ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಬಂಧು ಯೋಜನೆ: 12ಕ್ಕೆ ಕುಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳು

|
Google Oneindia Kannada News

ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಗಳಿಗೆ ಹಾಗೂ ಆರೋಗ್ಯ ಬಂಧು ಯೋಜನೆ ಮುಂದುವರಿಸಲು ಈ ಆರೋಗ್ಯ ಯೋಜನೆಯ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಸೀಮಿತಗೊಳಿಸಿದೆ. ಆರೋಗ್ಯ ಬಂಧು ಯೋಜನೆಯ ಮಾರ್ಗಸೂಚಿಗಳನ್ನು ಮಾರ್ಪಡಿಸಿರುವ ರಾಜ್ಯ ಸರ್ಕಾರ ಹೆದ್ದಾರಿಯಿಂದ 15 ಕಿ ಮೀ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯೋಜನೆಯ ಮುಂದುವರಿಕೆಯನ್ನು ಸೀಮಿತಗೊಳಿಸಿ ಪಿಎಚ್‌ಸಿ ಕೇಂದ್ರಗಳನ್ನು 12ಕ್ಕೆ ಇಳಿಸಿದೆ.

ಸೆಪ್ಟೆಂಬರ್ 2021ರಲ್ಲಿ ಆರೋಗ್ಯ ಬಂಧು ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ರಚಿಸಲಾದ ಸಮಿತಿಯ ಶಿಫಾರಸುಗಳ ಮೇರಿಗೆ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಿಕೊಂಡಿರುವ ಸರ್ಕಾರ ಈ ಹಿಂದೆ ಈ ಯೋಜನೆಗಳಿಗೆ ಮುಂದುವರಿಕೆಗೆ ಅವಕಾಶವನ್ನು ನೀಡುತ್ತಿತ್ತು ಆದರೆ, ಇನ್ನು ಎನ್‌ಜಿಒ (ಸರಕಾರೇತರ ಸಂಘ ಸಂಸ್ಥೆಗಳು) ಈ ಯೋಜನೆಯಲ್ಲಿ ಭಾಗಿಯಾಗತ್ತಿದ್ದವು ಈಗ ಸರ್ಕಾರ ಆರೋಗ್ಯ ಬಂಧು ಯೋಜನೆಯನ್ನು 12 ಪಿಎಚ್‌ಸಿ ಕೇಂದ್ರಗಳಿಗೆ ಸೀಮಿತಗೊಳಿಸಲಾಗಿದೆ.

ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸರ್ಕಾರವು ಮಾರ್ಪಾಡುಗಳನ್ನು ಸೂಚಿಸುತ್ತದೆ ಮತ್ತು ಯೋಜನೆಯನ್ನು 12 ಪಿಎಚ್‌ಸಿಗಳಿಗೆ ಸೀಮಿತಗೊಳಿಸುವ ಪರಿಷ್ಕರಣೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಉಳಿದ ಪಿಎಚ್‌ಸಿಗಳೊಂದಿಗಿನ ಒಪ್ಪಂದವು ಅವುಗಳ ಅಸ್ತಿತ್ವದಲ್ಲಿರುವ ಒಪ್ಪಂದದ ಅವಧಿಯು ಮುಕ್ತಾಯಗೊಂಡ ನಂತರ ರದ್ದುಗೊಳ್ಳುತ್ತದೆ ಎಂದು ಪರಿಗಣಿಸಲಾಗುತ್ತದೆ ಎಂದು ರಾಜ್ಯ ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾರ್ಗಸೂಚಿಗಳನ್ನು ಮಾರ್ಪಡಿಸಿ ಆದೇಶ ಹೊರಡಿಸಿದೆ.

ಏನಿದು ‘ಆರೋಗ್ಯ ಬಂಧು’ಯೋಜನೆ?

ಏನಿದು ‘ಆರೋಗ್ಯ ಬಂಧು’ಯೋಜನೆ?

