ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಕರೆ ಸ್ವರ್ಗ... ಆದರೆ ನಗಲು‌ ಒಳ್ಳೆಯ ದಂತ ಪಂಕ್ತಿ ಬೇಕಲ್ಲ...

By ಡಾ.ಶಿವಕುಮಾರ್ ಮಾಲಿಪಾಟೀಲ, ಗಂಗಾವತಿ
|
Google Oneindia Kannada News

ಪುಟ್ಟ ಮಕ್ಕಳಿಂದ ಹಿರಿಯವರೆಗೆ ಮುಗುಳ್ನಗು ಯಾವುತ್ತೂ ಮನೆ ಮಾಡಿರಬೇಕು. ಅದು ನಮ್ಮ ಮುಖಕ್ಕೆ ಶೋಭೆ. ನಮ್ಮ ನಗು ನಮ್ಮ ವ್ಯಕ್ತಿತ್ವಕ್ಕೂ ಕನ್ನಡಿ ಹಿಡಿದಿರುತ್ತದೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಇನ್ನು ಮುತ್ತಿನಂಥ ಅಥವಾ ದಾಳಿಂಬೆ ಹಣ್ಣಿನಂತೆ ದಂತಪಂಕ್ತಿಗಳಿದ್ದರಂತೂ ನಮ್ಮ ಮುಖಕ್ಕೆ ನಗುವೇ ಭೂಷಣ!

ಆದರೆ, ದುರಾದೃಷ್ಟವೆಂದರೆ, ನಾವು ನಮ್ಮ ಹಲ್ಲುಗಳ ಆರೋಗ್ಯದೆಡೆ ಗಮನ ನೀಡುವುದೇ ಇಲ್ಲ. ಪ್ರತಿದಿನ ಬೆಳಿಗ್ಗೆ ರಾತ್ರಿ ಎರಡು ಬಾರಿ ಎಷ್ಟು ಜನ ಹಲ್ಲು ಉಜ್ಜುತ್ತೀರಿ? ಆಗಾಗ ಫ್ಲಾಸ್ ಮಾಡಿಕೊಳ್ಳುತ್ತೀರಿ? ಕನಿಷ್ಠ ವರ್ಷಕ್ಕೊಮ್ಮೆಯಾದರೂ ದಂತ ವೈದ್ಯರ ಬಳಿ ಎಷ್ಟು ಜನ ತಪಾಸಣೆ ಮಾಡಿಸುತ್ತೀರಿ? ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲಿಯೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ, ಅಂತರ್ ಜಲ ಕುಸಿತದಿಂದ ಬೋರ್ ವೆಲ್ ನೀರಿನಲ್ಲಿ ಅತಿಯಾದ ಫ್ಲೋರೈಡ್ ಇರುತ್ತದೆ. ಆ ಗಡಸು ನೀರನ್ನು ಕುಡಿಯಲು ಉಪಯೋಗಿಸುವುದರಿಂದ, ಹಳದಿ ಹಲ್ಲು, ಕಂದು ಹಲ್ಲು ಸಾಮಾನ್ಯವಾಗಿ ಕಂಡು ಬರುತ್ತವೆ.

ಜಗತ್ತಿಗೇ ಸಿಹಿಸುದ್ದಿ! ಇದೀಗ HIV ಸೋಂಕು ಮಂಗಮಾಯ ಮಾಡೋಕೂ ಸಾಧ್ಯ! ಜಗತ್ತಿಗೇ ಸಿಹಿಸುದ್ದಿ! ಇದೀಗ HIV ಸೋಂಕು ಮಂಗಮಾಯ ಮಾಡೋಕೂ ಸಾಧ್ಯ!

ಈ ಹಲ್ಲುಗಳು ಗಟ್ಟಿಯಾಗಿ ಇರುವುದಿಲ್ಲ. ಹಾಗಾಗಿ ಗಟ್ಟಿ ಪದಾರ್ಥಗಳನ್ನು ತಿಂದಾಗ ಮುರಿಯುತ್ತವೆ. ಮುರಿದ ಹಲ್ಲುಗಳಲ್ಲಿ ಆಹಾರ ಸಿಕ್ಕು ಹುಳುಕು ಹಲ್ಲುಗಳಾಗಬಹುದು. ಮತ್ತು ಈ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕಷ್ಟ. ಹಾಗಾಗಿ ವಸಡು ರೋಗ ಬರಬಹುದು. ವಸಡಿನಿಂದ ರಕ್ತ ಬರುವುದು, ಬಾಯಿಯಿಂದ ವಾಸನೆ ಬರುವುದು ಸಾಮಾನ್ಯ.

