ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವತ್ತು ನಗದೀಕರಣ: 6 ಲಕ್ಷ ಕೋಟಿ ರು ಅಂದಾಜು ಹಾಕಿದ ಎನ್‌ಎಂಪಿ

|
Google Oneindia Kannada News

ನವದೆಹಲಿ, ಆಗಸ್ಟ್ 24: ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಕಾಯಗಳ ಆಸ್ತಿ ನಗದೀಕರಣ ಪೈಪ್‌ಲೈನ್‌ಗೆ ಚಾಲನೆ ನೀಡಿದ್ದಾರೆ.

'ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ ಲೈನ್ (ಎನ್.ಎಂ.ಪಿ ಸಂಪುಟಗಳು 1 ಮತ್ತು 2)'. ಕೇಂದ್ರ ಬಜೆಟ್ 2021-22ರ ಅಡಿಯಲ್ಲಿ 'ಆಸ್ತಿ ನಗದೀಕರಣ'ದ ಆದೇಶದ ಆಧಾರದ ಮೇಲೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ನೀತಿ ಆಯೋಗವು ಈ ಪೈಪ್ ಲೈನ್ ಅನ್ನು ಅಭಿವೃದ್ಧಿಪಡಿಸಿದೆ. 2022 ರಿಂದ 2025ರ ಹಣಕಾಸು ವರ್ಷದವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಆಸ್ತಿಗಳ ನಗದೀಕರಣದ ಮೂಲಕ ಒಟ್ಟು 6.0 ಲಕ್ಷ ಕೋಟಿ ರೂ.ಗಳ ಸಾಮರ್ಥ್ಯವನ್ನು ಎನ್.ಎಂ.ಪಿ ಅಂದಾಜಿಸಿದೆ.

ಎನ್.ಎಂ.ಪಿ ಕುರಿತ ವರದಿಯ 1 ಮತ್ತು 2ನೇ ಸಂಪುಟಗಳನ್ನು ಇಂದು ಉಪಾಧ್ಯಕ್ಷ (ನೀತಿ ಆಯೋಗ), ಸಿಇಒ (ನೀತಿ ಆಯೋಗ) ಮತ್ತು ಈ ಪೈಪ್ ಲೈನ್ ಗೆ ಸಂಬಂಧಿಸಿದ ಮೂಲಸೌಕರ್ಯ ಸಂಬಂಧಿತ ಸಚಿವಾಲಯಗಳ ಅಂದರೆ -ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೆ, ವಿದ್ಯುತ್, ಕೊಳವೆ ಮಾರ್ಗ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಹಡಗು ಬಂದರುಗಳು ಮತ್ತು ಜಲಮಾರ್ಗಗಳು, ದೂರಸಂಪರ್ಕ, ಆಹಾರ ಮತ್ತು ನಾಗರಿಕ ಪೂರೈಕೆ, ಗಣಿಗಾರಿಕೆ, ಕಲ್ಲಿದ್ದಲು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿಗಳ, ಕಾರ್ಯದರ್ಶಿ (ಆರ್ಥಿಕ ವ್ಯವಹಾರಗಳ ಇಲಾಖೆ) ಮತ್ತು ಕಾರ್ಯದರ್ಶಿ (ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ) ಇವರುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಪೈಪ್‌ಲೈನ್‌ಗೆ ಚಾಲನೆ ನೀಡಿ ಮಾತನಾಡಿದ ಸಚಿವೆ ನಿರ್ಮಲಾ

