• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರಯಾನಕ್ಕೆ ನೆರವಾಗುತ್ತಿರುವ ನಾಸಾದ ಈ ಆರ್ಬಿಟರ್ ಬಗ್ಗೆ ನಿಮಗೆಷ್ಟು ಗೊತ್ತು?

|

ವಾಷಿಂಗ್ಟನ್, ಸೆಪ್ಟೆಂಬರ್ 17: ಚಂದ್ರಯಾನ-2 ಯೋಜನೆಯ ಪ್ರಮುಖ ಭಾಗವಾಗಿದ್ದ ವಿಕ್ರಂ ಲ್ಯಾಂಡರ್ ಪರಿಸ್ಥಿತಿಯನ್ನು ಅರಿಯಲು ನಾಸಾ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ. ನಾಸಾದ ಲೂನಾರ್ ರೆಕನೈಸಾನ್ಸ್ ಆರ್ಬಿಟರ್ ವಿಕ್ರಂ ಲ್ಯಾಂಡರ್ ಇಳಿದ ಸ್ಥಳದ ಮೇಲ್ಭಾಗದಲ್ಲಿ ಹಾರಾಟ ನಡೆಸಿ ಅದರ ಚಿತ್ರ ಕ್ಲಿಕ್ಕಿಸುವ ಪ್ರಯತ್ನ ಮಾಡಲಿದೆ. ಈ ಸುದ್ದಿ ಚಂದ್ರಯಾನದ ಯಶಸ್ಸಿಗಾಗಿ ಪ್ರಾರ್ಥಿಸುತ್ತಿರುವ ಭಾರತೀಯರಲ್ಲಿ ಹೊಸ ಹುರುಪು ತಂದಿರುವುದಂತೂ ನಿಜ.

ಚಂದ್ರನಲ್ಲಿ ಸುತ್ತುಹಾಕುತ್ತಾ ವಿಕ್ರಂ ಲ್ಯಾಂಡರ್ಅನ್ನು ಪತ್ತೆ ಹಚ್ಚುವುದು ಅಲ್ಲಿನ ವಾತಾವರಣದಲ್ಲಿ ಸುಲಭವೇನಲ್ಲ. ಒಂದು ವೇಳೆ ಅದು ಸ್ಪಷ್ಟವಾದ ಚಿತ್ರ ಕ್ಲಿಕ್ಕಿಸಿ ರವಾನಿಸಿದರೆ ನಾಸಾ ಅದನ್ನು ಇಸ್ರೋದೊಂದಿಗೆ ಹಂಚಿಕೊಳ್ಳಲಿದೆ. ಈ ಚಿತ್ರವನ್ನು ವಿಶ್ಲೇಷಿಸಿ ವಿಕ್ರಂ ಲ್ಯಾಂಡರ್‌ ಸ್ಥಿತಿಗತಿ ಹೇಗಿದೆ ಎಂಬುದನ್ನು ಇಸ್ರೋಕಂಡುಕೊಳ್ಳಲಿದೆ. ಈ ಮೂಲಕ ಅದನ್ನು ಸಂಪರ್ಕಿಸುವ ಪ್ರಯತ್ನ ಮುಂದುವರಿಸುವುದೋ ಅಥವಾ ನಿಲ್ಲಿಸುವುದೋ ಎಂಬುದನ್ನು ನಿರ್ಧರಿಸಲಿದೆ.

ಚಂದ್ರಯಾನ: ಇಂದು ಭಾರತಕ್ಕೆ ಸಿಹಿ ಸುದ್ದಿಯ ನಿರೀಕ್ಷೆ

ಇಸ್ರೋ ಸಹಾಯಕ್ಕೆ ಧಾವಿಸಿರುವ ನಾಸಾದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಅದರ ಬಗ್ಗೆ ಕುತೂಹಲವೂ ವ್ಯಕ್ತವಾಗುತ್ತಿದೆ. ನಾಸಾದ ಆರ್ಬಿಟರ್ ಒಂದು ಲ್ಯಾಂಡರ್ ಇಳಿದ ಜಾಗದಲ್ಲಿ ಹುಡುಕಾಟ ನಡೆಸಲು ಹೇಗೆ ಸಾಧ್ಯ ಎಂಬಂತಹ ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತದೆ. ಈ ಆರ್ಬಿಟರ್ ಯಾವುದು, ಅಲ್ಲಿಗೆ ಯಾವಾಗ ಬಂತು ಇತ್ಯಾದಿ ಮಾಹಿತಿ ಇಲ್ಲಿದೆ.

