ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸೀಸನ್ ಕೆಬಿಸಿಯಲ್ಲಿ ಸ್ಪರ್ಧಿ ಧುಲಿಚಂದ್‌ಗೆ ಸಿಕ್ಕ 50 ಲಕ್ಷದ ಪ್ರಶ್ನೆ

|
Google Oneindia Kannada News

ಕೌನ್ ಬನೇಗಾ ಕರೋಡ್‌ಪತಿ ಕಿರುತೆರೆಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಈಗ 14ನೇ ಸೀಸನ್ ಬಹಳ ರೋಚಕ ಆರಂಭ ಪಡೆದುಕೊಂಡಿದೆ.

ನಟ ಅಮೀರ್ ಖಾನ್, ಬಾಕ್ಸಿಂಗ್ ಪಟು ಮೇರಿ ಕೋಮ್, ಫುಟ್ಬಾಲ್ ಆಟಗಾರ ಸುನೀಲ್ ಛೇಟ್ರಿ, ಶೌರ್ಯ ಪ್ರಶಸ್ತಿ ವಿಜೇತೆ ಮಿಥಾಲಿ ಮಧುಮಿತಾ ಮತ್ತು ಬ್ಲೇಡ್ ರನ್ನರ್ ಮೇಜರ್ ಡಿಪಿ ಸಿಂಗ್ ಮೊದಲಾದ ಸೆಲಬ್ರಿಟಿಗಳೊಂದಿಗೆ 14ನೇ ಸೀಸನ್ ಆರಂಭಗೊಂಡಿದೆ.

Independence Day: ಗಣರಾಜ್ಯೋತ್ಸವಕ್ಕಿಂತ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಧ್ವಜ ಹಾರಾಟ ವಿಭಿನ್ನ ಯಾಕೆ?Independence Day: ಗಣರಾಜ್ಯೋತ್ಸವಕ್ಕಿಂತ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಧ್ವಜ ಹಾರಾಟ ವಿಭಿನ್ನ ಯಾಕೆ?

ಸೋಮವಾರ ಎರಡನೇ ಎಪಿಸೋಡ್ ಪ್ರಸಾರವಾಯಿತು. ಮುಂಬೈನ ದುಲಿಚಂದ್ ಹಾಟ್ ಸೀಟ್‌ನಲ್ಲಿ ಕೂತ ಪ್ರಶ್ನೆಗಳನ್ನು ಸರಾಗವಾಗಿ ಎದುರಿಸಿದರು. ಈಗಾಗಲೇ 50 ಲಕ್ಷ ರೂ ಗೆದ್ದಿದ್ದಾರೆ. ಇಂದು ಮಂಗಳವಾರ ಅವರ ಸ್ಪರ್ಧೆ ಮುಂದುವರಿಯಲಿದೆ.

ಧುಲಿಚಂದ್ ಅಗರ್ವಾಲ್ ಈ ಸೀಸನ್‌ನ ಕೆಬಿಸಿ ಮೊದಲ ಸ್ಪರ್ಧಿ. ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿರುವ ಅವರು ಮಧ್ಯಪ್ರದೇಶದ ದುರ್ಗ್‌ನಲ್ಲಿ ಅವರು ಕಾಲೇಜು ಪ್ರೊಫೆಸರ್ ಆಗಿದ್ದಾರೆ. 50 ಲಕ್ಷದವರೆಗೂ ಆಡಿರುವ ಅವರು ಎಲ್ಲಾ ಲೈಫ್‌ಲೈನ್ ಬಳಸಿಯಾಗಿದೆ. ಇಂದು ಮಂಗಳವಾರ ಪ್ರಸಾರವಾಗುವ ಮೂರನೇ ಎಪಿಸೋಡ್‌ನಲ್ಲಿ ಅವರು 75 ಲಕ್ಷ ರೂ ಪ್ರಶ್ನೆ ಹೇಗೆ ಎದುರಿಸುತ್ತಾರೆ ಎಂದು ಗೊತ್ತಾಗುತ್ತದೆ.

ಧುಲಿಚಂದ್ ಅಗರ್ವಾಲ್ 50 ಲಕ್ಷದವರೆಗೆ ಎಂಟು ಪ್ರಶ್ನೆಗಳನ್ನು ಎದುರಿಸಿ ಸರಿ ಉತ್ತರ ಕೊಟ್ಟಿದ್ಧಾರೆ. ಆ ಪ್ರಶ್ನೆಗಳ ವಿವರ ಇಲ್ಲಿದೆ.

