ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಯಾಬಿಟಿಸ್ ಇದ್ದವರು ಎಷ್ಟು ಮದ್ಯಸೇವನೆ ಮಾಡಬಹುದು? ಯಾವ ಡ್ರಿಂಕ್ಸ್ ಉತ್ತಮ?

|
Google Oneindia Kannada News

ಭಾರತದಲ್ಲಿ ಆಲ್ಕೊಹಾಲ್ ಸೇವನೆ ಬಹುತೇಕ ಸಾಮಾನ್ಯವಾಗಿದೆ. ಭಾರತದಲ್ಲಿ ಸರಿಸುಮಾರು 8 ಕೋಟಿ ಜನರು ಮದ್ಯಸೇವನೆ ಮಾಡುತ್ತಾರೆ ಎಂದು ಇತ್ತೀಚಿನ ಒಂದು ಸಮೀಕ್ಷೆ ವರದಿ ಹೇಳುತ್ತದೆ. ಶೇ. 19ರಷ್ಟು ಪುರುಷರು ಮದ್ಯ ಸೇವಿಸುವ ಅಭ್ಯಾಸ ಹೊಂದಿದ್ದಾರೆ ಎನ್ನಲಾಗಿದೆ.

ಅಲ್ಕೊಹಾಲ್ ನಮ್ಮ ಸರಕಾರಗಳಿಗೆ ಪ್ರಮುಖ ಆದಾಯ ಮೂಲವಾಗಿರುವುದರಿಂದ ಅದನ್ನು ನಿಷೇಧಿಸುವ ಧೈರ್ಯ ಮಾಡುವವರು ಕಡಿಮೆ. ಹೀಗಾಗಿ, ಲಿಕ್ಕರ್ ಪ್ರಪಂಚದ ಜೊತೆ ಜೊತೆಗೆ ನಾವು ಬದುಕುವುದು ಅನಿವಾರ್ಯ.

ವಿಜ್ಞಾನಿಗಳ ಪ್ರಕಾರ ಎಷ್ಟು 'ಎಣ್ಣೆ' ಹೊಡೆದ್ರೆ ಸೇಫ್?ವಿಜ್ಞಾನಿಗಳ ಪ್ರಕಾರ ಎಷ್ಟು 'ಎಣ್ಣೆ' ಹೊಡೆದ್ರೆ ಸೇಫ್?

ಈ ಹಿನ್ನೆಲೆಯಲ್ಲಿ ಮದ್ಯ ಸೇವನೆ ವಿರುದ್ಧ ಜನಜಾಗೃತಿ ಮೂಡಿಸುವುದೋ, ಅಥವಾ ಮದ್ಯ ಸೇವನೆ ನಿಯಂತ್ರಣ ಹೇಗೆ ಮಾಡುವುದು, ಮದ್ಯ ಸೇವನೆ ಎಷ್ಟಕ್ಕೆ ಮಿತಿಗೊಳಿಸಬೇಕು ಎಂಬಿತ್ಯಾದಿ ಮಾಹಿತಿ ನೀಡುವ ಕೆಲಸ ಆಗಬೇಕಷ್ಟೇ.

ನಾವು ಸೇವಿಸುವ ಮದ್ಯದಲ್ಲಿ ಇರುವ ಆಲ್ಕೋಹಾಲ್ ಅಂಶ ನಮ್ಮ ಆರೋಗ್ಯಕ್ಕೆ ಹಾನಿಕರ. ದಿನಕ್ಕೆ ನಾವು 40 ಗ್ರಾಂಗೂ ಹೆಚ್ಚು ಆಲ್ಕೋಹಾಲ್ ಸೇವಿಸುವುದರಿಂದ ನಮ್ಮ ಲಿವರ್‌ಗೆ ಹಾನಿಯಾಗುತ್ತದೆ ಎಂದು ಒಂದು ವರದಿ ಹೇಳುತ್ತದೆ. ಅದೇ ರೀತಿಯಲ್ಲಿ ಡಯಾಬಿಟಿಸ್ ರೋಗಿಗಳು ಮದ್ಯಸೇವನೆ ಮಾಡಬಹುದಾ?, ಮಾಡಿದರೂ ಎಷ್ಟು ಕುಡಿಯಬೇಕು? ಯಾವ ಮದ್ಯ ಸೇವಿಸಬಹುದು ಎಂಬ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಮದ್ಯಪಾನ: ಕುಡುಕರಿಗೆ ಹೃದಯಾಘಾತದ ಅಪಾಯವೇನು? ತಿಳಿಯಿರಿಮದ್ಯಪಾನ: ಕುಡುಕರಿಗೆ ಹೃದಯಾಘಾತದ ಅಪಾಯವೇನು? ತಿಳಿಯಿರಿ

ಕುಡಿತದಿಂದ ಡಯಾಬಿಟಿಸ್ ಬರುತ್ತಾ?

