ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

36 ಗಂಟೆಯಲ್ಲಿ ದುಬೈ ತೋರಿಸುವ ಹೊಸ ಸ್ಟಾಪ್‍ಓವರ್ ಪಾಸ್

|
Google Oneindia Kannada News

ಬೆಂಗಳೂರು, ಮೇ 9: ದುಬೈನ ಪ್ರವಾಸೋದ್ಯಮ ಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪ್ರಕಟಿಸಿದೆ.

ಇದು ವಿಶೇಷವಾಗಿ ದುಬೈನಲ್ಲಿ ಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ. ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ.

ದುಬೈನಲ್ಲಿ ಕನ್ನಡ ಪರಿಣಿತಿ ಪ್ರಮಾಣ ಪತ್ರ ವಿತರಣೆ, ಅಂಕೇಗೌಡರಿಗೆ ಸನ್ಮಾನ ದುಬೈನಲ್ಲಿ ಕನ್ನಡ ಪರಿಣಿತಿ ಪ್ರಮಾಣ ಪತ್ರ ವಿತರಣೆ, ಅಂಕೇಗೌಡರಿಗೆ ಸನ್ಮಾನ

ದುಬೈ ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ. ಈ ಮೂಲಕ 36 ಗಂಟೆಗಳಲ್ಲಿ ಎರಡು, ಮೂರು ಅಥವಾ ನಾಲ್ಕು ಆಕರ್ಷಣೆಗಳನ್ನು ವೀಕ್ಷಿಸಬಹುದಾಗಿದೆ. ಇದು ಪ್ರೀಪೇಯ್ಡ್ ಮಾದರಿಯ ಯೋಜನೆಯಾಗಿದ್ದು, ಅತ್ಯಲ್ಪ ಅವಧಿಯಲ್ಲಿ ಪ್ರವಾಸಿಗರು ದುಬೈನ ಸೌಂದರ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಪಾಸ್ ವಯಸ್ಕರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ದರದಲ್ಲಿರುತ್ತದೆ. ವಯಸ್ಕರರಿಗೆ 199 ಎಇಡಿಯಾದರೆ, ಮಕ್ಕಳಿಗೆ 169 ಎಇಡಿಯಾಗಿದೆ.

ಮೊದಲ ಬಾರಿಗೆ ಭೇಟಿ ನೀಡುವ ಮತ್ತು ಮತ್ತೆ ಮತ್ತೆ ಬರುವ ಅಂತಾರಾಷ್ಟ್ರೀಯ ಅತಿಥಿಗಳಿಗೆ ವೈವಿಧ್ಯಮಯವಾದ ಅನುಭವಗಳನ್ನು ನಾವು ನೀಡುತ್ತಿದ್ದೇವೆ. ವ್ಯಕ್ತಿಗತವಾದ ಅನುಭವಗಳನ್ನು ಹೊಂದಬೇಕೆಂದು ಬಯಸುವ ಪ್ರವಾಸಿಗರಿಗೆ ಅಂಥ ಅನುಭವಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಈ ದಿಸೆಯಲ್ಲಿ ನಮ್ಮ ಪಾಲುದಾರರು, ಅತ್ಯಲ್ಪ ಅವಧಿಯಲ್ಲಿ ಈ ಅನುಭವಗಳನ್ನು ಪ್ರವಾಸಿಗರಿಗೆ ನೀಡಲಿದ್ದಾರೆ ಎಂದು ದುಬೈ ಕಾರ್ಪೊರೇಷನ್ ಫಾರ್ ಟೂರಿಸಂ ಅಂಡ್ ಕಾಮರ್ಸ್ ಮಾರ್ಕೆಟಿಂಗ್ ಹೇಳಿದೆ.

