ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸರ್ಕಾರದ 'ಜಲಾಮೃತ' ಯೋಜನೆ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಜೂನ್ 12 : ಕರ್ನಾಟಕ ಸರ್ಕಾರ 'ಜಲಾಮೃತ' ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಪದೇ-ಪದೇ ಬರಗಾಲಕ್ಕೆ ತುತ್ತಾಗುತ್ತಿರುವ ರಾಜ್ಯದಲ್ಲಿ ನೀರನ್ನು ಉಳಿಸುವ ಉದ್ದೇಶದಿಂದ 2019ನೇ ವರ್ಷವನ್ನು ಜಲ ವರ್ಷ ಎಂದು ಸರ್ಕಾರ ಘೋಷಣೆ ಮಾಡಿದೆ.

ಮಂಗಳವಾರ ಕರ್ನಾಟಕದಲ್ಲಿ 'ಜಲಾಮೃತ' ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಕರ್ನಾಟಕದಲ್ಲಿ ನೀರನ ಸಂರಕ್ಷಣೆಗೆ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ಜಲಾಮೃತ ಕಾರ್ಯಕ್ರಮವನ್ನು ಘೋಷಣೆ ಮಾಡಲಾಗಿದೆ.

ಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿ

'ಹನಿ ನೀರನ್ನೂ ಉಳಿಸಿ ಮುಂದಿನ ಪೀಳಿಗೆಗೆ ನೀಡುತ್ತೇವೆ' ಎಂಬುದು ಜಲಾಮೃತ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯಾಗಿದೆ. ನೀರಿನ ಮಿತವ್ಯಯ, ಪರಿಸರ ಸಂರಕ್ಷಣೆ ಜಲಾಮೃತ ಕಾರ್ಯಕ್ರಮದಲ್ಲಿ ಸೇರಿದೆ. ಜಿಲ್ಲಾ ಮತ್ತು ತಾಲೂಕೂ ಮಟ್ಟದಲ್ಲಿ ಕಾರ್ಯಕ್ರವನ್ನು ಅನುಷ್ಠಾನ ಮಾಡಲಾಗುತ್ತದೆ.

ಎತ್ತಿನಹೊಳೆ ಯೋಜನೆಗಿದ್ದ ಕಾನೂನು ತೊಡಕು ನಿವಾರಣೆಎತ್ತಿನಹೊಳೆ ಯೋಜನೆಗಿದ್ದ ಕಾನೂನು ತೊಡಕು ನಿವಾರಣೆ

ಎರಡು ವರ್ಷಗಳಲ್ಲಿ 14000 ಜಲಮೂಲಗಳ ಪುನಶ್ಚೇತನ, 12000 ಚೆಕ್ ಡ್ಯಾಂ ನಿರ್ಮಾಣ, ಕಿಂಡಿ ಅಣೆಕಟ್ಟು, ಸಣ್ಣ ಜಲಾಶಯ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಜೊತೆ ಹೊಸ ಜಲಮೂಲಗಳನ್ನು ಸೃಜಿಸಲಾಗುತ್ತದೆ.....

ಬರ ಪೀಡಿತ ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರದಾನಬರ ಪೀಡಿತ ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರದಾನ

ಏನಿದು ಜಲಾಮೃತ ಯೋಜನೆ

ಏನಿದು ಜಲಾಮೃತ ಯೋಜನೆ

ಕರ್ನಾಟಕದಲ್ಲಿನ ಬರಪರಿಸ್ಥಿತಿಯನ್ನು ಎದುರಿಸಲು ಮುಖ್ಯಮಂತ್ರಿಗಳು 2019-20ನೇ ಸಾಲಿನ ಬಜೆಟ್‌ನಲ್ಲಿ 2019ನ್ನು ಜಲವರ್ಷ ಎಂದು ಘೋಷಣೆ ಮಾಡಿದರು.

ಜಲಾಮೃತ ಯೋಜನೆಯಡಿ ಜಲಸಂರಕ್ಷಣೆ, ಜಲಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಮತ್ತು ಹಸರೀಕರಣವನ್ನು ಕೇಂದ್ರವಾಗಿಟ್ಟುಕೊಂಡು ಸುಮಾರು 2000 ಜಲಸಂರಕ್ಷಣೆ ಕಾಮಗಾರಿಗಳನ್ನು ಮುಂಬರುವ 2 ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.