ಪೈಪ್‌ಲೈನ್‌ಗೆ ಚಾಲನೆ ನೀಡಿ ಮಾತನಾಡಿದ ಸಚಿವೆ ನಿರ್ಮಲಾ

ಕೇಂದ್ರ ಹಣಕಾಸು ಸಚಿವರು ಪೈಪ್‌ಲೈನ್‌ಗೆ ಚಾಲನೆ ನೀಡಿದ ಸಂದರ್ಭದಲ್ಲಿ, "ಭಾರತದ ಸಾಮಾನ್ಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವಂತಹ ಮೂಲ ಸೌಕರ್ಯಕ್ಕೆ ಸಾರ್ವತ್ರಿಕ ಪ್ರವೇಶದ ಬಗ್ಗೆ ಸದಾ ವಿಶ್ವಾಸವಿಟ್ಟಿರುವ ಪ್ರಧಾನಮಂತ್ರಿಯವರ ದೃಷ್ಟಿಕೋನದಿಂದಾಗಿ ಆಸ್ತಿ ನಗದೀಕರಣ ಕಾರ್ಯಕ್ರಮವು ರೂಪುಗೊಂಡಿದೆ. ನಗದೀಕರಣದ ಮೂಲಕ ಸ್ವತ್ತು ಸೃಷ್ಟಿಯ ತತ್ವವನ್ನು ಆಧರಿಸಿದ ಆಸ್ತಿ ನಗದೀಕರಣವು ಹೊಸ ಮೂಲಸೌಕರ್ಯ ಸೃಷ್ಟಿಗಾಗಿ ಖಾಸಗಿ ವಲಯದ ಹೂಡಿಕೆಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇದು ಅಗತ್ಯವಾಗಿದೆ, ಆ ಮೂಲಕ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡಲಾಗುತ್ತದೆ ಮತ್ತು ಒಟ್ಟಾರೆ ಸಾರ್ವಜನಿಕ ಕಲ್ಯಾಣಕ್ಕಾಗಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳನ್ನು ತಡೆರಹಿತವಾಗಿ ಸಂಯೋಜಿಸುತ್ತದೆ." ಎಂದರು.

ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಮತ್ತು ಖಾಸಗಿ ವಲಯದ ಹೂಡಿಕೆಗಳನ್ನು ಉತ್ತೇಜಿಸಲು ಪ್ರಸ್ತುತ ಸರ್ಕಾರ ಕೈಗೊಂಡಿರುವ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಶ್ರೀ ಸೀತಾರಾಮನ್ ಅವರು ವಿವರಿಸಿದರು. ಇದರಲ್ಲಿ ಇತ್ತೀಚಿನ 'ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಆರ್ಥಿಕ ನೆರವಿನ ಯೋಜನೆ'ಯೂ ಸೇರಿದೆ, ಇದು ರಾಜ್ಯ ಸರ್ಕಾರಗಳ ಮಾಲೀಕತ್ವದ ಆಸ್ತಿಯನ್ನು ತ್ವರಿತವಾಗಿ ಶೋಧಿಸುವ ಗ್ರೀನ್ ಫೀಲ್ಡ್ ಮೂಲಸೌಕರ್ಯಕ್ಕಾಗಿ ಮರುಬಳಕೆ ಮಾಡಲು ರಾಜ್ಯ ಸರ್ಕಾರಗಳನ್ನು ಉತ್ತೇಜಿಸುತ್ತದೆ.

ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ ಲೈನ್: ಒಂದು ಪರಿಚಯ

ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ ಲೈನ್: ಒಂದು ಪರಿಚಯ

ಕೇಂದ್ರ ಬಜೆಟ್ 2021-22 ಸಾರ್ವಜನಿಕ ಮೂಲಸೌಕರ್ಯ ಸ್ವತ್ತುಗಳನ್ನು ನಿರ್ವಹಿಸುವ ನಗದೀಕರಣವನ್ನು ಸುಸ್ಥಿರ ಮೂಲಸೌಕರ್ಯ ಹಣಕಾಸು ಪ್ರಮುಖ ಸಾಧನವೆಂದು ಗುರುತಿಸಿದೆ. ಈ ನಿಟ್ಟಿನಲ್ಲಿ, ಬಜೆಟ್ ಸಂಭಾವ್ಯ ಬ್ರೌನ್ ಫೀಲ್ಡ್ ಮೂಲಸೌಕರ್ಯ ಸ್ವತ್ತುಗಳ 'ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ (ಎನ್.ಎಂ.ಪಿ) ' ತಯಾರಿಸಲು ಅವಕಾಶ ನೀಡಿತು. ನೀತಿ ಆಯೋಗವು ಮೂಲಸೌಕರ್ಯ ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಎನ್.ಎಂ.ಪಿ.ಕುರಿತ ವರದಿಯನ್ನು ಸಿದ್ಧಪಡಿಸಿದೆ.