ಡಿಸಿಟಿಸಿಎಂ ಸಿಇಒ ಇಸ್ಸಾಂ ಕಾಝಿಂ ಮಾತನಾಡಿ,

ಡಿಸಿಟಿಸಿಎಂ ಸಿಇಒ ಇಸ್ಸಾಂ ಕಾಝಿಂ ಮಾತನಾಡಿ,

ದುಬೈ ಕಾರ್ಪೊರೇಷನ್ ಫಾರ್ ಟೂರಿಸಂ ಅಂಡ್ ಕಾಮರ್ಸ್ ಮಾರ್ಕೆಟಿಂಗ್ (ಡಿಸಿಟಿಸಿಎಂ)ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಸ್ಸಾಂ ಕಾಝಿಂ ಅವರು ಈ ಯೋಜನೆ ಬಗ್ಗೆ ಮಾಹಿತಿ ನೀಡಿ, ಜಾಗತಿಕ ಮಟ್ಟದಲ್ಲಿ ದುಬೈ ಒಂದು ಅತ್ಯಂತ ಪ್ರಶಸ್ತ್ಯವಾದ ರಜೆ ಕಾಲದ ನೆಚ್ಚಿನ ತಾಣವಾಗಿದೆ. ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಮಟ್ಟದಲ್ಲಿ ಬಂಡವಾಳ ಹೂಡಿಕೆಯನ್ನು ಮುಂದುವರಿಸಲಾಗುತ್ತಿದೆ ಮತ್ತು ಆವಿಷ್ಕಾರವನ್ನು ತರುವ ಮೂಲಕ ಇದನ್ನು ಎಮಿರೇಟ್ಸ್‍ನ ವಿಶ್ವ ದರ್ಜೆಯ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗಿದೆ.

ಶೇ.60 ರವರೆಗೆ ಉಳಿತಾಯ ಮಾಡಬಹುದಾಗಿದೆ

ಶೇ.60 ರವರೆಗೆ ಉಳಿತಾಯ ಮಾಡಬಹುದಾಗಿದೆ

ದುಬೈಗೆ ತಲುಪುವ ಮುನ್ನ ಸ್ಟಾಪ್‍ಓವರ್ ಪಾಸ್ ಅನ್ನು ಖರೀದಿಸುವ ಪ್ರವಾಸಿಗರಿಗೆ ರೆಗ್ಯುಲರ್ ಕಂಬೈನ್ಡ್ ಎಂಟ್ರೆನ್ಸ್ ದರದಲ್ಲಿ ಶೇ.60 ರವರೆಗೆ ಉಳಿತಾಯ ಮಾಡಬಹುದಾಗಿದೆ. ಈ ಪಾಸ್ ದುಬೈನಲ್ಲಿ ಅತ್ಯಂತ ಮೌಲ್ಯವರ್ಧಿತ ಆಫರ್‍ಗಳನ್ನು ನೀಡಲಿದ್ದು, ಪ್ರವಾಸಿಗರು ಬುಜ್ ಖಲೀಫಾ (ಮೇಲೆ), ದುಬೈ ಫೌಂಟೇನ್ ಶೋ ಮತ್ತು ಲೇಕ್ ರೈಡ್, ಸಿಟಿ ಸೈಟ್‍ಸೀಯಿಂಗ್ ಹಾಪ್ ಆನ್ ಹಾಪ್ ಆಫ್ ಬಸ್, ಮರೀನಾ ಧೋ ಕ್ರ್ಯೂಸ್ ಡಿನ್ನರ್, ದುಬೈ ಅಕ್ವೇರಿಯಂ & ಅಂಡರ್‍ವಾಟರ್ ಝೂ ಮತ್ತು ದುಬೈ ಫ್ರೇಂಗಳನ್ನು ವೀಕ್ಷಿಸಬಹುದಾಗಿದೆ.

ಸೌದಿ ಅರೇಬಿಯಾ: ಬರಿದಾಗುತ್ತಿದೆಯೇ ಜಗತ್ತಿನ ಅತಿ ದೊಡ್ಡ ತೈಲ ಸಂಪತ್ತು? ಸೌದಿ ಅರೇಬಿಯಾ: ಬರಿದಾಗುತ್ತಿದೆಯೇ ಜಗತ್ತಿನ ಅತಿ ದೊಡ್ಡ ತೈಲ ಸಂಪತ್ತು?

