ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಮತ್ತು ತೈವಾನ್ ಮಧ್ಯೆ ಏನು ಬಿಕ್ಕಟ್ಟು?

|
Google Oneindia Kannada News

ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ನಾಡಿಗೆ ಕಾಲಿಡುತ್ತಿದ್ದಂತೆಯೇ ಚೀನಾ ಉರಿದುಬಿದ್ದು ಗುಟುರು ಹಾಕುತ್ತಿದೆ. ತೈವಾನ್ ಮೇಲೆ ಎರಗಿ ಹೋಗುವ ರೀತಿಯಲ್ಲಿ ಮಿಲಿಟರಿ ಡ್ರಿಲ್ ನಡೆಸುತ್ತಿದೆ. ಯಾರಾದರೂ ತೈವಾನ್‌ಗೆ ಹೋದರೆ ಚೀನಾಗೆ ಯಾಕಿಂಥ ಕೋಪ?

ತೈವಾನ್ ತನ್ನ ಅವಿಭಾಜ್ಯ ಅಂಗ ಎಂಬುದು ಚೀನಾದ ಅಚಲ ನಿಲುವು. ತಾನು ಪ್ರತ್ಯೇಕ ದೇಶ ಎಂದು ತೈವಾನ್ ಹೇಳಿಕೊಳ್ಳುತ್ತದೆ. ತೈವಾನ್ ಸ್ವತಂತ್ರವಾಗಿಯೇ ಆಡಳಿತ ನಡೆಸುತ್ತಿದೆಯಾದರೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿಲ್ಲ ಎಂಬುದು ಗಮನಿಸಬೇಕು. ಚೀನಾ ಯಾವಾಗ ಬೇಕಾದರೂ ತೈವಾನ್ ಅನ್ನು ಆಕ್ರಮಿಸಿ ಬಲವಂತಾಗಿ ಇಟ್ಟುಕೊಂಡರೆ ಅಚ್ಚರಿ ಪಡುವಂಥದ್ದು ಅಲ್ಲ.

ಬೇರೆ ದೇಶಗಳಲ್ಲಿ ಅಧಿಕಾರ ಹಿಡಿದಿರುವ ಭಾರತೀಯ ಸಮುದಾಯದವರುಬೇರೆ ದೇಶಗಳಲ್ಲಿ ಅಧಿಕಾರ ಹಿಡಿದಿರುವ ಭಾರತೀಯ ಸಮುದಾಯದವರು

ಕಳೆದ 25 ವರ್ಷಗಳಿಂದ ಅಮೆರಿಕದ ಉನ್ನತ ಸ್ತರದ ರಾಜಕಾರಣಿಯೊಬ್ಬರು ತೈವಾನ್ ದೇಶಕ್ಕೆ ಕಾಲಿಟ್ಟಿರಲಿಲ್ಲ ಎಂದರೆ ಆಶ್ಚರ್ಯ ಎನಿಸಬಹುದು. ಸ್ಪೀಕರ್ ನ್ಯಾನ್ಸಿ ಪೆಲೋಸಿಯ ಎದೆಗಾರಿಕೆ ಮೆಚ್ಚಿಕೊಳ್ಳಬೇಕು. ತನ್ನ ಅನುಮತಿ ಇಲ್ಲದೇ ಯಾರೂ ಕೂಡ ತೈವಾನ್ ದೇಶಕ್ಕೆ ಹೋಗುವಂತಿಲ್ಲ ಎಂಬುದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಚೀನಾ ಮಾಡಿರುವ ತಾಕೀತು.

ಭಾರತಕ್ಕೆ ಸೇರಿದ ಅರುಣಾಚಲಪ್ರದೇಶಕ್ಕೆ ನಮ್ಮ ಪ್ರಧಾನಿ ಹೋದರೆಯೇ ಉರಿದುಬೀಳುವ ಚೀನಾದ ಈ ಅತಿರೇಕದ ಪ್ರವೃತ್ತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಆದರೆ, ಚೀನಾದಿಂದ ಸ್ವತಂತ್ರವಾಗಿರಬಯಸುವ ತೈವಾನ್ ದೇಶದ ಪರಿಸ್ಥಿತಿ ಏನಿರಬಹುದು? ತೈವಾನ್ ಪ್ರತ್ಯೇಕತೆಗೆ ಪೂರಕವಾದ ಇತಿಹಾಸ ಇದೆಯಾ?

