ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡದೇಶ ಪಾಕಿಸ್ತಾನದ ಸಿರಿವಂತ ರಾಜಕಾರಣಿಗಳು: ಟಾಪ್ ಪಟ್ಟಿ

|
Google Oneindia Kannada News

75 ವರ್ಷ ಹಿಂದೆ ಭಾರತದಿಂದ ಪ್ರತ್ಯೇಕಗೊಂಡು ಹುಟ್ಟುಪಡೆದ ಪಾಕಿಸ್ತಾನ ಹಲವು ವಿಚಾರಗಳಲ್ಲಿ ವಿಶ್ವಾದ್ಯಂತ ಪ್ರಸ್ತುತದಲ್ಲಿರುವ ದೇಶವಾಗಿದೆ. ಭಯೋತ್ಪಾದಕರ ನೆಲವೀಡಾಗಿರುವುದು ಒಂದೆಡೆಯಾದರೆ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೂ ಒಂದು ಶಕ್ತಿಯಾಗಿದೆ. ಭಯೋತ್ಪಾದಕರ ಕಾರ್ಖಾನೆ ಎನಿಸಿರುವ ಪಾಕಿಸ್ತಾನ ಅದೇ ಭಯೋತ್ಪಾದನೆಯಿಂದ ಜರ್ಝರಿತವಾಗಿರುವ ದೇಶವೆನಿಸಿದೆ. ಪ್ರಮುಖ ಆಯಕಟ್ಟಿನ ಜಾಗದಲ್ಲಿರುವ ಪಾಕಿಸ್ತಾನವನ್ನು ದೂರ ಮಾಡಲು ಅಮೆರಿಕ, ಚೀನಾದಂಥ ವಿಶ್ವ ಪ್ರಮುಖ ಶಕ್ತಿಗಳಿಗೆ ಕಷ್ಟಸಾಧ್ಯ.

ಇಂಥ ಪಾಕಿಸ್ತಾನ ಆರ್ಥಿಕವಾಗಿ ಯಾವತ್ತೂ ಸ್ಥಿರವಾಗಿದ್ದಿಲ್ಲ. ಈಗಂತೂ ಚೀನಾದ ಸಹವಾಸ ಹೆಚ್ಚಾದಂತೆ ಪಾಕಿಸ್ತಾನದ ಬಡತನ ಇನ್ನೂ ಹೆಚ್ಚಾಗಿದೆ. ಭಿಕ್ಷಾಪಾತ್ರೆ ಹಿಡಿದು ಬೇಡುವ ಪರಿಸ್ಥಿತಿ ಬಂದೊದಗಿದೆ. ಅದರ ರಾಯಭಾರಿ ಕಚೇರಿಗಳ ಸಿಬ್ಬಂದಿಗೆ ಸಂಬಳ ಕೊಡಲೂ ಪಾಕಿಸ್ತಾನಕ್ಕೆ ಕಷ್ಟವಾಗುತ್ತಿದೆ ಎಂಬ ಸುದ್ದಿಗಳಿವೆ. ಇಷ್ಟಾದರೂ ಪಾಕಿಸ್ತಾನದ ರಾಜಕಾರಣಿಗಳು ಬಡತನಕ್ಕೆ ವಿರುದ್ಧ ಪದ ಎನಿಸಿದ್ದಾರೆ. ಭಾರತದ ರಾಜಕಾರಣಿಗಳಂತೆ ಅವರೂ ಅಪಾರ ಸಂಪತ್ತಿನ ಒಡೆಯರಾಗಿದ್ದಾರೆ.

 ಪಾಕಿಸ್ತಾನ ಇತಿಹಾಸದಲ್ಲಿ ಯಾವ ಪ್ರಧಾನಿಗೂ ಪೂರ್ಣಾವಧಿ ಅಧಿಕಾರ ಪೂರೈಸಲು ಸಾಧ್ಯವಾಗಿಲ್ಲವೇಕೆ? ಪಾಕಿಸ್ತಾನ ಇತಿಹಾಸದಲ್ಲಿ ಯಾವ ಪ್ರಧಾನಿಗೂ ಪೂರ್ಣಾವಧಿ ಅಧಿಕಾರ ಪೂರೈಸಲು ಸಾಧ್ಯವಾಗಿಲ್ಲವೇಕೆ?

