ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನಿಗಳ ಪ್ರಕಾರ ಎಷ್ಟು 'ಎಣ್ಣೆ' ಹೊಡೆದ್ರೆ ಸೇಫ್?

|
Google Oneindia Kannada News

ಕುಡಿಯೋದೇ ನನ್ನ ವೀಕ್ಸೆಸ್ಸು... ರವಿಚಂದ್ರನ್‌ರ ಯುದ್ಧಕಾಂಡ ಸಿನಿಮಾದ ಈ ಹಾಡು ಕುಡುಕರ ಪಾಲಿಗೆ ಐಕಾನ್ ಸಾಂಗು. ವೀಕೆಂಡ್ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಸೇರಿ ಎಣ್ಣೆ ನಮ್ದು ಊಟ ನಿಮ್ದು ಅಂತ ಪಾರ್ಟಿ ಮಾಡ್ತಾರೆ.

ಇನ್ನು ಕೆಲವರು ದಿನಾ ಕುಡಿಯದೇ ಇದ್ರೆ ತಿಂದ ಅನ್ನ ಜೀರ್ಣ ಆಗೋದೇ ಇಲ್ಲ. ನಾವು ಮನೆಗ್ ಹೋಗೋದಿಲ್ಲ ಅಂತ ಪಟ್ಟು ಹಿಡಿದು ಬಾರ್‌ನಲ್ಲಿ ಕೂರುವವರು ಎಷ್ಟು ಇರಲ್ಲ ಹೇಳಿ..! ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಅಂತ ಕೆಲ ಹೆಣ್ಮಕ್ಕಳೇನು ಕುಡಿಯೋದ್ರಲ್ಲಿ ಮುಲಾಜು ತೋರಲ್ಲ.

ದೆಹಲಿಯಲ್ಲಿ ಮದ್ಯ ನೀತಿ ರಾದ್ಧಾಂತ: ಹೆಂಡಕ್ಕಾಗಿ ಉದ್ದುದ್ದ ಕ್ಯೂ!ದೆಹಲಿಯಲ್ಲಿ ಮದ್ಯ ನೀತಿ ರಾದ್ಧಾಂತ: ಹೆಂಡಕ್ಕಾಗಿ ಉದ್ದುದ್ದ ಕ್ಯೂ!

ಕುಡಿಯೋ ಚಟ ಭಾರತೀಯರ ಜೀವನಶೈಲಿಯ ಅವಿಭಾಜ್ಯ ಅಂಗ. ಪಾರ್ಟಿ ಅಂದ್ರೆ ಅದರ್ಥ ಎಣ್ಣೆ ಪಾರ್ಟಿ ಎಂದೇ ಆಗಿ ಹೋಗಿದೆ. ಆದರೆ, ಕುಡಿತದಿಂದ ಮನೆ ಹಾಳು, ಆರೋಗ್ಯ ಹಾಳು ಎಂಬ ಎಚ್ಚರಿಕೆಯ ಸಂದೇಶ ಮದ್ಯದ ಅಮಲಿನಲ್ಲಿ ಮುಳುಗಿಹೋಗುತ್ತದೆ ಅಷ್ಟೇ.

ಮದ್ಯ ಸೇವನೆ ಸೀಮಿತ ಮಟ್ಟದಲ್ಲಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲ ಕುಡುಕರು ಹೇಳುವುದನ್ನು ಕೇಳಿರುತ್ತೇವೆ. ಇದನ್ನು ಎಷ್ಟು ನಂಬಬೇಕೋ ಬಿಡಬೇಕೋ ಎಣ್ಣೆ ಏಟಿನಲ್ಲೇ ಗೊತ್ತಾಗಬೇಕು. ಅಷ್ಟಕ್ಕೂ ವಿಜ್ಞಾನಿಗಳು ಈ ಬಗ್ಗೆ ಏನಂತಾರೆ? ನಾವು ದಿನಕ್ಕೆ ಎಷ್ಟು ಮದ್ಯ ಸೇವಿಸಿದರೆ ಸೇಫ್? ಈ ಬಗ್ಗೆ ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ.

