ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

|
Google Oneindia Kannada News

ಬೆಂಗಳೂರು, ಆಗಸ್ಟ್ 1: ಆಧಾರ್ ಕಾರ್ಡ್ ಜೊತೆ ವೋಟರ್ ಐಡಿಯನ್ನು ಜೋಡಿಸುವ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಕೈಗೆತ್ತಿಕೊಳ್ಳಲಿದೆ. ಸದ್ಯದಲ್ಲೇ ರಾಷ್ಟ್ರವ್ಯಾಪಿ ಚುನಾವಣಾ ಆಯೋಗ ಅಭಿಯಾನ ಅರಂಭಿಸಲಿದೆ.

ಹೆಚ್ಚುವರಿಯಾಗಿರುವ ಮತ್ತು ನಕಲಿಯಾಗಿರುವ ವೋಟರ್ ಐಡಿಗಳನ್ನು ಗುರುತಿಸಿ ನಿವಾರಿಸುವ ಉದ್ದೇಶದಿಂದ ಆಧಾರ್ ಜೊತೆ ಅದನ್ನು ಜೋಡಿಸಲಾಗುತ್ತಿದೆ. ಮಹಾರಾಷ್ಟ್ರ ಮತ್ತು ತ್ರಿಪುರಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು ಸೋಮವಾರದಿಂದಲೇ ಈ ಅಭಿಯಾನ ನಡೆಯಲಿದೆ ಎಂದು ಹೇಳಲಾಗುತ್ತಿದೆ.

CWG 2022: ಕೂಲಿನಾಲಿ, ಎಂಬ್ರಾಯ್ಡರಿ ಮಾಡುತ್ತಾ ಭಾರತದ ಕೀರ್ತಿಪತಾಕೆ ಹಾರಿಸಿದ ಅಚಿಂತCWG 2022: ಕೂಲಿನಾಲಿ, ಎಂಬ್ರಾಯ್ಡರಿ ಮಾಡುತ್ತಾ ಭಾರತದ ಕೀರ್ತಿಪತಾಕೆ ಹಾರಿಸಿದ ಅಚಿಂತ

ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಜೋಡಿಸುವ ಯೋಜನೆಗೆ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. 2021ರ ಡಿಸೆಂಬರ್ ತಿಂಗಳಲ್ಲಿ ಇದರ ತಿದ್ದುಪಡಿ ಕಾನೂನಿಗೆ ಲೋಕಸಭೆಯ ಅನುಮೋದನೆ ಸಿಕ್ಕದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ನಾಯಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಸದ್ಯ ಯಾವುದಾದರೂ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ಬಹಳ ಸ್ಪಷ್ಟವಾಗಿ ತಿಳಿಸಿದೆ. ಚುನಾವಣಾ ಆಯೋಗ ಕೂಡ ಆಧಾರ್ ಮತ್ತು ವೋಟರ್ ಕಾರ್ಡ್ ಜೋಡಣೆ ಬಲವಂತವಲ್ಲ, ಜನರು ಸ್ವ ಇಚ್ಛೆಯಿಂದ ಮಾಡಬಹುದು ಎಂದು ಹೇಳಿದೆ.

ಆಧಾರ್ ನಂಬರ್ ಬಹಿರಂಗ ಇಲ್ಲ

ಆಧಾರ್ ನಂಬರ್ ಬಹಿರಂಗ ಇಲ್ಲ

ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಕಾರ್ಡ್ (EPIC Card) ಜೋಡಣೆಯನ್ನು ಜನರು ಸ್ವ ಇಚ್ಛೆಯಿಂದ ಮಾಡಬಹುದು. ವೋಟರ್ ಲಿಸ್ಟ್‌ನಲ್ಲಿ ಮತದಾರರ ಆಧಾರ್ ನಂಬರ್ ಅನ್ನು ಪ್ರಕಟಿಸಲಾಗುವುದಿಲ್ಲ. ಜನರು ಆತಂಕ ಪಡುವ ಅಗತ್ಯ ಇಲ್ಲ. ಆಧಾರ್ ನಂಬರ್ ವಿವರವನ್ನು ಸಾರ್ವತ್ರಿಕಗೊಳಿಸದೇ ಗೌಪ್ಯವಾಗಿಡಲಾಗುವುದು ಎಂದು ಚುನಾವಣಾ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ.

