ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡವರಿಗೆ ಕೊರೊನಾವೈರಸ್, ಮಕ್ಕಳಿಗೆ ನೊರೊವೈರಸ್: ಏನಿದು ಕೇರಳ ಕಥೆ!

|
Google Oneindia Kannada News

ತಿರುವನಂತಪುರಂ, ಜೂನ್ 6: ಕೇರಳದ ಎರಡು ಮಕ್ಕಳಲ್ಲಿ 'ಅತಿ-ಸಾಂಕ್ರಾಮಿಕ' ಎನಿಸಿರುವ ನೊರೊವೈರಸ್‌ನ ಸೋಂಕು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ.

ರಾಜ್ಯ ಆರೋಗ್ಯ ಇಲಾಖೆ ಪ್ರಕಾರ, ಕಲುಷಿತ ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಮ್ಮ ಮಕ್ಕಳನ್ನು ಸಾಂಕ್ರಾಮಿಕ ರೋಗದಿಂದ ರಕ್ಷಿಸುವುದಕ್ಕಾಗಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮನವಿ ಮಾಡಿಕೊಂಡಿದ್ದಾರೆ.

ಕೇರಳದಲ್ಲಿ ನೋರೋವೈರಸ್: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಹೈಅಲರ್ಟ್! ಕೇರಳದಲ್ಲಿ ನೋರೋವೈರಸ್: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಹೈಅಲರ್ಟ್!

ಕೇರಳದಲ್ಲಿ ಒಂದು ಮಗ್ಗಲಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಇನ್ನೊಂದು ಮಗ್ಗಲಿನಲ್ಲಿ ನೊರೊವೈರಸ್ ಸೋಂಕು ಮಕ್ಕಳಲ್ಲಿ ಹರಡುತ್ತಿದೆ. ಕೊರೊನಾವೈರಸ್ ಮತ್ತು ನೊರೊವೈರಸ್ ನಡುವೆ ಕೇರಳ ಕಕ್ಕಾಬಿಕ್ಕಿ ಆಗಿದೆ. ಕೊರೊನಾವೈರಸ್ ಬಗ್ಗೆ ನಿಮಗೆಲ್ಲ ತಿಳಿದಿದ್ದೇ ಇದೆ, ಈಗ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ನೊರೊವೈರಸ್ ಎಂದರೇನು?, ಈ ರೋಗದಿಂದ ಆಗುವ ಅಪಾಯವೇನು ಎಂಬುದರ ಬಗ್ಗೆ ವರದಿಯಲ್ಲಿ ತಿಳಿದುಕೊಳ್ಳೋಣ.

ಆಸ್ಪತ್ರೆಗೆ ದಾಖಲಾದ ಎಂಟರ ಪೈಕಿ ಇಬ್ಬರು ಮಕ್ಕಳಿಗೆ ನೊರೊವೈರಸ್

ಆಸ್ಪತ್ರೆಗೆ ದಾಖಲಾದ ಎಂಟರ ಪೈಕಿ ಇಬ್ಬರು ಮಕ್ಕಳಿಗೆ ನೊರೊವೈರಸ್

ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಲಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟು ವಿದ್ಯಾರ್ಥಿಗಳು ವಿಷಪೂರಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಪ್ರಕರಣ ನಡೆದಿರುವ ಬಗ್ಗೆ ದೂರಿದ ನಂತರ ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆ ವೇಳೆ ಮಕ್ಕಳಲ್ಲಿ ನೊರೊವೈರಸ್ ಇರುವುದು ಪತ್ತೆಯಾಗಿದೆ.

ನೊರೊವೈರಸ್ ಸೋಂಕಿನ ಲಕ್ಷಣಗಳು

ನೊರೊವೈರಸ್ ಸೋಂಕಿನ ಲಕ್ಷಣಗಳು

ಕಲುಷಿತ ಆಹಾರ, ಕಲುಷಿತ ನೀರಿನಿಂದ ಈ ನೋರೋವೈರಸ್ ಹರಡುವ ಅಪಾಯ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ವಾಂತಿ, ಬೇಧಿ(ಅತಿಸಾರ), ವಾಕರಿಕೆ ಮತ್ತು ಹೊಟ್ಟೆನೋವು, ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಇದರ ಜೊತೆಗೆ ತಲೆನೋವು, ಮೈ-ಕೈ ನೋವು ಹಾಗೂ ಜ್ವರ ಕಾಣಿಸಿಕೊಳ್ಳುವುದು ಸಾಧಾರಣ ಲಕ್ಷಣಗಳಾಗಿವೆ ಎಂದು ವೈದ್ಯರು ಹೇಳುತ್ತಾರೆ.

