ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊನ್ನಾವರ: ಶ್ರೀಧರರು ಭೇಟಿ ನೀಡಿದ್ದ ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವಾಲಯ

|
Google Oneindia Kannada News

ಕಾರವಾರ, ಫೆಬ್ರವರಿ 4: ಶ್ರೀ ಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವಸ್ಥಾನ ಯಲಗುಪ್ಪಾವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದಲ್ಲಿದೆ. ಶ್ರೀ ಕ್ಷೇತ್ರದ ಧನ್ವಂತರೀ ಮಹಾವಿಷ್ಣು ದೇವರ ವಿಗ್ರಹವು ಕಪ್ಪುಶಿಲೆಯಿಂದ ಕೆತ್ತಲ್ಪಟ್ಟಿದ್ದು, ಒಂದು ಕೈಯಲ್ಲಿ ಶಂಖ ಹಾಗೂ ಇನ್ನೊಂದು ಕೈಯಲ್ಲಿ ದಂಡ ಹಿಡಿದಿದ್ದಾನೆ. ಪೀತಾಂಬರ ದಾರಿಯಾದ ಶ್ರೀ ದೇವರ ಕುತ್ತಿಗೆಯಲ್ಲಿ ಮಾಣಿಕ್ಯದ ಹಾರವಿದ್ದು ಕಮಲ ದಳಗಳ ಮೇಲೆ ಆಸೀನರಾಗಿದ್ದಾರೆ.

ಶ್ರೀ ಶ್ರೀಧರರು ಖುದ್ದಾಗಿ ಭೇಟಿ ನೀಡಿ ಈ ಕ್ಷೇತ್ರದಲ್ಲಿ ಸಾಕ್ಷಾತ್ ಮಹಾವಿಷ್ಣುವೇ ನೆಲೆಸಿದ್ದು, ಇಲ್ಲಿನ ಪುಷ್ಕರಣೀಯಲ್ಲಿ ತೀರ್ಥಸ್ನಾನ ಮಾಡಿ ದೇವರಲ್ಲಿ ಪೂಜಾ ಕೈಂಕರ್ಯ ಹಾಗೂ ದೇವರ ಸೇವೆಗಳನ್ನು ಮಾಡಿದವರ ಸಕಲ ರೋಗಗಳೂ ದೂರವಾಗಿ ಆರೋಗ್ಯ ಪೂರ್ಣರಾಗಿ ಜೀವನ ನಡೆಸುತ್ತಾರೆ ಎಂಬುದಾಗಿ ತಮ್ಮ ಭಕ್ತ ಕೋಟಿಗೆ ತಿಳಿಸಿದ್ದಾರೆ.

ಅಂಜುದೀವ್ ದ್ವೀಪಕ್ಕೆ ಪ್ರವೇಶ ನೀಡಲು ಗೋವನ್ನರ ಒತ್ತಾಯಅಂಜುದೀವ್ ದ್ವೀಪಕ್ಕೆ ಪ್ರವೇಶ ನೀಡಲು ಗೋವನ್ನರ ಒತ್ತಾಯ

ದೇಹದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಿಂದು ಪುರಾಣ ಹಾಗೂ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತಹ ಆಯುರ್ವೇದ ಶಾಸ್ತ್ರವು ಅನೇಕ ದೇಶಗಳಿಂದ ಮಾನ್ಯತೆ ಪಡೆದಿದ್ದು, ಪ್ರಕೃತಿ ಸಹಜವಾದ ದೇಹದ ಎಲ್ಲಾ ರೋಗಗಳಿಗೆ ನೀಡುವ ಚಿಕಿತ್ಸಾಶಾಸ್ತ್ರವಾಗಿದೆ. ಶ್ರೀ ದೇವ ಧನ್ವಂತರಿಯು ಸಾಕ್ಷಾತ್ ವಿಷ್ಣುವೇ ಆಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ದೇವನಾಗಿದ್ದಾನೆ. ಶ್ರೀ ದೇವರನ್ನು ದೇವತಾ ಪುರಾಣಗಳಲ್ಲಿ ದೇವತೆಗಳ ವೈದ್ಯ, ಆಯುರ್ವೇದದ ದೇವ ಎಂಬ ಬಿರುದುಗಳೊಂದಿಗೆ ಕೊಂಡಾಡಿದ್ದಾರೆ. ಇಂದಿಗೂ ನಾವು ಆರೋಗ್ಯಕ್ಕಾಗಿ ಶ್ರೀ ಧನ್ವಂತರಿಯನ್ನು ಆರಾಧಿಸುವ ಹಾಗೂ ಪೂಜಿಸುವ ಪದ್ಧತಿಯಿದೆ.