ಕುಡಿತದಿಂದ ಡಯಾಬಿಟಿಸ್ ಬರುತ್ತಾ?

ಅತಿಯಾದ ಕುಡಿತದಿಂದ ಡಯಾಬಿಟಿಸ್ ರೋಗ ಬರುವುದು ನಿಜ. ಮದ್ಯ ಸೇವನೆಯಿಂದ ರಕ್ತದೊತ್ತಡವೂ ಬರುತ್ತದೆ. ಒಂದು ಕಾರಣವೆಂದರೆ ಅತಿಯಾದ ಕುಡಿತದಿಂದ ತೂಕ ಹೆಚ್ಚುತ್ತದೆ. ಅದರ ಪರಿಣಾಮವಾಗಿ ಮಧುಮೇಹ ವಕ್ಕರಿಸುತ್ತದೆ. ಇನ್ನೊಂದು ಕಾರಣ, ಮಿತಿಮೀರಿದ ಆಲ್ಕೋಹಾಲ್ ಸೇವನೆಯಿಂದ ಪ್ಯಾಂಕ್ರಿಯಾಸ್ ಅಥವಾ ನಮ್ಮ ಮೇದೋಜ್ಜೀರಕ ಗ್ರಂಥಿಗೆ ಹಾನಿಯಾಗುತ್ತದೆ. ಆ ಮೂಲಕ ಡಯಾಬಿಟಿಸ್ ಬರುತ್ತದೆ. ಮಗದೊಂದು ಕಾರಣ, ಮದ್ಯ ಸೇವನೆಯಿಂದ ನಮ್ಮ ಲಿವರ್ ಅಥವಾ ಯಕೃತ್ತಿಗೆ ಹಾನಿಯಾಗುತ್ತದೆ. ಇದರಿಂದ ಲಿವರ್ ಸಿರೋಸಿಸ್ ಕಾಯಿಲೆ ಬರುತ್ತದೆ. ಅದರ ಪರಿಣಾಮವಾಗಿಯೂ ಡಯಾಬಿಟಿಸ್ ಬರಬಹುದು.

ನಿಮಗಿನ್ನೂ ಡಯಾಬಿಟಿಸ್ ಇಲ್ಲವೆಂದರೆ ಆಲ್ಕೋಹಾಲ್ ಗೋಜಿಗೆ ಹೋಗಬೇಡಿ. ಅಕಸ್ಮಾತ್ ಸೇವಿಸುವುದು ಅನಿವಾರ್ಯ ಎಂಬಂತಿದ್ದರೆ ಸೇವನೆ ಮಿತಿಯಲ್ಲಿರಲಿ. ಮಹಿಳೆಯರಾದರೆ ದಿನಕ್ಕೆ 30 ಎಂಎಲ್‌ಗಿಂತ ಹೆಚ್ಚು ಮದ್ಯ (ವಿಸ್ಕಿ) ಸೇವನೆ ಮಾಡಬಾರದು. ಪುರುಷರಾದರೆ 60ಕ್ಕಿಂತ ಹೆಚ್ಚು ವಿಸ್ಕಿ ಕುಡಿಯಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಡಯಾಬಿಟಿಸ್ ಇದ್ದರೆ?

ಡಯಾಬಿಟಿಸ್ ಇದ್ದರೆ?

ಡಯಾಬಿಟಿಸ್ ಇದ್ದವರು ಮದ್ಯಪಾನ ತ್ಯಜಿಸಿದರೆ ಒಳ್ಳೆಯದು. ಮದ್ಯಪಾನ ಮಾಡಿದಷ್ಟೂ ನಮ್ಮ ಆಹಾರ ಸೇವನೆಯೂ ಅನಿಯಂತ್ರಿತವಾಗಿ ನಡೆಯುತ್ತದೆ. ಇದು ಡಯಾಬಿಟಿಸ್ ರೋಗಿಗಳಿಗೆ ಮಾರಕವಾಗಿ ಪರಿಣಮಿಸಬಹುದು.