ಅಹ್ಮದ್ ಅಲ್ ಖಾಜಾ ಅವರು ಮಾತನಾಡಿ

ಅಹ್ಮದ್ ಅಲ್ ಖಾಜಾ ಅವರು ಮಾತನಾಡಿ

ದುಬೈ ಫೆಸ್ಟಿವಲ್ಸ್ ಅಂಡ್ ರೀಟೇಲ್ ಎಸ್ಟಾಬ್ಲಿಷ್‍ಮೆಂಟ್ (ಡಿಎಫ್‍ಆರ್‍ಇ)ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಹ್ಮದ್ ಅಲ್ ಖಾಜಾ ಅವರು ಮಾತನಾಡಿ, ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪರಿಚಯಿಸುವುದರೊಂದಿಗೆ ಪ್ರವಾಸಿಗರಿಗೆ ಅತ್ಯುತ್ತಮವಾದ ರೀತಿಯಲ್ಲಿ ನಗರದ ಪ್ರವಾಸಿತಾಣಗಳ ಆಕರ್ಷಣೆಯ ಅನುಭವವನ್ನು ವಿಶೇಷವಾಗಿ ಪಡೆಯುವಂತಹ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. 36 ಗಂಟೆಗಳಲ್ಲಿ ಎಮಿರೇಟ್ಸ್‍ನ ಲೀಸರ್ ಪ್ರಪೋಶನ್ ಅನ್ನು ಅನುಭವಿಸಬಹುದಾಗಿದೆ. ನಗರದಾದ್ಯಂತ ಅಭಿವೃದ್ಧಿಗೆ ಭಾರೀ ಮಟ್ಟದಲ್ಲಿ ಹೂಡಿಕೆ ಮಾಡಿರುವ ನಮ್ಮ ಪಾಲುದಾರರಿಗೆ ಬೆಂಬಲವಾಗಿ ನಿಲ್ಲುತ್ತೇವೆ, ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲಂತಹ ಪ್ರವಾಸಿ ತಾಣವನ್ನಾಗಿ ನಾವು ದುಬೈ ಅನ್ನು ಅಭಿವೃದ್ಧಿಪಡಿಸುತ್ತೇವೆ'' ಎಂದು ತಿಳಿಸಿದರು.

ಐವೆಂಚರ್ ಕಾರ್ಡ್‍ನ ವ್ಯವಸ್ಥಾಪಕ ನಿರ್ದೇಶಕ ಜೂಸ್ಟ್ ಟಿಮ್ಮರ್

ಐವೆಂಚರ್ ಕಾರ್ಡ್‍ನ ವ್ಯವಸ್ಥಾಪಕ ನಿರ್ದೇಶಕ ಜೂಸ್ಟ್ ಟಿಮ್ಮರ್

ಐವೆಂಚರ್ ಕಾರ್ಡ್‍ನ ವ್ಯವಸ್ಥಾಪಕ ನಿರ್ದೇಶಕ ಜೂಸ್ಟ್ ಟಿಮ್ಮರ್ ಅವರು ಮಾತನಾಡಿ, ದುಬೈ ಸ್ಟಾಪ್‍ಓವರ್ ಪಾಸ್ ಮೂಲಕ ಗಣನೀಯ ಪ್ರಮಾಣದಲ್ಲಿ ಹಣವನ್ನು ಉಳಿತಾಯ ಮಾಡಿಕೊಳ್ಳುವ ಮೂಲಕ ಪ್ರವಾಸಿಗರು ಕಡಿಮೆ ಅವಧಿಯಲ್ಲಿ ದುಬೈನ ಅನುಭವವನ್ನು ಹೊಂದಲಿದ್ದಾರೆ. ಈ ಪಾಸ್ 6 ಅತ್ಯುತ್ತಮವಾದ ತಾಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ'' ಎಂದು ತಿಳಿಸಿದರು.

ಸಿಟಿ ಸೈಟ್ ಸೀಯೀಂಗ್ ದುಬೈನ ಪ್ರಧಾನ ವ್ಯವಸ್ಥಾಪಕ ಸೆಡ್ರಿಕ್ ಶೆರರ್ ಮಾತನಾಡಿ, ಈ ಹೊಸ ದುಬೈ ಪಾಸ್ ಬಗ್ಗೆ ನಾವು ಕುತೂಹಲ ಹೊಂದಿದ್ದೇವೆ. ನಮ್ಮ ಹಾಪ್ ಆನ್ ಹಾಪ್ ಆಫ್ ಡಬ್ಬಲ್ ಡೆಕ್ಕರ್ ಬಸ್ ಮಾರ್ಗಗಳು ಮತ್ತು ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಅಗತ್ಯುತ್ತಮವಾದ ಅನುಭವಗಲಣನ್ನು ನೀಡಲಿವೆ'' ಎಂದು ತಿಳಿಸಿದರು.

English summary
Dubai Stopover Pass is a pre-paid pass which combines some of the cruisers, tours and some of the city's most popular sports, Visitors can select two to four attractions in 36 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X