ಚಿತ್ರಗಳು: ನಾಸಾ ಕೃಪೆ

ಚಂದ್ರನ ಮಲೆ ಹಲವು ಕೆಲಸ

ಚಂದ್ರನ ಮಲೆ ಹಲವು ಕೆಲಸ

ಲೂನಾರ್ ರೆಕನೈಸಾನ್ಸ್ ಆರ್ಬಿಟರ್ (ಎಲ್‌ಆರ್‌ಓ) ನಾಸಾದ ರೋಬೋಟಿಕ್ ಬಾಹ್ಯಾಕಾಶ ನೌಕೆ. ಇದು ಪ್ರಸ್ತುತ ಚಂದ್ರನ ಎರಡೂ ಧ್ರುವಗಳ ಮೇಲೆ ಸುತ್ತಾಡುತ್ತಿದೆ. ಈ ನೌಕೆಯನ್ನು ನಾಸಾದ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವ ಯೋಜನೆ ಹಾಗೂ ರೋಬೋಟಿಕ್ ಯೋಜನೆಗಳಿಗೆ ಸಾಕಷ್ಟು ನೆರವಾಗಲಿದೆ ಎನ್ನಲಾಗಿದೆ. ಈ ಆರ್ಬಿಟರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲು ಯೋಗ್ಯವಾದ ಸ್ಥಳಗಳನ್ನು ಪತ್ತೆಹಚ್ಚುವುದು, ಚಂದ್ರನ ಮೇಲೆ ಸಮೃದ್ಧಿಯ ಸಂಪನ್ಮೂಲಗಳನ್ನು ಗುರುತಿಸುವುದು, ವಿಕಿರಣ ವಾತಾವರಣವನ್ನು ಅಧ್ಯಯನ ಮಾಡುವುದು ಮತ್ತು ಹೊಸ ತಂತ್ರಜ್ಞಾನಗಳು ಚಂದ್ರನಲ್ಲಿ ಪ್ರಯೋಗಿಸುವ ಕೆಲಸಗಳನ್ನು ಮಾಡುತ್ತಿದೆ.

2009ರಲ್ಲಿ ಉಡಾವಣೆ

2009ರಲ್ಲಿ ಉಡಾವಣೆ

ನಾಸಾದ ಲೂನಾರ್ ಪ್ರಿಕರ್ಸರ್ ರೋಬೋಟಿಕ್ ಯೋಜನೆಯಡಿ 2009ರ ಜೂನ್ 18ರಂದು ಈ ಆರ್ಬಿಟರ್ ಅನ್ನು ಉಡಾವಣೆ ಮಾಡಲಾಯಿತು. ಇದರೊಂದಿಗೆ ಲೂನಾರ್ ಕ್ರೇಟರ್ ಅಬ್ಸರ್ವೇಷನ್ ಆಂಡ್ ಸೆನ್ಸಿಂಗ್ ಉಪಗ್ರಹವನ್ನು ಕೂಡ ಉಡಾವಣೆ ಮಾಡಲಾಗಿತ್ತು. ನಾಸಾದ ಚಂದ್ರನ ಯೋಜನೆಗಳಲ್ಲಿ ಹತ್ತು ವರ್ಷ ಕಳೆದರೂ ಕಾರ್ಯಾಚರಣೆ ನಡೆಸುತ್ತಿರುವ ಮೊದಲ ನೌಕೆ ಎಲ್‌ಆರ್‌ಓ.

ದಶಕದಿಂದ ಚಂದ್ರನ ಸುತ್ತ ಓಡಾಡುತ್ತಿರುವ ಎಲ್‌ಆರ್‌ಓ, ಭಾರತದ ಚಂದ್ರಯಾನ-1ಅನ್ನು ಹೋಲುವ ಯೋಜನೆಯಾಗಿದೆ. ಈ ನೌಕೆ ಉಡಾವಣೆಯಾದ ಒಂದು ತಿಂಗಳಿನಲ್ಲಿಯೇ ಇಸ್ರೋ, ಚಂದ್ರಯಾನ-1ಅನ್ನು ಉಡಾವಣೆ ಮಾಡಿತ್ತು. ಜೂನ್ ತಿಂಗಳಿನಲ್ಲಿ ಚಂದ್ರನ ಕಕ್ಷೆಗೆ ಪ್ರವೇಶಿಸಿದ್ದ ಆರ್ಬಿಟರ್, ಮರುವರ್ಷದಿಂದ ಚಂದ್ರನ ಮೇಲ್ಮೈಅನ್ನು ಕೇಂದ್ರವಾಗಿರಿಸಿಕೊಂಡು ಹಾರಾಟ ನಡೆಸಿತ್ತು.