ಪ್ರಶ್ನೆ 1: 40 ಸಾವಿರ ರೂ

ಪ್ರಶ್ನೆ 1: 40 ಸಾವಿರ ರೂ

ರಣತಂಬೂರ್‌ನ ರಾಣಿ ಎಂದು ಹೆಸರಾದ 'ಮಛಲಿ' ಯಾವ ಜಾತಿಯ ಪ್ರಾಣಿ?
ಎ. ಮೀನು
ಬಿ. ನವಿಲು
ಸಿ. ಜಿಂಕೆ
ಡಿ. ಹುಲಿ
ಉತ್ತರ: ಹುಲಿ

ಪ್ರಶ್ನೆ 2: 80 ಸಾವಿರ ರೂ
ಹಿಂಜ್, ಪೈವೊಟ್, ಹಾಗೂ ಬಾಲ್ ಮತ್ತು ಸಾಕೆಟ್, ಇವು ನಿಮ್ಮ ದೇಹದ ಯಾವ ಭಾಗಕ್ಕೆ ಸಂಬಂಧಿಸಿದವು.
ಎ. ಕೀಲು
ಬಿ. ಹೃದಯ ಕವಾಟ
ಸಿ. ನರ ಸಂಪರ್ಕ
ಡಿ. ನರ
ಉತ್ತರ: ಕೀಲು

ಎಲ್ಲಾ ಧರ್ಮಗಳು ಪ್ರೀತಿಸಲು ಕಲಿಸುತ್ತದೆ: ರಾಮಾಯಣ ರಸಪ್ರಶ್ನೆ ಗೆದ್ದ ಮುಸ್ಲಿಂ ವಿದ್ಯಾರ್ಥಿಗಳುಎಲ್ಲಾ ಧರ್ಮಗಳು ಪ್ರೀತಿಸಲು ಕಲಿಸುತ್ತದೆ: ರಾಮಾಯಣ ರಸಪ್ರಶ್ನೆ ಗೆದ್ದ ಮುಸ್ಲಿಂ ವಿದ್ಯಾರ್ಥಿಗಳು

ಪ್ರಶ್ನೆ 3: 1.6 ಲಕ್ಷ ರೂ

ಪ್ರಶ್ನೆ 3: 1.6 ಲಕ್ಷ ರೂ

ಜುಲೈ 2022ರಂದು ಪರಮೇಶ್ವರನ್ ಅಯ್ಯರ್ ಯಾವ ಸರಕಾರಿ ಸಂಸ್ಥೆಯ ಸಿಇಒ ಆದರು?
ಎ. ಮೇಕ್ ಇನ್ ಇಂಡಿಯಾ
ಬಿ. ನೀತಿ ಆಯೋಗ್
ಸಿ. ಡಿಜಿಟಲ್ ಇಂಡಿಯಾ
ಡಿ. ಸಿಬಿಐ
ಉತ್ತರ: ನೀತಿ ಆಯೋಗ್

ಪ್ರಶ್ನೆ 4: 3.2 ಲಕ್ಷ ರೂ
ಭಾರತೀಯ ನೌಕಾಪಡೆಯ ಈಸ್ಟರ್ನ್ ನೇವಲ್ ಕಮಾಂಡ್ ಯಾವ ನಗರದಲ್ಲಿದೆ?
ಎ. ಕೋಲ್ಕತ್ತಾ
ಬಿ. ಚೆನ್ನೈ
ಸಿ. ವಿಶಾಖಪಟ್ಟಣಂ
ಡಿ. ಭುವನೇಶ್ವರ
ಉತ್ತರ: ವಿಶಾಖಪಟ್ಟಣಂ

ಪ್ರಶ್ನೆ 5: 6.4 ಲಕ್ಷ ರೂ

ಪ್ರಶ್ನೆ 5: 6.4 ಲಕ್ಷ ರೂ

2022ರ ಟೋಕಿಯೋ ಒಲಿಂಪಿಕ್ಸ್‌ನ ಪದಕಗಳನ್ನು ತಯಾರಿಸಲು ಬಳಸಾದ ಲೋಹವನ್ನು ಯಾವುದರಿಂದ ಸಂಸ್ಕರಿಸಲಾಗಿದೆ?
ಎ. ಮರುಬಳಸಿದ ಎಲೆಕ್ಟ್ರಾನಿಕ್ಸ್
ಬಿ. ಹಳೆಯ ಕ್ರೀಡಾ ಸಲಕರಣೆ
ಸಿ. ಗುಜರಿಗೆ ಹಾಕಿದ ರೈಲ್ವೆ ಹಳಿ
ಡಿ. ಹಾರಾಟ ನಿಲ್ಲಿಸಿದ ವಿಮಾನಗಳು
ಉತ್ತರ: ಸಂಸ್ಕರಿಸಿದ ಎಲೆಕ್ಟ್ರಾನಿಕ್ಸ್