ಖಾಸಗಿ ವಲಯಕ್ಕೆ ಸಂಭಾವ್ಯ ಸ್ವತ್ತುಗಳ ಮೇಲಿನ ನೋಟದೊಂದೆ, ಸಾರ್ವಜನಿಕ ಆಸ್ತಿ ಮಾಲೀಕರಿಗೆ ಕಾರ್ಯಕ್ರಮದ ಮಧ್ಯಮಾವಧಿ ಮಾರ್ಗಸೂಚಿಯನ್ನು ಒದಗಿಸುವ ಗುರಿಯನ್ನು ಎನ್.ಎಂ.ಪಿ.ಹೊಂದಿದೆ; ಎನ್.ಎಂ.ಪಿ.ಕುರಿತ ವರದಿಯನ್ನು ಎರಡು ಸಂಪುಟಗಳಾಗಿ ಸಂಯೋಜಿಸಲಾಗಿದೆ. ಸಂಪುಟ 1 ಅನ್ನು ಮಾರ್ಗದರ್ಶನ ಪುಸ್ತಕವಾಗಿ ರೂಪಿಸಲಾಗಿದೆ, ಇದು ಆಸ್ತಿ ನಗದೀಕರಣದ ಪರಿಕಲ್ಪನೆಯ ವಿಧಾನಗಳು ಮತ್ತು ಸಂಭಾವ್ಯ ಮಾದರಿಗಳನ್ನು ವಿವರಿಸುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರಮುಖ ಮೂಲಸೌಕರ್ಯ ಸ್ವತ್ತುಗಳ ಪೈಪ್ ಲೈನ್ ಸೇರಿದಂತೆ ನಗದೀಕರಣದ ನಿಜವಾದ ಮಾರ್ಗಸೂಚಿಯೇ ಸಂಪುಟ 2 ಆಗಿದೆ.

 ರಾಜ್ಯಗಳಿಂದ ಆಸ್ತಿ ಪೈಪ್ ಲೈನ್ ಚೌಕಟ್ಟು

ರಾಜ್ಯಗಳಿಂದ ಆಸ್ತಿ ಪೈಪ್ ಲೈನ್ ಚೌಕಟ್ಟು

ಇದರಲ್ಲಿ ಲಭ್ಯವಿರುವ ಒಟ್ಟು ಆಸ್ತಿ ನೆಲೆಯ ಮೌಲ್ಯಮಾಪನದ ಜೊತೆಗೆ ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳ ಒಳಹರಿವು ಮತ್ತು ಸಮಾಲೋಚನೆಗಳ ಆಧಾರದ ಮೇಲೆ ಪೈಪ್ ಲೈನ್ ಅನ್ನು ತಯಾರಿಸಲಾಗಿದೆ. ಬಂಡವಾಳ ಹಿಂತೆಗೆತ ಮತ್ತು ಪ್ರಮುಖವಲ್ಲದ ಸ್ವತ್ತುಗಳ ನಗದೀಕರಣದ ಮೂಲಕ ನಗದೀಕರಣವನ್ನು ಎನ್.ಎಂ.ಪಿ.ಯಲ್ಲಿ ಸೇರಿಸಲಾಗಿಲ್ಲ. ಇದಲ್ಲದೆ, ಪ್ರಸ್ತುತ, ಮೂಲಸೌಕರ್ಯ ವಲಯಗಳಲ್ಲಿ ಕೇಂದ್ರ ಸರ್ಕಾರದ ಈ ನಿಟ್ಟಿನ ಸಚಿವಾಲಯಗಳು ಮತ್ತು ಸಿಪಿಎಸ್ಇಗಳ ಆಸ್ತಿಗಳನ್ನು ಮಾತ್ರ ಸೇರಿಸಲಾಗಿದೆ. ರಾಜ್ಯಗಳಿಂದ ಆಸ್ತಿ ಪೈಪ್ ಲೈನ್ ಸಮನ್ವಯ ಮತ್ತು ಕ್ರೋಡೀಕರಣದ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ ಮತ್ತು ಅದನ್ನು ಸೂಕ್ತ ಸಮಯದಲ್ಲಿ ಸೇರಿಸಲು ಯೋಜಿಸಲಾಗಿದೆ.

