ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪಾಯ್ತು ಕ್ಷಮಿಸಿ: ಕಾಶ್ಮೀರ ಕಣಿವೆಯಲ್ಲಿ ಕಿಡಿ ಹೊತ್ತಿಸಿದ ಮಲಿಕ್ ಕೋರ್ಟಿನಲ್ಲಿ ಮಂಡಿಯೂರಿದ!

|
Google Oneindia Kannada News

ಕಳೆದ 2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಮೊಹಮ್ಮದ್ ಯಾಸಿನ್ ಮಲಿಕ್ ತಪ್ಪೊಪ್ಪಿಕೊಂಡಿದ್ದಾನೆ. ದೆಹಲಿ ನ್ಯಾಯಾಲಯದ ಎದುರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿದಂತೆ ಎಲ್ಲಾ ಆರೋಪಗಳಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸೆಕ್ಷನ್ 16ರ ಭಯೋತ್ಪಾದನಾ ಕೃತ್ಯ, 17ರ ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದು, 18ರ ಅಡಿ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ ನಡೆಸುವುದು ಮತ್ತು 20ರ ಪ್ರಕಾರ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ ನಡೆಸುವುದು. ಇದರ ಜೊತೆಗೆ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ 120-ಬಿರ ಕ್ರಿಮಿನಲ್ ಪಿತೂರಿ ಮತ್ತು 124-ಎ ದೇಶದ್ರೋಹದ ಗ್ಯಾಂಗ್ ಅಥವಾ ಸಂಸ್ಥೆ ಕಟ್ಟಿರುವುದು ಸೇರಿದಂತೆ ತನ್ನ ವಿರುದ್ಧ ಹೊರಿಸಲಾದ ಆರೋಪಗಳನ್ನು ತಾನು ವಿರೋಧಿಸುವುದಿಲ್ಲ ಎಂದು ಮಲಿಕ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

ಸಂಸ್ಕರಿಸಿದ ಎಣ್ಣೆಯ ಮೇಲಿನ ಸುಂಕವನ್ನು 2.5%ಗೆ ಇಳಿಸಿದ ಕೇಂದ್ರ ಸರಕಾರ ಸಂಸ್ಕರಿಸಿದ ಎಣ್ಣೆಯ ಮೇಲಿನ ಸುಂಕವನ್ನು 2.5%ಗೆ ಇಳಿಸಿದ ಕೇಂದ್ರ ಸರಕಾರ

ಮಲಿಕ್ ಮತ್ತು ಇತರರು ಭಯೋತ್ಪಾದಕತೆಗೆ ನಿಧಿ ಸಂಗ್ರಹಿಸಿರುವ ಬಗ್ಗೆ ಪ್ರಾಥಮಿಕ ಹಂತದಲ್ಲಿ ದೃಢಪಟ್ಟಿದೆ ಎಂದು ಈ ಹಿಂದೆ ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಹೇಳಿದ್ದು, ಮೇ 19ರಂದು ಆರೋಪಿಗಳ ವಿರುದ್ಧದ ವಾದಗಳನ್ನು ಆಲಿಸಲಿದ್ದಾರೆ. ಈ ಪ್ರಕರಣಗಳಲ್ಲಿ ಆರೋಪಿಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

 ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ನಿಧಿ ಸಂಗ್ರಹಿಸಿದ ಆರೋಪ

ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ನಿಧಿ ಸಂಗ್ರಹಿಸಿದ ಆರೋಪ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ನಿಧಿ ಸಂಗ್ರಹಿಸಲು ಯಾಸಿನ್ ಮಲಿಕ್ ಜಗತ್ತಿನಾದ್ಯಂತ ತಮ್ಮ ನೆಟ್ ವರ್ಕ್ ಹೊಂದಿದ್ದನು ಎಂದು ನ್ಯಾಯಾಲಯ ಹೇಳಿದೆ.

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ, ಶಬ್ಬೀರ್ ಶಾ, ಮಸರತ್ ಆಲಂ, ಮೊಹಮ್ಮದ್ ಯೂಸುಫ್ ಶಾ, ಅಫ್ತಾಬ್ ಅಹ್ಮದ್ ಶಾ, ನಯೀಮ್ ಖಾನ್, ಮೊಹಮ್ಮದ್ ಅಕ್ಬರ್ ಖಾಂಡೆ, ರಾಜಾ ಮೆಹ್ರಾಜುದ್ದೀನ್ ಕಲ್ವಾಲ್, ಬಶೀರ್ ಅಹ್ಮದ್ ಭಟ್, ಜಹೂರ್ ಅಹ್ಮದ್ ಶಾ ವತಾಲಿ, ಶಬೀರ್ ಅಹ್ಮದ್ ಶಾ, ಅಬ್ದುಲ್ ರಶೀದ್ ಶೇಖ್, ಮತ್ತು ನವಲ್ ಕಿಶೋರ್ ಕಪೂರ್ ಸೇರಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ನ್ಯಾಯಾಲಯವು ಔಪಚಾರಿಕ ಆರೋಪಗಳನ್ನು ಮಾಡಿದೆ.

