ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಚುನಾವಣೆ: ಬಿಜೆಪಿ ಸಿಕ್ಕಿದ್ದು ಸಿಹಿಯೋ? ಕಹಿಯೋ?

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 18: ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಎಡಪಂಥೀಯ ರಾಜ್ಯದಲ್ಲಿ ತನ್ನ ಛಾಪು ಮೂಡಿಸುವ ಪ್ರಯತ್ನದಲ್ಲಿ ಸಿಹಿ-ಕಹಿ ಎರಡೂ ಅನುಭವಗಳನ್ನು ಪಡೆದುಕೊಂಡಿದೆ. ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂಬವರುವ ವಿಧಾನಸಭೆ ಚುನಾವಣೆ ವೇಳೆಗೆ ತಳಮಟ್ಟದಲ್ಲಿ ಬುನಾದಿಯನ್ನು ಭದ್ರಪಡಿಸುವ ಬಿಜೆಪಿಯ ಬಯಕೆಗೆ ತಣ್ಣೀರು ಚೆಲ್ಲಿದಂತೆ ಆಗಿದೆ.

ಹಾಗೆಂದು ಈ ಬಾರಿಯ ಚುನಾವಣೆಯಲ್ಲಿನ ಬಿಜೆಪಿ ಪ್ರದರ್ಶನವನ್ನು ಅದರ ಸೋಲು ಎಂದು ಹೇಳಲು ಕೂಡ ಆಗುವುದಿಲ್ಲ. ಅಸ್ತಿತ್ವವೇ ಇಲ್ಲದಿದ್ದ ರಾಜ್ಯದಲ್ಲಿ ಬಿಜೆಪಿ ಇಷ್ಟು ಪ್ರಮಾಣದಲ್ಲಿ ಮತಗಳನ್ನು ಪಡೆದಿರುವುದು ಕೂಡ ಸಾಮಾನ್ಯ ಸಂಗತಿಯಲ್ಲ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದ ಅತಿ ಕಿರಿಯ ಅಭ್ಯರ್ಥಿ ರೇಷ್ಮಾಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದ ಅತಿ ಕಿರಿಯ ಅಭ್ಯರ್ಥಿ ರೇಷ್ಮಾ

ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 1,236 ಸೀಟುಗಳಲ್ಲಿ ಜಯಗಳಿಸಿತ್ತು. ಒಟ್ಟಾರೆ ದಾಖಲಾದ ಮತಗಳಲ್ಲಿ ಶೇ 14ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಈ ಬಾರಿ ಅದು 2,500ಕ್ಕೂ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಗುರಿ ಹೊಂದಿತ್ತು. ಆದರೆ 1,800ರಷ್ಟು ವಾರ್ಡ್‌ಗಳಲ್ಲಿ ಜಯಗಳಿಸಿದೆ. ಆದರೆ ಕಳೆದ ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದಿದ್ದ ಕನಿಷ್ಠ 600 ಹಾಲಿ ಸೀಟುಗಳನ್ನು ಕಳೆದುಕೊಂಡಿದೆ. ಮುಂದೆ ಓದಿ.

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ LDFಗೆ ಗೆಲುವು: ಬಿಜೆಪಿ, ಕಾಂಗ್ರೆಸ್‌ಗೆ ತಿರುಗೇಟುಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ LDFಗೆ ಗೆಲುವು: ಬಿಜೆಪಿ, ಕಾಂಗ್ರೆಸ್‌ಗೆ ತಿರುಗೇಟು

ಅಸ್ತಿತ್ವ ಕಡಿಮೆ ಇರುವಲ್ಲಿ ಉತ್ತಮ ಮತ

ಅಸ್ತಿತ್ವ ಕಡಿಮೆ ಇರುವಲ್ಲಿ ಉತ್ತಮ ಮತ

ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಎಲ್‌ಡಿಎಫ್ ಮತ್ತು ಯುಡಿಎಫ್ ವ್ಯಾಪಕವಾಗಿ ಅಡ್ಡಮತದಾನಗಳನ್ನು ನಡೆಸಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಎಲ್ಲಿ ತೀರಾ ಕಡಿಮೆ ಅಸ್ತಿತ್ವ ಇದೆಯೋ ಅಂತಹ ಅನೇಕ ಪ್ರದೇಶಗಳಲ್ಲಿ ಬಿಜೆಪಿ ಉತ್ತಮ ಮತಗಳನ್ನು ಗಳಿಸಿದೆ.

