ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೈಲ್ ಲಿಪಿ ಮುದ್ರಣಾಲಯ; ದೃಷ್ಟಿ ವಿಶೇಷ ಚೇತನರ ಜೀವನ ಜ್ಯೋತಿ

By ನದಿಯಾ
|
Google Oneindia Kannada News

ವಿದ್ಯೆ ಜೀವನದ ಬೆಳಕು. ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯನ್ನು ಅಂಧಕಾರದಿಂದ ಜ್ಞಾನವೆಂಬ ಜ್ಯೋತಿಯೆಡೆಗೆ ಕರೆದೊಯ್ಯುತ್ತದೆ. ಕಲಿಕೆಗೆ ಪುಸ್ತಕಗಳು ಪ್ರಮುಖವಾದ ಸಾಧನ. ಆದರೆ, ದೃಷ್ಟಿದೋಷವುಳ್ಳ ವಿಶೇಷಚೇತನರಿಗೆ ಸಾಮಾನ್ಯರಂತೆ ಓದಲು, ಬರೆಯಲು ಆಗುವುದಿಲ್ಲ.

ಅಂಧರ ಪುಸ್ತಕಗಳನ್ನು ಸ್ಪರ್ಶದಿಂದ ಓದುವ ಲಿಪಿಯಲ್ಲಿ ತಯಾರಿಸಲಾಗುತ್ತದೆ. ಈ ಲಿಪಿಯನ್ನು ಬ್ರೈಲ್ ಲಿಪಿ ಎಂದು ಕರೆಯಲಾಗುತ್ತದೆ. ಈ ಲಿಪಿಯ ಉದಯಕ್ಕೆ ಕಾರಣಕರ್ತರಾದವರು ಲೂಯಿಸ್ ಬ್ರೈಲ್. ಇವರು ಜನವರಿ 4, 1809ರಲ್ಲಿ ಫ್ರಾನ್ಸಿನಲ್ಲಿ ಜನಿಸಿದರು.

ಅಂಧ ಐಎಎಸ್ ಅಧಿಕಾರಿ ಪ್ರಾಂಜಲಾ ಈಗ ಉಪ ವಿಭಾಗಾಧಿಕಾರಿ ಅಂಧ ಐಎಎಸ್ ಅಧಿಕಾರಿ ಪ್ರಾಂಜಲಾ ಈಗ ಉಪ ವಿಭಾಗಾಧಿಕಾರಿ

ಆಕಸ್ಮಿಕವಾಗಿ ದೃಷ್ಠಿಯನ್ನು ಕಳೆದುಕೊಂಡರು. ಅಂಧತ್ವ ಇದ್ದಾಗಿಯೂ ಓದುವುದು, ಬರೆಯುವುದರಲ್ಲಿ ಉತ್ಸಾಹವನ್ನು ಹೊಂದಿದ್ದ ಅವರು 15 ನೇ ವಯಸ್ಸಿನಲ್ಲಿ ಶಾಲೆಯಲ್ಲಿ ತುಂಡು ಕಾಗದದ ಮೇಲೆ ಚುಕ್ಕೆ ಮಾಡುವ ಮೂಲಕ ಬ್ರೈಲ್ ಲಿಪಿಯನ್ನು ಅಭಿವೃದ್ಧಿಪಡಿಸಿದರು. ಲೂಯಿಸ್ ಬ್ರೈಲ್ ಅವರ ಹೆಸರಿನಲ್ಲಿಯೇ ಬ್ರೈಲ್ ಮುದ್ರಣ ಆರಂಭವಾಯಿತು.

ನಂಬರ್ ಗಳೊಡನೆ ಆಟವಾಡುವ ಅಂಧ ಬಸವರಾಜ್ ಸಾಧನೆಗೆ ಬೆರಗಾಗಲೇಬೇಕು! ನಂಬರ್ ಗಳೊಡನೆ ಆಟವಾಡುವ ಅಂಧ ಬಸವರಾಜ್ ಸಾಧನೆಗೆ ಬೆರಗಾಗಲೇಬೇಕು!

