ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಶಲವೇ.. ಕ್ಷೇಮವೇ..! ಮುನಿಸಿಕೊಂಡವನ ಮನವೊಲಿಕೆಗೆ 'ಆಕೆ' ಬರೆದಿದ್ದು 434 ಮೀಟರ್ ಉದ್ದದ ಪತ್ರ!

|
Google Oneindia Kannada News

ದುನಿಯಾ ಈಗ ಚೇಂಜ್ ಆಗಿದೆ. ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಹಾಗೂ ಸೋಷಿಯಲ್ ಮೀಡಿಯಾದ ಮೇಲೆಯೇ ಜನರು ನಿಂತುಕೊಂಡಿದ್ದಾರೆ. ಎಲ್ಲದಕ್ಕೂ ಈಗಿನ ಯುವಕ-ಯುವತಿಯರಿಗೆ ಮೊಬೈಲ್ ಕಡ್ಡಾಯ ಅನ್ನೋ ಹಾಗಾಗಿದೆ. ಇದರ ಮಧ್ಯೆ ಅದೊಂದು ಪತ್ರ ಇದೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

ಮುನಿಸಿಕೊಂಡ ಅವನನ್ನು ಗೆಲ್ಲುವಲ್ಲಿ ಯುವತಿ ಬರೆದಿರುವ ಪತ್ರವು ಕೊನೆಗೂ ಯಶಸ್ವಿ ಆಗಿದೆ. ಅವನ ಮುಖದಲ್ಲಿ ನಗು ಮೂಡಿದೆ. ಆಕೆಯ ಮೇಲಿನ ಮುನಿಸು ಮರೆಯಾಗಿದೆ, ಅದೊಂದು ಪತ್ರ ಆತನ ಹೃದಯ ತಟ್ಟಿದೆ.

ಲವ್ ಲೆಟರ್ ಬರೆದ 3ನೇ ತರಗತಿ ವಿದ್ಯಾರ್ಥಿ: ಕೈಕಾಲು ಕಟ್ಟಿದ ಶಿಕ್ಷಕರುಲವ್ ಲೆಟರ್ ಬರೆದ 3ನೇ ತರಗತಿ ವಿದ್ಯಾರ್ಥಿ: ಕೈಕಾಲು ಕಟ್ಟಿದ ಶಿಕ್ಷಕರು

ಇನ್ನು ಲೆಟರ್ ಅಂದಾಕ್ಷಣ ಎಲ್ಲರ ಮನಸಿಗೆ ಮೊದಲು ಹೊಳೆಯುವುದೇ ಲವ್ ಲೆಟರ್. ಸೋಷಿಯಲ್ ಮೀಡಿಯಾ ಕಾಲದಲ್ಲೂ ಆ ಯುವತಿ ಬರೆದಿರುವ ಪತ್ರ ವೈರಲ್ ಏನೋ ಆಗಿದೆ, ಆದರೆ ಅದು ಲವ್ ಲೆಟರ್ ಅಂತೂ ಅಲ್ಲವೇ ಅಲ್ಲ. ಬದಲಿಗೆ ಸಹೋದರನಿಗೆ ಆ ಸಹೋದರಿ ಬರೆದಿರುವ ಪತ್ರ ಹೊಸ ದಾಖಲೆ ಸೃಷ್ಟಿಸಿದೆ.