ಪ್ರಶ್ನೆ 6: 12.5 ಲಕ್ಷ ರೂ
ಮೇ 2022ರಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ದೇಶೀಯವಾಗಿ ಪರೀಕ್ಷಿಸಲಾಗಿರುವ 5ಜಿ ನೆಟ್ವರ್ಕ್ ಬಗ್ಗೆ ಯಾವ ಸಂಸ್ಥೆಯಲ್ಲಿ ಕರೆ ನೀಡಿದರು?
ಎ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್
ಬಿ. ಐಐಟಿ ಮದ್ರಾಸ್
ಸಿ. ಐಐಟಿ ಬಿಎಚ್‌ಯು
ಡಿ. ನ್ಯಾಷನಲ್ ಇನೋವೇಶನ್ ಫೌಂಡೇಶನ್
ಉತ್ತರ: ಐಐಟಿ ಮದ್ರಾಸ್

ಪ್ರಶ್ನೆ 7: 25 ಲಕ್ಷ ರೂ

ಪ್ರಶ್ನೆ 7: 25 ಲಕ್ಷ ರೂ

1887ರಲ್ಲಿ ಮುಂಬೈನ ಮಲಬಾರ್ ಹಿಲ್ ರಿಸರ್ವಾಯರ್ ಅನ್ನು ಕಟ್ಟಿದ್ದು ಯಾವ ಸಂಸ್ಥೆ?
ಎ. ಟಾಟಾ ಸನ್ಸ್
ಬಿ. ಶಾಪೂರ್‌ಜಿ ಪಾಲೋನ್‌ಜೀ ಗ್ರೂಪ್
ಸಿ. ವಾಡಿಯಾ ಗ್ರೂಪ್
ಡಿ. ಬಿರ್ಲಾ ಗ್ರೂಪ್
ಉತ್ತರ: ಶಾಪೂರ್‌ಜಿ ಪಲ್ಲೋನ್‌ಜಿ ಗ್ರೂಪ್

ಪ್ರಶ್ನೆ 8: 50 ಲಕ್ಷ ರೂ
1953ರಲ್ಲಿ ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು ಯಾವ ದೇಶದ ಸಂಸದೀಯ ಚುನಾವಣೆಯನ್ನು ನಡೆಸಿದರು?
ಎ. ನೇಪಾಳ
ಬಿ. ಅಫ್ಗಾನಿಸ್ತಾನ
ಸಿ. ಸುಡಾನ್
ಡಿ. ಸೌತ್ ಆಫ್ರಿಕಾ

ಈ ಎಂಟನೇ ಪ್ರಶ್ನೆ 50 ಲಕ್ಷ ರೂ ಬಹುಮಾನವನ್ನು ಹೊತ್ತಿತ್ತು. ಮೊದಲಿಗೆ ಧುಲಿಚಂದ್ ಅಗರ್ವಾಲ್ ಈ ಪ್ರಶ್ನೆಗೆ ಸುಡಾನ್ ಉತ್ತರ ಇರಬಹುದು ಎಂದು ಅಂದಾಜು ಮಾಡಿದ್ದರು. ಆದರೆ ಕೊನೆಗೆ ತಮಗೆ ಉಳಿದಿದ್ದ ಕೊನೆಯ ಲೈಫ್ ಲೈನ್ 50-50 ಬಳಸಲು ನಿರ್ಧರಿಸಿದರು. ಆಗ ಕಂಪ್ಯೂಟರ್ ಪರದೆಯಲ್ಲಿ ಸುಡಾನ್ ಮತ್ತು ಸೌತ್ ಆಫ್ರಿಕಾ ಮಾತ್ರ ಉಳಿದುಕೊಂಡವು. ಧುಲಿಚಂದ್ ಅಂತಿಮವಾಗಿ ತಮ್ಮ ಮೂಲ ಅಂದಾಜು ಮಾಡಿದ್ದ ಸುಡಾನ್ ಅನ್ನೇ ಉತ್ತರವಾಗಿ ಆಯ್ದುಕೊಂಡರು. ಅದು ಸರಿ ಉತ್ತರವಾಯಿತು.

ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ರಿಂದ 10ರವರೆಗೆ ಪ್ರಸಾರವಾಗುತ್ತದೆ. ಇಂದು ಮಂಗಳವಾರ ಧುಲಿಚಂದ್ 75 ಲಕ್ಷ ರೂ ಪ್ರಶ್ನೆಯೊಂದಿಗೆ ಸ್ಪರ್ಧೆ ಮುಂದುವರಿಸಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Kaun Banega Crorepati Season 14 has begun with bang, as first contestant Dhulichan Agarwal has won 50 lakh in his first. Still unbeaten he will continue the contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X