ಕಂದು ಹಲ್ಲು ಹೊಂದಿದ ವಿದ್ಯಾರ್ಥಿಗಳು ಇನ್ಫಿರಿಯಾರಿಟಿ ಕಾಂಪ್ಲೆಕ್ಸ್ (inferiority complex) ಅಥವಾ ಕೀಳರಿಮೆಯಿಂದ ನರಳುತ್ತಾರೆ. ಈ ಕಂದು ಹಲ್ಲುಗಳು ಮಕ್ಕಳ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತವೆ. ಬೇರೆ ಮಕ್ಕಳ ರೀತಿ ಬಿಂದಾಸ್ ಆಗಿ ನಗಲು, ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಶಾಲೆಗಳಲ್ಲಿ ಭಾಷಣ ಸ್ಪರ್ಧೆ, ಸಂಗೀತ ಸ್ಪರ್ಧೆ ಹೀಗೆ ಹಲವು ಸ್ಪರ್ಧೆಗಳಲ್ಲಿ ಪ್ರತಿಭೆ ಇದ್ದರೂ ಭಾಗವಹಿಸುವುದಿಲ್ಲ.

ಮಗಳು ಚಿಕ್ಕವಳಿದ್ದಾಗಲೇ ತಪಾಸಣೆ ಮಾಡಿಸಿ

ಮಗಳು ಚಿಕ್ಕವಳಿದ್ದಾಗಲೇ ತಪಾಸಣೆ ಮಾಡಿಸಿ

ಅತಿಯಾದ ಕಂದು ಹಲ್ಲುಗಳು ಯುವತಿಯರ ಮದುವೆಗೆ ಅಡ್ಡ ಬರುತ್ತವೆ. ಮದುವೆ ತಡ ಆಗುತ್ತಿರುವುದನ್ನು ತಡವಾಗಿ ಮನವರಿಕೆ ಮಾಡಿಕೊಂಡ ಹೆತ್ತವರು ಆಗ ದಂತ ವೈದ್ಯರನ್ನು ಸಂಪರ್ಕಿಸುತ್ತಾರೆ. ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ. ಅಂದರೆ, ಹಲ್ಲುಗಳು ತೀರ ಹಾಳಾಗಿಬಿಟ್ಟಿರುತ್ತವೆ. ಅದರ ಬದಲು ಮಗಳು ಚಿಕ್ಕವಳು ಇದ್ದಾಗಲೇ ಕಾಸ್ಮೆಟಿಕ್ ಟ್ರೀಟ್ಮೆಂಟ್ ಮಾಡಿಸಿದರೆ ಅವಳು ಬೇರೆ ಮಕ್ಕಳ ತರಹ ಈ ಸ್ಪರ್ಧಾತ್ಮಕ ಯುಗದಲ್ಲಿ ಇನ್ನಷ್ಟು ಸಾಧನೆ ಮಾಡಲು ಅನುಕೂಲವಾಗುತ್ತದೆ.

ಕರ್ನಾಟಕದ ಶೇ.51ರಷ್ಟು ಮಹಿಳೆಯರಲ್ಲಿ ಕಬ್ಬಿಣಾಂಶ ಕೊರತೆ ಕರ್ನಾಟಕದ ಶೇ.51ರಷ್ಟು ಮಹಿಳೆಯರಲ್ಲಿ ಕಬ್ಬಿಣಾಂಶ ಕೊರತೆ

ನಗು ಆತ್ಮವಿಶ್ವಾಸ ಹೆಚ್ಚಿಸುತ್ತದೆ

ನಗು ಆತ್ಮವಿಶ್ವಾಸ ಹೆಚ್ಚಿಸುತ್ತದೆ

ದಂತ ಚಿಕಿತ್ಸೆ ದುಬಾರಿ ಆದರೂ ಮಕ್ಕಳ ಭವಿಷ್ಯದ ಮುಂದೆ ಏನೂ ಅಲ್ಲ. ಈಗ ಎಲ್ಲಾ ಜನರ ಹತ್ತಿರ ಸ್ಮಾರ್ಟ್ ಫೋನ್ ಗಳಿವೆ. ಹಾಗೆ ಮಕ್ಕಳ ಮುಗುಳ್ನಗೆ ಸುಂದರವಾಗಿ ಇದೆಯೇ ಎಂಬುದನ್ನು ಗಮನಿಸಬೇಕು. ಅವರ ಮುಖದಲ್ಲಿರುವ ನಗು ಅವರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅದೆ ತರಹ ಯುವಕರ ಮುಖದಲ್ಲಿ ಸುಂದರವಾದ ನಗು ಇದ್ದರೆ ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸಗಳು‌ ದೊರೆಯುತ್ತವೆ. ಒಮ್ಮೊಮ್ಮೆ ಕಂದು ಬಣ್ಣದ ಹಲ್ಲುಗಳಿವೆ ಎಂಬ ಕಾರಣಕ್ಕಾಗಿ ಸಂದರ್ಶನದಲ್ಲಿ ಪ್ರತಿಭೆ ಇದ್ದರೂ ಯುವಕ, ಯುವತಿಯರಿಗೆ ಕೆಲಸ ಸಿಗದೆ ಇರಬಹುದು ಅಥವಾ ಕೀಳರಿಮೆಯಿಂದ ಸಂದರ್ಶನದಲ್ಲಿ ಉತ್ತಮ ಸಾಧನೆ ತೋರಲು ವಿಫಲರಾಗಬಹುದು.