'ಆರೋಗ್ಯ ಬಂಧು' ಯೋಜನೆಯನ್ನು ರಾಜ್ಯದ 39 ತಾಲ್ಲೂಕುಗಳಲ್ಲಿ ತನ್ನ 52 ಪಿಎಚ್‌ಸಿಗಳನ್ನು ನಡೆಸಲು ಸರ್ಕಾರೇತರ ಸಂಸ್ಥೆಗಳು, ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಪಾಲುದಾರಿಕೆಗಾಗಿ ಆರೋಗ್ಯ ಇಲಾಖೆಯು ಮೇ 2011ರಲ್ಲಿ ಪ್ರಾರಂಭಿಸಿತು. ನಂತರ ನವೆಂಬರ್ 2016ರಲ್ಲಿ ಸರ್ಕಾರವು 27 ಪಿಎಚ್‌ಸಿಗಳನ್ನು ಹಿಂತೆಗೆದುಕೊಂಡಿತು ಮತ್ತು ಉಳಿದ 25 ಪಿಎಚ್‌ಸಿಗಳನ್ನು ಸಾರ್ವಜನಿಕ-ಖಾಸಗಿ-ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ನಡೆಸಲು ಮಾರ್ಗಸೂಚಿಗಳನ್ನು ಪರಿಷ್ಕರಿಸಿತು.

ಕ್ರಮೇಣ ಪಿಎಚ್‌ಸಿ ಕೇಂದ್ರಗಳನ್ನು ಕಡಿಮೆ ಬಂದವು

ಕ್ರಮೇಣ ಪಿಎಚ್‌ಸಿ ಕೇಂದ್ರಗಳನ್ನು ಕಡಿಮೆ ಬಂದವು

ರಾಜ್ಯದ ಆರೋಗ್ಯ ಸಚಿವರು ಆಗಿದ್ದ ಯುಟಿ ಖಾದರ್ ಅವರು 2006ರಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಗಳಿಗೆ ಆರೋಗ್ಯ ಬಂಧು ಯೋಜನೆ ಮುಂದುವರಿಸಲು ಅವಕಾಶ ನೀಡುವುದಾಗಿ ಹೇಳಿ ಕ್ರಮೇಣ ಈ ಯೋಜನೆಯ ಪಿಎಚ್‌ಸಿ ಕೇಂದ್ರಗಳನ್ನು ಕಡಿಮೆ ಮಾಡಿಕೊಂಡು ಬರಲಾಯಿತು ಸದ್ಯ ಆರೋಗ್ಯ ಸಚಿವರಾಗಿರುವ ಡಾ. ಕೆ ಸುಧಾಕರ್ ಆಡಳಿತದಲ್ಲಿ 12ಕ್ಕೆ ಕುಸಿದಿವೆ. ಇನ್ನು ಆರೋಗ್ಯ ಸಚಿವ ಕೆ. ಸುಧಾಕರ್ ಅವರ ನಿರ್ದೇಶನದ ಮೇರೆಗೆ ಅಸ್ತಿತ್ವದಲ್ಲಿರುವ ಆರೋಗ್ಯ ಬಂಧು ಯೋಜನೆಯ ಉಪಯುಕ್ತತೆಯನ್ನು ಪರಿಶೀಲಿಸಲಾಗಿದೆ ಎಂದು ರಾಜ್ಯ ಆರೋಗ್ಯ ಆಯುಕ್ತ ರಂದೀಪ್ ಡಿ ಹೇಳಿದ್ದಾರೆ.

"ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ನಾವು ಮಾರ್ಪಾಡುಗಳನ್ನು ಸೂಚಿಸಿದ್ದೇವೆ ಮತ್ತು ಯೋಜನೆಯನ್ನು 12 ಪಿಎಚ್‌ಸಿಗಳಿಗೆ ಸೀಮಿತಗೊಳಿಸುವ ಪರಿಷ್ಕರಣೆಯನ್ನು ಸರ್ಕಾರ ಒಪ್ಪಿಕೊಂಡಿದೆ" ಎಂದು ಅವರು ತಿಳಿಸಿದ್ದಾರೆ. ಉಳಿದ ಪಿಎಚ್‌ಸಿಗಳೊಂದಿಗಿನ ಒಪ್ಪಂದವು ಅವುಗಳ ಅಸ್ತಿತ್ವದಲ್ಲಿರುವ ಒಪ್ಪಂದದ ಅವಧಿಯು ಮುಕ್ತಾಯಗೊಂಡ ನಂತರ ರದ್ದುಗೊಳ್ಳುತ್ತದೆ ಎಂದು ಪರಿಗಣಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