ತೈವಾನ್ ಇತಿಹಾಸ

ತೈವಾನ್ ಇತಿಹಾಸ

ತೈವಾನ್ ಅನ್ನು ಚೈನೀಸ್ ಥೈಪೆ ಎಂದೂ ಕರೆಯುತ್ತಾರೆ. ಥೈಪೆ ಎಂಬುದು ರಾಜಧಾನಿ ನಗರ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಚೈನೀಸ್ ಥೈಪೆ ತಂಡ ಪಾಲ್ಗೊಳ್ಳುವುದು ನೆನಪಿರಬಹುದು.

ತೈವಾನ್ ಚೀನಾದ ಆಗ್ನೇಯ ದಿಕ್ಕಿಗೆ (South East) ಇರುವ ಪ್ರದೇಶ. ಚೀನಾದಿಂದ 160 ಕಿಮೀ ದೂರದಲ್ಲಿರುವ ಹಲವು ದ್ವೀಪಗಳ ಸಮೂಹ ಅದು. ಅದರ ಒಟ್ಟಾರೆ ವಿಸ್ತೀರ್ಣ ಸರಿಸುಮಾರು ನಮ್ಮ ಕೇರಳ ರಾಜ್ಯದಷ್ಟು ಇರಬಹುದು.

30 ಸಾವಿರ ವರ್ಷಗಳ ಹಿಂದೆ ಇಲ್ಲಿ ಆದಿಮಾನವರು ವಾಸವಿದ್ದದ್ದಕ್ಕೆ ಪುರಾವೆಗಳಿವೆ. ಫಿಲಿಪ್ಪೈನ್ಸ್ ಜನಾಂಗಕ್ಕೆ ಹೋಲುವ ಜನರು ಆಗ ಇಲ್ಲಿದ್ದರು. ನಂತರ ಕ್ರಿ.ಪೂ. 4 ಸಾವಿರ ವರ್ಷದ ಸುಮಾರಿಗೆ ಆಗ್ನೇಯ ಚೀನಾದ ಪ್ರದೇಶಗಳಿಂದ ರೈತರು ತೈವಾನ್‌ಗೆ ಹೋಗಿ ನೆಲಸಿದ್ದಾರೆ. ಅವರೇ ಸದ್ಯ ಅಲ್ಲಿ ಮೂಲ ನಿವಾಸಿಗಳೆನಿಸಿದ್ದಾರೆ. ಇದು ತೈವಾನ್‌ನ ಪೂರ್ವ ಇತಿಹಾಸ.

ಚೀನಾದ ರಾಜರ ಜೊತೆ ಸ್ಪ್ಯಾನಿಷರು, ಡಚ್ಚರು ಹೀಗೆ ಅನೇಕರು ತೈವಾನ್ ಮೇಲೆ ಆಕ್ರಮಣ ಮಾಡುತ್ತಾ ಆಡಳಿತ ನಡೆಸಿದ್ದರು. ಕೊನೆಗೆ ಚೀನಾದ ಖಿಂಗ್ ದೊರೆಗಳ ಆಡಳಿತಕ್ಕೆ ತೈವಾನ್ ಒಳಪಟ್ಟಿತು.

ಆಧುನಿಕ ಯುಗದಲ್ಲಿ ತೈವಾನ್

ಆಧುನಿಕ ಯುಗದಲ್ಲಿ ತೈವಾನ್

20ನೇ ಶತಮಾನದ ಮೊದಲಾರ್ಧದಲ್ಲಿ ಜಪಾನೀಯರ ವಶದಲ್ಲಿ ತೈವಾನ್ ಇತ್ತು. 1894ರಲ್ಲಿ ನಡೆದ ಚೀನಾ ಜಪಾನ್ ನಡುವಿನ ಮೊದಲ ಯುದ್ಧದಲ್ಲಿ ಜಪಾನ್ ಗೆದ್ದಿತ್ತು. ಆಗ ತೈವಾನ್ 1945ರವರೆಗೂ ಜಪಾನ್ ಅಡಳಿತಕ್ಕೆ ಒಳಪಟ್ಟಿತು. ಆದರೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ನೆಲಕಚ್ಚಿದ ಬಳಿಕ ತೈವಾನ್ ಮತ್ತೊಮ್ಮೆ ಚೀನಾದ ಆಡಳಿತಕ್ಕೆ ಒಳಪಟ್ಟಿತು.