ಪಾಕಿಸ್ತಾನದ ಅತ್ಯಂತ ಶ್ರೀಮಂತ ರಾಜಕಾರಣಿಗಳ ವಿವರ ಈ ಕೆಳಕಂಡಂತಿದೆ. ಇಲ್ಲಿರುವ ರೂಪಾಯಿ ಭಾರತೀಯ ರೂ ಆಗಿದೆ:

 ಇಮ್ರಾನ್ ಖಾನ್: 50 ಮಿಲಿಯನ್ ಡಾಲರ್ (380 ಕೋಟಿ ರೂ):

ಇಮ್ರಾನ್ ಖಾನ್: 50 ಮಿಲಿಯನ್ ಡಾಲರ್ (380 ಕೋಟಿ ರೂ):

ಪಾಕಿಸ್ತಾನದಲ್ಲಿ ಈಗ ಪ್ರಧಾನಿ ಸ್ಥಾನ ಕಳೆದುಕೊಂಡಿರುವ ಇಮ್ರಾನ್ ಖಾನ್ ಕ್ರಿಕೆಟಿಗರಾಗಿ ಈ ಹಿಂದೆ ಛಾಪು ಮೂಡಿಸಿದವರು. 1992ರಲ್ಲಿ ವಿಶ್ವಚಾಂಪಿಯನ್ ಆಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿದ್ದವರು. ಇತ್ತೀಚಿನ ಕೆಲ ವರ್ಷಗಳ ಹಿಂದೆ ರಾಜಕೀಯರಕ್ಕೆ ಅಡಿ ಇಟ್ಟ ಅವರು ಬಹಳ ಅಚ್ಚರಿ ರೀತಿಯಲ್ಲಿ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಕೂಡ ಆದವರು.

ಇಮ್ರಾನ್ ಖಾನ್ ಆಸ್ತಿ ಮತ್ತು ವ್ಯವಹಾರ:
ಇಮ್ರಾನ್ ಖಾನ್ ಅವರು ಪಾಕಿಸ್ತಾನದ ವಿವಿಧೆಡೆ 14 ಆಸ್ತಿಗಳನ್ನ ಹೊಂದಿದ್ದಾರೆ. ವಿದೇಶಿ ಕರೆನ್ಸಿಯ ನಾಲ್ಕು ಬ್ಯಾಂಕ್ ಅಕೌಂಟ್‌ಗಳು ಅವರ ಬಳಿ ಇರುವುದು ಪಾಕಿಸ್ತಾನದ ಸಿಯಾಸತ್ ವೆಬ್ ಸೈಟ್‌ನಲ್ಲಿ ಪ್ರಕಟವಾಗಿರುವ ಮಾಹಿತಿಯಿಂದ ತಿಳಿದುಬಂದಿದೆ.

ಇಮ್ರಾನ್ ಖಾನ್ ಒಬ್ಬ ಹೂಡಿಕೆದಾರನೂ ಹೌದು. ಪೀಠೋಪಕರಣ ಮತ್ತು ಜನಜಾನುವಾರಗಳ ಕ್ಷೇತ್ರದಲ್ಲಿ ಅವರು ಅನೇಕ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅವರಿಗೆ ಪಿತ್ರಾರ್ಜಿತವಾಗಿ ಬಂದ 4800 ಕನಾಲ್ ಜಮೀನು (ಸುಮಾರು 600 ಎಕರೆ) ಇದೆ. ಹಾಗೆಯೇ, ಅವರು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ 39 ಹಾಗು ಖಾನೆವಾಲ್‌ನಲ್ಲಿ 53 ಸೇರಿ ಒಟ್ಟು 92 ಕನಾಲ್ (116 ಎಕರೆ) ಕೃಷಿ ಭೂಮಿ ಸಂಪಾದನೆ ಮಾಡಿದ್ದಾರೆ. 37 ಎಕರೆ ಪ್ರದೇಶದಲ್ಲಿ ಒಂದು ಭವ್ಯ ಬಂಗಲೆಯನ್ನು ಹೊಂದಿದ್ದಾರೆ.