2020ರ ಇನ್ನು ಕಳೆದ ಸೆಪ್ಟೆಂಬರ್ ನಲ್ಲಿ ಆರೋಗ್ಯ ಇಲಾಖೆಯು ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಔಷಧಿಕಾರರು ಮತ್ತು ಲ್ಯಾಬ್ ತಂತ್ರಜ್ಞರ ಹುದ್ದೆಗಳನ್ನು ಭರ್ತಿ ಮಾಡಿದಾಗ ಯೋಜನೆಯು ಸ್ಥಗಿತಗೊಂಡಿತು. ಬಳಿಕ ಜುಲೈ 2021ರಲ್ಲಿ ಇಲಾಖೆಯು ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ (ಡಿಎಚ್‌ಒ) ಪಿಪಿಪಿ ಮಾದರಿಯಡಿ ಪಿಎಚ್‌ಸಿಗಳನ್ನು ಅವರ ಒಪ್ಪಂದದ ಅವಧಿ ಮುಗಿದ ನಂತರ ಹಿಂಪಡೆಯಲು ನಿರ್ದೇಶಿಸಿತು. ಎನ್‌ಜಿಒಗಳು ತಮ್ಮ ಒಪ್ಪಂದವನ್ನು ನವೀಕರಿಸಲು ಮತ್ತು ಯೋಜನೆಯಡಿಯಲ್ಲಿ ಪಿಎಚ್‌ಸಿಗಳನ್ನು ನಡೆಸಲು ಸರ್ಕಾರಕ್ಕೆ ಮನವಿ ಮಾಡಿದ್ದರಿಂದ, ಈ ಯೋಜನೆಯನ್ನು ಮುಂದುವರಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಸೆಪ್ಟೆಂಬರ್ 2021ರಲ್ಲಿ ಸಮಿತಿಯನ್ನು ರಚಿಸಲಾಗಿತ್ತು.

ಹೆದ್ದಾರಿಯಿಂದ 15 ಕಿಮೀ ದೂರದ ಕೇಂದ್ರಗಳಿಗೆ ಮಾತ್ರ ಅವಕಾಶ

ಹೆದ್ದಾರಿಯಿಂದ 15 ಕಿಮೀ ದೂರದ ಕೇಂದ್ರಗಳಿಗೆ ಮಾತ್ರ ಅವಕಾಶ

ಸಮಿತಿಯ ಶಿಫಾರಸುಗಳನ್ನು ಅನುಸರಿಸುವ ಮೂಲಕ ರಾಜ್ಯವು ಜುಲೈ 21ರಂದು ಸರ್ಕಾರಿ ಆದೇಶವನ್ನು ಹೊರಡಿಸಿದ್ದು, ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆದ್ದಾರಿಯಿಂದ 15 ಕಿಮೀ ದೂರದಲ್ಲಿರುವ ಕೇಂದ್ರಗಳನ್ನು ಮಾತ್ರ ಯೋಜನೆಯ ಅಡಿಯಲ್ಲಿ ಉಳಿಯಲು ಅನುಮತಿಸಲಾಗುವುದು ಎಂದು ಹೇಳಿದೆ.