ಮಕ್ಕಳಿಗೆ ಏಕೆ ಅಪಾಯ ನೊರೊವೈರಸ್?

ಮಕ್ಕಳಿಗೆ ಏಕೆ ಅಪಾಯ ನೊರೊವೈರಸ್?

ನೊರೊವೈರಸ್ ಜಠರಗರುಳಿನ ಕಾಯಿಲೆಯನ್ನು ಉಂಟು ಮಾಡುತ್ತದೆ, ಇದು ಹೊಟ್ಟೆ ಮತ್ತು ಕರುಳಿನ ಒಳಪದರದ ಉರಿಯೂತಕ್ಕೆ ಕಾರಣವಾಗುತ್ತದೆ, ತೀವ್ರವಾದ ವಾಂತಿ ಮತ್ತು ಅತಿಸಾರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ನೊರೊವೈರಸ್ ಆರೋಗ್ಯವಂತ ಜನರ ಮೇಲೆ ಯಾವುದೇ ರೀತಿ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ, ಆದರೆ ಚಿಕ್ಕ ಮಕ್ಕಳು, ವೃದ್ಧರು ಮತ್ತು ಕೊಮೊರ್ಬಿಡಿಟಿ ಹೊಂದಿರುವ ಜನರಲ್ಲಿ ಗಂಭೀರವಾದ ಸಮಸ್ಯೆಯನ್ನು ಹುಟ್ಟು ಹಾಕುವ ಅಪಾಯವಿದೆ.

ನೊರೊವೈರಸ್ ಹರಡುವುದು ಹೇಗೆ?

ನೊರೊವೈರಸ್ ಹರಡುವುದು ಹೇಗೆ?

ನೊರೊವೈರಸಸ್ ಸೋಂಕಿಗೆ ಒಳಗಾದ ಜನರೊಂದಿಗೆ ನಿಕಟ ಸಂಪರ್ಕದ ಮೂಲಕ ಅಥವಾ ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ವೈರಸ್ ಸುಲಭವಾಗಿ ಹರಡುತ್ತದೆ. ಅತಿಸಾರ ಹಾಗೂ ಇತರೆ ಹೊಟ್ಟೆನೋವಿನ ಸಮಸ್ಯೆಯನ್ನು ಹೊಂದಿರುವವರು ತಯಾರಿಸಿದ ಅಥವಾ ಬಡಿಸಿದ ಆಹಾರವನ್ನು ಸೇವಿಸುವುದರ ಮೂಲಕ ಈ ರೋಗವು ಹರಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಹೇಗಿರುತ್ತೆ ನೊರೊವೈರಸ್ ಸೋಂಕಿನ ಚಿಕಿತ್ಸೆ?

ಹೇಗಿರುತ್ತೆ ನೊರೊವೈರಸ್ ಸೋಂಕಿನ ಚಿಕಿತ್ಸೆ?

ನೋರೋವೈರಸ್ ಕಾಯಿಲೆಯು ಕಾಲರಾದಂತೆ ತೀವ್ರ ಅತಿಸಾರ ಹಾಗೂ ತೀವ್ರ ನಿರ್ಜಲೀಕರಣವಾಗಿರುತ್ತದೆ. ತಕ್ಷಣ ಆಸ್ಪತ್ರೆಗೆ ದಾಖಲಾಗುವುದು ಅಥವಾ ಅತಿಸಾರ ಬೇಧಿಗೆ ನೀಡುವ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು, ಇಲ್ಲದಿದ್ದರೆ ಸಾವಿನ ಅಪಾಯವೂ ಇರುತ್ತದೆ. ಈ ವೈರಸ್ ಚಿಕಿತ್ಸೆಯು "ನಾನ್ ಸ್ಪೆಷಿಪಿಕ್" (ನಿರ್ದಿಷ್ಟವಾಗಿ ಇರುವುದಿಲ್ಲ) ಆಗಿರುತ್ತದೆ. ಈ ರೋಗದ ಲಕ್ಷಣಗಳಿಗೆ ಅನುಗುಣವಾಗಿ ನೊರೊವೈರಸ್ ರೋಗಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.

English summary
Kerala Confirms Two Norovirus Cases: what is Norovirus, why childrens face danger from this. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X