ಎರಡನೆ ಸ್ಥಾನವೇ ಅಧಿಕ

ಎರಡನೆ ಸ್ಥಾನವೇ ಅಧಿಕ

ಒಟ್ಟಾರೆ ಫಲಿತಾಂಶವನ್ನು ಗಮನಿಸಿದಾಗ ಕಳೆದ ಚುನಾವಣೆಗಿಂತ ಬಿಜೆಪಿ 600 ಹೆಚ್ಚುವರಿ ಸೀಟುಗಳನ್ನು ತನ್ನ ಖಾತೆಗೆ ಪಡೆದುಕೊಂಡಿದೆ. ಜತೆಗೆ ಸುಮಾರು 600 ವಾರ್ಡ್‌ಗಳಲ್ಲಿ ಎರಡನೆಯ ಸ್ಥಾನ ಪಡೆದಿದೆ. 100 ವಾರ್ಡ್‌ಗಳ ತಿರುವನಂತಪುರಂ ನಗರ ಪಾಲಿಕೆಯಲ್ಲಿ 32ರಲ್ಲಿ ಎರಡನೆಯ ಸ್ಥಾನ ಪಡೆದಿದೆ.

ತಿರುವನಂತಪುರಂ ಕಾರ್ಪೊರೇಷನ್ ಉಳಿಸಿಕೊಂಡ ಎಲ್‌ಡಿಎಫ್ತಿರುವನಂತಪುರಂ ಕಾರ್ಪೊರೇಷನ್ ಉಳಿಸಿಕೊಂಡ ಎಲ್‌ಡಿಎಫ್

ಕಳೆದುಕೊಂಡಿದ್ದು ಮತ್ತು ಗೆದ್ದಿದ್ದು

ಕಳೆದುಕೊಂಡಿದ್ದು ಮತ್ತು ಗೆದ್ದಿದ್ದು

ತಿರುವನಂತಪುರಂನಲ್ಲಿ ಸುಧಾರಣೆ ಕಾಣಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆದರೆ ತನ್ನ 10 ಹಾಲಿ ಸೀಟುಗಳನ್ನು ಸಿಪಿಎಂ ಅಭ್ಯರ್ಥಿಗಳಿಗೆ ಕಳೆದುಕೊಂಡರೂ 35 ಸೀಟುಗಳನ್ನು ಉಳಿಸಿಕೊಂಡಿದೆ. ಕೋಯಿಕ್ಕೋಡ್‌ನಲ್ಲಿಯೂ ಇದೇ ರೀತಿಯ ಸನ್ನಿವೇಶವಿದೆ. ಏಳು ಸೀಟುಗಳನ್ನು ಬಿಜೆಪಿ ಗೆದ್ದುಕೊಂಡರೂ, ತನ್ನ ಕೈಯಲ್ಲಿದ್ದ ಏಳು ಸೀಟುಗಳನ್ನು ಕಳೆದುಕೊಂಡಿದೆ.

ವಿವಿಧೆಡೆ ಗಮನಾರ್ಹ ಪ್ರದರ್ಶನ

ವಿವಿಧೆಡೆ ಗಮನಾರ್ಹ ಪ್ರದರ್ಶನ

ಯುಡಿಎಫ್ ಮತ್ತು ಎಲ್‌ಡಿಎಫ್‌ಗಳ ವಿರುದ್ಧ ಬಿಜೆಪಿಯು ಅಡ್ಡ ಮತದಾನದ ಆರೋಪ ಮಾಡಿದೆ. ಕೇಂದ್ರ ಟ್ರ್ಯಾವಂಕೋರ್ ಮತ್ತು ದಕ್ಷಿಣ ಭಾಗಗಳಲ್ಲಿ ಬಿಜೆಪಿ ಎಳವ ಮತ್ತು ನಾಯರ್ ಸಮುದಾಯಗಳ ವಿಶ್ವಾಸ ಗೆದ್ದಿರುವುದು ಸ್ಪಷ್ಟವಾಗುತ್ತದೆ.


ವರ್ಕಲ ಮತ್ತು ಅಟ್ಟಿಂಗಳ್‌ಗಳಲ್ಲಿ ಎನ್‌ಡಿಎ ಕೆಲವು ಸೀಟುಗಳಲ್ಲಿ ನಿರ್ಣಾಯಕ ಗೆಲುವು ಪಡೆದಿದ್ದರೆ, ಪಟ್ಟಣಂತಿಟ್ಟ ಹಾಗೂ ಕೊಟ್ಟಾಯಂ ಜಿಲ್ಲೆಯ ವಿವಿಧೆಡೆ ಗಮನಾರ್ಹ ಸಾಧನೆ ತೋರಿದೆ. ಹೀಗಾಗಿ ಒಂದು ಕಡೆ ಸೋತರೂ ಇನ್ನೊಂದರಲ್ಲಿ ಗೆಲ್ಲುವ ಮೂಲಕ ವೈಫಲ್ಯವನ್ನು ಸರಿದೂಗಿಸಿದೆ.

English summary
Kerala Civic Poll Results: BJp has gained more seats than last elections, but failed to retain its sitting seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X