ಸರ್ಕಾರಿ ಆದೇಶದ ನಂತರ, ಅನೇಕ ಎನ್‌ಜಿಒಗಳು ತಮ್ಮ ಒಪ್ಪಂದಗಳನ್ನು ನವೀಕರಿಸಲು ಇಲಾಖೆಗೆ ಮನವಿ ಮಾಡಿವೆ. ಮೇಲ್ಮನವಿಗಳನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು. ಮಾರ್ಪಡಿಸಿದ ಮಾರ್ಗಸೂಚಿಗಳ ಪ್ರಕಾರ, ಯೋಜನೆಯ ಅಡಿಯಲ್ಲಿ ಎಲ್ಲಾ ಪಿಎಚ್‌ಸಿಗಳು ಎಂಬಿಬಿಎಸ್‌ ವೈದ್ಯರನ್ನು ನೇಮಿಸಬೇಕು. ವೈದ್ಯರು ಸೇರಿದಂತೆ ಎಲ್ಲಾ ಸಿಬ್ಬಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಸರ್ಕಾರ ನಿಗದಿಪಡಿಸಿದ ವಿದ್ಯಾರ್ಹತೆಗಳನ್ನು ಪೂರೈಸಬೇಕು. ಪಿಎಚ್‌ಸಿ ಇರುವ ಸ್ಥಳದಲ್ಲಿ ವೈದ್ಯರು ವಾಸವಿರಬೇಕು ಮತ್ತು ಎಲ್ಲಾ ಸಿಬ್ಬಂದಿಗೆ ತರಬೇತಿ ನೀಡಬೇಕು ಮತ್ತು ವಿವಿಧ ರಾಜ್ಯ ಮತ್ತು ಕೇಂದ್ರ ಆರೋಗ್ಯ ಯೋಜನೆಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸರ್ಕಾರದ ಆದೇಶದಲ್ಲಿ ಹೇಳಿದೆ.

ಯಾವುದೇ ವಿಳಂಬವಿಲ್ಲದೆ ಗುತ್ತಿಗೆಗಳನ್ನು ರದ್ದು ಮಾಡಬೇಕು

ಯಾವುದೇ ವಿಳಂಬವಿಲ್ಲದೆ ಗುತ್ತಿಗೆಗಳನ್ನು ರದ್ದು ಮಾಡಬೇಕು

ಸಿಬ್ಬಂದಿ ನಿಗದಿತ ನಮೂನೆಯಲ್ಲಿ (ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಬಿಡುಗಡೆಯಾದ ಹಣ) ಖಾತೆಗಳನ್ನು ನಿರ್ವಹಿಸಬೇಕು ಮತ್ತು ಅದನ್ನು ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಸಲ್ಲಿಸಬೇಕು. ಅವರು ಪ್ರತಿ ತಿಂಗಳ ಐದನೇ ತಾರೀಖಿನೊಳಗೆ ತಾಯಿ ಮಕ್ಕಳ ಟ್ರ್ಯಾಕಿಂಗ್ ಸಿಸ್ಟಮ್‌ಗೆ ಸಂಬಂಧಿಸಿದ ಆನ್‌ಲೈನ್ ಗುರಿ ಮತ್ತು ಸಾಧನೆ ವರದಿಗಳನ್ನು ಸಲ್ಲಿಸಬೇಕು. ಈ ವರದಿಗಳ ಆಧಾರದ ಮೇಲೆ ಮಾತ್ರ ಮುಂದಿನ ತ್ರೈಮಾಸಿಕಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಿಎಚ್‌ಸಿಗಳ ಆಸ್ತಿ ರಿಜಿಸ್ಟರ್‌ಗಳನ್ನು ನಿಯಮಿತ ಮಧ್ಯಂತರದಲ್ಲಿ ಪರಿಶೀಲಿಸಬೇಕು ಮತ್ತು ಆರೋಗ್ಯ ಇಲಾಖೆಯು ಎನ್‌ಜಿಒಗಳಿಂದ ₹25 ಲಕ್ಷ ಬ್ಯಾಂಕ್ ಗ್ಯಾರಂಟಿ ಪಡೆಯಬೇಕು. ಪಿಎಚ್‌ಸಿಗಳಲ್ಲಿ ನೀಡುತ್ತಿರುವ ವೈದ್ಯಕೀಯ ಸೇವೆಗಳು ತೃಪ್ತಿಕರವಾಗಿಲ್ಲದಿದ್ದಲ್ಲಿ ಯಾವುದೇ ವಿಳಂಬವಿಲ್ಲದೆ ಗುತ್ತಿಗೆಗಳನ್ನು ರದ್ದುಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

English summary
Modifying the Arogya Bandhu scheme guidelines, the State government has now limited the continuation of the scheme in only 12 Primary Health Centres (PHCs) that are 15 km away from the highway,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X