ಇಲ್ಲಿ ಒಂದು ವಿಚಾರ ಗಮನಿಸಬೇಕು. ಅಲ್ಕೋಹಾಲ್ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆ ಆಗುವುದಿಲ್ಲ. ಬದಲಾಗಿ ರಕ್ತದ ಅಂಶ ಕಡಿಮೆ ಆಗುತ್ತದೆ. ಅಂದರೆ ಹೈಪೋಗ್ಲೈಕೇಮಿಯಾ ಎಂದು ಕರೆಯಲಾಗುವ ಲೋ ಬ್ಲಡ್ ಶುಗರ್ ಆಗುತ್ತದೆ. ಇದರಿಂದ ನಮ್ಮ ದೇಹದ ಅಂಗಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ನಾವು ಖಾಲಿ ಹೊಟ್ಟೆಯಲ್ಲಿದ್ದಾಗ ಯಕೃತ್ತು ಗ್ಲೂಕೋಸ್ ಅನ್ನು ರಕ್ತಕ್ಕೆ ಕಳುಹಿಸುತ್ತದೆ. ಇದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ತೀರಾ ಕೆಳಕ್ಕೆ ಕುಸಿಯದಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ಖಾಲಿ ಹೊಟ್ಟೆಯಲ್ಲಿ ನಾವು ಆಲ್ಕೋಹಾಲ್ ಸೇವಿಸಿದಲ್ಲಿ ಯಕೃತ್ತಿನಿಂದ ಗ್ಲೂಕೋಸ್ ರಕ್ತಕ್ಕೆ ಪೂರೈಕೆಯಾಗುವ ಕಾರ್ಯಕ್ಕೆ ಅಡ್ಡಿಯಯಾಗುತ್ತದೆ. ಯಾಕೆಂದರೆ ಯಕೃತ್ತಿಗೆ ಆಲ್ಕೋಹಾಲ್ ನಮೊದಲ ಶತ್ರು. ಹೀಗಾಗಿ, ಆಲ್ಕೋಹಾಲ್ ಬಂದ ಕೂಡಲೇ ಅದನ್ನು ಸರಿ ಮಾಡುವತ್ತಲೇ ಲಿವರ್ ಕಾರ್ಯಮಗ್ನವಾಗುತ್ತದೆ. ಹೀಗಾಗಿ, ರಕ್ತಕ್ಕೆ ಗ್ಲೂಕೋಸ್ ಬಿಡುಗಡೆಯಾಗುವುದು ವಿಳಂಬವಾಗುತ್ತದೆ.

ಹೀಗಾಗಿ, ನೀವು ಡ್ರಿಂಕ್ಸ್ ಮಾಡಿದ ಮಲಗುವ ಮುನ್ನ ಒಮ್ಮೆ ಶುಗರ್ ಪರೀಕ್ಷೆ ಮಾಡಿಕೊಳ್ಳಿ. ಕಡಿಮೆ ಇದ್ದಲ್ಲಿ ಏನಾದರೂ ತಿಂಡಿ ತಿಂದು ಆ ಬಳಿಕ ಮಲಗಿ.

ಇನ್ನೊಂದು ವಿಚಾರ ನೆನಪಿರಲಿ, ಲೋ ಬ್ಲಡ್ ಶುಗರ್ ಇದ್ದಾಗ ಕೆಲವೊಮ್ಮೆ ತಲೆ ಸುತ್ತು ಇತ್ಯಾದಿ ಆಗುತ್ತದೆ. ನೀವು ಎಣ್ಣೆ ಹೊಡೆದದ್ದರಿಂದ ತಲೆ ಸುತ್ತುತ್ತಿದೆ ಎಂದು ಭಾವಿಸಿ ಅಲಕ್ಷಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೈ ಬ್ಲಡ್ ಶುಗರ್‌ಗಿಂತ ಲೋ ಬ್ಲಡ್ ಶುಗರ್ ಹೆಚ್ಚು ಡೇಂಜರ್ ಎಂದು ಹೇಳುತ್ತಾರೆ. ಹೀಗಾಗಿ, ಹುಷಾರ್.

ಮದ್ಯ ಸೇವನೆ ಹೇಗೆ?

ಮದ್ಯ ಸೇವನೆ ಹೇಗೆ?

