ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಬಸ್‌ಗೆ ಬೆಂಕಿ: 17 ವರ್ಷ ಬಳಿಕ ತೀರ್ಪು- ಏನಿದು ಪ್ರಕರಣ?

|
Google Oneindia Kannada News

ಕಳೆದ 17 ವರ್ಷಗಳ ಹಿಂದೆ ಕೇರಳದ ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮದನಿ ಅವರನ್ನು ಬಂಧಿಸಿದ್ದನ್ನು ವಿರೋಧಿಸಿ ತಮಿಳುನಾಡು ಸರಕಾರಿ ಬಸ್‌ಗೆ ಬೆಂಕಿ ಇಟ್ಟು ಸುಟ್ಟು ಹಾನಿಪಡಿಸಿರುವ ಪ್ರಕರಣದಲ್ಲಿ ಕೇರಳದ ವಿಶೇಷ ನ್ಯಾಯಾಲಯವು ಮೂವರನ್ನು ದೋಷಿ ಎಂದು ಗುರುವಾರ ಹೇಳಿದೆ.

ಕಲಮಶ್ಶೇರಿ ಬಸ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಕೋರ್ಟ್‌ನಿಂದ ಕ್ರಮಕ್ಕೆ ಮುಂದಾಗಿದ್ದು 17 ವರ್ಷಗಳ ನಂತರ ಈ ಮಹತ್ವದ ತೀರ್ಪು ನೀಡಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕಲಮಸ್ಸೆರಿ ಬಸ್‌ಗೆ ಬೆಂಕಿ ಹಚ್ಚಿ ಹಾನಿ ಮಾಡಿರುವ ಬಸ್‌ ತಮಿಳುನಾಡು ಸರ್ಕಾರ ಒಡೆತನದ ಸಾರ್ವಜನಿಕ ರಸ್ತೆ ಸಾರಿಗೆ ಮೂವರು ಆರೋಪಿಗಳು ಬೆಂಕಿ ಇಟ್ಟಿದ್ದರು. ಈಗ ಈ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

 ರಾಯಚೂರು: ಬಸ್ ಟಾಪ್ ಮೇಲೆ ಕುಳಿತು ವಿದ್ಯಾರ್ಥಿಗಳು ಅಪಾಯಕಾರಿ ಪ್ರಯಾಣ ರಾಯಚೂರು: ಬಸ್ ಟಾಪ್ ಮೇಲೆ ಕುಳಿತು ವಿದ್ಯಾರ್ಥಿಗಳು ಅಪಾಯಕಾರಿ ಪ್ರಯಾಣ

ಕೇರಳದ ಎರ್ನಾಕುಲಂನಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯ ವರ್ಷ ಹಳೆಯ ಪ್ರಕರಣಕ್ಕೆ ಮಹತ್ವದ ತೀರ್ಪು ನೀಡಿದೆ. ತಮಿಳುನಾಡು ಸರ್ಕಾರದ ಒಡೆತನದ ಬಸ್‌ಗೆ ಹಾನಿ ಮಾಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ವಿವಿಧ ಅಪರಾಧಗಳ ಅಡಿಯಲ್ಲಿ ಕಲಮಶ್ಶೇರಿ ಬಸ್ ಸುಟ್ಟಿರುವ ಪ್ರಕರಣದ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈ ಘಟನೆ 2005ರಲ್ಲಿ ನಡದಿತ್ತು.

 17 ವರ್ಷಗಳ ನಂತರ ತೀರ್ಪು

17 ವರ್ಷಗಳ ನಂತರ ತೀರ್ಪು

ಸುಮಾರು 17 ವರ್ಷಗಳ ನಂತರ ಈ ಪ್ರಕರಣದ ತೀರ್ಪು ಬಂದಿದೆ. ಆದರೆ, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಇನ್ನೂ ಪ್ರಕಟವಾಗಿಲ್ಲ. ಈ ಪ್ರಕರಣದ ಶಿಕ್ಷೆಯನ್ನು ಆಗಸ್ಟ್ 1ರಂದು ನ್ಯಾಯಾಲಯವು ಆರೋಪಿಗಳಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

2005ರಲ್ಲಿ ಕೊಯಮತ್ತೂರು ಜೈಲಿನಲ್ಲಿ ಬಂಧಿತರಾಗಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸರ್ ಮದನಿ ಅವರನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನು ಬೆಂಬಲಿಸಿ ಎರ್ನಾಕುಲಂ ಮತ್ತು ಸೇಲಂ ನಡುವೆ ಈ ಘಟನೆ ನಡೆದಿದೆ.

 ವಾದ ಮಂಡಿಸಿದ ಎನ್‌ಐಎ

ವಾದ ಮಂಡಿಸಿದ ಎನ್‌ಐಎ

ಎನ್‌ಐಎ ತನಿಖೆಯು ತನ್ನ ಸುದೀರ್ಘ ತನಿಖೆಯಲ್ಲಿ ಆರೋಪಿಗಳು ಸೆಪ್ಟೆಂಬರ್ 2005ರ ಮೊದಲ ವಾರದಲ್ಲಿ ಯುದ್ಧ, ಭಯೋತ್ಪಾದನೆ ಮತ್ತು ಸರ್ಕಾರಿ ಆಸ್ತಿಗೆ ಹಾನಿ ಮಾಡಲು ಪ್ರಯತ್ನಿಸಿದರು ಎಂದು ದೃಢಪಡಿಸಿತು. ಮದನಿ ಬಂಧನಕ್ಕೆ ಪ್ರತೀಕಾರವಾಗಿ ಕ್ರಿಮಿನಲ್ ಸಂಚು ರೂಪಿಸಿದ್ದರು.

