ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮುಕಾಶ್ಮೀರದಲ್ಲಿ 43 ಲಕ್ಷ ರೂ. ಬಿರಿಯಾನಿ 'ಬಿಲ್ ವಿದ್ಯೆ' ತೋರಿಸಿದವರ ವಿರುದ್ಧ ಎಫ್‌ಐಆರ್

|
Google Oneindia Kannada News

ದೇಶದಲ್ಲಿ ಇದುವರೆಗೆ ನಾವು ಹಲವು ಅನೇಕ ಹಗರಣಗಳು ನಡೆದಿವೆ ಎಂದು ನಾವು ಕೇಳಿದ್ದೇವೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿರಿಯಾನಿ ಹಗರಣ ನಡಿದಿದೆ. ಇದೀಗ ಇಂತಹದೊಂದು ಹಗರಣವು ಬಯಲಿಗೆ ಬಂದಿದೆ. ಹೌದು ರುಚಿಕರವಾದ ಬಿರಿಯಾನಿ ತಿಂದು ತೇಗಿದ್ದಾರೆ ಎನ್ನಲಾದ ಈ ಘಟನೆ ಬೆಳಕಿಗೆ ಬಂದಿದೆ. ಕಾಶ್ಮೀರದಲ್ಲಿ ಜನರು ಇದನ್ನು ಕೇಳಿ ಎಲ್ಲರೂ ಅಚ್ಚರಿ ಪಡುವಂತಾಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ಬಿರಿಯಾನಿ ಹಗರಣ ಹೊರಬಿದ್ದಿದೆ. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿಕೊಂಡಿದೆ.

ಸರ್ಕಾರದ ಹಣವನ್ನು ಹೇಗೆ ಪೋಲು ಮಾಡಬಹುದು ಮತ್ತು ಯಾವ ವಸ್ತುಗಳಲ್ಲಿ ವ್ಯರ್ಥವಾಗಬಹುದು ಎಂಬುದಕ್ಕೆ ಆಶ್ಚರ್ಯಕರ ಉದಾಹರಣೆಯೊಂದು ಜಮ್ಮು ಮತ್ತು ಕಾಶ್ಮೀರದಿಂದ ಹೊರಬಿದ್ದಿದೆ. ಇಲ್ಲಿನ ಕ್ರೀಡಾ ಅಧಿಕಾರಿಗಳು ಆಟಗಾರರ ಮೂಲ ಸೌಕರ್ಯ ಹೆಚ್ಚಿಸುವ ಸಲುವಾಗಿ ಪಡೆದ 43 ಲಕ್ಷ ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಕಬಳಿಸಿದ್ದಾರೆ. ಇದೀಗ ಈ ವಿಷಯ ಬೆಳಕಿಗೆ ಬಂದಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 43 ಲಕ್ಷ ರೂ. ಬಿರಿಯಾನಿ ಹಗರಣ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದಾರೆ.

 45 ಲಕ್ಷ ರೂ. ಮೌಲ್ಯದ ಬಿರಿಯಾನಿ

45 ಲಕ್ಷ ರೂ. ಮೌಲ್ಯದ ಬಿರಿಯಾನಿ

ವಾಸ್ತವವಾಗಿ ಎಸಿಬಿ ಈ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಫುಟ್ಬಾಲ್ ಅಸೋಸಿಯೇಷನ್ ​​(ಜೆಕೆಎಫ್ಎ) ಅಧಿಕಾರಿಗಳ ವಿರುದ್ಧ ದಾಖಲಿಸಿದೆ. ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್‌ನಿಂದ ಪಡೆದ 45 ಲಕ್ಷ ರೂಪಾಯಿಯನ್ನು ಫುಟ್ ಬಾಲ್ ಸಂಸ್ಥೆಯ ಪದಾಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಎಸಿಬಿ ಅಧಿಕಾರಿಗಳ ಪ್ರಕಾರ, ಜೆಕೆಎಫ್‌ಎ ಮಾಜಿ ಅಧ್ಯಕ್ಷ ಜಮೀರ್ ಅಹ್ಮದ್ ಠಾಕೂರ್, ಖಜಾಂಚಿ ಎಸ್‌ಎಸ್ ಬಂಟಿ, ಮುಖ್ಯ ಕಾರ್ಯನಿರ್ವಾಹಕ ಎಸ್‌ಎ ಹಮೀದ್, ಜಿಲ್ಲಾ ಅಧ್ಯಕ್ಷ ಜೆಕೆಎಫ್‌ಎ ಫಯಾಜ್ ಅಹ್ಮದ್ ಮತ್ತು ಇತರರು ಸೇರಿದಂತೆ ಜೆ & ಕೆ ಫುಟ್‌ಬಾಲ್ ಅಸೋಸಿಯೇಷನ್‌ನ ಸದಸ್ಯರು ನಕಲಿ ಬಿಲ್‌ಗಳನ್ನು ತಯಾರಿಸಿ ಹಣವನ್ನು ವಂಚಿಸಿದ್ದಾರೆ.