ಕೈಗೊಳ್ಳುವ ಚಟುವಟಿಕೆಗಳು

ಕೈಗೊಳ್ಳುವ ಚಟುವಟಿಕೆಗಳು

ಗ್ರಾಮ/ತಾಲೂಕು/ಜಿಲ್ಲಾ ಪಂಚಾಯಿತಿ ಅನುಷ್ಠಾನ ಇಲಾಖೆಗಳು ಸಮನ್ವಯತೆಯಲ್ಲಿ ಜಲಾಮೃತ ಕಾರ್ಯಕ್ರಮ ಅನುಷ್ಠಾನ ಮಾಡಬೇಕು.

ಸಣ್ಣ ನೀರಾವರಿ ಕೆರೆಗಳು, ಕಲ್ಯಾಣಿ/ಪುಷ್ಕರಣಿ, ಕುಂಟೆ, ಕಟ್ಟೆಗಳು, ಗೋ ಕಟ್ಟೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯಗಳು ಆಗಬೇಕು.

ನಾಲಾಬದು, ತಡೆ ಅಣೆಕಟ್ಟು ಮತ್ತು ಕಿಂಡಿ ಅಣೆಕಟ್ಟು ಹಾಗೂ ಇತರೆ ಮೇಲ್ಮೆ ನೀರು ಸಂಗ್ರಹಣಾ ಘಟಕಗಳನ್ನು ಪುನರುಜ್ಜೀವನಗೊಳಿಸಬೇಕು.

ನೀರನ ಮಿತ ಬಳಕೆ ಅರಿವು

ನೀರನ ಮಿತ ಬಳಕೆ ಅರಿವು

ವೈಜ್ಞಾನಿಕವಾಗಿ ನೀರು ಸಂಗ್ರಹಣೆ ಮಾಡಲು ಜಲಮೂಲಗಳ ನಿರ್ಮಾಣ ಮಾಡುವುದು. ನೀರಿನ ಲಭ್ಯತೆ ಮತ್ತು ಮಿತ ಬಳಕೆ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವುದು.

ಗ್ರಾಮೀಣ ಜನರಿಗೆ ವ್ಯಾಪಕ ಮಾಹಿತಿ ಶಿಕ್ಷಣ ಮತ್ತು ಸಂವಹನದ ಪ್ರಚಾರಗಳನ್ನು ನೀಡುವುದು. ಫಲಾನುಭವಿಗಳ ಸ್ವಂತ ಮನೆಯಲ್ಲಿ ಮಳೆ ನೀರುಕೊಯ್ಲು ಅಳವಡಿಸುವುದು. ಕೆರೆ ಅಂಗಳದಲ್ಲಿ ಹೂಳು ತೆಗೆಯುವುದು.

ಹಸರೀಕರಣ ಯೋಜನೆಗಳು

ಹಸರೀಕರಣ ಯೋಜನೆಗಳು

ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಮುದಾಯ ಸಹಭಾಗಿತ್ವದೊಂದಿಗೆ ಅಭಿಯಾನ ಮಾದರಿಯಲ್ಲಿ ಅರಣ್ಯೀಕರಣ ಕೈಗೊಳ್ಳುವುದು. ಪ್ರತಿ ಜಲಮೂಲ ಬಳಕೆದಾರರ ಸಂಘ/ಸಮಿತಿಗಳನ್ನು ರಚಿಸುವುದು.

ಪ್ರತಿ ಕಾಮಗಾರಿಗಳ ಸ್ಥಳದಲ್ಲಿ ಕಾಮಗಾರಿಯ ಸಂಪೂರ್ಣ ವಿವರಗಳನ್ನು ಒಳಗೊಂಡ ಜಲಾಮೃತ ನಾಮಫಲಕ ಕಡ್ಡಾಯವಾಗಿ ಅಳವಡಿಸತಕ್ಕದ್ದು

English summary
Government of Karnataka launched the Jalamrutha scheme for conservation water. Scheme contains 4 major program including protection and rejuvenation of water bodies. Here are the key features of Jalamrutha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X