ಶುಭಾಶಯ ಕೋರಲಿಲ್ಲ ಎಂದು ಅಕ್ಕ-ತಮ್ಮ ನಡುವೆ ಮುನಿಸು

ಶುಭಾಶಯ ಕೋರಲಿಲ್ಲ ಎಂದು ಅಕ್ಕ-ತಮ್ಮ ನಡುವೆ ಮುನಿಸು

ಮೊಬೈಲ್ ದುನಿಯಾದಲ್ಲಿ ತನ್ನ ಮೇಲೆ ಕೋಪಿಸಿಕೊಂಡ ಸಹೋದರನನ್ನು ಸಮಾಧಾನಪಡಿಸುವುದಕ್ಕೆ ಬೇರೆ ದಾರಿಯೇ ಕಾಣಲಿಲ್ಲ. ಆಗ ಯುವತಿಗೆ ಹೊಳೆದಿದ್ದೇ ಪತ್ರ ಬರೆಯುವ ಐಡಿಯಾ. ಕೇರಳದಲ್ಲಿ ಇಂಥದೊಂದು ಘಟನೆ ನಡೆದಿದೆ. ಅಂತಾರಾಷ್ಟ್ರೀಯ ಸಹೋದರ ದಿನದಂದು ಶುಭಾಶಯ ಕೋರಲಿಲ್ಲ ಎಂಬ ಕಾರಣಕ್ಕೆ ಕೃಷ್ಣಪ್ರಸಾದ್, ತನ್ನ ಸಹೋದರಿ ಮೇಲೆ ಕೋಪಿಸಿಕೊಂಡಿದ್ದರು.

ಶುಭ ಕೋರದ ಅಕ್ಕನ ನಂಬರ್ ಬ್ಲಾಕ್

ಶುಭ ಕೋರದ ಅಕ್ಕನ ನಂಬರ್ ಬ್ಲಾಕ್

ಸಹೋದರದ ದಿನದ ಶುಭಾಶಯ ಕೋರಲಿಲ್ಲ ಎಂಬ ಕಾರಣಕ್ಕೆ ಅದೇ ದಿನ ಸಂಜೆ ವೇಳೆಗೆ ಕೃಷ್ಣಪ್ರಿಯಾ ವಾಟ್ಸಾಪ್ ಅನ್ನು ತಮ್ಮ ಕೃಷ್ಣಪ್ರಸಾದ್ ಬ್ಲಾಕ್ ಮಾಡಿದ್ದರು. ಅಲ್ಲಿಂದ ಮುಂದೆ ಅಕ್ಕನ ಫೋನ್ ಕಾಲ್ ಅನ್ನು ಸಹ ರಿಸೀವ್ ಮಾಡಿರಲಿಲ್ಲ. ತನ್ನ ವಿರುದ್ಧ ಮುನಿಸಿಕೊಂಡಿರುವ ತಮ್ಮನ ಮನವೊಲಿಕೆಗೆ ಏನು ಮಾಡಬೇಕು ಎಂಬ ತೊಳಲಾಟದಲ್ಲಿದ್ದ ಕೃಷ್ಣಪ್ರಿಯ ಪತ್ರವೊಂದನ್ನು ಬರೆಯುವುದಕ್ಕೆ ನಿರ್ಧರಿಸಿದರು. ಆರಂಭದಲ್ಲಿ ಎ4 ಶೀಟ್ ನಲ್ಲಿ ಪತ್ರ ಬರೆಯುವುದಕ್ಕೆ ತೀರ್ಮಾನಿಸಿದ್ದ ಮಹಿಳೆಗೆ ಅದು ಸಾಕಾಗುವುದಿಲ್ಲ ಎಂಬುದು ಅರಿವಿಗೆ ಬಂದಿತು. ಅಲ್ಲಿಂದ ಮುಂದೆ ಮಹಿಳೆಯ ಆಲೋಚನೆಯೇ ಈಗ ಆ ಪತ್ರ ವೈರಲ್ ಆಗುವುದಕ್ಕೆ ಕಾರಣವಾಯಿತು.