 ಒಮರ್ ಆಯುಬ್ ಖಾನ್: 1.5 ಮಿಲಿಯನ್ ಡಾಲರ್ (ಸುಮಾರು 11 ಕೋಟಿ ರೂ):

ಒಮರ್ ಆಯುಬ್ ಖಾನ್: 1.5 ಮಿಲಿಯನ್ ಡಾಲರ್ (ಸುಮಾರು 11 ಕೋಟಿ ರೂ):

ಪಾಕಿಸ್ತಾನದ ಸಂಸದರಾಗಿರುವ ಒಮರ್ ಆಯುಬ್ ಖಾನ್ ಅವರು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮಾರ್ಷಲ್ ಆಯುಬ್ ಖಾನ್ ಅವರ ಮೊಮ್ಮಗರಾಗಿದ್ದಾರೆ. ಇಮ್ರಾನ್ ಖಾನ್ ಸರಕಾರದಲ್ಲಿ ಅವರು ಇಂಧನ ಸಚಿವರಾಗಿದ್ದರು.

ಒಮರ್ ಆಸ್ತಿ ಮತ್ತು ವ್ಯವಹಾರ: ಒಮರ್ ಅವರ ಬಳಿ ಪಾಕಿಸ್ತಾನದ ವಿವಿಧೆಡೆ ಕೋಟಿ ಕೋಟಿ ರೂ ಮೌಲ್ಯದ ಕೃಷಿ ಭೂಮಿ ಇದೆ. ಮೂರು ದೊಡ್ಡ ಬಂಗಲೆಗಳನ್ನ ಹೊಂದಿದ್ದಾರೆ. ಹಲವು ಕಂಪನಿಗಳ ಷೇರುಗಳನ್ನ ಹೊಂದಿದ್ದಾರೆ.

 ಇಹ್ಸಾನ್ ಉಲ್ ಹಖ್ ಬಾಜವಾ: 2.4 ಮಿಲಿಯನ್ ಡಾಲರ್ (44 ಕೋಟಿ ರೂ):

ಇಹ್ಸಾನ್ ಉಲ್ ಹಖ್ ಬಾಜವಾ: 2.4 ಮಿಲಿಯನ್ ಡಾಲರ್ (44 ಕೋಟಿ ರೂ):

ಪಾಕಿಸ್ತಾನದ ಜನಪ್ರಿಯ ರಾಜಕಾರಣಿಗಳಲ್ಲೊಬ್ಬರೆನಿಸಿದ ಇಹ್ಸಾನ್ ಬಾಜವಾ ಅವರು ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷದ ಮುಖಂಡರಾಗಿದ್ದಾರೆ. ಇವರ ಬಳಿ ಕೋಟ್ಯಂತ ರೂ ಮೌಲ್ಯದ ವಾಣಿಜ್ಯ ಮತ್ತು ವಸತಿ ಗೃಹಗಳ ಆಸ್ತಿಗಳಿವೆ. ದುಬೈನಲ್ಲೂ ಆಸ್ತಿಗಳನ್ನ ಹೊಂದಿದ್ದಾರೆ.

 ಅಸಿಫ್ ಅಲಿ ಜರ್ದಾರಿ: 1.8 ಮಿಲಿಯನ್ ಡಾಲರ್ (14 ಕೋಟಿ ರೂ):

ಅಸಿಫ್ ಅಲಿ ಜರ್ದಾರಿ: 1.8 ಮಿಲಿಯನ್ ಡಾಲರ್ (14 ಕೋಟಿ ರೂ):

2008ರಿಂದ 2013ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಅಸಿಫ್ ಅಲಿ ಜರ್ದಾರಿ ಅವರು ಹಲವು ಉದ್ದಿಮೆಗಳನ್ನು ಹೊಂದಿದ್ದಾರೆ. ಸಕ್ಕರೆ ಮತ್ತು ಸಿಮೆಂಟ್ ಫ್ಯಾಕ್ಟರಿಗಳ ಒಡೆಯರಾಗಿದ್ದಾರೆ. 32 ಬೇನಾಮಿ ಕಂಪನಿಗಳನ್ನು ಹೊಂದಿದ್ದಾರೆ. ಅಧಿಕೃತವಾಗಿ ಇವರ ಘೋಷಿತ ಆಸ್ತಿಗಳ ಪಟ್ಟಿಯಲ್ಲಿಲ್ಲದ ಹಲವು ಆಸ್ತಿಗಳನ್ನ ಯುಎಇ ಇತ್ಯಾದಿ ದೇಶಗಳಲ್ಲಿ ಹೊಂದಿದ್ದಾರೆನ್ನಲಾಗಿದೆ. ಇವರು ಮಾಜಿ ಪ್ರಧಾನಿ ದಿವಂಗತ ಬೇನಜರಿ ಭುಟ್ಟೋ ಅವರ ಪತಿ.