ಪ್ರಮುಖ ಆಸ್ತಿ ನಗದೀಕರಣ ಕುರಿತ ಚೌಕಟ್ಟು ಮೂರು ಪ್ರಮುಖ ಕಡ್ಡಾಯಗಳನ್ನೊಳಗೊಂಡಿದೆ.

1. ನಗದೀಕರಣದ 'ಹಕ್ಕು' ಹೊರತು 'ಮಾಲಿಕತ್ವವಲ್ಲ', ವಹಿವಾಟಿನ ಅವಧಿಯ ಕೊನೆಯಲ್ಲಿ ಆಸ್ತಿಯನ್ನು ಮತ್ತೆ ಹಿಂತಿರುಗಿಸಬೇಕು.

2. ಬ್ರೌನ್ ಫೀಲ್ಡ್ ಅಪಾಯರಹಿತ ಆಸ್ತಿ, ಸ್ಥಿರ ಆದಾಯ ಹರಿವು

3. ಕಟ್ಟುನಿಟ್ಟಿನ ಕೆಪಿಐಗಳು ಮತ್ತು ಗುಣಮಟ್ಟದ ಕಾರ್ಯಕ್ಷಮತೆಯೊಂದಿಗೆ ವಿವರಣಾತ್ಮಕ ಒಪ್ಪಂದದ ಚೌಕಟ್ಟಿನ ವಿನ್ಯಾಸಿತ ಪಾಲುದಾರಿಕೆ

ಇದು ಆದಾಯ ಹಕ್ಕುಗಳ ಸುತ್ತಲೂ ರಚಿಸಲಾದ ಒಟ್ಟಾರೆ ವ್ಯವಹಾರದೊಂದಿಗೆ ಸ್ಥಿರ ಆದಾಯ ಉತ್ಪಾದನಾ ಪ್ರೊಫೈಲ್ ನೊಂದಿಗೆ ಅಪಾಯ ರಹಿತ ಮತ್ತು ಬ್ರೌನ್ ಫೀಲ್ಡ್ ಸ್ವತ್ತುಗಳ ಆಯ್ಕೆಯನ್ನು ಒಳಗೊಂಡಿದೆ. ಆದ್ದರಿಂದ, ಈ ರಚನೆಗಳ ಅಡಿಯಲ್ಲಿ ಆಸ್ತಿಗಳ ಪ್ರಾಥಮಿಕ ಮಾಲೀಕತ್ವವು, ವಹಿವಾಟು ಕೊನೆಯಲ್ಲಿ ಸಾರ್ವಜನಿಕ ಪ್ರಾಧಿಕಾರಕ್ಕೆ ಸ್ವತ್ತುಗಳನ್ನು ಹಿಂತಿರುಗಿಸುವ ಚೌಕಟ್ಟಿನೊಂದಿಗೆ ಸರ್ಕಾರದೊಂದಿಗೇ ಮುಂದುವರಿಯುತ್ತದೆ.

ಅಂದಾಜು ಸಾಮರ್ಥ್ಯ

ಅಂದಾಜು ಸಾಮರ್ಥ್ಯ

ಮೂಲಸೌಕರ್ಯ ಸೃಷ್ಟಿಯು ನಗದೀಕರಣದೊಂದಿಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದೆ ಎಂದು ಪರಿಗಣಿಸಿ, ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ (ಎನ್.ಐ.ಪಿ) ಅಡಿಯಲ್ಲಿ ಸಮತೋಲನ ಅವಧಿಯೊಂದಿಗೆ ಸಹ-ಟರ್ಮಿನಸ್ ಆಗಲು ಎನ್.ಎಂ.ಪಿ.ಯ ಅವಧಿಯನ್ನು ನಿರ್ಧರಿಸಲಾಗಿದೆ.