 ರೆಸ್ಟೋರೆಂಟ್‌ಗಳ ಬಿರಿಯಾನಿ ಬಿಲ್‌ ನಕಲಿ

ರೆಸ್ಟೋರೆಂಟ್‌ಗಳ ಬಿರಿಯಾನಿ ಬಿಲ್‌ ನಕಲಿ

ಸಿಕ್ಕಿರುವ ಮಾಹಿತಿ ಪ್ರಕಾರ ಖೇಲೋ ಇಂಡಿಯಾ ಹಾಗೂ ಮುಫ್ತಿ ಸ್ಮಾರಕ ಗೋಲ್ಡ್ ಕಪ್ ನಂತಹ ಟೂರ್ನಿಗಳ ಫುಟ್ ಬಾಲ್ ಪಂದ್ಯಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲು ಹಣ ನೀಡಲಾಗಿದೆ. ಈ ಪಂದ್ಯಗಳ ಆಯೋಜನೆಯಲ್ಲಿ ಜಿಲ್ಲಾ ತಂಡಕ್ಕೆ ಬಿರಿಯಾನಿ ನೀಡುವ ಹೆಸರಿನಲ್ಲಿ ಫುಟ್ಬಾಲ್ ಸಂಸ್ಥೆಯ ಪದಾಧಿಕಾರಿಗಳು ಮುಘಲ್ ದರ್ಬಾರ್, ಪೊಲೊ ವ್ಯೂ ಶ್ರೀನಗರದಂತಹ ರೆಸ್ಟೋರೆಂಟ್‌ಗಳ 43,06,500 ರೂ. ಬಿಲ್‌ ತಯಾರಿಸಲಾಗಿದೆ ಆದರೆ ಇಡೀ ಕಾಶ್ಮೀರದ ಯಾವುದೇ ಜಿಲ್ಲೆಯಲ್ಲಿ ಯಾವುದೇ ತಂಡಕ್ಕೆ ತಿನ್ನಲು ಬಿರಿಯಾನಿ ನೀಡಿಲ್ಲ ಎಂದು ತನಿಖೆಯಲ್ಲಿ ಕಂಡುಬಂದಿದೆ.

 ದೂರಿನ ಮೇರೆಗೆ ತನಿಖೆ

ದೂರಿನ ಮೇರೆಗೆ ತನಿಖೆ

ವಿಷಯ ಬೆಳಕಿಗೆ ಬಂದ ನಂತರ ಎಸಿಬಿ ಜೆಕೆ, ಪಿಸಿ ಆಕ್ಟ್ 2006ರ ಸೆಕ್ಷನ್ 5(2) ಮತ್ತು ಸೆಕ್ಷನ್ 465, 46 ರ ಸೆಕ್ಷನ್ 5(1)(ಸಿ), 5(1)(ಡಿ) 30/22 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಎಸಿಬಿ ಅಧಿಕಾರಿಗಳ ಪ್ರಕಾರ, ಸೋಪೋರ್‌ನ ಮುಷ್ತಾಕ್ ಅಹ್ಮದ್ ಭಟ್ ನೀಡಿದ ದೂರಿನ ನಂತರ ಬ್ಯೂರೋ ತನಿಖೆ ನಡೆಸಿತು. ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಮತ್ತು ಇತರ ಸರ್ಕಾರಿ ಮತ್ತು ಅರೆ ಸರ್ಕಾರಿ ಏಜೆನ್ಸಿಗಳು ನೀಡಿದ ಹಣವನ್ನು ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದು ಇನ್ನೂ ತನಿಖೆಯಾಗಬೇಕಿದೆ.

 ಒಂದೇ ವ್ಯಕ್ತಿಯ ಕೈ ಬರಹ

ಒಂದೇ ವ್ಯಕ್ತಿಯ ಕೈ ಬರಹ

ಜಮ್ಮು ಮತ್ತು ಕಾಶ್ಮೀರ ಫುಟ್ಬಾಲ್ ಅಸೋಸಿಯೇಷನ್ ​​ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಈ ಹಣವನ್ನು ಬಳಸಿದ್ದು ಈ ತನಿಖೆಯಲ್ಲಿ ಕಂಡುಬಂದಿದೆ. ಈ ಎಲ್ಲಾ ಬಿಲ್‌ಗಳು ಒಂದೇ ವ್ಯಕ್ತಿಯ ಕೈಬರಹವನ್ನು ಹೊಂದಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಬಂಧನವಾಗಿಲ್ಲ, ಆದರೆ ಈ ಪ್ರಕರಣವು ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಬ್ಲಾಕ್‌ಮೇಲ್ ಪ್ರಕರಣವನ್ನು ಬಹಿರಂಗಪಡಿಸಿದೆ.

English summary
Jammu and Kashmir biriyani scam check here more details, Kashmir Biriyani Scam: FIR filed in Rs 43 lakh biriyani scam case, Read more what is the full case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X