 ಎರಡು ಉಗ್ರ ಸಂಘಟನೆಗಳ ಮುಖ್ಯಸ್ಥರ ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆ

ಎರಡು ಉಗ್ರ ಸಂಘಟನೆಗಳ ಮುಖ್ಯಸ್ಥರ ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆ

ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷಿತ ಅಪರಾಧಿಗಳು (ಪಿಒ) ಎಂದು ಘೋಷಿಸಲ್ಪಟ್ಟಿರುವ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಈವರೆಗೂ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರಕಾರ, "ಪಾಕಿಸ್ತಾನ ಅಥವಾ ಅದರ ಏಜೆನ್ಸಿಗಳ ಜೊತೆಗೆ ಆರೋಪಿಗಳು ಒಂದೇ ಗುರಿಯನ್ನು ಹಂಚಿಕೊಳ್ಳುತ್ತಾರೆ. ಆ ಗುರಿಯನ್ನು ಸಾಧಿಸಲು ಮತ್ತು ಭಯೋತ್ಪಾದಕ ನಿಧಿಗೆ ಬಳಸಬೇಕಾದ ವಿಧಾನಗಳ ಬಗ್ಗೆ ಒಪ್ಪಂದವಿದೆ" ಎಂದು ನ್ಯಾಯಾಧೀಶರು ಈ ಹಿಂದೆ ಹೇಳಿದ್ದರು.

2022ರ ಮಾರ್ಚ್‌ನಲ್ಲಿ ಈ ಪ್ರಕರಣದ ಆರೋಪಗಳನ್ನು ರೂಪಿಸಲು ಆದೇಶಿಸಲಾಗಿತ್ತು. ಗಡಿಯಾಚೆಗಿನ ಐಎಸ್ಐ ರೀತಿಯ ಪಾಕಿಸ್ತಾನದ ಏಜೆನ್ಸಿಗಳು ಎಲ್ಲ ಪಿತೂರಿ ಮತ್ತು ಸಂಚುಗಳನ್ನು ನಿರ್ವಹಿಸುತ್ತಿವೆ. ಆ ನಿರ್ವಾಹಕ ನಿರ್ದೇಶನಗಳ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತೆಯನ್ನು ಅಂತಿಮ ಗುರಿಯಾಗಿ ಇಟ್ಟುಕೊಂಡು ಹಿಂಸಾಚಾರ, ರಕ್ತಪಾತವನ್ನು ನಡೆಸಲಾಗುತ್ತಿದೆ ಎಂದು ದೂಷಿಸಲಾಗಿದೆ.

 ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹ

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹ

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಕ್ಕಾಗಿಯೇ ಪಾಕಿಸ್ತಾನ ಮತ್ತು ಅದರ ಏಜೆನ್ಸಿಗಳ ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ. ದುಷ್ಕೃತ್ಯಗಳನ್ನು ಮಾಡುವುದಕ್ಕೆ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಸಹ ಬಳಸಲಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಅಂತಾರಾಷ್ಟ್ರೀಯ ಘೋಷಿತ ಭಯೋತ್ಪಾದಕರು ಹಾಗೂ ಆರೋಪಿ ಹಫೀಜ್ ಸಯೀದ್‌ನಿಂದಲೂ ಹಣ ಕಳುಹಿಸಲಾಗಿದೆ.

ಭಾರತದ ಒಕ್ಕೂಟದಿಂದ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸುವ ಉದ್ದೇಶದಿಂದ ಕ್ರಿಮಿನಲ್ ಸಂಚು ರೂಪಿಸಲಾಗಿದೆ. ಈ ಮೂಲ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿಯೇ ಕೆಲವು ಉಗ್ರಕೃತ್ಯಗಳು ಪಿತೂರಿಯನ್ನು ನಡೆಸುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.

 ಉಗ್ರ ಕೃತ್ಯಗಳಿಗೆ ನಿಧಿ ಸಂಗ್ರಹಣೆಯ ಹೊಣೆ ಹೊತ್ತಕೊಂಡವರು?