ನಂತರ ಚೀನಾದಲ್ಲಿ ನಾಗರಿಕ ಸಮರ ನಡೆಯಿತು. ಚಿಯಾಂಗ್ ಕಾಯ್-ಶೆಕ್ ಸರಕಾರ ವಿರುದ್ಧ ಮಾವೋ ನೇತೃತ್ವದಲ್ಲಿ ಕಮ್ಯೂನಿಸ್ಟ್ ದಂಗೆ ಎದ್ದಿತು. 1949ರಲ್ಲಿ ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದರು.

ಚಿಯಾಂಗ್ ಕಾಯ್-ಶೆಕ್ ಹಾಗು ಅವರ ಕುವಮಿನ್‌ಟಾಂಗ್ ಪಕ್ಷದವರು ತೈವಾನ್‌ಗೆ ಹೋಗಿ ಆಡಳಿತ ಮಾಡಿದರು. ಆಗಿನಿಂದ ತೈವಾನ್ ಚೀನಾದಿಂದ ಸ್ವತಂತ್ರವಾಗಿಯೇ ಉಳಿದಿದೆ.

ಅಂತಾರಾಷ್ಟ್ರೀಯ ಮಾನ್ಯತೆ

ಅಂತಾರಾಷ್ಟ್ರೀಯ ಮಾನ್ಯತೆ

ತೈವಾನ್ ತಾನು ಸ್ವತಂತ್ರ ದೇಶ ಎಂದು 1949ರಲ್ಲೇ ಘೋಷಿಸಿಕೊಂಡಿದೆ. ವಿಶ್ವಸಂಸ್ಥೆ ಕೂಡ ಮಾನ್ಯತೆ ಕೊಟ್ಟಿತ್ತು. ಆದರೆ, 1971 ನಂತರ ವಿಶ್ವಸಂಸ್ಥೆಯ ಅಧಿಕೃತ ದೇಶಗಳ ಪಟ್ಟಿಯಲ್ಲಿ ತೈವಾನ್ ಹೆಸರು ಕೈಬಿಡಲಾಗಿದೆ. ಅಮೆರಿಕ ಕೂಡ 1979ರ ನಂತರ ತೈವಾನ್ ಅನ್ನು ಪ್ರತ್ಯೇಕ ದೇಶ ಎಂದು ಮಾನ್ಯ ಮಾಡಿಲ್ಲ. ಸದ್ಯ 13 ಸಣ್ಣಪುಟ್ಟ ದೇಶಗಳು ಮಾತ್ರ ತೈವಾನ್ ಅನ್ನು ಅಧಿಕೃತ ದೇಶವೆಂದು ಮಾನ್ಯ ಮಾಡುತ್ತವೆ. ಗ್ವಾಟಿಮಾಲ, ಹೈಟಿ, ಹೊಂಡುರಾಸ್, ಪರಗ್ವೆ, ಸೇಂಟ್ ಕಿಟ್ಸ್, ತುವಲು ಇತ್ಯಾದಿ ದೇಶಗಳು ತೈವಾನ್ ಅನ್ನು ಸ್ವತಂತ್ರ ದೇಶ ಎಂದು ಪರಿಗಣಿಸಿವೆ.

ಅಮೆರಿಕದಂಥ ಅಮೆರಿಕವೇ ತೈವಾನ್ ಅನ್ನು ಪ್ರತ್ಯೇಕ ದೇಶ ಎಂದು ಮಾನ್ಯ ಮಾಡಲು ಹೆದರುತ್ತಿದೆ. ಚೀನಾದ ಒತ್ತಡವೇ ಇದಕ್ಕೆ ಕಾರಣ. ಚೀನಾವನ್ನು ಎದುರುಹಾಕಿಕೊಳ್ಳಲು ಯಾವ ದೇಶವೂ ಸಿದ್ಧವಿಲ್ಲ.