 ಬಿಲಾವಲ್ ಭುಟ್ಟೋ ಜರದಾರಿ: 15 ಮಿಲಿಯನ್ ಡಾಲರ್ (114 ಕೋಟಿ ರೂ):

ಬಿಲಾವಲ್ ಭುಟ್ಟೋ ಜರದಾರಿ: 15 ಮಿಲಿಯನ್ ಡಾಲರ್ (114 ಕೋಟಿ ರೂ):

ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಮಗನಾದ ಬಿಲಾವಲ್ ಅವರು ಪಾಕಿಸ್ತಾನದ ಸಿರಿವಂತ ರಾಜಕಾರಣಿಗಳಲ್ಲಿ ಒಬ್ಬರು. ತಾಯಿಯಿಂದ ಬಳುವಳಿಯಾಗಿ ಬಂದ ಆಸ್ತಿ ಜೊತೆಗೆ ದುಬೈ ಮತ್ತು ಬ್ರಿಟನ್ ದೇಶಗಳಲ್ಲಿ ನಾಲ್ಕು ಕಂಪನಿಗಳ ಒಡೆಯರಾಗಿದ್ದಾರೆ.

 ನವಾಜ್ ಷರೀಫ್: 1.6 ಬಿಲಿಯನ್ ಡಾಲರ್ (12 ಸಾವಿರ ಕೋಟಿ ರೂ):

ನವಾಜ್ ಷರೀಫ್: 1.6 ಬಿಲಿಯನ್ ಡಾಲರ್ (12 ಸಾವಿರ ಕೋಟಿ ರೂ):

ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನದಲ್ಲಿ ಮೂರು ಬಾರಿ ಪ್ರಧಾನಿ ಆದ ಏಕೈಕ ರಾಜಕಾರಣಿ ಆಗಿದ್ದಾರೆ. ಅಲ್ಲದೇ ಇವರು ಮೂಲತಃ ಉದ್ಯಮಿಯೂ ಆಗಿದ್ದಾರೆ. ಉಕ್ಕು ಕಾರ್ಖಾನೆ ಸೇರಿದಂತೆ ಹಲವು ಉದ್ದಿಮೆಗಳ ಒಡೆಯರಾಗಿದ್ದಾರೆ. ಇವರ ಕುಟುಂಬದವರು ಹಲವು ಉದ್ದಿಮೆಗಳಲ್ಲಿ ವ್ಯವಹಾರ ಹೊಂದಿದ್ದಾರೆ.

 ಶಾಹಬಾಜ್ ಷರೀಫ್: 1.8 ಮಿಲಿಯನ್ ಡಾಲರ್ (14 ಕೋಟಿ ರೂ):

ಶಾಹಬಾಜ್ ಷರೀಫ್: 1.8 ಮಿಲಿಯನ್ ಡಾಲರ್ (14 ಕೋಟಿ ರೂ):

ಷರೀಫ್ ಕುಟುಂಬದ ಸದಸ್ಯರಾದ ಇವರು ನವಾಜ್ ಷರೀಫ್ ಅವರ ಕಿರಿಯ ಸಹೋದರರೂ ಹೌದು. ಉಕ್ಕು ಸಂಸ್ಥೆ ಇತ್ತೆಫಾಕ್ ಗ್ರೂಪ್‌ನ ಸಹ-ಮಾಲೀಕರಾಗಿದ್ದಾರೆ. ಪಾಕಿಸ್ತಾನದ ಪ್ರಧಾನಿ ಹುದ್ದೆಗೇರಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Pakistan though known as low income country has politicians worth of billion dollars. Imran Khan to Bilawal Bhutto here is top-6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X