2022-2025ರ ಹಣಕಾಸು ವರ್ಷದ, ನಾಲ್ಕು ವರ್ಷಗಳ ಅವಧಿಯಲ್ಲಿ ಎನ್.ಎಂ.ಪಿ. ಅಡಿಯಲ್ಲಿ ಸರಾಸರಿ ಆಸ್ತಿ ಪೈಪ್ ಲೈನ್, 6.0 ಲಕ್ಷ ಕೋಟಿ ರೂ. ಎಂದು ತಿಳಿಸಲಾಗಿದೆ. ಅಂದಾಜು ಮೌಲ್ಯವು ಎನ್.ಐ.ಪಿ. (43 ಲಕ್ಷ ಕೋಟಿ ರೂ.) ಅಡಿಯಲ್ಲಿ ಕೇಂದ್ರಕ್ಕೆ ಉದ್ದೇಶಿತ ವೆಚ್ಚಕ್ಕಿಂತ ಶೇ. 14 ಗೆ ಅನುಗುಣವಾಗಿದೆ. ಇದರಲ್ಲಿ 12ಕ್ಕೂ ಹೆಚ್ಚು ಈ ನಿಟ್ಟಿನ ಸಚಿವಾಲಯಗಳು ಮತ್ತು 20ಕ್ಕೂ ಹೆಚ್ಚು ಆಸ್ತಿ ವರ್ಗಗಳು ಸೇರಿವೆ. ರಸ್ತೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ರೈಲ್ವೆ, ಉಗ್ರಾಣ, ಅನಿಲ ಮತ್ತು ಉತ್ಪನ್ನ ಪೈಪ್ ಲೈನ್, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ, ಗಣಿಗಾರಿಕೆ, ದೂರಸಂಪರ್ಕ, ಕ್ರೀಡಾಂಗಣ, ಆತಿಥ್ಯ ಮತ್ತು ವಸತಿಗಳೂ ಸೇರಿವೆ.

ವಲಯವಾರು ನಗದೀಕರಣ ಪೈಪ್ ಲೈನ್

ವಲಯವಾರು ನಗದೀಕರಣ ಪೈಪ್ ಲೈನ್

2022-25ನೇ ಹಣಕಾಸು ವರ್ಷದಲ್ಲಿ ವಲಯವಾರು ನಗದೀಕರಣ ಪೈಪ್ ಲೈನ್ (ಕೋಟಿ ರೂ.ಗಳಲ್ಲಿ)

ಅಗ್ರ 5 ವಲಯಗಳು (ಅಂದಾಜು ಮೌಲ್ಯದ ಪ್ರಕಾರ) ಒಟ್ಟು ಪೈಪ್ ಲೈನ್ ಮೌಲ್ಯದ ಶೇ.83 ಅನ್ನು ಪಡೆಯುತ್ತದೆ. ಈ ಪ್ರಮುಖ 5 ವಲಯಗಳಲ್ಲಿ: ರಸ್ತೆಗಳು (ಶೇ27) ನಂತರ ರೈಲ್ವೆ (ಶೇ.25), ವಿದ್ಯುತ್ (ಶೇ.15), ತೈಲ ಮತ್ತು ಅನಿಲ ಕೊಳವೆ ಮಾರ್ಗಗಳು (ಶೇ.8) ಮತ್ತು ಟೆಲಿಕಾಂ (ಶೇ.6) ಸೇರಿವೆ.

ಮೌಲ್ಯದ ವಾರ್ಷಿಕ ಹಂತಗಳಿಗೆ ಸಂಬಂಧಿಸಿದಂತೆ, 0.88 ಲಕ್ಷ ಕೋಟಿ ರೂ.ಗಳ ಸೂಚಕ ಮೌಲ್ಯವನ್ನು ಹೊಂದಿರುವ ಶೇ.15ರಷ್ಟು ಆಸ್ತಿಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ (ಹಣಕಾಸು ವರ್ಷ 2021-22) ಜಾರಿಗೆ ತರಲು ಯೋಜಿಸಲಾಗಿದೆ. ಆದಾಗ್ಯೂ, ಎನ್.ಎಂ.ಪಿ.ಅಡಿಯಲ್ಲಿ ಒಟ್ಟು ಮತ್ತು ವರ್ಷದಿಂದ ವರ್ಷಕ್ಕೆ ಮೌಲ್ಯವು ಸಮಯ, ವಹಿವಾಟು ವಿನ್ಯಾಸ, ಹೂಡಿಕೆದಾರರ ಆಸಕ್ತಿ ಇತ್ಯಾದಿಗಳನ್ನು ಅವಲಂಬಿಸಿ ಸಾರ್ವಜನಿಕ ಸ್ವತ್ತುಗಳಿಗೆ ನಿಜವಾದ ಸಾಕ್ಷಾತ್ಕಾರದೊಂದಿಗೆ ಸೂಚಕ ಮೌಲ್ಯವಾಗಿದೆ.