ಉಗ್ರ ಕೃತ್ಯಗಳಿಗೆ ನಿಧಿ ಸಂಗ್ರಹಣೆಯ ಹೊಣೆ ಹೊತ್ತಕೊಂಡವರು?

ಈ ಭಯೋತ್ಪಾದಕ ನಿಧಿಯ ಹರಿವಿನ ಪ್ರಮುಖ ಮಾರ್ಗಗಳಲ್ಲಿ ಆರೋಪಿ ಜಹೂರ್ ಅಹ್ಮದ್ ಶಾ ವತಾಲಿ ಒಬ್ಬನಾಗಿದ್ದಾನೆ. ಈ ನಿಧಿ ಸಂಗ್ರಹಣೆ ಹಾದಿಯನ್ನು ಆರೋಪಿ ನವಲ್ ಕಿಶೋರ್ ಕಪೂರ್ ಸುಗಮಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ ಎಂದುಹೇಳಲಾಗಿದೆ. ರಾಷ್ಟ್ರೀಯ ತನಿಖಾ ತಂಡ (NIA)ದ ಪ್ರಕಾರ ಲಷ್ಕರ್-ಎ-ತೈಬಾ (LeT), ಹಿಜ್ಬುಲ್-ಮುಜಾಹಿದ್ದೀನ್ (HM), ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF), ಜೈಶ್-ಎ-ಮೊಹಮ್ಮದ್ (JeM) ಮುಂತಾದ ವಿವಿಧ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ಐಎಸ್ಐ ಬೆಂಬಲದ ಮೂಲಕ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡುವ ಮೂಲಕ ಕಣಿವೆಯಲ್ಲಿ ಹಿಂಸಾಚಾರವನ್ನು ನಡೆಸಿದೆ.

Recommended Video

ಪಫ್ಸ್ ಖರೀದಿ ಮಾಡೋಕೆ ಸೆಕ್ಯೂರಿಟಿ ಇಲ್ಲದೆ ಹೊರಟ ವಿರಾಟ್ ಕೊಹ್ಲಿ!! | Oneindia Kannada
 ಪ್ರತ್ಯೇಕತಾವಾದಿಗಳಿಗೂ ಉಗ್ರರಿಗೂ ಇದೆಯಾ ನಂಟು?

ಪ್ರತ್ಯೇಕತಾವಾದಿಗಳಿಗೂ ಉಗ್ರರಿಗೂ ಇದೆಯಾ ನಂಟು?

ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ರಾಜಕೀಯ ರಂಗವನ್ನು ನೀಡುವ ಉದ್ದೇಶದಿಂದಲೇ 1993ರಲ್ಲಿ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ (ಎಪಿಹೆಚ್ಸಿ) ಅನ್ನು ರಚಿಸಲಾಯಿತು ಎಂದು ಆರೋಪಿಸಲಾಗಿದೆ. ಜಮಾತ್-ಉದ್-ದವಾಹ್‌ನ ಅಮೀರ್ ಹಫೀಜ್ ಮುಹಮ್ಮದ್ ಸಯೀದ್ ಮತ್ತು ಹುರಿಯತ್ ಕಾನ್ಫರೆನ್ಸ್‌ನ ಸದಸ್ಯರು ಸೇರಿದಂತೆ ಪ್ರತ್ಯೇಕತಾವಾದಿ ಮತ್ತು ಪ್ರತ್ಯೇಕತಾವಾದಿ ನಾಯಕರು ಉಗ್ರರೊಂದಿಗೆ ಸಕ್ರಿಯರಾಗಿ ಶಾಮೀಲಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂಷಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂದು ನ್ಯಾಯಾಲಯಕ್ಕೆ ಎನ್ಐಎ ಸಲ್ಲಿಸಿದ ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ಇದನ್ನು ಮಾಡಲಾಗಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ, ವ್ಯವಸ್ಥಿತವಾಗಿ ಶಾಲೆಗಳಿಗೆ ಬೆಂಕಿ ಹಚ್ಚುವುದರ ಮೂಲಕ ಹಾನಿ ಮಾಡುವುದು. ಭಾರತದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವನ್ನುಂಟು ಮಾಡುವ ನಿಟ್ಟಿನಲ್ಲಿ ಸಂಚು ಪೂಪಿಸಲಾಗುತ್ತಿದೆ ಎಂದು ಎನ್ಐಎ ದೂಷಿಸಿದೆ.

English summary
Kashmiri Separatist leader Mohammad Yasin Malik pleaded guilty to all the charges before a Delhi court in a case related to alleged terrorism and secessionist activities that disturbed the Kashmir valley in 2017, court sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X