434 ಮೀಟರ್ ಉದ್ದದ ಹಾಳೆಯಲ್ಲಿ ಸಹೋದರಿಯ ಪತ್ರ

434 ಮೀಟರ್ ಉದ್ದದ ಹಾಳೆಯಲ್ಲಿ ಸಹೋದರಿಯ ಪತ್ರ

"ನನ್ನ ಸಹೋದರನಿಗೆ ಹೇಳುವ ವಿಷಯಗಳು ಸಾಕಷ್ಟಿದ್ದವು. ಅದನ್ನು ಕೇವಲ ಎ4 ಶೀಟಿನಲ್ಲಿ ಬರೆದು ಹೇಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಉದ್ದವಾದ ಹಾಳೆಗಳನ್ನು ಖರೀದಿಸಲು ನಾನು ನಿರ್ಧರಿಸಿದೆ. ಆದರೆ ಮಾರುಕಟ್ಟೆಗೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಬಳಿ ಬಿಲ್ಲಿಂಗ್ ರೋಲ್‌ಗಳು ಮಾತ್ರ ಇರುವುದಾಗಿ ಅಂಗಡಿಯವರು ಹೇಳಿದರು. ನಂತರ ನಾನು 14 ರೋಲ್‌ಗಳನ್ನು ಖರೀದಿಸಿ ತೆಗೆದುಕೊಂಡು ಬಂದೆನು. ಅದು ಬರೋಬ್ಬರಿ 434 ಮೀಟರ್ ಉದ್ದ ಮತ್ತು 5 ಕೆಜಿ ತೂಕವಾಯಿತು. ಇಷ್ಟು ದೊಡ್ಡ ಪ್ರಮಾಣದ ಪತ್ರವನ್ನು ಬರೆಯುವುದಕ್ಕೆ ನನಗೆ ಬರೋಬ್ಬರಿ 12 ಗಂಟೆಗಳೇ ಬೇಕಾಯಿತು," ಎಂದು ಕೃಷ್ಣಪ್ರಿಯೆ ಹೇಳಿದ್ದಾರೆ.

ಯುವತಿ ಬರೆದ 434 ಮೀಟರ್ ಉದ್ದದ ಪತ್ರದಲ್ಲಿ ಅಂಥದ್ದೇನಿದೆ?

ಯುವತಿ ಬರೆದ 434 ಮೀಟರ್ ಉದ್ದದ ಪತ್ರದಲ್ಲಿ ಅಂಥದ್ದೇನಿದೆ?

"ನಾವು ಪರಸ್ಪರ ಒಬ್ಬರಿಗೊಬ್ಬರು ತುಂಬಾ ಹಚ್ಚಿಕೊಂಡಿದ್ದೆವು. ನಮ್ಮ ನಡುವೆ ಸ್ನೇಹಪರ ಸಂಬಂಧ ಹುಟ್ಟಿನಿಂದಲೂ ಬೆಳೆದುಕೊಂಡು ಬಂದಿತ್ತು. ಇಬ್ಬರ ನಡುವೆ ಏಳು ವರ್ಷಗಳ ಅಂತರ ಇರುವುದರಿಂದ ಕೃಷ್ಣಪ್ರಸಾದ್, ತಮ್ಮನ್ನು ತಾಯಿಯ ರೀತಿಯಲ್ಲಿ ನೋಡುತ್ತಾನೆ ಹಾಗೂ ಗೌರವಿಸುತ್ತಾನೆ. ಕುಟುಂಬದಲ್ಲಿ ವಿಶೇಷ ಸಂದರ್ಭಗಳಲ್ಲಿ ನಾವು ಒಂದೇ ಬಣ್ಣದ ಉಡುಪುಗಳನ್ನು ಧರಿಸುತ್ತೇವೆ. ಆದರೆ ಅಂತಾರಾಷ್ಟ್ರೀಯ ಸಹೋದರರ ದಿನದ ಶುಭಾಶಯ ಕೋರಲಿಲ್ಲ ಎಂಬುದು ಅವನ ಮನಸ್ಸನ್ನು ಸಾಕಷ್ಟು ನೋಯಿಸಿತ್ತು" ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಕ್ಕ ಕೃಷ್ಣಪ್ರಿಯ ಪತ್ರ ಮೆಚ್ಚಿಕೊಂಡ ಕೃಷ್ಣಪ್ರಸಾದ್