ದೂರದ ಅನ್ಯಗ್ರಹದಲ್ಲಿ ನೀರು ಪತ್ತೆ ಹಚ್ಚಿದ ವಿಜ್ಞಾನಿಗಳು

ಚಂದ್ರನ 3ಡಿ ನಕಾಶೆ

ಚಂದ್ರನ 3ಡಿ ನಕಾಶೆ

ಚಂದ್ರನ ಮೇಲೆ ಮಾನವನನ್ನು ಕಳುಹಿಸುವ ಮತ್ತೊಂದು ಯೋಜನೆಗೆ ಸೂಕ್ತ ನೆಲಗಟ್ಟು ಹಾಕಿಕೊಡುವ ಉದ್ದೇಶದಿಂದ ಈ ಆರ್ಬಿಟರ್ ಅಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಒಂದು ವರ್ಷ ಮೇಲ್ಮೈಅನ್ನು ಅಧ್ಯಯನ ಮಾಡುವ ಯೋಜನೆ ಪೂರ್ಣಗೊಳಿಸಿದ ಬಳಿಕ, ಎಲ್‌ಆರ್‌ಓ ಚಂದ್ರನ ಅಧ್ಯಯನ ಮತ್ತು ಪ್ರಯೋಗಗಳನ್ನು ನಡೆಸುವ ಎರಡು ವರ್ಷದ ವಿಜ್ಞಾನ ಯೋಜನೆ ನಡೆಸಿತ್ತು. ನಂತರ ಆ ಯೋಜನೆಯನ್ನು ವಿಸ್ತರಿಸಲಾಗಿತ್ತು.

ಮೇರಿಲ್ಯಾಂಡ್‌ನಲ್ಲಿರುವ ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಈ ಎಲ್‌ಆರ್‌ಓ ಅನ್ನು ನಿಯಂತ್ರಿಸುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ಚಂದ್ರ ಕುರಿತಾದ 50 ಸೆಂ.ಮೀ ರೆಸೊಲ್ಯೂಷನ್ ಚಿತ್ರಗಳೊಂದಿಗೆ ಇಡೀ ಚಂದ್ರನ ಮೇಲ್ಮೈಅನ್ನು ಅಳತೆ ಮಾಡಿ ಚಂದ್ರನ ಅಧಿಕ ರೆಸೊಲ್ಯೂಷನ್‌ನ 3ಡಿ ನಕಾಶೆಯನ್ನು ಸಿದ್ಧಪಡಿಸುವುದಾಗಿತ್ತು. ಹೆಚ್ಚುವರಿಯಾಗಿ ಧ್ರುವ ಪ್ರದೇಶಗಳಲ್ಲಿ ಅಧ್ಯಯನ ಮಾಡಿ ಹಿಮದ ನೀರಿನ ಅಸ್ತಿತ್ವಕ್ಕೆ ಹುಡುಕಾಟ ನಡೆಸುವುದಾಗಿದೆ.

ಸೌರ ವ್ಯವಸ್ಥೆಯ ಬಗ್ಗೆ ಮಾಹಿತಿ

ಸೌರ ವ್ಯವಸ್ಥೆಯ ಬಗ್ಗೆ ಮಾಹಿತಿ

ಇದುವರೆಗೆ ಎಲ್‌ಆರ್‌ಓ ಕಳುಹಿಸಿರುವ ಮಾಹಿತಿಗಳು ಚಂದ್ರನ ಪರಿಸರವನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಲು ಜಗತ್ತಿಗೆ ನೆರವಾಗಲಿದೆ. ಇದರಿಂದ ಚಂದ್ರನಿಗೆ ಸುರಕ್ಷಿತವಾಗಿ ಮನುಷ್ಯನನ್ನು ಕಳುಹಿಸಲು ಹಾಗೂ ಭವಿಷ್ಯದ ನಮ್ಮ ಸೌರ ವ್ಯವಸ್ಥೆಯ ನಿಗೂಢತೆಯನ್ನು ಭೇದಿಸಲು ಸಹಾಯ ಮಾಡಲಿದೆ ಎಂದು ನಾಸಾ ತಿಳಿಸಿದೆ.

ಭವಿಷ್ಯದ ಚಂದ್ರಯಾನ ಯೋಜನೆಗಳಿಗೆ ಸೂಕ್ತ ಸ್ಥಳಗಳನ್ನು ಗುರುತಿಸುವುದರ ಜತೆಗೆ, ಕಳೆದ ಹತ್ತು ವರ್ಷಗಳಲ್ಲಿ ಎಲ್‌ಆರ್‌ಓ ಅನೇಕ ಮಹತ್ವದ ಕಾರ್ಯಗಳನ್ನು ನಡೆಸಿದೆ.