ಮದ್ಯ ಮತ್ತು ಆಲ್ಕೋಹಾಲ್

ಮದ್ಯ ಮತ್ತು ಆಲ್ಕೋಹಾಲ್

ವಿಸ್ಕಿ, ಬ್ರಾಂದಿ, ರಮ್ಮು, ಬಿಯರ್ ಇತ್ಯಾದಿ ಮದ್ಯವು ವಿವಿಧ ಕಾಳು, ಹಣ್ಣು ಇತ್ಯಾದಿಯಿಂದ ತಯಾರಾಗುತ್ತವೆ. ಅದೇನು ಹಾನಿಕರ ಎನಿಸಬಹುದು. ಆದರೆ, ಮದ್ಯದ ಜೊತೆಗೆ ಆಲ್ಕೋಹಾಲ್ ಮಿಶ್ರ ಮಾಡುವುದೇ ಆರೋಗ್ಯ ಕೆಡಲು ಮೂಲ. ಮದ್ಯದ ಜೊತೆ ಇರುವ ಆಲ್ಕೋಹಾಲ್ ಸೇವನೆಯಿಂದ ನಮ್ಮ ಆರೋಗ್ಯ ಕೆಡುತ್ತದೆ.

ವಿಸ್ಕಿ, ಬ್ರಾಂದಿ ಇತ್ಯಾದಿ ಹಾಟ್ ಡ್ರಿಂಕ್ಸ್‌ಗಳಲ್ಲಿ ಶೇ. 20ರಿಂದ 50ರಷ್ಟು ಆಲ್ಕೋಹಾಲ್ ಇರುತ್ತದೆ. ಬಿಯರ್‌ನಲ್ಲಿ 4ರಿಂದ 10 ಪ್ರತಿಶತದವರೆಗೆ ಆಲ್ಕೋಹಾಲ್ ಇರುತ್ತದೆ. ಹೀಗಾಗಿ, ಮದ್ಯ ಸೇವನೆಗೆ ಆಲ್ಕೋಹಾಲ್ ಸೇವನೆ ಎಂದೂ ಹೇಳುತ್ತಾರೆ.

'ಎಣ್ಣೆ' ಎಫೆಕ್ಟ್

'ಎಣ್ಣೆ' ಎಫೆಕ್ಟ್

ನಮ್ಮ ದೇಹ ಸರಿಯಾಗಿ ಕಾರ್ಯವಹಿಸಬೇಕಾದರೆ ಎಲ್ಲಾ ಅಂಗಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಅದರಲ್ಲೂ ನಮ್ಮ ಲಿವರ್ ಅಥವಾ ಯಕೃತ್ತು ಬಹಳ ಮುಖ್ಯ. ಈ ಲಿವರ್ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಹೀಗಾಗಿ, ಈ ಅಂಗವನ್ನು ಜೋಪಾನ ಮಾಡಬೇಕಾದ್ದು ಅಗತ್ಯ.

ನಾವು ಸೇವಿಸುವ ಆಲ್ಕೋಹಾಲ್ ಈ ಲಿವರ್‌ಗೆ ಹಾನಿ ಮಾಡುತ್ತದೆ ಎಂಬುದು ತಿಳಿದಿರಲಿ. ನಿಯಮಿತವಾಗಿ ನೀವು ಮದ್ಯ ಸೇವನೆ ಅಥವಾ ಆಲ್ಕೋಹಾಲ್ ಕುಡಿಯುವುದರಿಂದ ಯಕೃತ್ತು ಊದಿಕೊಳ್ಳುತ್ತದೆ. ಸಿರ್ಹೋಸಿಸ್ (Cirhossis) ಎಂಬ ಜೀವಹಾನಿಕರ ಹಂತಕ್ಕೆ ಕಾಯಿಲೆ ಹೋಗುತ್ತದೆ.

ಆಲ್ಕೋಹಾಲ್‌ನಂತಹ ವಿಷಕಾರಿ ವಸ್ತುಗಳನ್ನು ನಾಶ ಮಾಡುವುದು ಯಕೃತ್ತಿನ ಪ್ರಮುಖ ಕಾರ್ಯಗಳಲ್ಲಿ ಒಂದು. ನಾವು ಡ್ರಿಂಕ್ಸ್ ಮಾಡಿದಾಗ, ಅದರಲ್ಲಿರುವ ಆಲ್ಕೋಹಾಲ್ ಅನ್ನು ನಾಶ ಮಾಡುವಂತಹ ಹಲವು ಕಿಣ್ವಗಳನ್ನು (Enzymes) ಯಕೃತ್ತು ಬಿಡುಗಡೆ ಮಾಡುತ್ತದೆ. ಇದು ಸಮರ್ಪಕವಾಗಿ ಕೆಲಸ ಮಾಡಿದರೆ ಆಲ್ಕೋಹಾಲ್ ನಮ್ಮ ದೇಹದಿಂದ ಹೊರಹೋಗುತ್ತದೆ.