ಎರ್ನಾಕುಲಂನಲ್ಲಿ ಮೂವರು ಆರೋಪಿಗಳು ಸೆಪ್ಟೆಂಬರ್ 8, 2005ರಂದು ಆಲುವಾ ಮಸೀದಿಯಲ್ಲಿ ಜಮಾಯಿಸಿದ್ದರು. ಇದಾದ ನಂತರ ಅವರು ಮಜೀದ್ ಪರಂಬೈ ಮತ್ತು ಸೂಫಿಯಾ ಅವರ ಪ್ರೇರಣೆ ಮತ್ತು ಪ್ರಚೋದನೆಯ ಪ್ರತಿಭಟಸುತ ತಮಿಳುನಾಡು ಸರ್ಕಾರದ ಒಡೆತನದ ಬಸ್‌ಗೆ ಬೆಂಕಿ ಇಟ್ಟಿದ್ದಾರೆ ಈ ಮೊದಲು ಅವರು ತಮ್ಮ ಈ ಯೋಜನೆಯನ್ನು ರೂಪಿಸಿದ್ದರು.

 ಎನ್‌ಐಎ ಚಾರ್ಜ್ ಶೀಟ್ ಸಲ್ಲಿಕೆ

ಎನ್‌ಐಎ ಚಾರ್ಜ್ ಶೀಟ್ ಸಲ್ಲಿಕೆ

ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ತನಿಖಾ ಸಂಸ್ಥೆಯು ಸುಮಾರು ಐದು ವರ್ಷಗಳ ತನಿಖೆಯ ಆಧಾರದ ಮೇಲೆ 2010ರಲ್ಲಿ 13 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ನ್ನು ಕೋರ್ಟ್‌ಗೆ ಸಲ್ಲಿಸಿ ಆರೋಪಿಗಳನ್ನು ಶಿಕ್ಷೆ ವಿಧಿಸುವಂತೆ ವಾದಿಸಿತ್ತು.

ಕಲಮಸ್ಸೆರಿ ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 2022ರಲ್ಲಿ ಐಪಿಸಿ ಸೆಕ್ಷನ್‌ 120ಬಿ, 121ಎ ಮತ್ತು ಯುಎ (ಪಿ) ಕಾಯ್ದೆಯ ಸೆಕ್ಷನ್‌ 18ರ ಅಡಿ ಮೂವರು ಆರೋಪಿಗಳಾದ ನಜೀರ್‌ ತಡಿಯಂಟ್‌ವಿದಾತ, ಸಬೀರ್‌ ಬುಹಾರಿ ಮತ್ತು ತಾಜುದ್ದೀನ್‌ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.ಈ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.

 ಅಬ್ದುಲ್ ನಾಸರ್ ಮದನಿ ಬಂದನ ವಿರೋಧಿಸಿ ಬಸ್‌ಗೆ ಬೆಂಕಿ

ಅಬ್ದುಲ್ ನಾಸರ್ ಮದನಿ ಬಂದನ ವಿರೋಧಿಸಿ ಬಸ್‌ಗೆ ಬೆಂಕಿ

2005ರಲ್ಲಿ ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮದನಿ ಅವರನ್ನು ಬಂಧಿಸಿದ್ದನ್ನು ವಿರೋಧಿಸಿ ತಮಿಳುನಾಡು ಸರಕಾರಿ ಬಸ್‌ಗೆ ಹಾನಿ ಮಾಡಿದ್ದಕ್ಕಾಗಿ ಕೇರಳದ ವಿಶೇಷ ನ್ಯಾಯಾಲಯವು ಮೂವರನ್ನು ದೋಷಿ ಎಂದು ಗುರುವಾರ ಘೋಷಿಸಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಕೇರಳದ ನಿವಾಸಿಗಳಾದ ನಜೀರ್ ತಡಿಯಂತವಿದತ ಅಲಿಯಾಸ್ ಉಮ್ಮರ್ ಹಾಜಿ, ಸಬೀರ್ ಬುಹಾರಿ ಮತ್ತು ತಾಜುದ್ದೀನ್ ಅವರನ್ನು ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯವು ಎರ್ನಾಕುಲಂನ ಅಪರಾಧಿಗಳೆಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.

Recommended Video

ಕಮಲಕ್ಕೆ ಕಾರ್ಯಕರ್ತರ ಶಾಕ್!ಕರ್ನಾಟಕದಲ್ಲಿ ಇನ್ಮುಂದೆ BJP ಗೆ ಉಳಿಗಾಲ‌ ಇಲ್ಲ‌ ಬಿಡಿ | *Politics | OneIndia

English summary
A special court in Kerala on Thursday convicted three people in a case of setting fire to a Tamil Nadu government bus and damaging it in protest against the arrest of Kerala PDP president Abdul Nasar Madani 17 years ago,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X