ಚಂದ್ರನ ಮೇಲೆ ಸೌರ ವ್ಯವಸ್ಥೆಯ ಅತ್ಯಂತ ಶೀತದ ತಾಣಗಳನ್ನು ಪತ್ತೆಹಚ್ಚಿದೆ. ಈ ತಾಣಗಳು ಚಂದ್ರನ ಧ್ರುವ ಪ್ರದೇಶಗಳಲ್ಲಿ ಇದ್ದು, ಇಲ್ಲಿನ ತಾಪಮಾನ ಸುಮಾರು -250 ಡಿಗ್ರಿ ಸೆಲ್ಸಿಯಸ್ ವರೆಗೂ ಇರುತ್ತವೆ.

ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?

ಮೋಡದಲ್ಲಿ ಕಣಗಳ ಪತ್ತೆಹಚ್ಚಿದ ಆರ್ಬಿಟರ್

ಮೋಡದಲ್ಲಿ ಕಣಗಳ ಪತ್ತೆಹಚ್ಚಿದ ಆರ್ಬಿಟರ್

ಚಂದ್ರನ ಮೇಲೆ ಜಲಜನಕವು ತುಂಬಿಕೊಂಡಿರುವ ಸ್ಥಳಗಳನ್ನು ಈ ಆರ್ಬಿಟರ್ ಕಂಡುಹಿಡಿದಿದೆ. ಈ ಮೂಲಕ ಘನೀಕೃತ ನೀರು ಈ ಭಾಗಗಳಲ್ಲಿ ಇದೆ ಎಂದು ಕಂಡುಕೊಳ್ಳಲಾಗಿದೆ.

ಚಂದ್ರನ ಅನಿಲೀಯ ಮೋಡಗಳಲ್ಲಿ ಕಾರ್ಬನ್ ಮಾನಾಕ್ಸೈಡ್, ಹೈಡ್ರೋಜನ್ ಕಣಗಳು ಮತ್ತು ಮರ್ಕ್ಯುರಿಯ ಅಸ್ತಿತ್ವವನ್ನು ಪತ್ತೆಹಚ್ಚಿದೆ. ಚಂದ್ರನ ಮೇಲ್ಮೈಗೆ ಈ ಯೋಜನೆಯ ಇಂಪ್ಯಾಕ್ಟ್ ಪ್ರೋಬ್ ಅಪ್ಪಳಿಸಿದ ಪರಿಣಾಮವಾಗಿ ಈ ಅನಿಲೀಯ ಮೋಡಗಳು ಉತ್ಪತ್ತಿಯಾಗಿವೆ.

ಚಂದ್ರಯಾನ ನೌಕೆಯ ಪತ್ತೆ

ಚಂದ್ರಯಾನ ನೌಕೆಯ ಪತ್ತೆ

ಇದಲ್ಲದೆ ಚಂದ್ರನ ಮೇಲೆ ಕಳುಹಿಸಲಾದ ಹಿಂದಿನ ಹಲವು ವಿವಿಧ ಯೋಜನೆಗಳ ಅಧಿಕ ರೆಸೊಲ್ಯೂಷನ್ ಫೋಟೊಗಳನ್ನು ಕೂಡ ಎಲ್‌ಆರ್‌ಓ ರವಾನಿಸಿದೆ. ಚಂದ್ರನ ಮೇಲೆ ಮೊದಲ ಮಾನವ ನಡಿಗೆಯ ಯೋಜನೆಯಾದ ಅಪೋಲೋ 11ರ ಸಂದರ್ಭದಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಸಾಗಿದ ಭಾಗವನ್ನು ಕೂಡ ಅದು ಸೆರೆಹಿಡಿದಿದೆ ಎಂದು ನಾಸಾ ತಿಳಿಸಿದೆ.

ಕಳೆದ ವರ್ಷ ಇಸ್ರೇಲ್‌ನ ಬೆರೆಶೀಟ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಯತ್ನದಲ್ಲಿ ವಿಫಲವಾಗಿ ಅದರ ಮೇಲ್ಮೈಗೆ ಅಪ್ಪಳಿಸಿ ನಾಶವಾಗಿತ್ತು. ಅದು ಅಪಘಾತಕ್ಕೀಡಾದ ಸ್ಥಳವನ್ನು ಎಲ್‌ಆರ್‌ಓ ಪತ್ತೆಹಚ್ಚಲು ಸಫಲವಾಗಿತ್ತು. ಮಾತ್ರವಲ್ಲ, ಅಮೆರಿಕ ಹಾಗೂ ಚೀನಾದ ಚಂದ್ರಯಾನ ನೌಕೆಗಳು ಇಳಿದ ಸ್ಥಳಗಳನ್ನು ಕೂಡ ಅದು ಗುರುತಿಸಿದೆ.

English summary
NASA's Lunar Reconnaissance Orbiter (LRO) is trying to help ISRO to locate Vikram Lander. But what is LRO, what it is doing on moon's orbit? know about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more