ವರ್ಷವಾರು ನಗದೀಕರಣ ಪೈಪ್ ಲೈನ್

ವರ್ಷವಾರು ನಗದೀಕರಣ ಪೈಪ್ ಲೈನ್

ವರ್ಷವಾರು ನಗದೀಕರಣ ಪೈಪ್ ಲೈನ್ ನ ಸೂಚಕ ಮೌಲ್ಯ (ಕೋಟಿ ರೂ.ಗಳಲ್ಲಿ) ಎನ್.ಎಂ.ಪಿ.ಅಡಿಯಲ್ಲಿ ಗುರುತಿಸಲಾದ ಸ್ವತ್ತುಗಳು ಮತ್ತು ವಹಿವಾಟುಗಳನ್ನು ಹಲವಾರು ಸಾಧನಗಳ ಮೂಲಕ ಹೊರತರುವ ನಿರೀಕ್ಷೆಯಿದೆ. ಇವುಗಳಲ್ಲಿ ಸಾರ್ವಜನಿಕ ಖಾಸಗಿ ಪಾಲುದಾರಿಕೆ ರಿಯಾಯಿತಿಗಳು ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಗಳು (ಇನ್ವಿ ಐಟಿ) ನಂತಹ ಬಂಡವಾಳ ಮಾರುಕಟ್ಟೆ ಸಾಧನಗಳಂತಹ ನೇರ ಒಪ್ಪಂದದ ಸಾಧನಗಳೂ ಸೇರಿವೆ. ಸಾಧನದ ಆಯ್ಕೆಯನ್ನು ವಲಯ, ಆಸ್ತಿಯ ವಿನ್ಯಾಸ, ವಹಿವಾಟುಗಳ ಸಮಯ (ಮಾರುಕಟ್ಟೆ ಪರಿಗಣನೆಗಳು ಸೇರಿದಂತೆ), ಗುರಿಯಾಗಿಸಿಕೊಂಡ ಹೂಡಿಕೆದಾರರ ಕಿರು ಪರಿಚಯ ಮತ್ತು ಆಸ್ತಿ ಮಾಲೀಕರು ಉಳಿಸಿಕೊಳ್ಳಲು ಯೋಜಿಸಲಾದ ಕಾರ್ಯಾಚರಣೆ / ಹೂಡಿಕೆ ನಿಯಂತ್ರಣದ ಮಟ್ಟ ಇತ್ಯಾದಿಗಳಿಂದ ನಿರ್ಧರಿಸಲಾಗುತ್ತದೆ.

ಆಸ್ತಿ ನಗದೀಕರಣ ಪ್ರಕ್ರಿಯೆಯ ಮೂಲಕ ಸಾರ್ವಜನಿಕ ಆಸ್ತಿ ಮಾಲೀಕರು ಸಾಕಾರಗೊಳಿಸುವ ನಿರೀಕ್ಷೆಯ ನಗದೀಕರಣ ಮೌಲ್ಯವು ಮುಂಚಿತವಾಗಿ ಸಂಚಯಿತಗಳ ರೂಪದಲ್ಲಿರಬಹುದು ಅಥವಾ ಖಾಸಗಿ ವಲಯದ ಹೂಡಿಕೆಯ ಮೂಲಕವೂ ಇರಬಹುದು. ಎನ್.ಎಂ.ಪಿ. ಅಡಿಯಲ್ಲಿ ಮೌಲ್ಯಮಾಪನ ಮಾಡಲಾದ ಸಂಭಾವ್ಯ ಮೌಲ್ಯವು ಅನುಭವ ಆಧಾರಿತ ನಿಯಮಗಳ ಮೇಲೆ ಸೂಚಕ ಉನ್ನತ ಮಟ್ಟದ ಅಂದಾಜು ಮಾತ್ರವಾಗಿರುತ್ತದೆ. ಇದು ಆಯಾ ವಲಯಗಳಿಗೆ ಅನ್ವಯವಾಗುವ ಮತ್ತು ಲಭ್ಯವಿರುವ ಮಾರುಕಟ್ಟೆ ಅಥವಾ ವೆಚ್ಚ ಅಥವಾ ಪುಸ್ತಕ ಅಥವಾ ಉದ್ಯಮ ಮೌಲ್ಯ ಮುಂತಾದ ವಿವಿಧ ವಿಧಾನಗಳನ್ನು ಆಧರಿಸಿರುತ್ತದೆ.