ಬೂತ್ ಲೆವೆಲ್ ಆಫೀಸರ್‌ಗಳು ಮನೆಮನೆಗೆ ಬರಲಿದ್ದು, ಮತದಾರರು ಸಹಕರಿಸಬೇಕು ಎಂದೂ ಚುನಾವಣಾ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಮಾಯಣ ಯಾತ್ರೆಗೆ ಮತ್ತೆ ವಿಶೇಷ ರೈಲು; ಪ್ರಯಾಣ ದರ, ಏಲ್ಲೆಲ್ಲಿ ಓಡುತ್ತೆ ಈ ರೈಲು ತಿಳಿಯಿರಿರಾಮಾಯಣ ಯಾತ್ರೆಗೆ ಮತ್ತೆ ವಿಶೇಷ ರೈಲು; ಪ್ರಯಾಣ ದರ, ಏಲ್ಲೆಲ್ಲಿ ಓಡುತ್ತೆ ಈ ರೈಲು ತಿಳಿಯಿರಿ

ಆಧಾರ್-ಎಪಿಕ್ ಲಿಂಕ್ ಹೇಗೆ?

ಆಧಾರ್-ಎಪಿಕ್ ಲಿಂಕ್ ಹೇಗೆ?

ಚುನಾವಣಾ ಆಯೋಗ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಕಾರ್ಡ್‌ಗಳನ್ನು ಜೋಡಿಸುವ ಅಭಿಯಾನಕ್ಕೆ ಈಗ ಚಾಲನೆ ನೀಡುತ್ತಿದೆಯಾದರೂ ಈ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಜನರು ಇಚ್ಛಿಸಿದಲ್ಲಿ ಅವರೇ ಖುದ್ದಾಗಿ ಈ ಎರಡು ಕಾರ್ಡ್‌ಗಳನ್ನು ಲಿಂಕ್ ಮಾಡಬಹುದು.

ಎನ್‌ವಿಎಸ್‌ಪಿ ಪೋರ್ಟಲ್, ಎಸ್ ಎಂ ಎಸ್ ಮತ್ತು ಫೋನ್ ಮೂಲಕ ಈ ಕಾರ್ಯ ಮಾಡಬಹುದು. ಬೂತ್ ಮಟ್ಟದ ಅಧಿಕಾರಿಗಳ ಮೂಲಕವೂ ಆಧಾರ್‌ಗೆ ವೋಟರ್ ಐಡಿ ಸೀಡಿಂಗ್ ಮಾಡಬಹುದು.

ಎನ್‌ವಿಎಸ್‌ಪಿ ಪೋರ್ಟಲ್

ಎನ್‌ವಿಎಸ್‌ಪಿ ಪೋರ್ಟಲ್

ಸರಕಾರದ NVSP ಪೋರ್ಟಲ್‌ಗೆ ಹೋದರೆ ಅಲ್ಲಿ ನಾವು ನಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯನ್ನು ಜೋಡಿಸಬಹುದು.

ಆ ವೆಬ್‌ಸೈಟ್‌ನಲ್ಲಿ ನಮ್ಮ ರಾಜ್ಯ, ಜಿಲ್ಲೆ, ನಮ್ಮ ಹೆಸರು, ಜನ್ಮದಿನಾಂಕ, ತಂದೆ ಹೆಸರು ಇತ್ಯಾದಿ ವಿವರ ಭರ್ತಿ ಮಾಡಿ ಸರ್ಚ್ ಮಾಡಿದರೆ ನಮ್ಮ ವೋಟರ್ ಐಡಿ ವಿವರ ಕಾಣುತ್ತದೆ.

ಅಲ್ಲಿ ಪರದೆಯ ಎಡಬದಿಯಲ್ಲಿ "ಫೀಡ್ ಆಧಾರ್ ನಂಬರ್" ಎಂಬುದನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿದರೆ ಪಾಪ್ ಅಪ್ ವಿಂಡೋ ಪ್ರತ್ಯಕ್ಷಾಗುತ್ತದೆ. ಅದರಲ್ಲಿ ನಮ್ಮ ಆಧಾರ್ ಕಾರ್ಡ್‌ ನಂಬರ್, ಅದರಲ್ಲಿರುವ ನಮ್ಮ ಹೆಸರು, ವೊಟರ್ ಐಡಿ ನಂಬರ್, ಆಧಾರ್‌ಗೆ ನೊಂದಾಯಿತವಾದ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ನಮೂದಿಸಬೇಕು. ಬಳಿಕ ಸಬ್ಮಿಟ್ ಒತ್ತಿರಿ. ಅಲ್ಲಿಗೆ ನಮ್ಮ ಆಧಾರ್ ನಂಬರ್ ಜೊತೆ ವೋಟರ್ ಐಡಿ ಅಥವಾ ಎಪಿಕ್ ಕಾರ್ಡ್ ಜೋಡಣೆ ಆದಂತಾಗುತ್ತದೆ.