ಕರ್ನಾಟಕದಲ್ಲಿ ಸರ್ಕಾರಿ ಬ್ರೈಲ್ ಮುದ್ರಣಾಲಯವನ್ನು ಮೈಸೂರಿನ ತಿಲಕ್ ನಗರದಲ್ಲಿ 1982 ರಲ್ಲಿ ಸ್ಥಾಪಿಸಲಾಯಿತು. ಮುದ್ರಣಾಲಯ ಪಠ್ಯ ಪುಸ್ತಕಗಳಲ್ಲದೇ ಕರ್ನಾಟಕ ಸಂಗೀತ, ಚೈತನ್ಯ ಪೂಜೆ, ಲೂಯಿಸ್ ಬ್ರೈಲ್ ಜೀವನ ಚರಿತ್ರೆ, ಕಾನೂನು ಮಾಹಿತಿ, ಸಾಹಿತ್ಯ, ಕೃತಿಗಳು, ಸಾಮಾನ್ಯ ಜ್ಞಾನದ ಪುಸ್ತಕಗಳು, ಆಂಗ್ಲ-ಕನ್ನಡ ವ್ಯಾಕರಣ, ಕ್ಯಾಲೆಂಡರ್‌ಗಳನ್ನು ಮುದ್ರಿಸಿ ರಾಜ್ಯಾದ್ಯಂತ 54 ಶಾಲೆಗಳಿಗೆ ಸರಬರಾಜು ಮಾಡುತ್ತಿದೆ.

ಎಸ್‌ಎಸ್‌ಎಲ್‌ಸಿಯಲ್ಲಿ 619 ಅಂಕ: ಅಂಧ ವಿದ್ಯಾರ್ಥಿಯ ಸಾಧನೆಎಸ್‌ಎಸ್‌ಎಲ್‌ಸಿಯಲ್ಲಿ 619 ಅಂಕ: ಅಂಧ ವಿದ್ಯಾರ್ಥಿಯ ಸಾಧನೆ

ಪುಸ್ತಕಗಳ ಮುದ್ರಣ ಆರಂಭ

ಪುಸ್ತಕಗಳ ಮುದ್ರಣ ಆರಂಭ

ಸರ್ಕಾರಿ ಬ್ರೈಲ್ ಮುದ್ರಣಾಲಯದಲ್ಲಿ ಮೊದಲಿಗೆ 1 ರಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲಾಗುತ್ತಿತ್ತು. ನಂತರದಲ್ಲಿ 10 ನೇ ತರಗತಿಯವರಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಯಿತು. 1985-86ನೇ ಸಾಲಿನಲ್ಲಿ
ಡೆಹರಾಡೂನ್‌ನಲ್ಲಿ ನಡೆದ ಬ್ರೈಲ್ ಮುದ್ರಣಾಲಯಗಳ ಅಧೀಕ್ಷಕರ ಸಭೆಯಲ್ಲಿ ಕಡಿಮೆ ಅವಧಿಯಲ್ಲಿ ಅಧಿಕವಾಗಿ ಉತ್ಪಾದನೆ ಮಾಡಿರುವ ಮುದ್ರಣಾಲಯ ಎಂಬ ಹೆಗ್ಗಳಿಕೆಯನ್ನು ಪಡೆಯಿತು.

ಯಂತ್ರವನ್ನು ದೇಣಿಗೆ ನೀಡಲಾಯಿತು

ಯಂತ್ರವನ್ನು ದೇಣಿಗೆ ನೀಡಲಾಯಿತು

2005-06 ರಲ್ಲಿ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ 50 ಲಕ್ಷ ರೂ. ವೆಚ್ಚದ ಬ್ರೈಲ್ ಲೋ 400 ಎಸ್‌ಆರ್ ಯಂತ್ರವನ್ನು ನಾರ್ವೆಯಿಂದ ಖರೀದಿಸಿ ಇಲಾಖೆಗೆ ದೇಣಿಗೆಯಾಗಿ ನೀಡಲಾಯಿತು. ಈ ಯಂತ್ರ ಪ್ರತಿ ಗಂಟೆಗೆ ಸುಮಾರು 1000 ಬ್ರೈಲ್ ಪುಟಗಳನ್ನು ಮುದ್ರಿಸಲಿದೆ. ಇದುವರೆಗೆ 1,32,390 ಪಠ್ಯಪುಸ್ತಕಗಳು ಹಾಗೂ 15,000 ಪಠ್ಯೇತರ ಪುಸ್ತಕಗಳು ಮುದ್ರಣ ಮಾಡಲಾಗಿದೆ.