ಕ್ಯಾನ್ಸರ್ ಸಂಪೂರ್ಣ ಗುಣಪಡಿಸುವ ಔಷಧಿ 2020ಕ್ಕೆ ಮಾರುಕಟ್ಟೆಗೆ! ಕ್ಯಾನ್ಸರ್ ಸಂಪೂರ್ಣ ಗುಣಪಡಿಸುವ ಔಷಧಿ 2020ಕ್ಕೆ ಮಾರುಕಟ್ಟೆಗೆ!

ವರ್ಷಕ್ಕೊಮ್ಮೆಯಾದರೂ ವೈದ್ಯರ ಬಳಿ ಹೋಗಿ

ವರ್ಷಕ್ಕೊಮ್ಮೆಯಾದರೂ ವೈದ್ಯರ ಬಳಿ ಹೋಗಿ

ಹಾಗಾಗಿ ಮುಖದ ನಗು ಸುಂದರವಾಗಿ ಕಾಣಲು ವರ್ಷಕ್ಕೆ ಒಮ್ಮೆಯಾದರೂ ದಂತ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಮುಂದಿನ ಹಲ್ಲುಗಳಿಗೆ ಪೆಟ್ಟು ಬಿದ್ದರೂ ಸಹ ರಕ್ತ ಸಂಚಾರ ಸ್ಥಗಿತಗೊಂಡು ಹಲ್ಲುಗಳು ಕಂದು, ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅವುಗಳನ್ನು ಹಾಗೆ ಬಿಟ್ಟರೆ ಕೀವು ತುಂಬುತ್ತವೆ. ಗುಟ್ಕಾ, ಎಲೆ ಅಡಿಕೆ, ತಂಬಾಕು ಸೇವನೆಯಿಂದ, ಸಿಗರೇಟ್ ಸೇವನೆಯಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅವುಗಳನ್ನು simple scaling, ಸ್ವಚ್ಛತೆ ಮಾಡಿಸುವುದರಿಂದ ಬೆಳ್ಳಗಾಗುತ್ತವೆ.

ಸ್ವಾಭಾವಿಕವಾಗಿ ಹಲ್ಲು ಸ್ವಚ್ಛ ಕಾಣಬೇಕಿದ್ದರೆ...

ಸ್ವಾಭಾವಿಕವಾಗಿ ಹಲ್ಲು ಸ್ವಚ್ಛ ಕಾಣಬೇಕಿದ್ದರೆ...

ಆದರೆ fluorosis, tetracycline stains, ಪೆಟ್ಟು ಬಿದ್ದು ಹಲ್ಲುಗಳ ಬಣ್ಣ ಒಳಗಿನಿಂದ ಬದಲಾಗಿರುತ್ತದೆ, ಅವುಗಳನ್ನು ಬರಿ ಸ್ವಚ್ಛ ಮಾಡಿದರೆ ಬೆಳ್ಳಗೆ ಆಗಲಾರವು. ಅಂತಹ ಹಲ್ಲುಗಳನ್ನು bleaching, composite veneers, ceramic crowns, veneers, laminates ನಿಂದ ಅತ್ಯಂತ ಅಚ್ಚುಕಟ್ಟಾಗಿ ಸ್ವಾಭಾವಿಕವಾಗಿ ಕಾಣುವ ಹಲ್ಲುಗಳಂತೆ ಮಾಡಬಹುದು. ಈ ತರಹದ ಚಿಕಿತ್ಸೆಯನ್ನು ಈಗ ಎಲ್ಲಾ ಊರುಗಳಲ್ಲೂ ದಂತ ವೈದ್ಯರು ಮಾಡುತ್ತಾರೆ.

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ

ಅತಿಯಾದ ಫ್ಲೋರೈಡ್ ನಿಂದ ಹಲ್ಲಿನ ತೊಂದರೆ ಜೊತೆಗೆ ಎಲುಬು, ಮಾಂಸಗಳ ತೊಂದರೆಯೂ ಬರುತ್ತದೆ. ಲಕ್ಷಾಂತರ ಜನ ಮೊಣಕಾಲು ನೋವು, ಸಂಧಿವಾತದಿಂದ ನರಳುತ್ತಾರೆ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ಇನ್ನೂವರೆಗೂ ಶುದ್ಧ ಕುಡಿಯುವ ನೀರು ಗ್ರಾಮಗಳಲ್ಲಿ ಸಿಗುವುದು ಕಷ್ಟ. ಹಾಗಾಗಿ ಅಂತರ್ ಜಲ ಹೆಚ್ಚಿಗೆ ಮಾಡಿ, ಕೆರೆ ಬಾವಿಯ ನೀರನ್ನು ಸೋಸಿ ಕುಡಿಯುವುದು ಉತ್ತಮ ಉಪಾಯ. ನಕ್ಕರೆ ಸ್ವರ್ಗ... ಆದರೆ ನಗಲು‌ ಒಳ್ಳೆಯ ದಂತ ಪಂಕ್ತಿ ಬೇಕಲ್ಲ... ಯಾವಾಗಲೂ ನಗುತ್ತಿರಿ. ಅದಕ್ಕೆ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ.

English summary
Keep your teeth clean and healthy by getting examined by dentists once in a year. Healthy teeth increase your confidence. Keep smiling with beautiful teeth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X