ಎಸ್ಸೆಮ್ಮೆಸ್ ಮೂಲಕ

ಎಸ್ಸೆಮ್ಮೆಸ್ ಮೂಲಕ

ಮೊಬೈಲ್‌ನಲ್ಲಿ ಎಸ್ ಎಂ ಎಸ್ ಮೂಲಕವೂ ಆಧಾರ್ ಮತ್ತು ಎಪಿಕ್ ಜೋಡಣೆ ಮಾಡಬಹುದು.

"ECILINK " ಎಂಬ ಸಂದೇಶವನ್ನು ಬರೆದು 166 ಅಥವಾ 51969 ನಂಬರ್‌ಗೆ ಎಸ್ಸೆಮ್ಮೆಸ್ ಕಳುಹಿಸಿ.

ಉದಾಹರಣೆಗೆ ಈ ಕೆಳಗಿನ ಮಾದರಿ ನೋಡಿ

ECILINK XYZ1234567 123456789012

ಇಲ್ಲಿ "XYZ1234567" ಎಂಬುದು ವೋಟರ್ ಐಡಿ ನಂಬರ್, ಮತ್ತು "123456789012" ಎಂಬುದು ಆಧಾರ್ ನಂಬರ್.

ಕರೆ ಮೂಲಕ

ಕರೆ ಮೂಲಕ

ಆಧಾರ್ ಮತ್ತು ವೋಟರ್ ಐಡಿಯನ್ನು ಫೋನ್ ಕರೆ ಮೂಲಕವೂ ಜೋಡಿಸಲು ಸಾಧ್ಯ. ಅದಕ್ಕೆಂದೇ 1950 ಎಂಬ ನಂಬರ್ ಇದೆ. ಇದಕ್ಕೆ ಕರೆ ಮಾಡಿ ನಮ್ಮ ಎಪಿಕ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಮಾಹಿತಿಯನ್ನು ಒದಗಿಸಿದರೆ ಕಾಲ್ ಸೆಂಟರ್‌ನಲ್ಲಿರುವ ಸಿಬ್ಬಂದಿಯವರೇ ಎರಡೂ ಕಾರ್ಡ್ ಜೋಡಣೆ ಮಾಡಿಕೊಡುತ್ತಾರೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ನಂಬರ್‌ಗೆ ಕರೆ ಮಾಡಿ ಈ ಸೇವೆ ಪಡೆಯಬಹುದಾಗಿದೆ.

ಬೂತ್ ಮಟ್ಟದ ಅಧಿಕಾರಿ

ಬೂತ್ ಮಟ್ಟದ ಅಧಿಕಾರಿ

ನಮ್ಮ ಸಮೀಪದ ಬೂತ್ ಮಟ್ಟದ ಅಧಿಕಾರಿ (BLO- Booth Level Officer) ಬಳಿ ಅರ್ಜಿ ನಮೂನೆ ಸಿಗುತ್ತದೆ. ಅದನ್ನು ಭರ್ತಿ ಮಾಡಿ ಸಲ್ಲಿಸಿದರೂ ಸಾಕು. ಅಥವಾ ಬೂತ್ ಮಟ್ಟದ ಅಧಿಕಾರಿಯವರೇ ಮನೆ ಮನೆಗೆ ಸಮೀಕ್ಷೆ ಕೈಗೊಳ್ಳಲಿದ್ದು ಆಗಲೂ ನೀವು ನಿಮ್ಮ ಆಧಾರ್ ಮತ್ತು ವೋಟರ್ ಐಡಿ ಮಾಹಿತಿಯನ್ನು ಒದಗಿಸಿ ಸೀಡಿಂಗ್ ಮಾಡಿಸಬಹುದು.

(ಒನ್ಇಂಡಿಯಾ ಸುದ್ದಿ)

English summary
Election Commission is set to launch campaign to link voters ID card with their Aadhaar numbers. The process will be voluntory. Here are other easy ways to link them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X