ಅಲ್-ಖೈದಾ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಬಳಸಿದ ಶಸ್ತ್ರಾಸ್ತ್ರ ಯಾವುದು?ಅಲ್-ಖೈದಾ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಬಳಸಿದ ಶಸ್ತ್ರಾಸ್ತ್ರ ಯಾವುದು?

ಅಮೆರಿಕಕ್ಕೆ ತೈವಾನ್ ಮುಖ್ಯ

ಅಮೆರಿಕಕ್ಕೆ ತೈವಾನ್ ಮುಖ್ಯ

ತೈವಾನ್ ವಿಚಾರದಲ್ಲಿ ಅಮೆರಿಕಕ್ಕೆ ಎರಡು ಹಿತಾಸಕ್ತಿ ಇದೆ. ಒಂದು, ಜಗತ್ತಿನ ಸರ್ವಾಧಿಕಾರಿ ಪ್ರಭುತ್ವಗಳ ವಿರುದ್ಧ ಅಮೆರಿಕ ಸಾಂಪ್ರದಾಯಿಕವಾಗಿ ವಿರೋಧ ಮಾಡಿಕೊಂಡು ಬಂದಿರುವುದು ಒಂದೆಡೆಯಾದರೆ, ಪೆಸಿಫಿಕ್ ಮಹಾಸಾಗರ ವ್ಯಾಪ್ತಿಯಲ್ಲಿ ಅಮೆರಿಕಕ್ಕೆ ತನ್ನ ಹಿತಾಸಕ್ತಿ ಉಳಿಸಿಕೊಳ್ಳುವ ಇರಾದೆ ಇದೆ.

ಒಂದು ವೇಳೆ ತೈವಾನ್ ಸಂಪೂರ್ಣ ಚೀನಾದ ಹತೋಟಿಗೆ ಬಂದರೆ ಚೀನಾವನ್ನು ನಿಯಂತ್ರಿಸುವುದು ಕಷ್ಟ. ಗುವಾಮ್, ಹವಾಯ್ ಮೊದಲಾದ ಪ್ರದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳಿಗೆ ಚೀನಾದಿಂದ ಅಪಾಯ ಒದಗಬಹುದು.

ಅಪಾರ ಸಂಪತ್ತುಗಳು ಇರುವ ಹಾಗು ಅಂತಾರಾಷ್ಟ್ರೀಯ ಹಡಗು ಸಂಚಾರ ಮಾರ್ಗಗಳು ಇರುವ ಪೆಸಿಫಿಕ್ ಮಹಾಸಾಗರ ಪ್ರದೇಶವನ್ನು ಚೀನಾದ ಪ್ರಭಾವಳಿಯಿಂದ ತಪ್ಪಿಸುವುದು ಅಮೆರಿಕಕ್ಕೆ ಅಗತ್ಯ.

ವಿಶ್ವಕ್ಕೂ ತೈವಾನ್ ಅಗತ್ಯ

ವಿಶ್ವಕ್ಕೂ ತೈವಾನ್ ಅಗತ್ಯ

ಫೋನ್‌ಗಳಿಂದ ಹಿಡಿದು ವಾಚ್, ಲ್ಯಾಪ್ ಟಾಪ್ ಇತ್ಯಾದಿ ನಮ್ಮ ದೈನಂದಿನ ಅಗತ್ಯ ಇರುವ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಕಂಪ್ಯೂಟರ್ ಚಿಪ್‌ಗಳು ಅಗತ್ಯ. ತೈವಾನ್‌ನಿಂದಲೇ ಬಹುತೇಕ ಚಿಪ್‌ಗಳು ತಯಾರಾಗಿ ವಿಶ್ವಕ್ಕೆ ಸರಬರಾಜು ಅಗುತ್ತವೆ. ಒಂದು ವೇಳೆ ತೈವಾನ್ ಚೀನಾ ವಶವಾದರೆ ಚಿಪ್‌ಗಳ ಸರಬರಾಜು ಸರಪಳಿಗೆ ಧಕ್ಕೆಯಾಗಬಹುದು. ಚೀನಾದ ಏಕಸ್ವಾಮ್ಯತೆ ವಿಶ್ವ ರಾಷ್ಟ್ರಗಳಿಗೆ ತಲೆನೋವಾಗಬಹುದು.

English summary
China is claiming that Taiwan is its integral part, while the latter is self governing from past seven decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X