ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋ ಇಂಡಿಯಾ ವಿಶೇಷ : ಬೀದರ್ ವಾಯುನೆಲೆಯ 'ಸೂರ್ಯಕಿರಣ' ಏರ್ ಕ್ರಾಫ್ಟ್

|
Google Oneindia Kannada News

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 20ರಿಂದ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನ ಆರಂಭಗೊಂಡಿದೆ. ತಾಲೀಮು ನಡೆಸುತ್ತಿರುವ ವೇಳೆ ಹಾಕ್ ವಿಮಾನಗಳಾದ ಸೂರ್ಯ ಕಿರಣ್ ಡಿಕ್ಕಿ ಹೊಡೆದು ಓರ್ವ ಪೈಲಟ್ ಮೃತಪಟ್ಟ ಘಟನೆ ನಡೆದಿದೆ. ಸೂರ್ಯ ಕಿರಣ್ ವೈಮಾನಿಕ ಪ್ರದರ್ಶನ ವಿಮಾನ ತಂಡದ ಬಗ್ಗೆ ಒಂದಷ್ಟು ಸಂಗತಿ ಇಲ್ಲಿದೆ...

ಭಾರತೀಯ ವಾಯು ಸೇನೆ(ಐಎಎಫ್) ನ ಏರೋಬ್ಯಾಟಿಕ್ಸ್ ಪ್ರದರ್ಶನ ತಂಡವಾಗಿರುವ ಸೂರ್ಯ ಕಿರಣ್(SKAT) ಆರಂಭವಾಗಿದ್ದು, 1996ರಲ್ಲಿ. ಐಎಎಫ್ ನ 52ನೇ ಸ್ಕ್ವಾಡ್ರನ್ ನ ಭಾಗವಾಗಿದೆ.

9 ವಿಮಾನಗಳ ತಂಡ ಒಮ್ಮೆಗೆ ಗಗನಕ್ಕೆ ಚಿಮ್ಮಿ ಪ್ರದರ್ಶನ ನೀಡುತ್ತವೆ. 2011ರ ತನಕ ಎಚ್ಎಎಲ್ ನಿರ್ಮಿತ ಈಗ ಸೂರ್ಯ ಕಿರಣ್ ವಿಮಾನವು ಮಿಲಿಟರಿ ತರಬೇತಿ ಏರ್ ಕ್ರಾಫ್ಟ್ ಆಗಿ ಬಳಕೆಯಲ್ಲಿತ್ತು.

Know More about Surya Kiran of Indian Air Force

ಕರ್ನಾಟಕದ ಬೀದರ್ ವಾಯುನೆಲೆಯ ಸೂರ್ಯ ಕಿರಣ್ ವಿಮಾನಗಳನ್ನು 2011ರಲ್ಲಿ ಸ್ಥಗಿತಗೊಳಿಸಲಾಯಿತು. ಆದರೆ, 2017ರಲ್ಲಿ ಹಾಕ್ ಎಂಕೆ132 ಏರ್ ಕ್ರಾಫ್ಟ್ ಗಳು ಮತ್ತೆ ಹಾರಾಟ ಆರಂಭಿಸಿದವು.

'Always the Best' ಎಂಬ ಧ್ಯೇಯ ವಾಕ್ಯದೊಡನೆ ಕಿತ್ತಳೆ ಹಾಗೂ ಬಿಳಿ ಬಣ್ಣದ ಈ ವಿಮಾನಗಳು ಆಕರ್ಷಣೀಯವಾಗಿರುತ್ತವೆ.

2011ರ ಕಿರಣ್ Mk II ಏರ್ ಕ್ರಾಫ್ಟ್ ಒಂದು ಗಂಟೆಗೆ 450 ಕಿಮೀ ವೇಗದಲ್ಲಿ ಚಲಿಸುತ್ತದೆ. ಆದರೆ, ಈ ಹೊಸ Hawk ಏರ್ ಕ್ರಾಫ್ಟ್ ಒಂದು ಗಂಟೆಗೆ ಸುಮಾರು 650 ಕಿಮೀ ವೇಗದಲ್ಲಿ ಚಲಿಸುತ್ತದೆ. 2017ರಲ್ಲಿ ಏರೋ ಇಂಡಿಯಾಕ್ಕೆ ಮರಳಿದ ಸೂರ್ಯ ಕಿರಣ್ ವಿಮಾನದ ಏರೋಬ್ಯಾಟಿಖ್ ನೇತೃತ್ವವನ್ನು ಕಮ್ಯಾಂಡರ್ ವೇಣು ನಂಬೀಸನ್ ವಹಿಸಿಕೊಂಡಿದ್ದರು.

ಅಪಘಾತಗಳು:
2006ರಲ್ಲಿ ಮಾರ್ಚ್ 18ರಂದು ಬೀದರ್ ವಾಯುನೆಲೆಯ್ಲ್ಲಿ ತರಬೇತಿ ವೇಳೆ ಸೂರ್ಯ ಕಿರಣ್ ವಿಮಾನ ಸ್ಫೋಟಗೊಂಡು ವಿಂಗ್ ಕಮ್ಯಾಂಡರ್ ಧೀರಜ್ ಭಾಟೀಯಾ ಹಾಗೂ ಸ್ಕ್ವಾಡ್ರನ್ ಲೀಡರ್ ಶೈಲಂದರ್ ಸಿಂಗ್ ತೀವ್ರವಾಗಿ ಗಾಯಗೊಂಡರು.

2007ರಲ್ಲಿ ಎಚ್ ಜೆ ಟಿ 16 ಕಿರಣ್ ಮಿಲಿಟರಿ ತರಬೇತಿ ವಿಮಾನವು ಏರೋಬ್ಯಾಟಿಕ್ ಪ್ರದರ್ಶನದ ವೇಳೆ ಬಿಜು ಪಟ್ನಾಯಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಅದೃಷ್ಟವಶಾತ್, ಪೈಲಟ್ ಪ್ರಾಣಪಾಯದಿಂದ ಬಚಾವಾದರು.

2009ರ ಜನವರಿ 21ರಂದು ಬೀದರ್ ನಲ್ಲಿ ತರಬೇತಿ ವೇಳೆ ವಿಮಾನ ಅಪಘಾತವಾಗಿ ವಿಂಗ್ ಕಮ್ಯಾಂಡರ್ ಆರ್ ಎಸ್ ಧಳಿವಾಲ್ ಅವರು ತೀವ್ರವಾಗಿ ಗಾಯಗೊಂಡರು.

2019ರ ಫೆಬ್ರವರಿ 19ರಂದು ಎರಡು ಸೂರ್ಯ ಕಿರಣ್ ವಿಮಾನಗಳು ಅಪಘಾತಕ್ಕೀಡಾಗಿ, ಓರ್ವ ಪೈಲಟ್ ಸಾಹಿಲ್ ಗಾಂಧಿ ಮೃತಪಟ್ಟರೆ, ಉಳಿದ ಮೂವರಿಗೆ ತೀವ್ರಗಾಯಗಳಾಯಿತು.

English summary
Surya Kiran is an aerobatics demonstration team of the Indian Air Force. The Surya Kiran Aerobatic Team (SKAT) was formed in 1996 and are a part of the 52nd Squadron of the IAF.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X