ಅನುಷ್ಠಾನ ಮತ್ತು ಮೇಲ್ವಿಚಾರಣೆ ಕಾರ್ಯವಿಧಾನ

ಅನುಷ್ಠಾನ ಮತ್ತು ಮೇಲ್ವಿಚಾರಣೆ ಕಾರ್ಯವಿಧಾನ

ಒಟ್ಟಾರೆ ಕಾರ್ಯತಂತ್ರವಾಗಿ, ಆಸ್ತಿ ನೆಲೆಯ ಗಮನಾರ್ಹ ಪಾಲು ಸರ್ಕಾರದೊಂದಿಗೆ ಉಳಿಯುತ್ತದೆ.

ಆಸ್ತಿ ನಗದೀಕರಣದ ದಕ್ಷ ಮತ್ತು ಪರಿಣಾಮಕಾರಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಅಗತ್ಯ ನೀತಿ ಮತ್ತು ನಿಯಂತ್ರಣ ಹಸ್ತಕ್ಷೇಪಗಳ ಮೂಲಕ ಈ ಕಾರ್ಯಕ್ರಮವನ್ನು ಬೆಂಬಲಿಸಲು ಯೋಜಿಸಲಾಗಿದೆ. ಇವುಗಳಲ್ಲಿ ಕಾರ್ಯಾಚರಣೆಯ ವಿಧಾನಗಳನ್ನು ಸುವ್ಯವಸ್ಥಿತಗೊಳಿಸುವುದು, ಹೂಡಿಕೆದಾರರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ವಾಣಿಜ್ಯ ದಕ್ಷತೆಯನ್ನು ಸುಗಮಗೊಳಿಸುವುದೂ ಸೇರಿವೆ. ಕೇಂದ್ರ ಬಜೆಟ್ 2021-22 ರ ಅಡಿಯಲ್ಲಿ ಯೋಜಿಸಿದಂತೆ, ಆಸ್ತಿ ನಗದೀಕರಣ ಡ್ಯಾಶ್ ಬೋರ್ಡ್ ಮೂಲಕ ಸಕಾಲಿಕ ಮೇಲ್ವಿಚಾರಣೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು.

'ನಗದೀಕರಣದ ಮೂಲಕ ಮೂಲಸೌಕರ್ಯ ಸೃಷ್ಟಿ'ಯನ್ನು ಸಕ್ರಿಯಗೊಳಿಸುವ ಈ ಉಪಕ್ರಮದ ಅಂತಿಮ ಉದ್ದೇಶ, ಇದರಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯವು ಸಹಯೋಗ ನೀಡುತ್ತದೆ, ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯದ ಪ್ರಮುಖ ಕ್ಷೇತ್ರಗಳಲ್ಲಿ ಉತ್ತಮಸಾಧನೆ ಮಾಡುತ್ತಾರೆ, ಇದರಿಂದ ದೇಶದ ನಾಗರಿಕರಿಗೆ ಸಾಮಾಜಿಕ-ಆರ್ಥಿಕ ಬೆಳವಣಿಗೆ ಮತ್ತು ಜೀವನದ ಗುಣಮಟ್ಟವನ್ನು ತಲುಪಿಸುತ್ತದೆ.

ಪೂರ್ಣ ವರದಿ: http://www.niti.gov.in/national-monetisation-pipeline ನಲ್ಲಿ ಲಭ್ಯ.(ಮಾಹಿತಿ ಕೃಪೆ: ನೀತಿ ಆಯೋಗ)

English summary
Asset Monetisation programme has taken shape because of the vision of Prime Minister, NMP estimates aggregate monetisation potential of Rs 6.0 lakh crores through core assets of Central Government : Finance Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X