಿಯ ಬೇರೆಲ್ಲಾ ದೇಶಗಳನ್ನೂ ಗುಂಪಿಗೆ ಒಳಗೊಳ್ಳುವ ಪ್ರಸ್ತಾವಗಳು ಚೀನಾವನ್ನು ಕುಟುಕುತ್ತಿವೆ. ಚೀನಾದ ಪರಮಶತ್ರುವಾಗಿರುವ ಅಮೆರಿಕ ಮತ್ತು ಭಾರತ ಈ ಗುಂಪಿನ ಸದಸ್ಯರಾಗಿರುವುದೂ ಚೀನಾಗೆ ನಡುಕ ಹುಟ್ಟಿಸಿದೆ.

English summary
India, Japan, America and Australia have formed QUAD group to co-operate on various matters including maritime security, trade relations, investment, disaster management etc. The unstated objective is probable to tackle China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X