ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ ವಿಶೇಷಾಧಿಕಾರ ಕಲಂ 35ಎ ಎಂದರೇನು?

|
Google Oneindia Kannada News

Recommended Video

ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ ವಿಶೇಷಾಧಿಕಾರ ಕಲಂ 35ಎ ಎಂದರೇನು? | Oneindia Kannada

ದೇಶದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳ ಅಧಿಕಾರ ವ್ಯಾಖ್ಯೆ, ಜವಾಬ್ದಾರಿಯನ್ನು ತಿಳಿಸುವುದೇ ಸಂವಿಧಾನ. ರಾಜ್ಯ ಸರ್ಕಾರ ಹಾಗು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರ ಪರಮಾವಧಿ ಸೇರಿದಂತೆ ಸಂವಿಧಾನ ತಿದ್ದುಪಡಿ ಮೂಲಕ ಅನುಚ್ಛೇದಗಳನ್ನು ಸೇರಿಸಬಹುದಾಗಿದೆ. ಪ್ರಸ್ತುತ ಕಣಿವೆ ರಾಜ್ಯ ಜಮ್ಮ ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ, ವಿಶೇಷ ಅಧಿಕಾರಿ ಕಲಂ 35ಎ ಜಾರಿಯಲ್ಲಿದೆ.

ಕಲಂ 35-ಎ ಸಂವಿಧಾನದಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯ ನಿಯಮದಂತೆ ಸೇರಿ ಹೋಗಿದೆ. ಈ ಕಲಂ ಅನ್ವಯ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಲ್ಲಿನ ಖಾಯಂ ನಿವಾಸಿಗಳಿಗೆ ಕೆಲವು ಹಕ್ಕು, ವಿಶೇಷ ಸವಲತ್ತುಗಳು ಸಿಗಲಿವೆ.

ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

ಕಣಿವೆ ರಾಜ್ಯದಲ್ಲಿ ಸರ್ಕಾರಿ ನೇಮಕಾತಿ, ಸ್ಥಿರಾಸ್ತಿ ಖರೀದಿ, ಸರ್ಕಾರಿ ಯೋಜನೆಗಳ ಸೌಲಭ್ಯ, ಸಾರ್ವಜನಿಕ ಕಲ್ಯಾಣಭಿವೃದ್ಧಿ ಯೋಜನೆಗೆ ಲಾಭ ಖಾಯಂ ಆಗಿ ನೆಲೆಸಿರುವವರಿಗೆ ಸಿಕ್ಕಿತು. ಹೊರ ರಾಜ್ಯದಿಂದ ಬಂದು ನೆಲೆಸಿದವರಿಗೆ ಈ ಲಾಭ ಸಿಗುತ್ತಿರಲಿಲ್ಲ.

Know more about Article 35A of Indian Constitution

ಕಣಿವೆ ರಾಜ್ಯದಲ್ಲಿನ ಮಹಿಳೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಹೊಂದಿಲ್ಲದ ಪುರುಷನನ್ನು ವಿವಾಹವಾದರೆ ದಂಪತಿಯ ಮಕ್ಕಳಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಸಿಗುವುದಿಲ್ಲ. ಮಹಿಳೆಯ ಹೆಸರಿನಲ್ಲಿ ಆಸ್ತಿ ಇದ್ದರೆ ಅದನ್ನು ಮಕ್ಕಳಿಗೆ ನೀಡಲು ಬರುವುದಿಲ್ಲ. ಕಣಿವೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೂರಾರು ಜನರು ತಲೆಮಾರುಗಳಿಂದ ವಾಸವಾಗಿದ್ದಾರೆ. ಕಲಂ 35-ಎ ನಿಂದಾಗಿ ಅವರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತಿದೆ ಎಂಬುದು ಆರೋಪವಾಗಿದೆ.

Know more about Article 35A of Indian Constitution

ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿದೆ. ಆದ್ದರಿಂದ, ಕಲಂ 35-ಎ ಸಿಂಧುತ್ವ ಪ್ರಶ್ನಿಸಿ, ಕಲಂ 35-ಎ ಅನ್ವಯ ಕಣಿವೆ ರಾಜ್ಯದಲ್ಲಿನ ಕೆಲವು ಜನರಿಗೆ ಆ ಹಕ್ಕುಗಳು ಸಿಗುತ್ತಿಲ್ಲ ಎಂದು ಆರೋಪಿಸಿದ ಸುಪ್ರೀಂಕೋರ್ಟಿನಲ್ಲಿ ಸಾರ್ವಜಿನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಕರಣದ ವಿಚಾರಣೆ ಹಲವು ವರ್ಷಗಳಿಂದ ನಡೆಯುತ್ತಿದೆ.

English summary
Article 35A of the Indian Constitution is an article that empowers the Jammu and Kashmir state's legislature to define “permanent residents” of the state and provide special rights and privileges to those permanent residents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X