ಆಂಗ್ಲ ಬ್ರೋಚರ್‌ಗಳ ಮುದ್ರಣ

ಆಂಗ್ಲ ಬ್ರೋಚರ್‌ಗಳ ಮುದ್ರಣ

ಪ್ರಾದೇಶಿಕ ವಿಜ್ಞಾನ ವಸ್ತು ಸಂಗ್ರಹಾಲಯ, ಭಾರತ ಸರ್ಕಾರ ಮೈಸೂರು, ಇವರು ಅಂಧ ಮಕ್ಕಳಿಗೆ ಅನುಕೂಲವಾಗಲು ಸ್ಪರ್ಶಿಸುವ, ಅನುಭವಿಸುವ, ಗ್ರಹಿಸುವ ಸಸ್ಯ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಿ ಅಂಧ ಅಂಗವಿಕಲ ವಿದ್ಯಾರ್ಥಿಗಳಿಗೆ 500 ಕನ್ನಡ ಹಾಗೂ 500 ಆಂಗ್ಲ ಬ್ರೋಚರ್‌ಗಳನ್ನು ಬ್ರೈಲ್ ಲಿಪಿಯಲ್ಲಿ ತಯಾರಿಸಿ ನೀಡುತ್ತಿದ್ದಾರೆ. ಬ್ರೈಲ್ ಮುದ್ರಣಾಲಯ ಅಂಧ ವಿಶೇಷ ಚೇತನರು ಸೇರಿದಂತೆ ಇತರರು ಸಮಾಜದಲ್ಲಿ ಶಿಕ್ಷಣ ಹಾಗೂ ಉದ್ಯೋಗ ಪಡೆದು ಸಾಧನೆ ಮಾಡಲು ನೆರವಾಗುತ್ತಿದೆ.

ಕೃತಿಗಳ ಮುದ್ರಣ ಕಾರ್ಯ

ಕೃತಿಗಳ ಮುದ್ರಣ ಕಾರ್ಯ

ಕನ್ನಡ ಪ್ರಾಧಿಕಾರದ ಅನುದಾನದಲ್ಲಿ ಕನ್ನಡದ ಉತ್ತಮ ಕೃತಿಗಳಾದ ಚೋಮನದುಡಿ, ಮೈಸೂರು ಮಲ್ಲಿಗೆ, ಮಂಕುತಿಮ್ಮನ ಕಗ್ಗ, ಗರತಿಯ ಹಾಡು, ನಾದಲೀಲೆ, ಸಖೀಗೀತಾ, ತುಘಲಕ್, ಮಲೆನಾಡಿನ ಚಿತ್ರಗಳು, ಪಕ್ಷಿಕಾಶಿ, ಟೊಳ್ಳುಗಟ್ಟಿ, ಸೂರ್ಯನ ಕುದುರೆ, ಕತೆಗಳು, ಪರಿಸರದ ಕತೆ, ಕಲ್ಲು ಸಕ್ಕರೆ ಕೊಳ್ಳಿರೋ, ಸಂಧ್ಯಾರಾಗ ಮೊದಲಾದ 15 ಕ್ಕೂ ಹೆಚ್ಚು ಕೃತಿಗಳನ್ನು ಬ್ರೈಲ್ ಲಿಪಿಯಲ್ಲಿ ಮುದ್ರಿಸಲಾಗಿದೆ. ಇದರಿಂದಾಗಿ
ಓದಲು, ಬರೆಯಲು ಬಳಸುವ ಈ ಸ್ಪರ್ಶ ಲಿಪಿಯು ಅಂಧರ ಬಾಳಿನಲ್ಲಿ ಮಹತ್ತರ ಕೊಡುಗೆಯಾಗಿದೆ.

English summary
Know about Mysuru braille printing press established in 1982. This is the only such government-run press in the Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X