ಮದ್ಯದ ಜೊತೆ ಸಕ್ಕರೆ ಮಿಶ್ರಿತ ಪಾನೀಯವನ್ನು ಬೆರೆಸಿ ಕುಡಿದರೆ ಕ್ಯಾಲೋರಿ ಹೆಚ್ಚು ಆಗುತ್ತದೆ. ಡಯಟ್ ಕೋಲಾ ಇತ್ಯಾದಿ ಪಾನೀಯದ ಜೊತೆ ನೀವು ಮದ್ಯ ಬೆರೆಸಿ ಕುಡಿಯಬಹುದು.

ಇನ್ನು, ಮದ್ಯದ ಜೊತೆ ಸೈಡ್ ಡಿಶ್ ಇಲ್ಲದೇ ಇದ್ದರೆ ಕುಡಿತವೇ ಅನಿಸುವುದಿಲ್ಲ. ಆದರೆ, ಸೈಡ್ ಡಿಶ್ ಆಗಿ ನಾವು ಫ್ರೈ ಐಟಂಗಳನ್ನೇ ಹೆಚ್ಚು ತಿನ್ನುತ್ತೇವೆ. ಚೌಚೌ, ಚಿಪ್ಸ್, ಚಿಕನ್ ಕಬಾಬ್, ಚಿಕನ್ ಫ್ರೈ, ಫಿಶ್ ಫ್ರೈ ಇತ್ಯಾದಿ ಆಹಾರವು ಆಲ್ಕೋಹಾಲ್‌ಗೆ ಜೋಡಿಯಾಗಿರುತ್ತವೆ. ಇದರಿಂದ ಕ್ಯಾಲೋರಿ ಪ್ರಮಾಣ ಹೆಚ್ಚು ಸೇರಿಕೊಳ್ಳುತ್ತದೆ. ಇದನ್ನು ತಪ್ಪಿಸಲು ಫ್ರೈ ಆಹಾರದ ಬದಲು ಹುರಿದ ಆಹಾರವನ್ನು ಸೇವಿಸಬಹುದು.

ಹಾಗೆಯೇ, ನೀವು ಒಮ್ಮೆಗೇ ಗಟ ಗಟ ಎಂದು ಆಲ್ಕೋಹಾಲ್ ಸೇವಿಸುವುದು ಡೇಂಜರ್ ಎನ್ನುತ್ತಾರೆ ವೈದ್ಯರು. ನಿಧಾನವಾಗಿ ಕುಡಿಯಬೇಕು. ನಿಮ್ಮ 90 ಎಂಎಲ್ ಮದ್ಯವನ್ನು ಒಂದು ಗಂಟೆಯವರೆಗೆ ನಿಧಾನವಾಗಿ ಕುಡಿಯುವುದು ಉತ್ತಮ. ಇದರಿಂದ ಆಲ್ಕೋಹಾಲ್ ಅನ್ನು ನಿರ್ವಹಿಸಲು ದೇಹಕ್ಕೆ ಅನುಕೂಲವಾಗುತ್ತದೆ.

ಯಾವ ಮದ್ಯ ಉತ್ತಮ

ಯಾವ ಮದ್ಯ ಉತ್ತಮ

ಡಯಾಬಿಟಿಸ್ ಹೊಂದಿರುವವರು ಸಿಹಿಯಾಗಿರುವ ವೈನ್ ಸೇವಿಸುವುದನ್ನು ತಪ್ಪಿಸಿ. ಕಡಿಮೆ ಕಾರ್ಬೊಹೈಡ್ರೇಟ್ ಇರುವ ಬಿಯರ್ ಆದರೆ ಪರವಾಗಿಲ್ಲ. ಕಡಿಮೆ ಆಲ್ಕೋಹಾಲ್ ಇರುವ ಡ್ರಿಂಕ್ಸ್‌ಗೆ ಹೆಚ್ಚು ಆದ್ಯತೆ ಕೊಡಿ. ವಿಸ್ಕಿ ಅಥವಾ ರಮ್‌ಗಿಂತ ವೋಡ್ಕಾ, ಜಿನ್ ಸುರಕ್ಷಿತ ಎಂಬುದು ತಪ್ಪು ಕಲ್ಪನೆ. ಎಲ್ಲವೂ ಒಂದೇ.