 Karwar: Shrikshetra Dhanwantari Mahavishnu Temple Of Honnavar

ಸರ್ವರೋಗಗಳಿಗೂ ಆಯುರ್ವೇದದಲ್ಲಿ ಚಿಕಿತ್ಸೆಯಿದೆ ಎಂಬಂತೆಯೇ, ಎಲ್ಲಾ ತರಹದ ಔಷಧಗಳನ್ನು ಶ್ರೀದೇವರಲ್ಲಿ ಪ್ರಾರ್ಥನೆಗಳೊಂದಿಗೆ ಅಭಿಮಂತ್ರಿಸಿ ರೋಗಿಗಳಿಗೆ ನೀಡಿ ಗುಣಪಡಿಸಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಡಯಾಬಿಟೀಸ್, ಕಿಡ್ನಿ ಸ್ಟೋನ್ (ಮುತ್ರಾಶಯದಲ್ಲಿ ಕಲ್ಲು) ಹಾಗೂ ಹಲವು ವಿಧಗಳ ಚರ್ಮರೋಗಗಳಿಗೆ ಔಷಧೋಪಚಾರ ಮಾಡಿ ಗುಣಪಡಿಸಲಾಗುತ್ತದೆ. ಆಸಿಡಿಟಿ, ಗ್ಯಾಸ್ಟ್ರಿಕ್ (ಅಜೀರ್ಣ) ನಿಂದಾಗುವ ಆರೋಗ್ಯ ಸಮಸ್ಯೆಗೆ ಶ್ರೀಕ್ಷೇತ್ರದಲ್ಲಿ ಕೊಡಲಾಗುವ ಕಷಾಯ ಅತ್ಯಂತ ಜನಪ್ರಿಯ ಹಾಗೂ ಪ್ರಭಾವಶಾಲಿಯಾಗಿದೆ.

ತೀಳ್ಮಾತಿ ತೀರದಲ್ಲಿ ಬರಿದಾಗುತ್ತಿದೆ ಕಪ್ಪು ಮರಳು; ಅಕ್ರಮವಾಗಿ ಒಯ್ಯುತ್ತಿರುವ ಪ್ರವಾಸಿಗರುತೀಳ್ಮಾತಿ ತೀರದಲ್ಲಿ ಬರಿದಾಗುತ್ತಿದೆ ಕಪ್ಪು ಮರಳು; ಅಕ್ರಮವಾಗಿ ಒಯ್ಯುತ್ತಿರುವ ಪ್ರವಾಸಿಗರು

ಚಮತ್ಕಾರ ಎಂಬತೆಯೇ ಯಾವುದೇ ರಾಸಾಯನಿಕ ಸಂರಕ್ಷಕಗಳನ್ನೂ ಹಾಕದೆ ಇರುವ ಈ ಔಷಧವನ್ನು ಎಷ್ಟೇ ವರ್ಷಗಳ ಕಾಲ ಹಾಗೆಯೇ ಇಟ್ಟರೂ ಕೆಡದೇ ತನ್ನ ಗುಣವನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ. ಸ್ತ್ರಿಯರಿಗೆ ಋತುಚಕ್ರ ಅಥವಾ ಮುಟ್ಟಿನ ಸಮಯದಲ್ಲಿ ಹಾಗೂ ಇತರೆ ಕಾರಣಗಳಿಂದಾಗಿ ಬರುವ ಹೊಟ್ಟೆನೋವಿಗೂ ಈ ಮೇಲಿನ ಕಷಾಯ ರೂಪದ ಔಷಧವು ದಿವ್ಯಾಮೃತವಾಗಿದೆ. ಕ್ಷೇತ್ರದ ಆಡಳಿತ ಮಂಡಳಿಯವರು ನಿಯೋಜಿಸಿದ ಪರಂಪರಾಗತ ವೈದೈರ ಮೂಲಕ ಕ್ಷೇತ್ರಕ್ಕೆ ಬಂದ ರೋಗಿಗಳಿಗೆ ಔಷಧೋಪಚಾರಗಳನ್ನು ಮಾಡಲಾಗುತ್ತದೆ ಹಾಗೂ ಬಹುತೇಕ ಎಲ್ಲಾ ತರಹದ ಔಷಧಗಳು ಪ್ರಾಕೃತಿಕ ಧತ್ತವಾಗಿ ಸಿಗುವ ಗಿಡ ಮೂಲಿಕೆಗಳಿಂದ ತಯಾರು ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಿ. ಕೆ. ಹೆಗಡೆಯವರನ್ನು ಸಂಪರ್ಕಿಸಿ: 09731487135/ 09480604040

ಸಂಪರ್ಕ ಮಾಹಿತಿ:

ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ ಆಡಳಿತ ಮಂಡಳಿ

ಯಲಗುಪ್ಪಾ, ಪೋ.ಖರ್ವಾ, ತಾ.ಹೊನ್ನಾವರ (ಉ.ಕ)

ರಸ್ತೆ ಸಾರಿಗೆ ಸೌಲಭ್ಯ

ಬೆಂಗಳೂರು > ಶಿವಮೊಗ್ಗ > ಸಾಗರ > ಗೇರುಸೊಪ್ಪಾ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ

ಬೆಂಗಳೂರು > ಹಾವೇರಿ > ಶಿರಸಿ > ಕುಮಟಾ > ಹೊನ್ನಾವರ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ

ಮಂಗಳೂರು > ಉಡುಪಿ > ಭಟ್ಕಳ > ಹೊನ್ನಾವರ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ

ಹುಬ್ಬಳ್ಳಿ > ಶಿರಸಿ > ಕುಮಟಾ > ಹೊನ್ನಾವರ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ

ಗೋವಾ > ಕಾರವಾರ > ಕುಮಟಾ > ಹೊನ್ನಾವರ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ

English summary
Sri Kshetra Dhanwantari Mahavishnu Temple is located in the Kharwa village of Honnavar taluk in the Uttara Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X