ಆದರೆ, ಯಕೃತ್ತಿಗೆ ನಿರ್ವಹಿಸಲು ಸಾಧ್ಯವಾಗದಷ್ಟು ಮಟ್ಟಕ್ಕೆ ಕುಡಿಯುವುದರಿಂದ ಅದು ಹಾನಿಗೊಳ್ಳುತ್ತದೆ. ಲಿವರ್‌ನಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತಾ ಹೋಗುತ್ತದೆ. ಕೊನೆಗೆ ಊತವಾಗಿ ಪರಿಣಿಸುತ್ತದೆ.

ಯಕೃತ್ತು ಹಾನಿಯಾದರೆ ತನ್ನಂತಾನೆ ದುರಸ್ತಿ ಮಾಡುವ ವ್ಯವಸ್ಥೆ ಇರುತ್ತದೆ. ಆದರೆ ಆಲ್ಕೋಹಾಲ್ ಪ್ರವೇಶ ಆದಂಗೆಲ್ಲಾ ಯಕೃತ್ತಿನ ಕೆಲ ಕೋಶಗಳು ನಾಶವಾಗುತ್ತಲೇ ಹೋಗುತ್ತವೆ. ಹೊಸ ಕೋಶಗಳು ಉತ್ಪತ್ತಿಯಾದರೂ ನಿರಂತರ ಆಲ್ಕೋಹಾಲ್ ಪ್ರವೇಶದಿಂದ ಆ ಸಾಮರ್ಥ್ಯ ಕುಂದುತ್ತಾ ಹೋಗುತ್ತದೆ. ಕೊನೆಗೆ ಯಕೃತ್ತು ದೀರ್ಘ ಕಾಲದ ಸಮಸ್ಯೆಗೆ ಸಿಲುಕುತ್ತದೆ.

ಹಾಗಾದರೆ, ಎಷ್ಟು ಆಲ್ಕೋಹಾಲ್ ಸೇವನೆಯಿಂದ ಯಕೃತ್ತು ಘಾಸಿಗೊಳ್ಳುತ್ತದೆ ಎಂದು ನೀವು ಪ್ರಶ್ನೆ ಕೇಳಬಹುದು. ಅದಕ್ಕೆ ತಜ್ಞರು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ.

ಎಷ್ಟು ಆಲ್ಕೋಹಾಲ್ ಸೇಫ್?

ಎಷ್ಟು ಆಲ್ಕೋಹಾಲ್ ಸೇಫ್?

ಡ್ರಿಂಕಾವೇರ್ ಎಂಬ ಸಂಸ್ಥೆ ಪ್ರಕಾರ ದಿನಕ್ಕೆ 40 ಗ್ರಾಮ್‌ಗಿಂತ ಹೆಚ್ಚು ಆಲ್ಕೋಹಾಲ್ ಸೇವಿಸುವ ಶೇ. 90ರಷ್ಟು ಜನರಿಗೆ ಫ್ಯಾಟಿ ಲಿವರ್ ಕಾಯಿಲೆ ಕಾಣಿಸಿಕೊಳ್ಳುತ್ತದೆಯಂತೆ.

ಇಲ್ಲಿ ಗ್ರಾಮ್ ಲೆಕ್ಕದಲ್ಲಿ ಆಲ್ಕೋಹಾಲ್ ಅಂತ ಹೇಳಿದ್ದಾರೆ. ಎಣ್ಣೆ ಪ್ರಿಯರಿಗೆ ಇದು ಗೊಂದಲವಾಗಬಹುದು. ಮದ್ಯದ ಬಾಟಲಿಗಳು ಎಂಎಲ್, ಪಿಂಟ್ ಲೆಕ್ಕದಲ್ಲಿ ಬರುತ್ತವೆ.

ಶೇ. 12ರಷ್ಟು ಆಲ್ಕೋಹಾಲ್ ಇರುವ ವೈನ್ ಆದರೆ 175 ಎಂಎಲ್‌ಗಿಂತ ಹೆಚ್ಚು ಪ್ರಮಾಣ ಡೇಂಜರಸ್ ಆಗುತ್ತದೆ. ಆಲ್ಕೋಹಾಲ್ ಪ್ರಮಾಣ ಇನ್ನೂ ಹೆಚ್ಚು ಇದ್ದರೆ ಮದ್ಯ ಸೇವನೆಯನ್ನು ಇನ್ನೂ ಕಡಿಮೆ ಮಾಡಬೇಕಾಗುತ್ತದೆ. ಇನ್ನು, ಶೇ. 4ರಷ್ಟು ಆಲ್ಕೋಹಾಲ್ ಇರುವ ಬಿಯರ್ ವಿಚಾರಕ್ಕೆ ಬಂದರೆ ಎರಡು ಪಿಂಟ್‌ಗಿಂತ ಹೆಚ್ಚು ಸೇವನೆ ಮಾಡಬಾರದು.