ನಿಮಗೆ ಲೋ ಬ್ಲಡ್ ಶುಗರ್ ಇದ್ದರೆ ಆಲ್ಕೋಹಾಲ್ ಸೇವನೆ ವೇಳೆ ಬಹಳ ಹುಷಾರಾಗಿರಿ. ಬ್ಲಡ್ ಶುಗರ್ ಕಡಿಮೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಅದಕ್ಕೆ ಬೇಕಾದ ಪರಿಹಾರವನ್ನು ಆಲ್ಕೋಹಾಲ್ ಸೇವನೆಗೆ ಮುಂಚೆಯೇ ಸಿದ್ಧ ಮಾಡಿಕೊಂಡಿರಿ.

ಎಷ್ಟು ಕುಡಿಯಬಹುದು?

ಎಷ್ಟು ಕುಡಿಯಬಹುದು?

ಬಿಯರ್, ವಿಸ್ಕಿ, ಬ್ರಾಂದಿ, ವಿಸ್ಕಿ ಇತ್ಯಾದಿ ಮದ್ಯಗಳು ಹಣ್ಣ, ಕಾಳು ಇತ್ಯಾದಿಯಿಂದ ಮಾಡಲಾಗುತ್ತದೆ. ಆದರೆ ಅದಕ್ಕೆ ಆಲ್ಕೋಹಾಲ್ ಬೆರೆಸುವುದರಿಂದ ಮದ್ಯಪಾನ ಡೇಂಜರ್ ಎನಿಸುತ್ತದೆ. ಬಿಯರ್‌ನಲ್ಲಿ ಸಾಮಾನ್ಯವಾಗಿ ಶೇ. 10ರಷ್ಟು ಆಲ್ಕೋಹಾಲ್ ಇರುತ್ತದೆ. ಹಾಟ್ ಡ್ರಿಂಕ್ಸ್ ಎನಿಸಿದ ವಿಸ್ಕಿ, ಬ್ರಾಂದಿ ಇತ್ಯಾದಿಗಳಲ್ಲಿ ಶೇ. 10ರಿಂದ 50ರಷ್ಟು ಆಲ್ಕೋಹಾಲ್ ಇರುವುದುಂಟು. ಹೀಗಾಗಿ, ನೀವು ಡ್ರಿಂಕ್ಸ್ ಮಾಡುವ ಮುನ್ನ ಅದರ ಆಲ್ಕೋಹಾಲ್ ಪ್ರಮಾಣವನ್ನು ಪರಿಶೀಲಿಸಿ.

ಡಯಾಬಿಟಿಸ್ ಇದ್ದವರು ಕುಡಿತ ಬಿಡುವುದು ಕ್ಷೇಮಕರ. ಬಿಡಲು ಆಗಲ್ಲ ಎನ್ನುವವರು ಸೇವನೆಯನ್ನು ಮಿತಿಗೊಳಿಸುವುದು ಅನಿವಾರ್ಯ. ದಿನಕ್ಕೆ 40 ಗ್ರಾಮ್‌ಗಿಂತ ಹೆಚ್ಚು ಆಲ್ಕೋಹಾಲ್ ಸೇವನೆಯಾಗದಂತೆ ನೋಡಿಕೊಳ್ಳಿ. ಇಲ್ಲಿ 10 ಗ್ರಾಂ ಆಲ್ಕೋಹಾಲ್ ಅನ್ನು ಒಂದು ಯೂನಿಟ್ ಎಂದು ಕರೆಯುತ್ತಾರೆ. ಆಲ್ಕೋಹಾಲ್ ಸೇವನೆ 4 ಯೂನಿಟ್ ಮೀರಬಾರದು.

275 ಎಂಎಲ್ ಬಿಯರ್‌ನಲ್ಲಿ 10 ಗ್ರಾಂ ಆಲ್ಕೋಹಾಲ್ ಇರುತ್ತದೆ. ವೈನ್ 100 ಎಂಎಲ್ ವೈನ್‌ನಲ್ಲಿ 10 ಗ್ರಾಂ ಆಲ್ಕೋಹಾಲ್ ಇರುತ್ತದೆ.

ಶೇ. 40ರಷ್ಟು ಆಲ್ಕೊಹಾಲ್ ಇರುವ ವಿಸ್ಕಿಯನ್ನು ನೀವು 30 ಎಂಎಲ್ ಸೇವಿಸಿದರೆ 12 ಗ್ರಾಂ ಆಲ್ಕೋಹಾಲ್ ಅನ್ನು ಒಳಗೆ ಸೇರಿಸಿಕೊಂಡಂತಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Alcohol is known to cause diabetes if went uncontrolled. Diabetics should be beware of low blood sugar when taking alcohol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X