ಅಕ್ಕ ಕೃಷ್ಣಪ್ರಿಯ ಪತ್ರ ಮೆಚ್ಚಿಕೊಂಡ ಕೃಷ್ಣಪ್ರಸಾದ್

ಅಕ್ಕನ ಸುದೀರ್ಘ ಮತ್ತು ಭಾರವಾದ ಪತ್ರವು ಕೃಷ್ಣಪ್ರಸಾದ್ ಮುಖದಲ್ಲಿ ನಗು ಮೂಡಿಸಿದೆ. "ಈ ಪತ್ರವನ್ನು ಸ್ವೀಕರಿಸಿದಾಗ ನನಗೆ ತುಂಬಾ ಸಂತೋಷವಾಯಿತು. ಈ ವರ್ಷ ಸಹೋದರರ ದಿನದಂದು ಅವಳು ನನಗೆ ಶುಭ ಹಾರೈಸದಿದ್ದಾಗ ನನಗೆ ನೋವಾಗಿತ್ತು ಮತ್ತು ನಿರಾಸೆ ಆಗಿತ್ತು. ಅದೇ ದಿನ ನಾನು ಅವಳಿಗೆ ಫೋನ್ ಕರೆ ಮಾಡಿದೆ, ಆದರೆ ಅವಳು ಕೆಲಸದಲ್ಲಿ ನಿರತಳಾಗಿದ್ದಳು. ಆದ್ದರಿಂದ ನಾನು ಹೆಚ್ಚು ಹೊತ್ತು ಮಾತನಾಡದೆ ಕರೆಯನ್ನು ಕಟ್ ಮಾಡಿದೆ. ನಂತರ ಅವಳ ಫೋನ್ ಕಾಲ್ ಅನ್ನು ನಾನು ಬ್ಲಾಕ್ ಮಾಡಿದ್ದೆನು," ಎಂದು ಸಹೋದರ ಕೃಷ್ಣಪ್ರಸಾದ್ ಹೇಳಿದ್ದಾರೆ.

"ಅವಳು ಏನಾಯಿತೋ ಏನೋ ಎಂದು ಬೇಸರಗೊಂಡಿರಬೇಕು, ಅದಕ್ಕಾಗಿಯೇ ಅವಳು ಪತ್ರವನ್ನು ಬರೆದಿದ್ದಾಳೆ. ನಾನು ಅದನ್ನು ಸ್ವೀಕರಿಸಿದಾಗ ನನಗೆ ತುಂಬಾ ಸಂತೋಷವಾಯಿತು" ಎಂದು ಕೃಷ್ಣಪ್ರಸಾದ್ ನಗುನಗುತ್ತಾ ಹೇಳಿದರು.

ಗಿನ್ನಿಸ್ ದಾಖಲೆ ಬರೆಯುತ್ತಾ 434 ಮೀಟರ್ ಉದ್ದದ ಪತ್ರ

ಗಿನ್ನಿಸ್ ದಾಖಲೆ ಬರೆಯುತ್ತಾ 434 ಮೀಟರ್ ಉದ್ದದ ಪತ್ರ

ತಮ್ಮ ಸಹೋದರ ಕೃಷ್ಣಪ್ರಸಾದ್ ಮನವೊಲಿಕೆಗೆ ಕೃಷ್ಣಪ್ರಿಯ ಬರೆದ ಪತ್ರವು ಇದೀಗ ವಿನೂತನ ದಾಖಲೆ ಬರೆಯುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಬರೋಬ್ಬರಿ 434 ಮೀಟರ್ ಉದ್ದ, 5 ಕೆಜಿ ತೂಕದ ಪತ್ರವು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಸಂಬಂಧ ಕೃಷ್ಣಪ್ರಿಯಾ ಅರ್ಜಿಯನ್ನೂ ಸಹ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

Recommended Video

ಈ ಪುಟ್ಟ ಬಾಲಕ ಮಾಡ್ತಿರೋ ಮ್ಯಾಜಿಕ್ ಗೆ ಮಿಲಿಯನ್ ಗಟ್ಟಲೆ ವೀಕ್ಷಣೆ: ನೀವು ನೋಡಿ ಫಿದಾ ಆಗಿ | *Viral | OneIndia

English summary
A woman in Kerala wrote a 434-metre-long letter weighing 5 kg to her angry brother to pacify him after she forget to wish him on International Brothers Day this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X