ಇಲ್ಲಿ 180 ಎಂಎಲ್ ಅಂದರೆ ಒಂದು ಕ್ವಾರ್ಟರ್ ಆಗುತ್ತದೆ. ಒಂದು ಪಿಂಟ್ ಎಂಬುದು 568 ಎಂಎಲ್ ಇರುತ್ತದೆ.

ಮಹಿಳಾ ಕುಡುಕರಿಗೆ ಹೆಚ್ಚು ಎಫೆಕ್ಟ್

ಮಹಿಳಾ ಕುಡುಕರಿಗೆ ಹೆಚ್ಚು ಎಫೆಕ್ಟ್

ವಿಜ್ಞಾನಿಗಳು ಹೇಳಿರುವ ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಪುರುಷರಿಗೆ ಹೋಲಿಸಿದರೆ ಮಹಿಳಾ ಕುಡುಕರಿಗೆ ಲಿವರ್ ತೊಂದರೆ ಹೆಚ್ಚು ಇರುತ್ತದೆಯಂತೆ. ಆಲ್ಕೋಹಾಲ್ ಸಂಬಂಧಿತ ಲಿವರ್ ಕಾಯಿಲೆ ಎಆರ್‌ಎಲ್‌ಡಿ ಕೇವಲ ಕುಡುಕರಿಗೆ ಮಾತ್ರವಲ್ಲ, ದಢೂತಿ ದೇಹದವರು ಮತ್ತು ಹೆಪಾಟಿಟಿಸ್ ಸಿ ಮುಂತಾದ ಲಿವರ್ ಸಮಸ್ಯೆ ಹೊಂದಿರುವವರನ್ನೂ ಬಾಧಿಸುತ್ತದೆ.

ಮದ್ಯವ್ಯಸನಿಗಳ ವಂಶಸ್ಥರಿಗೆ ಅನುವಂಶೀಯವಾಗಿ ಎಆರ್‌ಎಲ್‌ಡಿ ಕಾಯಿಲೆ ಹೆಚ್ಚು ಪೀಡಿಸುತ್ತದೆ ಎಂದು ಹೇಳಲಾಗುತ್ತದೆ. ಸುಸ್ತಾಗುವುದು, ದಿಢೀರ್ ತೂಕ ಇಳಿಯುವುದು, ರುಚಿಗೆಡುವುದು, ವಾಂತಿ, ಕಣ್ಣು ಮತ್ತು ಚರ್ಮ ಹಳದಿಯಾಗುವವುದು, ಮುಂಗೈ ಊದಿಕೊಳ್ಳುವುದು ಇವು ರೋಗಲಕ್ಷಣಗಳು. ಹಾಗೆಯೇ, ಅತಿಯಾಗಿ ಲಿವರ್ ಹಾನಿಯಾದಾಗ ವಾಂತಿ ಅಥವಾ ಮಲದಲ್ಲಿ ರಕ್ತ ಇರಬಹುದು.

ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಎಆರ್‌ಎಲ್‌ಡಿ ಕಾಯಿಲೆಯ ರೋಗಲಕ್ಷಣ ಬಹಳ ಬೇಗ ಗೊತ್ತಾಗುವುದಿಲ್ಲ. ಯಕೃತ್ತು ಸಂಪೂರ್ಣ ಹಾನಿಯಾದಾಗ ಮಾತ್ರ ನೋವು ಹೊರಕಾಣಿಸಲು ಆರಂಭವಾಗುತ್ತದೆ. ಹಾಗಾಗಿ, ವೈದ್ಯರು ಈ ಕಾಯಿಲೆಯನ್ನು ನಿಯಮಿತವಾಗಿ ತಪಾಸಿಸುತ್ತಿರಬೇಕು. ಸಿಬಿಸಿ, ಲಿವರ್ ಟೆಸ್ಟ್, ಹೊಟ್ಟೆಯ ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂದು ಸಲಹೆ ನೀಡುತ್ತಾರೆ.

(ಒನ್ಇಂಡಿಯಾ ಸುದ್ದಿ)

Recommended Video

ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತ ರೆಡಿಯಾಗಿ‌ ಮಹಿಳಾ ಐಪಿಎಲ್‌ಗೆ | *Cricket | OneIndia Kannada

English summary
Spirits or Alcohol is considered as harmful, though few claim it as healthy drink. Experts has found out danger level of alcohol consumption per day. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X